Asianet Suvarna News Asianet Suvarna News

ಚಲಾವಣೆಯಿಂದ 2 ಸಾವಿರ ಮುಖ ಬೆಲೆಯ ನೋಟು ಹಿಂದೆ ಪಡೆಯುವ ಬಗ್ಗೆ ಮತ್ತಷ್ಟು ಸುಳಿವು?

  • 2 ವರ್ಷದಿಂದ 2000 ರು. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಿರುವ ಆರ್‌ಬಿಐ
  • ನಿಧಾನವಾಗಿ ಇವುಗಳು ಚಲಾವಣೆಯಿಂದ  ಹಿಂದಕ್ಕೆ
  • 2020-21ರಲ್ಲಿ ಇವುಗಳ ಚಲಾವಣಾ ಮೌಲ್ಯ 4,90,195 ಕೋಟಿ ರು.ಗೆ ಇಳಿಕೆ
2000 Note slowly being withdrawn from the system snr
Author
Bengaluru, First Published May 28, 2021, 8:35 AM IST

ಮುಂಬೈ (ಮೇ.28): ಕಳೆದ 2 ವರ್ಷದಿಂದ 2000 ರು. ನೋಟುಗಳ ಮುದ್ರಣ ಸ್ಥಗಿತಗೊಳಿಸಿರುವ ಆರ್‌ಬಿಐ, ನಿಧಾನವಾಗಿ ಇವುಗಳನ್ನು ಚಲಾವಣೆಯಿಂದ ಕೂಡ ಹಿಂಪಡೆಯುತ್ತಿರುವುದು ಕೇಂದ್ರೀಯ ಬ್ಯಾಂಕ್‌ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ.

2019-20ನೇ ಹಣಕಾಸು ವರ್ಷದಲ್ಲಿ 5,47,952 ಕೋಟಿ ರು.ಮೌಲ್ಯದ 2000 ರು.ನೋಟು ಚಲಾವಣೆಯಲ್ಲಿದ್ದರೆ 2020-21ರಲ್ಲಿ ಆ ಪ್ರಮಾಣ 4,90,195 ಕೋಟಿಗೆ ಇಳಿದಿದೆ. ಅಂದರೆ ಒಟ್ಟಾರೆ 57757 ಕೋಟಿ ರು.ಮೌಲ್ಯದ ನೋಟುಗಳು ಚಲಾವಣೆಯಿಂದ ಹಿಂದಕ್ಕೆ ಪಡೆಯಲ್ಪಟ್ಟಿದೆ.

ಪ್ರಧಾನಿ ಸ್ಕೀಂ, 2 ಲಕ್ಷ ರೂ. ಸಿಗುತ್ತಾ?: ನಿಮಗೇ ಗೊತ್ತಿಲ್ಲದೇ ನಿಮಗೋಸ್ಕರ ಕಾಯ್ತಿದೆ ವಿಮೆ! ...

ಚಲಾವಣೆಯಲ್ಲಿದ್ದವು. 2020-21ರಲ್ಲಿ ಇವುಗಳ ಚಲಾವಣಾ ಮೌಲ್ಯ 4,90,195 ಕೋಟಿ ರು.ಗೆ ಇಳಿದಿದೆ.

2019-20ರಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ ಮುಖಬೆಲೆಯ ಒಟ್ಟು ನೋಟುಗಳ ಮೊತ್ತದ ಪೈಕಿ 2000 ರು.ನ ನೋಟು ಶೇ.17.3ರಷ್ಟುಪಾಲು ಹೊಂದಿದೆ. ಹಿಂದಿನ ವರ್ಷ ಈ ಪ್ರಮಾಣ ಶೇ.22.6ರಷ್ಟಿತ್ತು. ಅಂದರೆ 2019-20ರಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಒಟ್ಟು ಮೌಲ್ಯ 28.26 ಲಕ್ಷ ಕೋಟಿ ರು. ಈ ಪೈಕಿ 2000 ರು.ಪಾಲು 5.47 ಲಕ್ಷ ಕೋಟಿ ರು.ನಷ್ಟಿದ್ದರೆ, 2020-21ರಲ್ಲಿ ಅದು 4.9 ಲಕ್ಷ ಕೋಟಿ ರು.ಗೆ ಇಳಿದಿದೆ.

Follow Us:
Download App:
  • android
  • ios