ಕಳೆದ 2 ವರ್ಷಗಳಿಂದ ಒಂದೇ ಒಂದು 2000 ಮುಖಬೆಲೆಯ ನೋಟು ಮುದ್ರಿಸಿಲ್ಲ: ಕೇಂದ್ರ!
2000 ರು. ಮುಖಬೆಲೆಯ ನೋಟುಗಳ ಸಂಖ್ಯೆ ವಿರಳ| ಕಳೆದ 2 ವರ್ಷಗಳಿಂದ ಒಂದೇ ಒಂದು 2000 ಮುಖಬೆಲೆಯ ನೋಟು ಮುದ್ರಿಸಿಲ್ಲ: ಕೇಂದ್ರ!
ನವದೆಹಲಿ(ಮಾ.16): ಕಳೆದೆರಡು ವರ್ಷಗಳಲ್ಲಿ 2000 ರು. ಮೌಲ್ಯದ ನೋಟುಗಳನ್ನು ಮುದ್ರಣ ಮಾಡಲಾಗಿಲ್ಲ. ಇದರಿಂದಾಗಿ 2000 ರು. ಮುಖಬೆಲೆಯ ನೋಟುಗಳ ಸಂಖ್ಯೆ ವಿರಳವಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಸಂಬಂಧ ಸೋಮವಾರ ಲಿಖಿತ ಉತ್ತರ ನೀಡಿದ ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ‘2018ರ ಮಾ.30ರಂದು 2000 ಮುಖಬೆಲೆಯ 336.2 ಕೋಟಿ ನೋಟುಗಳು ಚಾಲ್ತಿಯಲ್ಲಿದ್ದವು. ಆದರೆ 2021ರ ಫೆ.26ರವರೆಗೆ 2000 ಮುಖಬೆಲೆಯ 249.9 ಕೋಟಿ ನೋಟುಗಳು ಚಲಾವಣೆಯಲ್ಲಿವೆ.
ಅಂದರೆ ಒಟ್ಟಾರೆ ಬ್ಯಾಂಕ್ ನೋಟುಗಳ ಪೈಕಿ ಶೇ.17.78ರಷ್ಟುಮಾತ್ರವೇ 2000 ನೋಟುಗಳಿದ್ದು, 2018ರಲ್ಲಿ ಈ ಪ್ರಮಾಣ ಶೇ.37.26ರಷ್ಟಿತ್ತು’ ಎಂದಿದ್ದಾರೆ.