MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಭಾರತದ ಪೋಸ್ಟ್‌ ಆಫೀಸ್‌ನ 38 ಕೋಟಿ ಖಾತೆಯಲ್ಲಿದೆ ಕರ್ನಾಟಕ ಬಜೆಟ್‌ನ ಐದು ಪಟ್ಟು ಹಣ!

ಭಾರತದ ಪೋಸ್ಟ್‌ ಆಫೀಸ್‌ನ 38 ಕೋಟಿ ಖಾತೆಯಲ್ಲಿದೆ ಕರ್ನಾಟಕ ಬಜೆಟ್‌ನ ಐದು ಪಟ್ಟು ಹಣ!

ಭಾರತೀಯ ಅಂಚೆ ಇಲಾಖೆಯು 38 ಕೋಟಿ ಉಳಿತಾಯ ಖಾತೆಗಳಲ್ಲಿ ₹22 ಲಕ್ಷ ಕೋಟಿ ಸಂಗ್ರಹಿಸಿ ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದೆ. ಸುಕನ್ಯಾ ಸಮೃದ್ಧಿ ಯೋಜನೆಯು 3.8 ಕೋಟಿ ಖಾತೆಗಳೊಂದಿಗೆ ಯಶಸ್ವಿಯಾಗಿದ್ದು, ಇಲಾಖೆಯು ಡ್ರೋನ್‌ ಮತ್ತು RFID ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

1 Min read
Author : Santosh Naik
Published : Mar 07 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
16
ಪೋಸ್ಟ್‌ ಆಫೀಸ್‌ ಆರ್ಥಿಕ ಭದ್ರತೆಯ ದೊಡ್ಡ ಕೇಂದ್ರ
Image Credit : Getty

ಪೋಸ್ಟ್‌ ಆಫೀಸ್‌ ಆರ್ಥಿಕ ಭದ್ರತೆಯ ದೊಡ್ಡ ಕೇಂದ್ರ

ಭಾರತೀಯ ಅಂಚೆ ಇಲಾಖೆಯು ದೇಶದ ಜನಸಾಮಾನ್ಯರ ಆರ್ಥಿಕ ಭದ್ರತೆಯ ಅತಿ ದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಪ್ರಸ್ತುತ ಅಂಚೆ ಇಲಾಖೆಯಲ್ಲಿ ಸುಮಾರು 38 ಕೋಟಿ ಉಳಿತಾಯ ಖಾತೆಗಳಿದ್ದು, ಅವುಗಳಲ್ಲಿ ₹22 ಲಕ್ಷ ಕೋಟಿ ಹಣ ಸಂಗ್ರಹವಾಗಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.

26
ಸುಕನ್ಯಾ ಸಮೃದ್ಧಿ ಯೋಜನೆಯ ಯಶಸ್ಸು
Image Credit : Post Office\Twitter

ಸುಕನ್ಯಾ ಸಮೃದ್ಧಿ ಯೋಜನೆಯ ಯಶಸ್ಸು

ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ರೂಪಿಸಲಾದ 'ಸುಕನ್ಯಾ ಸಮೃದ್ಧಿ ಯೋಜನೆ'ಗೆ (SSY) ದೇಶಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇದರಲ್ಲಿ ಒಟ್ಟು ಖಾತೆಗಳ ಸಂಖ್ಯೆ 3.8 ಕೋಟಿ ದಾಟಿದ್ದು, ಒಟ್ಟು ಠೇವಣಿ ಮೊತ್ತ ₹2.27 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಸಿಂಧಿಯಾ ಹೇಳಿದ್ದಾರೆ.

Related Articles

Related image1
ಪೋಸ್ಟ್‌ ಆಫೀಸ್‌ನಿಂದ ಮನೆಯಲ್ಲಿದ್ದುಕೊಂಡೇ ತಿಂಗಳಿಗೆ ₹9000 ಗಳಿಸುವ ಪ್ಲಾನ್!
Related image2
ಪೋಸ್ಟ್‌ ಆಫೀಸ್‌ನಲ್ಲಿ ಈ ಯೋಜನೆಯಿಂದ ಜಾಸ್ತಿ ಬಡ್ಡಿದರ ಸಿಕ್ಕಿ ಹಣ ಹೆಚ್ಚಾಗೋದಂತೂ ಪಕ್ಕಾ!
36
ಕರ್ನಾಟಕ ಬಜೆಟ್‌ನ ಐದು ಪಟ್ಟು ಹೆಚ್ಚು ಹಣ
Image Credit : Getty

ಕರ್ನಾಟಕ ಬಜೆಟ್‌ನ ಐದು ಪಟ್ಟು ಹೆಚ್ಚು ಹಣ

ಸಿಎಂ ಸಿದ್ದರಾಮಯ್ಯ ಶುಕ್ರವಾರ ಕರ್ನಾಟಕ ಬಜೆಟ್‌ ಮಂಡನೆ ಮಾಡಿದರು. ಬರೋಬ್ಬರಿ 4.48 ಲಕ್ಷ ಕೋಟಿಯ ಬಜೆಟ್‌ ಗಾತ್ರ ಇದಾಗಿತ್ತು. ಇದರ ನಡುವೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚೆಗೆ ಮಾಹಿತಿ ನೀಡಿದ್ದು, ದೇಶದ ಪೋಸ್ಟ್‌ ಆಫೀಸ್‌ನಲ್ಲಿ ಒಟ್ಟು 38 ಕೋಟಿ ಉಳಿತಾಯ ಖಾತೆಗಳಿದ್ದು, ಇದರಲ್ಲಿ ಬರೋಬ್ಬರಿ 22 ಲಕ್ಷ ಕೋಟಿ ಮೊತ್ತವಿದೆ ಎಂದಿದ್ದಾರೆ. ಇದು ಕರ್ನಾಟಕ ಬಜೆಟ್‌ನ ಐದು ಪಟ್ಟು ಹೆಚ್ಚಿನ ಹಣ ಎನಿಸಿದೆ.

46
ಅತ್ಯಾಧುನಿಕ ತಂತ್ರಜ್ಞಾನ
Image Credit : Post Office\Twitter

ಅತ್ಯಾಧುನಿಕ ತಂತ್ರಜ್ಞಾನ

ಅಂಚೆ ಸೇವೆಯನ್ನು ಮತ್ತಷ್ಟು ವೇಗಗೊಳಿಸಲು ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಸಿಂಧಿಯಾ ಹೇಳಿದ್ದಾರೆ.ಕನ್ವೇಯರ್ ಸಿಸ್ಟಮ್‌ಗಳು, ಸೈಂಟಿಫಿಕ್ ಸಾರ್ಟಿಂಗ್, ಆರ್‌ಎಫ್‌ಐಡಿ (RFID), ಬಾರ್‌ಕೋಡ್‌ಗಳು ಮತ್ತು ಕ್ಯೂಆರ್ (QR) ಕೋಡ್‌ಗಳ ಬಳಕೆಯ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.

56
ಡ್ರೋನ್‌ ಮೂಲಕ ಸೇವೆ
Image Credit : Post Office\Twitter

ಡ್ರೋನ್‌ ಮೂಲಕ ಸೇವೆ

ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಅಂಚೆ ಪಾರ್ಸೆಲ್‌ಗಳನ್ನು ತಲುಪಿಸಲು ಇನ್ಮುಂದೆ ಡ್ರೋನ್‌ಗಳನ್ನು ಬಳಸಲಾಗುವುದು ಎಂದು ಸಿಂಧಿಯಾ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ "ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ" (Reform, Perform and Transform) ಮಂತ್ರದೊಂದಿಗೆ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

66
1.65 ಲಕ್ಷ ಅಂಚೆ ಕಚೇರಿ
Image Credit : Post Office\Twitter

1.65 ಲಕ್ಷ ಅಂಚೆ ಕಚೇರಿ

ದೇಶಾದ್ಯಂತ 1.65 ಲಕ್ಷ ಅಂಚೆ ಕಚೇರಿಗಳಿದ್ದು, 4.5 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆ ಸುಮಾರು 1 ಲಕ್ಷ ಅಂಚೆ ಕಚೇರಿಗಳಲ್ಲಿ ಯಾವುದೇ ವ್ಯವಹಾರಗಳು (Nil transactions) ನಡೆಯುತ್ತಿರಲಿಲ್ಲ. ಆದರೆ, ನಿರಂತರ ಮೇಲ್ವಿಚಾರಣೆಯಿಂದಾಗಿ ಅಂತಹ ಕಚೇರಿಗಳ ಸಂಖ್ಯೆ ಈಗ ಕೇವಲ 1,500ಕ್ಕೆ ಇಳಿಕೆಯಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಅಂಚೆ ಕಚೇರಿ
ವ್ಯವಹಾರ
ವ್ಯಾಪಾರ ಸುದ್ದಿ
ಹಣ (Hana)
ವೈಯಕ್ತಿಕ ಹಣಕಾಸು
ಸುದ್ದಿ

Latest Videos
Recommended Stories
Recommended image1
ಮಹಿಳಾ ದಿನಕ್ಕೆ ಬಂಪರ್​: ಅತ್ಯಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕಲ್​ ಸ್ಕೂಟರ್​ ಬಿಡುಗಡೆ! ಎಷ್ಟೊಂದು ವೈಶಿಷ್ಟ್ಯಗಳು
Recommended image2
22ನೇ ಕಂತಿನ ಕಿಸಾನ್‌ ಸಮ್ಮಾನ್‌ ನಿಧಿ ಬರೋದು ಯಾವಾಗ? ಇಲ್ಲಿದೆ ಡೀಟೇಲ್ಸ್‌
Recommended image3
ಬಡವರ ಬೆನ್ನಿಗೆ ಇಂಧನ ಬಾಂಬ್‌ ಕಟ್ಟಿದ ಪಾಕಿಸ್ತಾನ, ಪೆಟ್ರೋಲ್‌ ಪ್ರತಿ ಲೀಟರ್‌ಗೆ 55 ರೂಪಾಯಿ ಏರಿಕೆ!
Related Stories
Recommended image1
ಪೋಸ್ಟ್‌ ಆಫೀಸ್‌ನಿಂದ ಮನೆಯಲ್ಲಿದ್ದುಕೊಂಡೇ ತಿಂಗಳಿಗೆ ₹9000 ಗಳಿಸುವ ಪ್ಲಾನ್!
Recommended image2
ಪೋಸ್ಟ್‌ ಆಫೀಸ್‌ನಲ್ಲಿ ಈ ಯೋಜನೆಯಿಂದ ಜಾಸ್ತಿ ಬಡ್ಡಿದರ ಸಿಕ್ಕಿ ಹಣ ಹೆಚ್ಚಾಗೋದಂತೂ ಪಕ್ಕಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved