ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನ ಸೌಧದಿಂದ ತೆರಳಲು ಹೊರಗೆ ಆಗಮಿಸಿದ್ದಾರೆ.ಕಾರಿನತ್ತ ಬಂದು ಡಿಕೆ ಶಿವಕುಮಾರ್ ಕಾರಿನ ಡ್ರೈವರ್‌ಗದಾಗಿ ಕಾದು ನಿಂತ ಘಟನೆ ನಡೆದಿದೆ. ಮುಂದೇನಾಯಿತು?
ಬೆಂಗಳೂರು (ಆ.31) ಮುಖ್ಯಮಂತ್ರಿಗಳು ಬರುತ್ತಿದ್ದಾರೆ ಎಂದರೆ ಸಿಬ್ಬಂದಿಗಳು, ಚಾಲಕ ಸೇರಿದಂತೆ ಎಲ್ಲರೂ ತಕ್ಕ ಸಮಯಕ್ಕೆ ಹಾಜರಾಗುತ್ತಾರೆ. ಹಲವು ಕಾರ್ಯಕ್ರಮ, ಸಭೆಗಳ ಕಾರಣ ಮುಖ್ಯಮಂತ್ರಿಗಳು ಸ್ಥಳಕ್ಕೆ ಹಾಜರಾಗಲು ಕೊಂಚ ವಿಳಂಬವಾಗಬಹುದು. ಆದರೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇತರರು ತಕ್ಕ ಸಮಯಕ್ಕೆ ಹಾಜರಿರುತ್ತಾರೆ. ವಿಶೇಷ ಅಂದರೆ ಡಿಕೆ ಶಿವಕುಮಾರ್ ತಮ್ಮ ಕಾರಿನ ಡ್ರೈವರ್‌ಗಾಗಿ ಕಾದು ನಿಂತ ಘಟನೆ ನಡೆದಿದೆ. ವಿಧಾನಸೌಧದಿಂದ ತೆರಳಲು ಕಾರಿನತ್ತ ಆಗಮಿಸಿದ ಡಿಕೆ ಶಿವಕುಮಾರ್ ಚಾಲಕನಿಗಾಗಿ ಕಾದು ಕುಳಿತು ತೆರಳಿದ ಘಟನೆ ನಡೆದಿದೆ.
ಕಾರಿನ ಬಳಿ ಬಂದಾಗ ಅಚ್ಚರಿ, ಚಾಲಕ ಇಲ್ಲ
ವಿಧಾನಸೌಧಲ್ಲಿ ಕೆಲಸ ಕಾರ್ಯಗಳು, ಸತತ ಸಭೆಗಳ ಮುಗಿಸಿದ ಸಿಎಂ ಡಿಕೆ ಶಿವಕುಮಾರ್ ಹೊರಬಂದಿದ್ದಾರೆ. ಬಳಿಕ ವಿಧಾನಸೌಧದಿಂದ ವಿವಿಧ ಕೆಲಸ ಹಾಗೂ ಕಾರ್ಯಕ್ರಮಗಳಿಗಾಗಿ ತೆರಳಲು ತಮ್ಮ ಕಾರಿನತ್ತ ಬಂದಿದ್ದಾರೆ. ಡಿಕೆ ಶಿವಕುಮಾರ್ ಜೊತೆ ಅಧಿಕಾರಿಗಳು ಸೇರಿದಂತೆ ಇತರ ಸಿಬ್ಬಂದಿಗಳು ಆಗಮಿಸಿದ್ದಾರೆ. ಆದರೆ ಕಾರಿನತ್ತ ಬಂದಾಗ ಅಚ್ಚರಿ ಎದುರಾಗಿದೆ. ಕಾರಣ ಡಿಕೆ ಶಿವಕುಮಾರ್ ಕಾರಿನ ಚಾಲಕ ಇರಲಿಲ್ಲ.
ಕೆಂಗಲ್ ಗೇಟ್‌ನಲ್ಲಿ ನಿಲ್ಲಿಸಿದ್ದ ಸಿಎಂ ಕಾರು
ವಿಧಾನಸೌಧದ ಕೆಂಗಲ್ ಗೇಟ್‌ನಲ್ಲಿ ಮುಖ್ಯಮಂತ್ರಿಗಳ ಕಾರು ನಿಲ್ಲಿಸಲಾಗಿತ್ತು. ಸಿಎಂ ಡಿಕೆ ಶಿವಕುಮಾರ್ ತಕ್ಷಣಕ್ಕೆ ಬರವು ಸೂಚನೆ ಇಲ್ಲದ ಕಾರಣ ಕಾರಿನ ಚಾಲಕ ಕಾರು ಬಿಟ್ಟು ತೆರಳಿದ್ದ. ಆದರೆ ಡಿಕೆ ಶಿವಕುಮಾರ್ ಅದೇ ಸಮಯದಲ್ಲಿ ಆಗಮಿಸಿದ್ದಾರೆ. 5 ನಿಮಿಷಕ್ಕೂ ಹೆಚ್ಚು ಕಾಲ ಡಿಕೆ ಶಿವಕುಮಾರ್ ಕಾರಿನ ಚಾಲಕನಿಗಾಗಿ ಕಾದಿದ್ದಾರೆ. ಆದೆ ಚಾಲಕ ಮಾತ್ರ ಕಾಣಿಸಲಿಲ್ಲ. ಹೀಗಾಗಿ ಪರ್ಯಾಯ ಕಾರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಕಾರಿನ ಬಳಿಕ ಕಾಯುತ್ತಾ ನಿಂತ ಕಾರಣ ವಿವಿದ ಬೇಡಿಕೆಗಳ ಹಿಡಿದು ವಿಧಾನಸೌಧಕ್ಕೆ ಆಗಮಿಸಿದ ಸಾರ್ವಜನಿಕರು ಸಿಎಂ ಮುತ್ತಿಕೊಂಡರು. ತಮ್ಮ ಅಹವಾಲುಗಳನ್ನು ನೀಡಿ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕ್ಷಣಕ್ಷಣಕ್ಕೂ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಾ ಹೋಗಿದೆ.
ಓಡೋಡಿ ಬಂದ ಚಾಲಕ
ಪರ್ಯಾಯ ಕಾರಿಗೆ ಅಧಿಕಾರಿಗಳು ಸೂಚನೆ ನೀಡಿದ ಬೆನ್ನಲ್ಲೇ ಸಿಎಂ ಕಾರಿನ ಚಾಲಕ ಓಡೋಡಿ ಬಂದಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಕೆ ಶಿವಕುಮಾರ್ ಕಾರು ಹತ್ತಿ ವಿಧಾನ ಸೌಧದಿಂದ ತೆರಳಿದ್ದಾರೆ.


