ಕರ್ನಾಟಕದಲ್ಲಿ ನೂತನ ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ!
- ಕರ್ನಾಟಕದ ರಸ್ತೆಗಳಿಗೆ ವಿದ್ಯುತ್‍ಸ್ಪರ್ಶ ನೀಡಲಿರುವ ಸಂಪೂರ್ಣ ಹೊಸದಾದ ಮಹೀಂದ್ರಾ ಟ್ರಿಯೊ
- ರಾಜ್ಯದಲ್ಲಿ ಪ್ರಯಾಣಿಕರಿಗೆ ಪಯಣದ ಆರಂಭದಿಂದ ಮುಕ್ತಾಯಗೊಳ್ಳುವ ತಾಣದವರೆಗೆ ವಿದ್ಯುತ್‍ಚಾಲಿತ ಆಟೊರಿಕ್ಷಾ ಸೇವೆ
- ಭಾರತದಲ್ಲಿಯೇ ತಯಾರಿಸಿರುವ ವಿದ್ಯುತ್ ಚಾಲಿತ ಆಟೊ; ₹ 45,000* ವರೆಗೆ ವಾರ್ಷಿಕ ಉಳಿತಾಯ
ಬೆಂಗಳೂರು(ಅ.15): ಭಾರತದಲ್ಲೀಗ ಎಲೆಕ್ಟ್ರಿಕ್ ವಾಹನಗಳಲ್ಲಿ ಕ್ರಾಂತಿಯಾಗುತ್ತಿದೆ. ಪ್ರತಿ ದಿನ ಹೊಸ ಹೊಸ, ಆತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಕಾರು, ದ್ವಿಚಕ್ರ ವಾಹನ ಬಿಡುಗಡೆಯಾಗುತ್ತಿದೆ. ಇದೀಗ ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಕರ್ನಾಟಕದಲ್ಲಿ ಪರಿಚಯಿಸಿದೆ. 19.4 ಶತಕೋಟಿ ಡಾಲರ್ ಮೊತ್ತದ ಮಹೀಂದ್ರಾ ಗ್ರೂಪ್‍ನ ಭಾಗವಾಗಿರುವ ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್, ತನ್ನ ಹೊಸ ವಿದ್ಯುತ್ ಚಾಲಿತ ಆಟೊರಿಕ್ಷಾ ಮಹೀಂದ್ರಾ ಟ್ರಿಯೊ ಅನ್ನು ಕರ್ನಾಟಕದ ಮಾರುಕಟ್ಟೆಗೆ ಪರಿಚಯಿಸಿದೆ.
ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ-ಬಜಾಜ್, ಟಿವಿಎಸ್‌ಗೆ ಪೈಪೋಟಿ!
ಹೈಬ್ರಿಟ್ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಮತ್ತು ಬಳಕೆ ತ್ವರಿತಗೊಳಿಸುವ (ಎಫ್‍ಎಎಂಇ) ಕಾರ್ಯಕ್ರಮದ ಅಂಗವಾಗಿ ದೊರೆಯುವ ಸಬ್ಸಿಡಿ ನಂತರದ ಇದರ ಬೆಲೆ ₹ 2.7 ಲಕ್ಷ (ಎಕ್ಸ್‍ಷೋರೂಂ) ಇರಲಿದೆ. ಈ ಹೊಸ ವಿದ್ಯುತ್ ಚಾಲಿತ ಮಹೀಂದ್ರಾ ಟ್ರಿಯೊ ಆಟೊರಿಕ್ಷಾದ ವಿನ್ಯಾಸವನ್ನು ಭಾರತದಲ್ಲಿಯೇ ಸಂಪೂರ್ಣವಾಗಿ ರೂಪಿಸಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸಲಿರುವ ಟ್ರಿಯೊ, ಈ ವಿಭಾಗದಲ್ಲಿನ ಇತರ ತ್ರಿಚಕ್ರ ವಾಹನಗಳಲ್ಲಿಯೇ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. 2.3 ಸೆಕೆಂಡ್‍ಗಳಲ್ಲಿ 0-20 ಪ್ರತಿ ಗಂಟೆಗೆ ಕಿ.ಮೀ ದೂರ ಕ್ರಮಿಸುವ ವೇಗ ವರ್ಧಿಸಿಕೊಳ್ಳಲಿದೆ. ವಿವಿಧ ಬಗೆಯ ವೇಗದಲ್ಲಿ ಎತ್ತರ ಏರುವ ವಾಹನದ ಸಾಮಥ್ರ್ಯದ (12.7 ಗ್ರೇಡೆಬಿಲಿಟಿ) ವಿಷಯದಲ್ಲಿಯೂ ಇದು ಶ್ರೇಷ್ಠ ದರ್ಜೆಯ ತ್ರಿಚಕ್ರ ವಾಹನವಾಗಿದೆ. ಹೊಸ ಮಹೀಂದ್ರಾ ಟ್ರಿಯೊ ಆಟೊರಿಕ್ಷಾವು, ಮಾಲೀಕರಿಗೆ ಪ್ರತಿ ವರ್ಷ ₹ 45,000* ಗಳನ್ನು ಉಳಿತಾಯ ಮಾಡಲಿದೆ. ಮಹೀಂದ್ರಾ ಫೈನಾನ್ಸ್‍ನಿಂದ ಪಡೆಯುವ ಹಣಕಾಸು ನೆರವಿನಲ್ಲಿ ಅತಿ ಕಡಿಮೆ ಮೊತ್ತವಾದ ₹ 50 ಸಾವಿರ ಮುಂಗಡ ಪಾವತಿಸುವ ಮೂಲಕ ಟ್ರಿಯೊ ಖರೀದಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇ 10.8ರಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಇದನ್ನು ಖರೀದಿಸಬಹುದು. ₹ 5,000ಗಳ ಆಕರ್ಷಕ ವಿನಿಮಯ ಬೋನಸ್ ಜತೆಗೂ ಮಹೀಂದ್ರಾ ಟ್ರಿಯೊ ದೊರೆಯಲಿದೆ.
ಬಿಡುಗಡೆಯಾದ ನಾಲ್ಕೇ ದಿನಕ್ಕೆ ದಾಖಲೆ ಬರೆದ ಮಹೀಂದ್ರ ಥಾರ್!.
ಮಹೀಂದ್ರಾ ಟ್ರಿಯೊ ಅನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ ಮಹೀಂದ್ರಾ ಎಲೆಕ್ಟ್ರಿಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹೇಶ್ ಬಾಬು ಅವರು ಮಾತನಾಡಿ, ‘ಕರ್ನಾಟಕದ ಜನರು ವಿದ್ಯುತ್ ಚಾಲಿತ ವಾಹನಗಳನ್ನು ತ್ವರಿತವಾಗಿ ಅಂಗೀಕರಿಸಿದ್ದಾರೆ. ಇದೇ ಕಾರಣಕ್ಕೆ ತ್ರಿಚಕ್ರ ವಾಹನ ವಿಭಾಗದಲ್ಲಿ ಟ್ರಿಯೊ ಮಾರುಕಟ್ಟೆಯಲ್ಲಿ ತನ್ನ ಮುಂಚೂಣಿ ನಾಯಕತ್ವವನ್ನು ಸಾಬೀತುಪಡಿಸಲು ನೆರವಾಗಿದೆ’ ಎಂದು ಹೇಳಿದ್ದಾರೆ.
ದಾಖಲೆ ಬರೆದ ಜೀಪ್: ಮೊದಲ ಮಹೀಂದ್ರ ಥಾರ್ 1.1 ಕೋಟಿಗೆ ಹರಾಜು!
‘ಇದುವರೆಗೆ ದೇಶದಲ್ಲಿ 400ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 5000ಕ್ಕೂ ಹೆಚ್ಚು ಟ್ರಿಯೊದ ಸಂತೃಪ್ತ ಮಾಲಿಕರನ್ನು ಮಹೀಂದ್ರಾ ಹೊಂದಿದೆ. ಭಾರತದ ರಸ್ತೆಗಳಲ್ಲಿ ಟ್ರಿಯೊ ಇದುವರೆಗೆ 350 ಲಕ್ಷ ಕಿ.ಮೀಗಳಷ್ಟು ದೂರ ಕ್ರಮಿಸಿದೆ. ಹೊಸ ಮಹೀಂದ್ರಾ ಟ್ರಿಯೊ, ನಮ್ಮ ಗ್ರಾಹಕರ ಉಳಿತಾಯವನ್ನು ಹೆಚ್ಚಿಸಲಿದೆ. ರಾಜ್ಯದಲ್ಲಿ ಗ್ರಾಹಕರು ತಮ್ಮ ಪ್ರಯಾಣದ ಆರಂಭಿಕ ಸ್ಥಳದಿಂದ ಹಿಡಿದು ಅಂತ್ಯಗೊಳಿಸುವವರೆಗೆ (ಫಸ್ಟ್ ಆ್ಯಂಡ್ ಲಾಸ್ಟ್ ಮೈಲ್) ವಿದ್ಯುತ್ ಚಾಲಿತ ಆಟೊರಿಕ್ಷಾ ಬಳಸುವ ಅಗತ್ಯ ಈಡೇರಿಸಲು ಇದು ಹೆಚ್ಚು ಸೂಕ್ತವಾಗಿರಲಿದೆ. ಭಾರತದಲ್ಲಿನ ವಿದ್ಯುತ್ ಚಾಲಿತ ವಾಹನಗಳ ಬಳಕೆ ಜನಪ್ರಿಯಗೊಳಿಸಲು ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳು ಪ್ರಮುಖ ಪಾತ್ರ ನಿರ್ವಹಿಸಲಿವೆ. ವಿದ್ಯುತ್ ಚಾಲಿತ ಆಟೊರಿಕ್ಷಾಗಳು ಆರ್ಥಿಕವಾಗಿ, ಪರಿಸರದ ದೃಷ್ಟಿಯಿಂದ ಮತ್ತು ಸಾಮಾಜಿಕವಾಗಿಯೂ ಹೆಚ್ಚು ಪ್ರಯೋಜನಕಾರಿಯಾಗಿವೆ’ ಎಂದು ಹೇಳಿದ್ದಾರೆ.
ರಾಷ್ಟ್ರಪತಿಗೆ ಮೊದಲ BS6 ಅಲ್ಟುರಾಸ್ G4 ಕಾರು ವಿತರಿಸಿದ ಮಹೀಂದ್ರ!..
45,000* ವರೆಗೆ ಗರಿಷ್ಠ ಉಳಿತಾಯ:
ಮಹೀಂದ್ರಾ ಟ್ರಿಯೊ ಓಡಿಸಲು ಪ್ರತಿ ಕಿ.ಮೀಗೆ ಕೇವಲ 50 ಪೈಸೆ ವೆಚ್ಚ ತಗುಲಲಿದೆ. ಇದರಿಂದ ವರ್ಷಕ್ಕೆ ಇಂಧನಕ್ಕೆ ಮಾಡುವ ವೆಚ್ಚವು ₹ 45,000 ವರೆಗೆ ಉಳಿಯಲಿದೆ.
ಲಿಥಿಯಂ - ಐಯಾನ್ ಬ್ಯಾಟರಿ ನಿರ್ವಹಣೆಯ ಅಗತ್ಯ ಇರುವುದಿಲ್ಲ. 1,50,000ಕ್ಕೂ ಕಿ.ಮೀ ದೂರದವರೆಗೆ ಯಾವುದೇ ತೊಂದರೆ ಇಲ್ಲದೆ ಟ್ರಿಯೊ ಚಲಾಯಿಸಬಹುದು.
ಆಟೊರಿಕ್ಷಾ ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ:
ಹೊಸ ಸುಧಾರಿತ ಎಸಿ ಇಂಡಕ್ಷನ್ ಮೋಟರ್ ಈಗ ಗರಿಷ್ಠ 8ಕೆಡಬ್ಲ್ಯು ಸಾಮಥ್ರ್ಯ ಹೊಂದಿದ್ದು, ಗರಿಷ್ಠ ಮತ್ತು ಅತ್ಯುತ್ತಮ ಬಗೆಯ 42 ಎನ್‍ಎಂನ ಟಾರ್ಕ್ ಹೊಂದಿದೆ.
ಮಹೀಂದ್ರಾ ಟ್ರಿಯೊ ಸಾಗುವ ವೇಗವನ್ನು ಗಮನಾರ್ಹವಾಗಿ ಸುಧಾರಿಸಲಾಗಿದೆ. ಪ್ರತಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಆಟೊರಿಕ್ಷಾದ ಗ್ರೇಡೆಬಿಲಿಟಿಯನ್ನು 12.7 ಡಿಗ್ರಿವರೆಗೆ ಹೆಚ್ಚಿಸಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ :
ಲೀಥಿಯಂ-ಐಯಾನ್ ತಂತ್ರಜ್ಞಾನ : ಹೊಸ ಮಹೀಂದ್ರಾ ಟ್ರಿಯೊದಲ್ಲಿ ಅತ್ಯಾಧುನಿಕ ಲೀಥಿಯಂ- ಐಯಾನ್ ತಂತ್ರಜ್ಞಾನ ಅಳವಡಿಸಲಾಗಿದೆ. ಒಂದು ಬಾರಿಗೆ ಚಾರ್ಜ್ ಮಾಡಿದರೆ 130 ಕಿ.ಮೀ ದೂರದವರೆಗೆ (ಘೋಷಿತ ಚಾಲನಾ ವ್ಯಾಪ್ತಿ) ಪಯಣಿಸಲಿದೆ.
ಆಟೊಮೆಟಿಕ್ ಟ್ರಾನ್ಸ್‍ಮಿಷನ್ : ಇದು ಆಟೊಮೆಟಿಕ್ ಟ್ರಾನ್ಸ್‍ಮಿಷನ್ ಒಳಗೊಂಡಿದೆ. ಜತೆಗೆ ಗಿಯರ್‍ಲೆಸ್, ಕ್ಲಚ್‍ಲೆಸ್ ಮತ್ತು ಕಂಪನ ಮುಕ್ತವಾಗಿದೆ. ಇದರಿಂದಾಗಿ ಆಟೊ ಚಾಲನೆಯು ತುಂಬ ಆರಾಮದಾಯಕ ಮತ್ತು ದಣಿವು ಮುಕ್ತವಾಗಿರಲಿದೆ.
ಸುಲಭ ಚಾರ್ಜಿಂಗ್ : ಪೋರ್ಟೆಬಲ್ ಚಾರ್ಜರ್ ಲಭ್ಯ ಇರುವೆಡೆಗಳಲ್ಲಿ ಮಹೀಂದ್ರಾ ಟ್ರಿಯೊವನ್ನು ಸುಲಭವಾಗಿ ಚಾರ್ಜ್ ಮಾಡಬಹುದು. 15 ಂ ಸಾಕೆಟ್ ಬಳಸಿ ಪೂರ್ಣವಾಗಿ ಚಾರ್ಜ್ ಮಾಡಬಹುದು.
ವಿಶ್ವಾಸಾರ್ಹವಾದ IP 67 ಗುಣಮಟ್ಟದ ಮೋಟರ್ ಹೊಂದಿದ್ದು, ಇದು ದೂಳು ಮತ್ತು ನೀರಿನಿಂದ ಹೆಚ್ಚಿನ ರಕ್ಷಣೆ ಒದಗಿಸಲಿದೆ
ತುಕ್ಕು ಹಿಡಿಯುವುದರಿಂದ ಮುಕ್ತವಾಗಿರುವ ಬಾಡಿ ಪ್ಯಾನೆಲ್ಸ್: ತುಕ್ಕು ಹಿಡಿಯದ ಶೀಟ್ ಮೌಲ್ಡಿಂಗ್ ಕಂಪೌಂಡ್ (ಎಸ್‍ಎಂಸಿ) ಪ್ಯಾನೆಲ್‍ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ವಿಶಾಲವಾದ ಸ್ಥಳಾವಕಾಶ ಮತ್ತು ಆರಾಮ :
ಆಟೊರಿಕ್ಷಾ ವಿಭಾಗದಲ್ಲಿ ಅತ್ಯುತ್ತಮ ಬಗೆಯ ವ್ಹೀಲ್‍ಬೇಸ್: 2073 ಎಂಎಂನ ವ್ಹೀಲ್‍ಬೇಸ್ ಹೊಂದಿರುವ ಮಹೀಂದ್ರಾ ಟ್ರಿಯೊ, ಈ ವಲಯದಲ್ಲಿ ಪ್ರಯಾಣಿಕರಿಗೆ ಅತ್ಯುತ್ತಮ ಆರಾಮ ನೀಡಲಿದೆ. ಕಾಲು ಚಾಚಲು ಹೆಚ್ಚು ಸ್ಥಳಾವಕಾಶ. ಎಲ್ಲ ವಯೋಮಾನದವರಿಗೆ ಸುಲಭ ಪ್ರವೇಶ ಮತ್ತು ನಿರ್ಗಮನ ಅವಕಾಶ.
ಸುರಕ್ಷತೆ ಹೆಚ್ಚಳ : ಮಹೀಂದ್ರಾ ಟ್ರಿಯೊದ ಎರಡೂ ಬದಿಯಲ್ಲಿ ಬಾಗಿಲು ಅಳವಡಿಸಿರುವುದರಿಂದ ಪಯಣವು ಹೆಚ್ಚು ಸುರಕ್ಷಿತವಾಗಿರಲಿದೆ.
ಉತ್ತಮ ಮಾನದಂಡದ ವಾರಂಟಿ: ಮಹೀಂದ್ರಾ ಟ್ರಿಯೊ, 3 ವರ್ಷ / 80,000 ಕಿ.ಮೀ.ಗಳ ಸ್ಟ್ಯಾಂಡರ್ಡ್ ವಾರಂಟಿ ಜತೆಗೆ 2 ವರ್ಷಗಳವರೆಗೆ / 1 ಲಕ್ಷ ಕಿ.ಮೀಗಳ ವಿಸ್ತರಿತ ವಾರಂಟಿ ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ಒಳಗೊಂಡಿದೆ.
ಸುಲಭ ಸರ್ವಿಸ್ : ಭಾರತದಾದ್ಯಂತ 140ಕ್ಕೂ ಹೆಚ್ಚು ಸರ್ವಿಸ್ ಕೇಂದ್ರಗಳ ವ್ಯಾಪಕ ಜಾಲ ಹೊಂದಿದೆ