ಮುಂಬೈ(ಸೆ.30): ಹೊಚ್ಚ ಹೊಸ ಸೆಕೆಂಡ್ ಜನರೇಶನ್ ಮಹೀಂದ್ರ ಥಾರ್ ಜೀಪ್ ಬಿಡುಗಡೆಗೂ ಮುನ್ನ ದಾಖಲೆ ಬರೆದಿದೆ. ಮೊದಲ ಮಹೀಂದ್ರ ಥಾರ್ ಜೀಪ್ ಹರಾಜಿಗೆ ಇಡಲಾಗಿತ್ತು. ಈ ಹರಾಜಿನಲ್ಲಿ ಥಾರ್ ಜೀಪ್ ಬರೋಬ್ಬರಿ 1.1 ಕೋಟಿ ರೂಪಾಯಿಗೆ ಹರಾಜಿಗಿದೆ. ಈ ಹಣವನ್ನು ಮಹೀಂದ್ರ ಸಂಸ್ಥೆ ಕೊರೋನಾ ವೈರಸ್‌ನಿಂದ ಸೃಷ್ಟಿಯಾಗಿರುವ ಸಂಕಷ್ಟಕ್ಕೆ ಬಳಸಲಿದೆ.

ಯೇ ಥಾರ್ ಮುಜೆ ದೇದೆ ಠಾಕೂರ್; ಮೆಮೆ ಮೆಚ್ಚಿದ ಆನಂದ್ ಮಹೀಂದ್ರ!.

ಅಕ್ಟೋಬರ್ 2 ರಂದು ಮಹೀಂದ್ರ ಥಾರ್ ಭಾರತದಲ್ಲಿ ಮಾರಾಟ ಆರಂಭಿಸಲಿದೆ. ಇದುವರೆಗೆ ನತನ ಥಾರ್ ವಾಹನದ ಬೆಲೆ ಬಹಿರಂಗವಾಗಿಲ್ಲ. ಆದರೆ ಹರಾಜಿಗಟ್ಟ ಥಾರ್ ಜೀಪ್‌ಗೆ 25 ಲಕ್ಷ ರೂಪಾಯಿ ಬೆಲೆ ನಿಗದಿಡಿಸಲಾಗಿತ್ತು. ಹರಾಜಿನಲ್ಲಿ 5,4000 ಮಂದಿ ಪಾಲ್ಗೊಂಡಿದ್ದರು. 6 ದಿನಗಳ ಕಾಲ ಹರಾಜಿಗೆ ಅವಧಿ ನೀಡಲಾಗಿತ್ತು. ಮೊದಲ ದಿನವೇ 80 ಲಕ್ಷ ರೂಪಾಯಿ ವರೆಗೆ ತಲುಪಿತ್ತು.

ಆತ್ಮನಿರ್ಭರ್‌ ಭಾರತಕ್ಕೆ ಪುಷ್ಠಿ ನೀಡಿದ ನೂತನ ಮಹೀಂದ್ರ ಥಾರ್!.

ಅಂತಿಮವಾಗಿ ಮೊದಲ ಮಹೀಂದ್ರ ಥಾರ್ ಜೀಪ್ 1.1 ಕೋಟಿ ರೂಪಾಯಿಗೆ ಹರಾಜಾಗಿದೆ. ಆಕಾಶ್ ಮಿಂದಾ ಬರೋಬ್ಬರಿ 1.1 ಕೋಟಿ ರೂಪಾಯಿ ನೀಡಿ ಥಾರ್ ಖರೀದಿಸಿದ್ದಾರೆ. ಆಕಾಶ್ ಮಿಂದಾ ಪಡೆಯಲಿರುವ ಥಾರ್ ಜೀಪ್‌ಗೆ #1 ಸ್ಟೀಲ್ ಪ್ಲೇಟ್ ಬ್ಯಾಡ್ಜ್ ಸಿಗಲಿದೆ. ಇಷ್ಟೇ ಅಲ್ಲ ಕೆಲ ಕಸ್ಟಮೈಸೇಶನ್ ಕೂಡ ಆಗಲಿದೆ. ಸ್ವದೇಶ್ ಸಂಸ್ಥೆಯಾಗಿರುವ ನಂದಿ ಅಥವಾ ಪ್ರಧಾನಿ ಕೇರ್ ಫಂಡ್‌ಗೆ ಈ ಹಣ ನೀಡಬೇಕು ಅನ್ನೋದನ್ನು ಹರಾಜಿನಲ್ಲಿ ಗೆದ್ದ ಅಕಾಶ್ ಮಿಂದಾ ನಿರ್ಧರಿಸಲಿದ್ದಾರೆ.

ಈಗಾಗಲೇ ಮಹೀಂದ್ರ ಥಾರ್ ಬುಕಿಂಗ್ ಆರಂಭಗೊಂಡಿದೆ. ಆಕ್ಟೋಬರ್ 2 ರಂದು ನೂತನ ಮಹೀಂದ್ರ ಥಾರ್ ದೀಪ್ ಬೆಲೆ ಬಹಿರಗವಾಗಲಿದೆ. ಈಗಾಗಲೇ ಹಲವು ಸೆಲೆಬ್ರೆಟಿಗಳು ನೂತನ ಥಾರ್ ಜೀಪ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.