Asianet Suvarna News Asianet Suvarna News

ಬಿಡುಗಡೆಯಾದ ನಾಲ್ಕೇ ದಿನಕ್ಕೆ ದಾಖಲೆ ಬರೆದ ಮಹೀಂದ್ರ ಥಾರ್!

ನ್ಯೂ ಜನರೇಶನ್ ಮಹೀಂದ್ರ ಥಾರ್ ಅಕ್ಟೋಬರ್ 2 ರಂದು ಬಿಡುಗಡೆಯಾಗಿದೆ. ಆಕರ್ಷಕ ಲುಕ್, ದಕ್ಷ ಎಂಜಿನ್ ಸೇರಿದಂತೆ ಹಲವು ಫೀಚರ್ಸ್ ಹೊಂದಿರುವ ನೂತನ ಥಾರ್ ಇದೀಗ ನಾಲ್ಕೇ ದಿನಕ್ಕೆ ದಾಖಲೆ ಬರೆದಿದೆ

Mahindra thar crossed 9000 bookings in just four days since launch
Author
Bengaluru, First Published Oct 6, 2020, 2:27 PM IST
  • Facebook
  • Twitter
  • Whatsapp

ಮುಂಬೈ(ಅ.06): ನ್ಯೂ ಜನರೇಶ್  ಮಹೀಂದ್ರ ಥಾರ್‌ ಮೋಡಿಗೆ ಒಳಗಾಗದವರು ಯಾರೂ ಇಲ್ಲ. ಬಹುತೇಕ ವಾಹನ ಪ್ರೀಯರು ಥಾರ್ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಹೊಸ ವಿನ್ಯಾಸ, ಎಂಜಿನ್, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ನೂತನ ವಾಹನ ಅಕ್ಟೋಬರ್ 2 ರಂದು ಬಿಡುಗಡೆಯಾಗಿದೆ. ಅದೇ ದಿನ ಬುಕಿಂಗ್ ಕೂಡ ಆರಂಭಗೊಂಡಿದೆ. ಇದೀಗ ನಾಲ್ಕೇ ದಿನಕ್ಕೆ 9,000 ಮಹೀಂದ್ರ ಥಾರ್ ಬುಕ್ ಆಗೋ ಮೂಲಕ ದಾಖಲೆ ಬರೆದಿದೆ.

ದಾಖಲೆ ಬರೆದ ಜೀಪ್: ಮೊದಲ ಮಹೀಂದ್ರ ಥಾರ್ 1.1 ಕೋಟಿಗೆ ಹರಾಜು!..

ಥಾರ್ ಬುಕಿಂಗ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. SUV ವಿಭಾಗದಲ್ಲಿ ಕಿಯಾ ಸೆಲ್ಟೋಸ್ 12 ದಿನದಲ್ಲಿ 9,000 ಕಾರು ಬುಕ್ ಆಗಿ ದಾಖಲೆ ಬರೆದಿತ್ತು. ಇದೀಗ ಥಾರ್ ಕೇವಲ 4 ದಿನಕ್ಕೆ ಈ ಸಂಖ್ಯೆ ತಲುಪಿದೆ. ಆರಂಭಿಕ ಹಂತದಲ್ಲಿ ಭಾರತದ 18 ನಗರಗಳಲ್ಲಿ ಥಾರ್ ಜೀಪ್ ಬಿಡುಗಡೆಯಾಗಿದೆ. ಅಕ್ಟೋಬರ್ 10ರೊಳಗಗೆ 100 ನಗರಗಳಿಗೆ ವಿಸ್ತರಣೆಯಾಗಲಿದೆ.

J&K ಮಾಜಿ ಮುಖ್ಯಮಂತ್ರಿ ಮೋಡಿ ಮಾಡಿದ ಮಹೀಂದ್ ಥಾರ್; ಕಣಿವೆ ರಾಜ್ಯದಲ್ಲೊಂದು ಸುತ್ತು!

ಎಲ್ಲಾ ವರ್ಗದ ಜನರು ಥಾರ್ ಬುಕಿಂಗ್ ಮಾಡುತ್ತಿದ್ದಾರೆ. ನಗರ, ಗ್ರಾಮೀಣ, ಮಹಿಳೆಯರು, ಯುವಕರು, ಸೆಲೆಬ್ರೆಟಿಗಳು, ರಾಜಕೀಯ ಮುಖಂಡರು ಸೇರಿದಂತೆ ಹಲವರು ಥಾರ್ ಬುಕಿಂಗ್ ಮಾಡಿದ್ದಾರೆ. ಎಲ್ಲಾ ಬುಕಿಂಗ್‌ಗಳು ಮಾರಾಟಕ್ಕೆ ಪರಿವರ್ತೆಯಾಗುವುದಿಲ್ಲ. ಆದರೆ ಜನರ ಆಸಕ್ತಿ ನೋಡಿದಾಗ ಮಹೀಂದ್ರ ಮಾರಾಟದಲ್ಲೂ ದಾಖಲೆ ಬರೆಯುವ ಎಲ್ಲಾ ಸಾಧ್ಯತೆ ಕಂಡು ಬರುತ್ತಿದೆ.

ಮಹೀಂದ್ರ ಥಾರ್ 2020 ವಾಹನ ಬೆಲೆ 9.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್, ಕನ್ವರ್ಟಬಲ್ ಟಾಪ್ , ಇನ್ಫೋಟೈನ್ಮೆಂಟ್ ಫೀಚರ್ಸ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಲೆಯಾಳಂ ನಟ ಪೃಥ್ವಿ ರಾಜ್ ಸೇರಿದಂತೆ ಹಲವು ಗಣ್ಯರು ಮಹೀಂದ್ರ ಥಾರ್ ಜೀಪ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios