ಆಟೋ ಮೋಟಾರು ಕ್ಷೇತ್ರದಲ್ಲಿ ಬಜಾಜ್ ಹಾಗೂ ಟಿವಿಎಸ್ ಪ್ರಾಬಲ್ಯ ಸಾಧಿಸಿದೆ. ಇದೀಗ ಈ ಎರಡೂ ಕಂಪೆನಿಗಳಿಗೆ ಪೈಪೋಟಿ ನೀಡಲು ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ನೂತನ ಆಟೋ ರಿಕ್ಷಾ ಬೆಲೆ ಏನು? ಇಲ್ಲಿದೆ ಹೆಚ್ಚಿನ ಮಾಹಿತಿ. 

ಬೆಂಗಳೂರು(ನ.17): ಬಜಾಜ್, ಟಿವಿಎಸ್ ಆಟೋ ರಿಕ್ಷಾಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ ಸಂಸ್ಥೆ ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಟ್ರಿಯೋ ಹಾಗೂ ಟ್ರಿಯೋ ಯಾರಿ ಎಂಬ 2 ಮಾಡೆಲ್‌ಗಳಲ್ಲಿ ಮಹೀಂದ್ರ ಸಂಸ್ಥೆ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. 

Scroll to load tweet…

ಒಂದು ಬಾರಿ ಚಾರ್ಜ್ ಮಾಡಿದರೆ 170 ಕಿ.ಮೀ ಪ್ರಯಾಣ ಮಾಡಲಿದೆ. ಟ್ರಿಯೋ ಯಾರಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬೆಲೆ 1.36 ಲಕ್ಷ(ಎಕ್ಸ್ ಶೋ ರೂಂ ಬೆಂಗಳೂರು) ಹಾಗೂ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಬೆಲೆ 2.22 ಲಕ್ಷ ರೂಪಾಯಿ((ಎಕ್ಸ್ ಶೋ ರೂಂ ಬೆಂಗಳೂರು) . 

Scroll to load tweet…

ಮಹೀಂದ್ರ ಟ್ರಿಯೋ 7.37kwh ಲಿಥಿಯಂ ಇಯಾನ್ ಬ್ಯಾಟರಿ ಅಳವಡಿಸಲಾಗಿದೆ. ಸಂಪೂರ್ಣ ಚಾರ್ಜ್‌ಗೆ 3 ಗಂಟೆ 50 ನಿಮಿಷ ತೆಗೆದುಕೊಳ್ಳಲಿದೆ. ಗರಿಷ್ಛ ವೇಗ 45 ಕಿ.ಮೀ ಪ್ರತಿ ಗಂಟೆಗೆ. ಇನ್ನು ಟ್ರಿಯೋ ಯಾರಿ ರಿಕ್ಷಾ 3.69kWh ಲಿಥಿಯಂ ಇಯಾನ್ ಬ್ಯಾಟರಿ ಅಳವಡಿಸಲಾಗಿದೆ. ಇದರ ಸಂಪೂರ್ಣ ಚಾರ್ಜ್‌ಗೆ 2 ಗಂಟೆ 30 ನಿಮಿಷ ತೆಗೆದುಕೊಳ್ಳಲಿದೆ.

Scroll to load tweet…

ನಗರದಲ್ಲಿ ಆಯೋಜಿಸಲಾದ ಬಿಡುಗಡೆ ಸಮಾರಂಭದಲ್ಲಿ ಕಂದಾಯ ಸಚಿವ ಆರ್‌ವಿ ದೇಶಪಾಂಡೆ, ಸಮಾಜ ಕಲ್ಯಾಣ ಸಚಿವರಾದ ಪ್ರಿಯಾಂಕ್ ಖರ್ಗೆ, ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್, ಮಹೀಂದ್ರ ಎಲೆಕ್ಟ್ರಿಕ್ ಮೋಟಾರ್ಸ್ ಚೇರ್ಮೆನ್ ಪವನ್ ಗೊಯೆಂಕ ಹಾಗೂ ಮಹೀಂದ್ರ ಎಲೆಕ್ಟ್ರಿಕ್ ಮೋಟಾರ್ಸ್ ಸಿಇಓ ಮಹೇಶ್ ಬಾಬು ನೂತನ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದರು.

Scroll to load tweet…

ಮಹೀಂದ್ರ ಸಂಸ್ಥೆ ಎಲೆಕ್ಟ್ರಿಕ್ ವಾಹನ ಘಟಕಕ್ಕಾಗಿ ಬೆಂಗಳೂರಿನಲ್ಲಿ ಬರೋಬ್ಬರಿ 1,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಪ್ರತಿ ವರ್ಷ 25,000 ರೂಪಾಯಿ ಎಲೆಕ್ಟ್ರಿಕ್ ಆಟೋ ತಯಾರಿಸಲಿದೆ. ಸದ್ಯ ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಆಟೋ ಲಭ್ಯವಿದೆ. ಶೀಘ್ರದಲ್ಲೇ ಭಾರತದ ಇತರ ನಗರಗಳಲ್ಲೂ ಸಿಗಲಿದೆ.

Scroll to load tweet…