ರಾಷ್ಟ್ರಪತಿಗೆ ಮೊದಲ BS6 ಅಲ್ಟುರಾಸ್ G4 ಕಾರು ವಿತರಿಸಿದ ಮಹೀಂದ್ರ!
ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಮಹೀಂದ್ರ ಅಲ್ಟುರಾಸ್ G4 ಕಾರು ವಿತರಿಸಲಾಗಿದೆ. ರಾಷ್ಟ್ರಪತಿ ಭವನ ದಿಢೀರ್ ನೂತನ ಕಾರು ಬುಕ್ ಮಾಡಿದೆ. ಜಂಟಿ ಕಾರ್ಯದರ್ಶಿ ನೂತನ ಅಲ್ಟುರಾಸ್ ಜಿ4 ಕಾರು ಡೆಲಿವರಿ ಸ್ವೀಕರಿಸಿದ್ದಾರೆ.
ನವದೆಹಲಿ(ಸೆ.06): ಭಾರತದ ಸುರಕ್ಷತೆ ಕಾರುಗಳ ಪೈಕಿ ಮಹೀಂದ್ರ ಮೋಟಾರ್ಸ್ ಕೂಡ ಅಗ್ರಸ್ಥಾನದಲ್ಲಿದೆ. ಮಹೀಂದ್ರ ಕಂಪನಿಯ ಅಲ್ಟುರಾಸ್ ಜಿ4 ಸೀಟರ್ SUV ಕಾರನ್ನು ಭಾರತದ ರಾಷ್ಟ್ರಪತಿಗೆ ಡೆಲಿವರಿ ಮಾಡಲಾಗಿದೆ. ವಿಶೇಷ ಅಂದರೆ ಇದು ಮೊದಲ BS6 ಅಲ್ಟುರಾಸ್ ಜಿ4 ಕಾರಾಗಿದೆ. ರಾಷ್ಟ್ರಪತಿ ಭವನದ ಜಂಟಿ ಕಾರ್ಯದರ್ಶಿ ಕಾರು ಸ್ವೀಕರಿಸಿದ್ದಾರೆ.
ಕಾರು ಬದಲಾಯಿಸಿದ ಮೋದಿ; ಹೊಸ ವಾಹನ ಮಾಡುತ್ತಿದೆ ಮೋಡಿ!..
ನೂತನ ಮಹೀಂದ್ರ ಅಲ್ಟುರಾಸ್ ಜಿ4 ಕಾರುನ್ನು ರಾಷ್ಟ್ರಪತಿ ಬಳಸುತ್ತಾರೋ, ಅಥವಾ ಭವನದ ಅಧಿಕಾರಿಗಳು ಬಳಸುತ್ತಾರೋ ಅನ್ನೋ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇಷ್ಟೇ ಅಲ್ಲ ರಾಷ್ಟ್ರಪತಿಗೆ ವಿತರಿಸಲಾಗಿರುವ ಅಲ್ಟುರಾಸ್ ಜಿ4 ಕಾರಿಗೆ ಕಸ್ಟಮೈಸ್ ಮಾಡಲಾಗಿದೆಯಾ ಅನ್ನೋ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಸದ್ಯ ಭಾರತದ ರಾಷ್ಟ್ರಪತಿ ಮರ್ಸಿಡೀಸ್ ಬೆಂಝ್ S ಕ್ಲಾಸ್ (S600) ಪುಲ್‌ಮಾನ್ ಗಾರ್ಡ್ ಕಾರು ಬಳಸುತ್ತಿದ್ದಾರೆ. ಇದೀಗ ಮಹೀಂದ್ರ ಅಲ್ಟುರಾಸ್ ಜಿ4 SUV ಕಾರನ್ನು ಯಾರು ಬಳಸುತ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. 2018ರಲ್ಲಿ ಮೊದಲ ಬಾರಿಗೆ ಮಹೀಂದ್ರ ಜಿ4 ಅಲ್ಟುರಾಸ್ ಕಾರು ಭಾರತದಲ್ಲಿ ಬಿಡುಗಡೆ ಮಾಡಿತು.
ಮಹೀಂದ್ರ ಅಲ್ಟುರಾಸ್ ಜಿ4 ಸ್ಸಾಂಗ್ ಯಾಂಗ್ ರೆಕ್ಸಾನ್ ಕಾರಿನ ರಿಬ್ಯಾಡ್ಜ್ ಕಾರಾಗಿದೆ. ಅಲ್ಟುರಾಸ್ ಜಿ4 ಕಾರಿನಲ್ಲಿ ಎರಡು ವೇರಿಯೆಂಟ್ ಲಭ್ಯವಿದೆ. ಅಲ್ಟುರಾಸ್ G4 4x2 AT ಹಾಗೂ ಅಲ್ಟುರಾಸ್ G4 4x4 AT. ಈ ಕಾರಿನ ಬೆಲೆ ಕ್ರಮವಾಗಿ 28.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) , 31.70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
2.2 ಲೀಟರ್ ಎಂಜಿನ್ ಹೊಂದಿರುವ ಅಲ್ಟುರಾಸ್ ಜಿ4, 7 ಸ್ಪೀಡ್ ಅಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಹೊಂದಿದ್ದು, 178 bhp ಪವರ್ ಹಾಗೂ 420 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.