ಚಾಣಕ್ಯ ನೀತಿ (Chanakya Niti) ಪ್ರಕಾರ, ಮಹಿಳೆಯ ನಿಜವಾದ ಮೌಲ್ಯವು ಅವಳ ಸೌಂದರ್ಯದಲ್ಲಿಲ್ಲ, ಬದಲಾಗಿ ಆಂತರಿಕ ಗುಣಗಳಲ್ಲಿದೆ. ಐದು ಪ್ರಮುಖ ಗುಣಗಳು ಅವಳ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ ಎಂದು ಚಾಣಕ್ಯ ಹೇಳುತ್ತಾನೆ. ಯಾವುದು ಆ ಐದು ಗುಣಗಳು?
ಚಾಣಕ್ಯ ನೀತಿ ಮಹಿಳೆಯ ಮೌಲ್ಯವನ್ನು ಕೇವಲ ಶಾರೀರಿಕ ಸೌಂದರ್ಯದ ಮೂಲಕ ಅಳೆಯುವುದಿಲ್ಲ. ಸೌಂದರ್ಯ ಮೊದಲಿಗೆ ಗಮನ ಸೆಳೆಯಬಹುದು. ಆದರೆ ಜೀವನ ಅಷ್ಟೇ ಅಲ್ಲ. ಆಕರ್ಷಣೆ ಸಂಬಂಧವನ್ನು ಆರಂಭಿಸಬಹುದು. ಆದರೆ ಅದನ್ನು ಉಳಿಸುವುದು ಒಳಗಿನ ಗುಣಗಳು ಮಾತ್ರ. ಹೊಣೆಗಾರಿಕೆ, ಒತ್ತಡ ಮತ್ತು ಕಾಲ ಎದುರಾದಾಗ ಸೌಂದರ್ಯದ ಪ್ರಭಾವ ನಿಧಾನವಾಗಿ ಕಡಿಮೆಯಾಗುತ್ತದೆ. ಚಾಣಕ್ಯನ ದೃಷ್ಟಿಯಲ್ಲಿ, ಸೌಂದರ್ಯ ಎಂದಿಗೂ ಸ್ಥಿರವಲ್ಲ. ಅದು ತಾತ್ಕಾಲಿಕ ಪ್ರಭಾವ ಮಾತ್ರ. ಚಾಣಕ್ಯ ನೀತಿ ಹೊರಗಿನ ರೂಪವನ್ನು ನೋಡುವುದಿಲ್ಲ. ಮಹಿಳೆಯ ನಿಜವಾದ ಶಕ್ತಿ ಮತ್ತು ಮೌಲ್ಯವನ್ನು ನಿರ್ಧರಿಸುವುದು ಆಂತರಿಕ ಗುಣಗಳಂತೆ. ಚಾಣಕ್ಯರ ಪ್ರಕಾರ, ಮಹಿಳೆಯ ನಿಜವಾದ ಮೌಲ್ಯ ನಿರ್ಧಾರವಾಗುವುದು ಎಲ್ಲವೂ ಸುಲಭವಾಗಿರುವಾಗ ಅಲ್ಲ. ಜೀವನ ಕಷ್ಟವಾದಾಗ ಅವಳು ಹೇಗೆ ಯೋಚಿಸುತ್ತಾಳೆ, ಪ್ರತಿಕ್ರಿಯಿಸುತ್ತಾಳೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬುದರಲ್ಲಿದೆ. ಹಾಗಾದರೆ ಆ ಗುಣಗಳು ಯಾವುದು ಅಂತ ನೋಡೋಣ.
1. ಕಷ್ಟದ ಸಂದರ್ಭಗಳಲ್ಲಿ ಭಾವನೆಗಳ ನಿಯಂತ್ರಣ
ಭಾವನಾತ್ಮಕ ಅಸ್ಥಿರತೆ ತೀರ್ಮಾನಶಕ್ತಿಯನ್ನು ಬೇಗನೆ ಹಾಳುಮಾಡುತ್ತದೆ ಎಂದು ಚಾಣಕ್ಯ ನಂಬಿದ್ದರು. ಒತ್ತಡದ ಸಮಯದಲ್ಲಿ ಭಾವನೆಗಳನ್ನು ನಿಯಂತ್ರಿಸಲಾರದೆ ಹೋದ ಮಹಿಳೆ, ನಂಬಿಕೆ, ಸಂಬಂಧ ಮತ್ತು ಸ್ಥಿರತೆಗೆ ಹಾನಿ ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಭಾವನೆಗಳ ನಿಯಂತ್ರಣ ಎಂದರೆ ಭಾವನೆಗಳನ್ನು ಒತ್ತಿ ಹಿಡಿಯುವುದು ಅಲ್ಲ. ಕೋಪ, ಭಯ ಅಥವಾ ಅಸುರಕ್ಷತೆ ನಮ್ಮ ಕಾರ್ಯಗಳನ್ನು ಆಳಲು ಬಿಡದಿರುವುದು. ಸ್ಥಿರ ಮನಸ್ಸು ಗೌರವವನ್ನು ಕಾಪಾಡುತ್ತದೆ ಮತ್ತು ಕ್ಷಣಿಕ ಭಾವನೆಗಳಿಂದ ಶಾಶ್ವತ ಸಮಸ್ಯೆಗಳು ಹುಟ್ಟದಂತೆ ತಡೆಯುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.
2. ಮಾತನಾಡುವ ಮೊದಲು ಯೋಚಿಸುವ ಗುಣ
ಅಜಾಗರೂಕ ಮಾತುಗಳು ದೌರ್ಬಲ್ಯವನ್ನು ಬಹಿರಂಗಪಡಿಸುತ್ತವೆ ಎಂದು ಚಾಣಕ್ಯ ಎಚ್ಚರಿಸಿದ್ದರು. ಯೋಚನೆ ಇಲ್ಲದೇ ಹೊರಬರುವ ಮಾತುಗಳು ಕ್ಷಣದಲ್ಲಿ ವರ್ಷಗಳ ಶ್ರಮವನ್ನು ಹಾಳುಮಾಡಬಹುದು. ಮಾತನಾಡುವ ಮೊದಲು ಯೋಚಿಸುವ ಮಹಿಳೆ ಸಮಯ, ಸಂದರ್ಭ ಮತ್ತು ಮಾತಿನ ಪರಿಣಾಮವನ್ನು ಅರಿತಿರುತ್ತಾಳೆ. ಅವಳು ತಕ್ಷಣ ಪ್ರತಿಕ್ರಿಯಿಸುವುದಿಲ್ಲ ಅಥವಾ ಮೆಚ್ಚಿಸಿಕೊಳ್ಳಲು ಮಾತನಾಡುವುದಿಲ್ಲ. ಅವಶ್ಯಕವಾದಾಗ ಮಾತ್ರ ತೂಕದ ಮಾತು ಹೇಳುತ್ತಾಳೆ. ಈ ಅಭ್ಯಾಸವೇ ಗೌರವವನ್ನು ಕಟ್ಟಿಕೊಡುತ್ತದೆ. ಕಡಿಮೆ ಮಾತನಾಡುವ ಆದರೆ ವಿವೇಕದಿಂದ ಮಾತನಾಡುವವರ ಮಾತಿಗೆ ಜನ ಹೆಚ್ಚು ಕಿವಿಗೊಡುತ್ತಾರೆ.
3. ಎಲ್ಲ ಸಂದರ್ಭಗಳಲ್ಲೂ ದೃಢ ಸ್ವಭಾವ
ಚಾಣಕ್ಯನ ಪ್ರಕಾರ ಸ್ವಭಾವವನ್ನು ಪರೀಕ್ಷಿಸುವುದು ಸುಖವಲ್ಲ, ಸಂಕಷ್ಟ. ಎಲ್ಲವೂ ಸರಾಗವಾಗಿರುವಾಗ ಯಾರೂ ಸಜ್ಜನನಂತೆ ಕಾಣಬಹುದು. ನಷ್ಟ, ಒತ್ತಡ ಮತ್ತು ಪ್ರಲೋಭನೆ ಎದುರಾದಾಗಲೇ ನಿಜವಾದ ಸ್ವಭಾವ ಹೊರಬರುತ್ತದೆ. ದೃಢ ಸ್ವಭಾವದ ಮಹಿಳೆ ಯಾವ ಸಂದರ್ಭದಲ್ಲೂ ಒಂದೇ ರೀತಿಯ ಮೌಲ್ಯಗಳನ್ನು ಹಿಡಿದುಕೊಳ್ಳುತ್ತಾಳೆ. ಅವಳ ತತ್ವಗಳು ಅನುಕೂಲ, ಭಾವನಾತ್ಮಕ ಒತ್ತಡ ಅಥವಾ ಹೊರಗಿನ ಪ್ರಭಾವಕ್ಕೆ ಬದಲಾಗುವುದಿಲ್ಲ. ಈ ಸ್ಥಿರತೆಯೇ ನಂಬಿಕೆಯನ್ನು ಹುಟ್ಟಿಸುತ್ತದೆ – ಚಾಣಕ್ಯನ ಪ್ರಕಾರ ಇದು ಆಕರ್ಷಣೆಗಿಂತಲೂ ಮೌಲ್ಯಯುತ.
4. ಸ್ಪಷ್ಟ ಗಡಿಗಳನ್ನು ಹಾಕುವ ಆತ್ಮಗೌರವ
ಆತ್ಮಗೌರವವೇ ಗೌರವದ ಮೂಲ ಎಂದು ಚಾಣಕ್ಯ ನಂಬಿದ್ದರು. ಅದು ಇಲ್ಲದಿದ್ದರೆ ಬುದ್ಧಿ ಮತ್ತು ಸೌಂದರ್ಯವೂ ಮೌಲ್ಯ ಕಳೆದುಕೊಳ್ಳುತ್ತದೆ. ಆತ್ಮಗೌರವ ಇರುವ ಮಹಿಳೆ ನಿರಂತರ ಮೆಚ್ಚುಗೆಗಾಗಿ ಕಾಯುವುದಿಲ್ಲ. ಸಂಬಂಧ ಉಳಿಸಿಕೊಳ್ಳಲು ಅವಮಾನವನ್ನು ಸಹಿಸುವುದಿಲ್ಲ. ಎಲ್ಲಿ ಗಡಿ ಹಾಕಬೇಕು ಎಂಬುದು ಅವಳಿಗೆ ಗೊತ್ತಿರುತ್ತದೆ, ಮತ್ತು ಅದಕ್ಕಾಗಿ ತಪ್ಪಿತಸ್ಥ ಭಾವನೆ ಅನುಭವಿಸುವುದಿಲ್ಲ. ಈ ಗುಣವೇ ಮಾನಸಿಕ ಶೋಷಣೆ, ಮೋಸ ಮತ್ತು ದೀರ್ಘಕಾಲದ ಅಸಮಾಧಾನವನ್ನು ತಡೆಯುತ್ತದೆ. ತನ್ನನ್ನು ತಾನೇ ಗೌರವಿಸುವ ವ್ಯಕ್ತಿಗೆ ಇತರರಿಂದಲೂ ಸಹಜವಾಗಿ ಗೌರವ ಸಿಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.
5. ಕ್ಷಣಿಕ ಭಾವನೆಗಿಂತ ದೂರದೃಷ್ಟಿಗೆ ಆದ್ಯತೆ
ದೂರದೃಷ್ಟಿಯನ್ನು ಚಾಣಕ್ಯ ಅತ್ಯಂತ ಮುಖ್ಯ ಗುಣವೆಂದು ಪರಿಗಣಿಸಿದ್ದರು. ತಕ್ಷಣದ ಭಾವನೆಗಳನ್ನು ಮೀರಿ, ಮುಂದಿನ ಪರಿಣಾಮಗಳನ್ನು ಯೋಚಿಸುವವರನ್ನು ಅವರು ಶ್ಲಾಘಿಸಿದ್ದರು. ಜಾಣ ಮಹಿಳೆ ಕ್ಷಣಿಕ ಆಸೆ, ಕೋಪ ಅಥವಾ ಉತ್ಸಾಹಕ್ಕೆ ಪ್ರಮುಖ ನಿರ್ಧಾರಗಳನ್ನು ಒಪ್ಪಿಸುವುದಿಲ್ಲ. ಅವಳು ತನ್ನ ಭವಿಷ್ಯ, ಮನಶಾಂತಿ ಮತ್ತು ಹೊಣೆಗಾರಿಕೆಗಳ ಮೇಲೆ ಅದರ ಪರಿಣಾಮವನ್ನು ಯೋಚಿಸುತ್ತಾಳೆ. ಈ ಗುಣವೇ ಸಂಬಂಧ, ಹಣಕಾಸು ಮತ್ತು ವ್ಯಕ್ತಿತ್ವವನ್ನು ರಕ್ಷಿಸುತ್ತದೆ. ದೀರ್ಘಕಾಲದ ಚಿಂತನೆಯೇ ವಿವೇಕ ಮತ್ತು ಅಜಾಗರೂಕತೆಗೆ ನಡುವಿನ ವ್ಯತ್ಯಾಸ ಎಂದು ಚಾಣಕ್ಯ ನಂಬಿದ್ದರು.


