ನಿಮ್ಮೊಂದಿಗೆ ಅತಿಯಾಗಿ ಒಳ್ಳೆಯವರಂತೆ ವರ್ತಿಸುವವರೆಲ್ಲಾ ಒಳ್ಳೆಯವರೇ? ಅವರ ನಿಜವಾದ ಉದ್ದೇಶಗಳನ್ನು ಗುರುತಿಸುವುದು ಹೇಗೆ? ಚಾಣಕ್ಯ ನೀತಿ (Chanakya niti) ಈ ಬಗ್ಗೆ ವಿವರಿಸುತ್ತದೆ. ನಿಮ್ಮವರೆನಿಸಿಕೊಂಡವರ ನೈಜ ವ್ಯಕ್ತಿತ್ವವನ್ನು ಅರಿಯುವ ಸೂತ್ರಗಳನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಜೊತೆ ಚೆನ್ನಾಗಿ, ನಯವಾಗಿ ವರ್ತಿಸುವವರೆಲ್ಲರೂ ಒಳ್ಳೆಯವರಲ್ಲ. ನಿಮ್ಮ ಹಿಂದೆ ಕೊಡೆ ಹಿಡಿದು ನಿಂತವರು ನಿಮ್ಮ ಬೆನ್ನಿನ ಹಿಂದಿನಿಂದ ಚೂರಿ ಹಾಕಲಾರರು ಎಂದು ಯಾರೂ ಹೇಳಲಾರರು. ಇಂದಿನ ಜಗತ್ತು, ವೃತ್ತಿ ಸಂಬಂಧಗಳು ಹಾಗಿದೆ. ನಿಮ್ಮಲ್ಲಿ ನಂಬಿಕೆ ಮೂಡುವಂತೆ ವರ್ತಿಸುವವರು ಇರಬಹುದು. ಆದರೆ ಆ ನಂಬಿಕೆಯನ್ನು ಉಳಿಸಿಕೊಳ್ಳುವವರು ಕಡಿಮೆ ಜನ. ಹಾಗಾದರೆ, ಇಂಥವರ ಉದ್ದೇಶಗಳನ್ನು ಅವರು ಹೇಳದೆಯೇ ಅರ್ಥ ಮಾಡಿಕೊಳ್ಳುವುದು ಹೇಗೆ? ವ್ಯಕ್ತಿಯ ವರ್ತನೆಗಳ ಹಿಂದಿನ ನೈಜತೆಯನ್ನು ಅರಿಯುವುದು ಹೇಗೆ? ಅದಕ್ಕೆ ಆಚಾರ್ಯ ಚಾಣಕ್ಯರು ಕೆಲವು ಸೂತ್ರಗಳನ್ನು ನೀಡುತ್ತಾರೆ. ಅವು ಹೀಗಿವೆ.

1. ತುಂಬಾ ಒಳ್ಳೆಯತನ ತೋರಿಸುವವರು

ತುಂಬಾ ಸಾತ್ವಿಕತೆ, ಒಳ್ಳೆಯತನ ತೋರಿಸುವವರು, ನಿಮ್ಮ ಜೊತೆ ಬೆಣ್ಣೆಯಂತೆ ವ್ಯವಹರಿಸುವವರು, ಇವರು ಜಂಟಲ್‌ಮನ್‌ ಎಂಬ ಭಾವನೆ ಮೂಡಿಸುವವರು- ಇವರ ಬಗ್ಗೆ ಒಂದು ಸಣ್ಣ ಅಪನಂಬಿಕೆ ಯಾವಾಗಲೂ ಇರಲಿ. ನಿಮ್ಮ ಚೆನ್ನಾಗಿ ನಂಬಿಸಿದರೆ ಮಾತ್ರ ಕತ್ತು ಕೊಯ್ಯಲು ಸಾಧ್ಯ ಎಂಬುದು ತಿಳಿದಿರಲಿ. ತುಂಬಾ ಸ್ವೀಟಾಗಿ ಇರುವವರ ನಗೆಯ ಹಿಂದೆ ಚೂರಿ ಇರಬಹುದು. ಪ್ರಾಮಾಣಿಕರು ನಿಮ್ಮನ್ನು ನಂಬಿಸಲು ವರ್ತಿಸುವುದಿಲ್ಲ. ಕೆಲವೊಮ್ಮೆ ಕಠಿಣವಾಗಿಯೂ ನಿಮ್ಮನ್ನು ತಿದ್ದುತ್ತಾರೆ.

2. ನಿಮ್ಮ ಗೆಳೆಯರ ಜೊತೆ ಹೇಗಿರುತ್ತಾರೆ?

ಒಬ್ಬ ವ್ಯಕ್ತಿ ನಿಮ್ಮ ಗೆಳೆಯ/ತಿಯರ ಜೊತೆಗೆ ಹೇಗೆ ವರ್ತಿಸುತ್ತಾರೆ ಎಂಬುದು ಅವರ ವ್ಯಕ್ತಿತ್ವದ ಮೂವಿ ಟ್ರೇಲರ್.‌ ಸಡನ್ನಾಗಿ ಕೂಲ್‌ ಗೈ ಆಗಿ, ಆಕರ್ಷಕವಾಗಿ, ಜೋಕ್‌ ಹೇಳಿ ನಗಿಸುತ್ತಾ, ಹೊಗಳುತ್ತಾ ಇರುವವನು ಸ್ನೇಹಿತನಲ್ಲ. ಅವನಲ್ಲಿ ಏನೋ ತಂತ್ರವಿದೆ. ಅತೀ ಗೌರ ತೋರಿಸುವವನು ನಿಮ್ಮನ್ನೂ ನಿಮ್ಮ ಬಳಗವನ್ನೂ ಇಂಪ್ರೆಸ್‌ ಮಾಡಲು ಯತ್ನಿಸುತ್ತಿರುತ್ತಾನೆ. ಒಬ್ಬ ಗಂಡಸು ಇತರರನ್ನು ಎಲ್ಲಿ ಪ್ಲೀಸ್‌ ಮಾಡಲು ಮುಂದಾಗುತ್ತಾನೋ ಅದರ ಹಿಂದೆ ಅವನ ಉದ್ದೇಶವಿದೆ ಎಂದರ್ಥ.

3. ʼನಾನು ಇತರರ ಹಾಗಲ್ಲʼ

ನಾನು ಇತರರ ಹಾಗಲ್ಲ ಎಂದು ನಟಿಸುವವನು, ಹೀರೋ ಥರ ನಟಿಸುವವನು, ತಾನು ಡಿಫರೆಂಟ್‌ ಎಂದು ಕೊಚ್ಚಿಕೊಳ್ಳುವವನು, ʼನಿನಗೆ ಆದ ನೋವಿನ ಬಗ್ಗೆ ನಂಗೆ ತುಂಬಾ ಕೆಟ್ಟದೆನಿಸಿತುʼ ಎಂದೆಲ್ಲ ನೈಸ್‌ ಹೊಡೆಯುವವನು ಖಂಡಿತಾ ಒಳ್ಳೆಯವನಲ್ಲ. ಆತ ನಿಮ್ಮ ದುರ್ಬಲ ಪಾಯಿಂಟ್‌ಗಳನ್ನು ಅಳೆಯುತ್ತಿದ್ದಾನೆ ಖಂಡಿತ. ಆತ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿಲ್ಲ, ನಿಮ್ಮ ಬಗ್ಗೆ ನೋಟ್ಸ್‌ ಮಾಡುತ್ತಿದ್ದಾನೆ. ನಿಮ್ಮನ್ನು ಅತಿಯಾಗಿ ಹೊಗಳುವವನು ನಿಮ್ಮನ್ನು ಕೆಡವಲು ಹಾದಿ ಹುಡುಕುತ್ತಿದ್ದಾನೆ.

4. ಸ್ವಯಂಕೇಂದ್ರಿತ ಕೇಳುಗ

ನಿಮ್ಮ ಮಾತನ್ನು ಕೇಳಿದಂತೆ ನಟಿಸುತ್ತಿರುತ್ತಾರೆ, ಆದರೆ ನಿಜಕ್ಕೂ ಆಲಿಸುತ್ತಿರುವುದಿಲ್ಲ. ಅವರ ಮನಸ್ಸು ಅವರಲ್ಲಿಯೇ ಮಗ್ನವಾಗಿರುತ್ತದೆ. ಆತ ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಿರುವುದಿಲ್ಲ, ನಿಮ್ಮನ್ನು ಅಳೆಯುತ್ತಿದ್ದಾನೆ. ಮಾತನಾಡುವುದಕ್ಕೆ ತನ್ನ ಅವಕಾಶ ಕಾಯುತ್ತಿರುತ್ತಾನೆ ಅಷ್ಟೇ. ಇಂಥವರನ್ನು ತಿಳಿಯಲು ಒಂದು ಆಳವಾದ ಪ್ರತ್ಯುತ್ತರ ಬಯಸುವ ಪ್ರಶ್ನೆ ಕೇಳಿದರೆ ಸಾಕಾಗುತ್ತದೆ. ಆತನ ಕೇಳುವಿಕೆ ಎಂಬುದು ಕೂಡ ಆತನನ್ನೇ ಪ್ರತಿಫಲಿಸುವ ಒಂದು ಕನ್ನಡಿ ಅಷ್ಟೆ. ಆತ ತನ್ನ ಸರದಿಗಾಗಿ ಕಾಯುತ್ತಿರುತ್ತಾನೆ.

5. ʼನೋʼ ಎಂಬುದಕ್ಕೆ ವ್ಯಗ್ರವಾಗುವವರು

ನಿಮ್ಮ ʼನೋʼ ಎಂಬ ಒಂದು ಉತ್ತರ ಅವರ ಮುಖವಾಡವನ್ನು ಕಳಚಿಬಿಡುತ್ತದೆ. ಇಂಥವರಿಗೆ ಎಲ್ಲದಕ್ಕೂ ಯೆಸ್‌ ಎನ್ನುವ ಬದಲು, ಒಮ್ಮೆ ನೋ ಎಂದರೆ ಸಾಕು, ವ್ಯಗ್ರರಾಗಿ ಬಿಡುತ್ತಾರೆ. ʼನಾನು ನಿನಗಾಗಿ ಅಷ್ಟೆಲ್ಲ ಮಾಡಲಿಲ್ಲವೇʼ ಎಂಬ ರೀತಿಯಲ್ಲಿ ಮಾತನಾಡತೊಡಗುತ್ತಾರೆ. ಆತನ ಧ್ವನಿ ಬದಲಾಗುವುದು, ಗಡುಸಾಗುವುದು, ಆತನ ಒಳ್ಳೆಯತನ ಮಾಯವಾಗುವುದು- ಇವೆಲ್ಲ ಅಪಾಯದ ಚಿಹ್ನೆಗಳು.

6. ಹೆಣ್ಣುಮಕ್ಕಳಿಗೆ ಅರ್ಥವಾಗುತ್ತದೆ

ಹೆಣ್ಣು ಮಕ್ಕಳಿಗೆ ಇದೆಲ್ಲ ಅರ್ಥವಾಗಲ್ಲ ಎಂದೇನೂ ಅಲ್ಲ. ಹೆಚ್ಚಿನ ಗಂಡಸರು ಯಾವುದೋ ಸುಖದ ಬಯಕೆಯಲ್ಲಿ ಪ್ರೀತಿಯ ನಟನೆಯಲ್ಲಿ ತೊಡಗಿರುತ್ತಾರೆ. ಇಂದು ಮಹಿಳೆಯರೂ ಅಷ್ಟೆ. ಇಂಥ ನಟನೆಯ ಗುಣಗಳನ್ನು ನೀವು ಎಷ್ಟು ಬೇಗ ಪತ್ತೆ ಹಚ್ಚಬಲ್ಲಿರೋ ಅಷ್ಟು ಸೇಫ್‌ ಆಗುತ್ತೀರಿ.