ಚಾಣಕ್ಯ ನೀತಿಯ ಪ್ರಕಾರ, ಬಲಕ್ಕಿಂತ ಬುದ್ಧಿ ಶ್ರೇಷ್ಠ. ನಿಮಗಿಂತ ಬಲಶಾಲಿ ಶತ್ರುಗಳನ್ನು ಎದುರಿಸಲು, ನರಿಯಂತೆ ಚಾಣಾಕ್ಷತನದಿಂದ ವರ್ತಿಸಬೇಕು. ಈ ಲೇಖನವು ಯಶಸ್ಸಿಗಾಗಿ ನರಿಯಿಂದ ಕಲಿಯಬಹುದಾದ 11 ಪ್ರಮುಖ ಗುಣಗಳನ್ನು ವಿವರಿಸುತ್ತದೆ.
ಚಿಕ್ಕವಯಸ್ಸಿನಿಂದಲೂ ನಾವು ನರಿ ತುಂಬಾ ಚಾಣಾಕ್ಷ ಪ್ರಾಣಿ ಎಂದು ಕೇಳುತ್ತಾ ಬಂದಿದ್ದೇವೆ. ಜೀವನದಲ್ಲಿ ಪ್ರತೀಸಾರಿ ಬಲ ಅಥವಾ ಶಕ್ತಿಯೇ ಗೆಲುವಿಗೆ ಕಾರಣವಾಗುವುದಿಲ್ಲ. ಕೆಲ ಸಂದರ್ಭಗಳಲ್ಲಿ ಬುದ್ಧಿ, ತಂತ್ರ ಮತ್ತು ಜಾಣ್ಮೆಯೇ ನಮ್ಮನ್ನು ಮುನ್ನಡೆಸುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ನಮಗಿಂತ ಬಲಯುತರಾದ ಶತ್ರುಗಳು ಅಥವಾ ಸ್ಪರ್ಧಿಗಳು ನಮ್ಮ ಮುಂದೆ ನಿಂತಾಗ, ದೇಹಬಲದಿಂದ ಸೆಣಸಿ ಗೆಲ್ಲಲು ಸಾಧ್ಯವಿಲ್ಲ. ಆಗ ನರಿಯಂತೆ ಚಾಣಾಕ್ಷತನದಿಂದ ನಡೆದುಕೊಂಡರೆ ಕಠಿಣ ಪರಿಸ್ಥಿತಿಗಳಲ್ಲೂ ಯಶಸ್ಸು ಸಾಧಿಸಬಹುದು. ಹಾಗೆ ನರಿಯಿಂದ ನಾವು ಕಲಿಯಬೇಕಾದ 11 ಮುಖ್ಯ ಗುಣಗಳು ಇಲ್ಲಿವೆ.
1. ದೂರದೃಷ್ಟಿಯ ಚಿಂತನೆ
ನರಿ ಪ್ರತೀ ಪರಿಸ್ಥಿತಿಯನ್ನು ಮುಂಚಿತವಾಗಿಯೇ ಊಹಿಸುತ್ತದೆ. ಸೌತೆಕಾಯಿ ಹೊಲಕ್ಕೆ ತಡರಾತ್ರಿ ದಾಳಿ ಮಾಡಬೇಕಾದರೆ ಅದು ಹಿಂದಿನ ರಾತ್ರಿಯೇ ಸ್ಕೆಚ್ ಹಾಕುತ್ತದೆ. ನಾವು ಕೂಡ ಜೀವನದ ಪ್ರತೀ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಬೇಕು.
2. ಸಮಯವನ್ನು ಸರಿಯಾಗಿ ಬಳಸುವುದು
ನರಿ ಯಾವಾಗ ಏನು ಮಾಡಬೇಕು ಎಂಬುದನ್ನು ಚೆನ್ನಾಗಿ ಅರಿತಿರುತ್ತದೆ. ಮನುಷ್ಯರಿಲ್ಲದ ವೇಳೆ ನೋಡಿಯೇ ಕೋಳಿ ಗೂಡಿಗೆ ದಾಳಿ ಇಡುತ್ತದೆ. ಸರಿಯಾದ ಸಮಯದಲ್ಲಿ ಕೆಲಸ ಮಾಡುವುದೇ ಯಶಸ್ಸಿನ ಮೊದಲ ಹಂತ.
3. ಸಂಕಷ್ಟದಲ್ಲಿ ಸಹನೆ
ಕಷ್ಟದ ಸಮಯದಲ್ಲಿ ನರಿ ಗಾಬರಿಯಾಗುವುದಿಲ್ಲ. ಸಹನೆಯಿಂದ ಕಾಯುತ್ತದೆ. ಅವಿತು ಕುಳಿತಿರುತ್ತದೆ. ನಮಗೂ ಸಂಕಷ್ಟ ಬಂದಾಗ ಶಾಂತವಾಗಿ ನಡೆದುಕೊಳ್ಳಬೇಕು.
4. ಎಚ್ಚರಿಕೆ ಮತ್ತು ಜಾಗರೂಕತೆ
ನರಿ ಸದಾ ಎಚ್ಚರಿಕೆಯಿಂದಿರುತ್ತದೆ. ಯಾವುದೇ ಸಣ್ಣ ಸದ್ದನ್ನೂ ಕಡೆಗಣಿಸುವುದಿಲ್ಲ. ಸುತ್ತಮುತ್ತ ನೋಡುತ್ತದೆ. ನಾವು ಕೂಡ ನಮ್ಮ ಸುತ್ತಮುತ್ತಲ ಪರಿಸ್ಥಿತಿಯನ್ನು ಗಮನಿಸಬೇಕು.
5. ತಂತ್ರ ಮತ್ತು ಮುಖವಾಡ
ನರಿಯ ಮುಖ ನೋಡಿದರೆ ಮುಗ್ಧವಾಗಿ ಕಾಣಿಸುತ್ತದಲ್ಲವೇ? ಅದರ ಹಿಂದೆ ಏನೋ ಸಂಚು ಅಡಗಿರುತ್ತದೆ. ಕೆಲವೊಮ್ಮೆ ನಮ್ಮ ಯೋಜನೆಯನ್ನು ಎಲ್ಲರಿಗೂ ತೋರಿಸದೇ ರಹಸ್ಯವಾಗಿಡುವುದು ಒಳಿತು. ನರಿಯಂತೆ ತಂತ್ರವನ್ನು ಗುಪ್ತವಾಗಿಡಬೇಕು.
6. ನಿರಂತರ ಕಲಿಕೆ
ಪ್ರತಿ ಹೊಸ ಅನುಭವದಿಂದ ನರಿ ಏನಾದರೂ ಕಲಿಯುತ್ತದೆ. ಒಮ್ಮೆ ಏಟು ತಿಂದ ಜಾಗಕ್ಕೆ ಮತ್ತೆ ಅದು ಕಾಲಿಡುವುದಿಲ್ಲ. ಮನುಷ್ಯರೂ ಕೂಡ ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು.
7. ಸ್ವತಂತ್ರ ಚಿಂತನೆ
ನರಿ ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಇನ್ನೊಬ್ಬರ ಮಾರ್ಗದರ್ಶನದಲ್ಲಿ ತನ್ನ ದಾಳಿ ಮಾಡುವುದಿಲ್ಲ. ನಾವು ಕೂಡ ನಮ್ಮ ನಿರ್ಧಾರಗಳನ್ನು ನಾವು ತಾನೇ ತೆಗೆದುಕೊಳ್ಳಬೇಕು.
8. ಯೋಜನೆ ಮತ್ತು ತಂತ್ರ
ನರಿ ಪ್ರತೀ ಸವಾಲಿಗೂ ಒಂದು ಯೋಜನೆ ಮಾಡುತ್ತದೆ. ಕಷ್ಟದ ಸಮಯದಲ್ಲೂ ಯೋಜನೆ ಅಗತ್ಯ.
9. ಸುತ್ತಮುತ್ತಲ ಗಮನ
ನರಿ ತನ್ನ ಸುತ್ತಮುತ್ತ ನಡೆಯುವ ಪ್ರತೀ ವಿಷಯವನ್ನು ಗಮನಿಸುತ್ತದೆ. ಸದ್ದುಗಳನ್ನು ಆಲಿಸುವುದರಲಿ ಅದರ ಕಿವಿ ಬಲು ಚುರುಕು. ನಮಗೂ ಇದು ಬಹಳ ಮುಖ್ಯ.
10. ತನ್ನ ಸಾಮರ್ಥ್ಯವನ್ನು ಅರಿತಿರುವುದು
ನರಿ ತನ್ನ ಶಕ್ತಿ ಮತ್ತು ದುರ್ಬಲತೆಯನ್ನು ಚೆನ್ನಾಗಿ ತಿಳಿದಿರುತ್ತದೆ. ತನಗಿಂತ ಶಕ್ತಿವಂತ ಪ್ರಾಣಿಗಳ ಎದುರು ಕೂಡ ಕಾಣಿಸಿಕೊಳ್ಳುವುದಿಲ್ಲ. ದೂರವೇ ಇರುತ್ತದೆ. ನಾವು ಕೂಡ ನಮ್ಮ ಶಕ್ತಿ-ದೌರ್ಬಲ್ಯಗಳನ್ನು ಅರಿಯಬೇಕು.
11. ಪರಿಸ್ಥಿತಿಗೆ ಹೊಂದಿಕೊಳ್ಳುವಿಕೆ
ನರಿ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಜೀವನದಲ್ಲೂ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು.
ಚಾಣಕ್ಯರ ಮಾತಿನಂತೆ, ಬಲಕ್ಕಿಂತಲೂ ಬುದ್ಧಿಯಿಂದ ಗೆಲ್ಲುವುದು ಹೆಚ್ಚು ಮಹತ್ವದ್ದು. ನರಿಯ ಈ 11 ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಶತ್ರುಗಳ ಎದುರು ಚಾಣಾಕ್ಷತನದಿಂದ ನಿಲ್ಲಬಹುದು ಮತ್ತು ಯಾವುದೇ ಕಷ್ಟದ ಸಂದರ್ಭದಲ್ಲೂ ಯಶಸ್ಸು ಸಾಧಿಸಬಹುದು.


