ನವದೆಹಲಿ(ನ.09): ಇವರು ನುಡಿಯುವ ಭವಿಷ್ಯ ಬಹುತೇಕ ಪಕ್ಕಾ ಆಗುತ್ತದೆ. ಅಯೋಧ್ಯೆ ವಿವಾದದ ವಿಚಾರದಲ್ಲಿಯೂ ಇವರು ಎರಡು ವರ್ಷಗಳ ಹಿಂದೆ ನುಡಿದ ಭವಿಷ್ಯ ನಿಜವಾಗಿದೆ.

ನವೆಂಬರ್ 15, 2017 ರಲ್ಲೇ ರಾಮಮಂದಿರ ನಿರ್ಮಾಣದ ಬಗ್ಗೆ ಈ ಜ್ಯೋತಿಷಿ ಭವಿಷ್ಯ ನುಡಿದಿದ್ದರು.  ರಾಮಮಂದಿರ ನಿರ್ಮಾಣ ಆರಂಭವಾಗಲು ಎರಡು ವರ್ಷ ಮೂರು ತಿಂಗಳು ಉಳಿದುಕೊಂಡಿದೆ ಎಂದಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಖ್ಯಾತ ಜೋತಿಷಿ  ಅನಿರುದ್ಧ ಕುಮಾರ್ ಮಿಶ್ರಾ ಟ್ವೀಟ್ ಮಾಡಿದ್ದು , ನನ್ನ ಪ್ರಕಾರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ವಿಶ್ವಾಸ ಮತ ಗೆಲ್ಲಲಿದ್ದಾರೆ. ಬಿಜೆಪಿ ಸರ್ಕಾರವನ್ನು 5 ವರ್ಷಗಳ ಕಾಲ ಸುಭದ್ರವಾಗಿ ನಡೆಸಿಕೊಂಡು ಹೋಗುತ್ತದೆ ಎಂದಿದ್ದಾರೆ.

ಫಡ್ನವೀಸ್ ಸರ್ಕಾರಕ್ಕೆ ಮತ್ತೊಂದು ದಿನ ಜೀವದಾನ

ಇವರ ಟ್ವೀಟ್ ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ನೀವು ಹೇಳುತ್ತಿರುವುದು ಸರಿ, ನಮಗೂ ಹಾಗೆ ಅನ್ನಿಸುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

2027ಕ್ಕೆ ಪಿಒಕೆ, 2030ಕ್ಕೆ ಗಿಲ್ಗಿಟ್: ಅನಿರುದ್ಧ ಭವಿಷ್ಯವಾಣಿ ನಿಜವಾದ್ರೆ ಪಾಕ್‌ ಗಿರಗಿಟ್ಲೆ!...

ರಾಮಮಂದಿರ ನಿರ್ಮಾಣ ಆರಂಭವಾಗಲು ಎರಡು ವರ್ಷ ಉಳಿದುಕೊಂಡಿದೆ ಎಂದು 2017ರಲ್ಲೇ ಭವಿಷ್ಯ ಹೇಳಿದ್ದರು. ಆಗ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ಇತ್ತು. ಯಾವ್ಯಾವ ದಾಖಲೆ ಸಲ್ಲಿಕೆಯಾಗಲಿದೆ?  ಮುಂದೆ ಏನಾಗಲಿದೆ? ಎಂಬುದು ಯಾರಿಗೂ ಗೊತ್ತಿರಲಿಲ್ಲ.

ಈ ತೀರ್ಪಿಗೆ ಕಾರಣವಾಯ್ತೆ ಪುರಾತತ್ವ ಇಲಾಖೆ ಕಲೆಹಾಕಿದ್ದ 10 ಆಧಾರಗಳು

ಈ ಹಿಂದೆ ಹಲವು ಬಾರಿ ಅನಿರುದ್ಧ ಕುಮಾರ್ ಮಿಶ್ರಾ ಭವಿಷ್ಯ ನಿಜವಾಗಿತ್ತು. ಪ್ರಮುಖವಾಗಿ 2019ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದರು.

ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅನಿರುದ್ಧ ಸ್ಪಷ್ಟವಾಗಿ ನುಡಿದಿದ್ದರು. ಆದರೆ ಕೊನೆಯ ಐಪಿಎಲ್ ಪಂದ್ಯಾವಳಿಯ ಕುರಿತು ಅನಿರುದ್ಧ ಹೇಳಿದ್ದ ಭವಿಷ್ಯ ಸುಳ್ಳಾಗಿದ್ದ ಪರಿಣಾಮ ಕೆಲವರು ಅವರನ್ನು ಟ್ರೋಲ್ ಮಾಡಿದ್ದರು.

ಚಂದ್ರಯಾನ ಸುಳ್ಳಾಯಿತು: ಚಂದ್ರಯಾನ-2 ಯೋಜನೆಯ ಹಿನ್ನಡೆಯಿಂದಾಗಿ ಇಡೀ ದೇಶ ದು:ಖತಪ್ತವಾಗಿದ್ದ ಸಂದರ್ಭ ಮಿಶ್ರಾ ಹೇಳಿದ್ದ ಭವಿಷ್ಯ ಮಹತ್ವ ಪಡೆದುಕೊಂಡಿತ್ತು. ವಿಕ್ರಂ ಮೂನ್ ಲ್ಯಾಂಡರ್ ಸೆ.20ಕ್ಕೆ ಮತ್ತೆ ಸಂಪರ್ಕಕ್ಕೆ ಸಿಗಲಿದೆ ಎಂದು ಹೇಳಿದ್ದು ಸುಳ್ಳಾಗಿತ್ತು.