Asianet Suvarna News Asianet Suvarna News

ಅಯೋಧ್ಯೆ ತೀರ್ಪಿಗೂ ಮುನ್ನ ಪುರಾತತ್ವ ಇಲಾಖೆ ಕಲೆ ಹಾಕಿದ್ದ ಈ 10 ಸಾಕ್ಷ್ಯಗಳು

ದಶಕಗಳ ವಿವಾದಕ್ಕೆ ಕೊನೆ ಹಾಡಿದ ಸುಪ್ರೀಂ ಕೋರ್ಟ್/ ಪುರಾತತ್ವ ಇಲಾಖೆ ನೀಡಿದ ದಾಖಲೆಗಳು ಯಾವವು?/ ಉತ್ಖನನ ನಡೆದಾಗ ಸಿಕ್ಕ ವಾಸ್ತುಶಿಲ್ಪಗಳು ಏನು ಹೇಳುತ್ತವೆ? ಪುರಾತತ್ವ ಇಲಾಖೆ ನೀಡಿದ ಒಂದೊಂದು ದಾಖಲೆಗಳು ಪ್ರಮುಖ

Ayodhya Verdict What ASI found in Ayodhya Uttar Pradesh
Author
Bengaluru, First Published Nov 9, 2019, 4:33 PM IST

ನವದೆಹಲಿ(ನ.09): ದೇಶವೇ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದ್ದು ಇಂದಿನ ಬಹುದೊಡ್ಡ ಸುದ್ದಿ.

ಎಲ್ಲ ಕಡೆ ತೀರ್ಪಿನ ವಿಚಾರ ಬಹುದೊಡ್ಡ ಚರ್ಚೆಯಾಗುತ್ತಿದ್ದರೆ ಭಾರತೀಯ ಪುರಾತತ್ವ ಇಲಾಖೆ ನೀಡಿದ ವರದಿಯೂ ಈ ಹಂತದಲ್ಲಿ ಬಹಳ ಪ್ರಮುಖ ಪಾತ್ರ ನಿರ್ವಹಿಸಿದೆ. ಹಾಗಾದರೆ ಪುರಾತತ್ವ ಇಲಾಖೆ ಉತ್ಖನನದ ಸಮಯದಲ್ಲಿ ಕಲೆಹಾಕಿದ ದಾಖಲೆಗಳು ಯಾವವು?

ಅಲಹಾಬಾದ್ ಹೈ ಕೋರ್ಟ್ ನಿರ್ದೇಶನದಂತೆ  ಪುರಾತತ್ವ ಇಲಾಖೆ ಎರಡು ಸಾರಿ ಶೋಧ ಕಾರ್ಯಕ್ಕೆ ಇಳಿದಿತ್ತು. 1976-77 ಮತ್ತು 2003ರಲ್ಲಿ ಈ ಪ್ರದೇಶದಲ್ಲಿ ಶೋಧ ನಡೆಸಿತ್ತು.

ರಾಡಾರ್ ಸರ್ವೇ ನಡೆಸಿದ ಪುರಾತತ್ವ ಇಲಾಖೆ ಮಾರ್ಚ್ 12, 2003 ರಿಂದ ಆಗಸ್ಟ್ 2003ರವರೆಗೆ ಸರ್ವೇ ಮತ್ತು ಉತ್ಖನನ ಕೆಲಸವನ್ನು ಟೋಜೋ ಡೆವಲಪ್ ಮೆಂಟ್ ಇಂಟರ್ ನ್ಯಾಶನಲ್ ಎಂಬ ಕಂಪನಿಯ ಸಹಕಾರದಲ್ಲಿ ನಡೆಸಿತ್ತು.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ಪುರಾತತ್ವ ಇಲಾಖೆ ಪತ್ತೆ ಹಚ್ಚಿದ ಕುರುಹುಗಳು

* ಪುರಾತತ್ವ ಇಲಾಖೆ ನೀಡಿದ ದಾಖಲೆಗಳು ನಮ್ಮನ್ನು 13ನೇ ಶತಮಾನಕ್ಕಿಂತ ಹಿಂದೆ ಕರೆದುಕೊಂಡು ಹೋಗುತ್ತದೆ.

* ಇಲ್ಲಿ ಸಿಕ್ಕದ ವಾಸ್ತುಶಿಲ್ಪಗಳು ಕುಶಾನರು, ಶುಂಗರು, ಮತ್ತು ಗುಪ್ತರ ಕಾಲಕ್ಕೆ ಸೇರಿದ್ದು. ಅಂದರೆ ಮಧ್ಯಯುಗೀನ ಆರಂಭದ ಕಾಲ.

* ವಿವಾದಕ್ಕೆ ಕಾರಣವಾಗಿದ್ದ ಪ್ರದೇಶದ ಮಧ್ಯ ಭಾಗದಲ್ಲಿ 15*15 ಮೀಟರ್ ಜಾಗದಲ್ಲಿ ಬಹಳ ಪ್ರಮುಖವಾದ ಕಟ್ಟಡವೊಂದಿತ್ತು.

* ಇಲ್ಲಿದ್ದ ಕಟ್ಟಡ 7 ರಿಂದ 10 ನೇ ಶತಮಾನದ ನಡುವೆ ನಿರ್ಮಾಣವಾಗಿದ್ದು.

ಅಯೋಧ್ಯೆ ತೀರ್ಪು ಪ್ರಕಟಿಸಿದ ಐವರು ನ್ಯಾಯಾಧೀಶರಿವರು

* ಉತ್ತರ-ದಕ್ಷಿಣ ಮುಖವಾಗಿರುವ ಕಟ್ಟಡ 11-12ನೇ ಶತಮಾನಕ್ಕೆ ಸೇರಿದ್ದು.

* ಇನ್ನೊಂದು ದೊಡ್ಡ ಕಟ್ಟಡವನ್ನು ಮೂರು ಹಂತಗಳಲ್ಲಿ ಕಟ್ಟಲಾಗಿತ್ತು. ಅಂದರೆ ಒಂದು ಹಂತ ಮತ್ತೆ ಇನ್ನೊಂದು ಹಂತದ ನಡುವೆ ತಿಂಗಳುಗಳ ಅಂತರವಿತ್ತು.

* ವಿವಾದಕ್ಕೆ ಗುರಿಯಾಗಿದ್ದ ಮಸೀದಿ 16 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು.

* ಮಸೀದಿ ಇದ್ದ ಜಾಗದ ಬಲಭಾಗದಲ್ಲಿ 50 ಸ್ತಂಭಗಳು ದೊರೆತಿವೆ

* ಇದು ಅಲ್ಲದೇ ಬೌದ್ಧ ಮತ್ತು ಜೈನ ಕಾಲದ ವಾಸ್ತುಶಿಲ್ಪಗಳು ಪತ್ತೆಯಾಗಿವೆ.

ಅಲಹಾಬಾದ್ ಕೋರ್ಟ್ ಹೇಳಿದ್ದೇನಾಗಿತ್ತು?
2010ರ ಸೆ. 30 ರಂದು ತೀರ್ಪು ಪ್ರಕಟಿಸಿದ್ದ ಅಲಹಾಬಾದ್ ಹೈಕೋರ್ಟ್ 2.77 ಎಕರೆ ಜಾಗವನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಂಓಹಿ ಅಖಾರಾ, ರಾಮಲಲ್ಲಾ ಗೆ ಹಂಚಬೇಕು ಎಂದು ಹೇಳಿತ್ತು. ಈ ತೀರ್ಪನ್ನು ಸುಪ್ರೀಂ ನಲ್ಲಿ ಪ್ರಶ್ನೆ ಮಾಡಿದ್ದು ಈಗ ಇತಿಹಾಸ.

ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.

Follow Us:
Download App:
  • android
  • ios