ಈ ಐದು ದಿನ ಅಪ್ಪಿತಪ್ಪಿಯೂ ಮನೆಯಲ್ಲಿ ಚಪಾತಿ ಮಾಡ್ಬೇಡಿ, ಕೈಯಲ್ಲಿ ದುಡ್ಡು ಖಾಲಿ ಆಗುತ್ತೆ
Chapati Making Rules : ಚಪಾತಿ ಇಲ್ದೆ ಹೊಟ್ಟೆ ತುಂಬಲ್ಲ ಎನ್ನುವ ಜನರಿದ್ದಾರೆ. ಆದ್ರೆ ವರ್ಷದ 365 ದಿನ ಚಪಾತಿ ತಯಾರಿಸೋದು ಸೂಕ್ತವಲ್ಲ. ಶಾಸ್ತ್ರಗಳಲ್ಲಿ ಚಪಾತಿ ತಯಾರಿಸೋದನ್ನು ಕೆಲ ದಿನ ನಿಷೇಧಿಸಲಾಗಿದೆ.

ಅನ್ನಪೂರ್ಣೆಗೆ ಕೋಪ
ಹಿಂದೂ ಧರ್ಮದಲ್ಲಿ ಅಡುಗೆ ಮನೆಗೆ ಪವಿತ್ರ ಸ್ಥಾನವಿದೆ. ಅಲ್ಲಿ ಅನ್ನಪೂರ್ಣೆ ನೆಲೆಸಿದ್ದಾಳೆಂದು ನಂಬಲಾಗಿದೆ. ಶಾಸ್ತ್ರಗಳಲ್ಲಿ ಅಡುಗೆಗೆ ಸಂಬಂಧಿಸಿದ ಕೆಲ ನಿಯಮಗಳನ್ನು ಹೇಳಲಾಗಿದೆ. ಅದ್ರಲ್ಲಿ ಚಪಾತಿ ಕೂಡ ಸೇರಿದೆ. ಭಾರತದ ಕೆಲ ಮನೆಗಳಲ್ಲಿ ಪ್ರತಿ ದಿನ ಚಪಾತಿ, ರೊಟ್ಟಿ ತಯಾರಿಸಲಾಗುತ್ತದೆ. ದಿನದಲ್ಲಿ ಒಂದು ಹೊತ್ತಾದ್ರೂ ಚಪಾತಿ ಬೇಕೇಬೇಕು ಎನ್ನುವವರಿದ್ದಾರೆ. ಆದ್ರೆ ಶಾಸ್ತ್ರಗಳ ಪ್ರಕಾರ ಎಲ್ಲ ದಿನ ಚಪಾತಿ ತಯಾರಿಸೋದು ಒಳ್ಳೆಯದಲ್ಲ. ನಿಷೇಧಿತ ದಿನಗಳಲ್ಲಿ ನೀವು ಚಪಾತಿ ತಯಾರಿಸಿದ್ರೆ ಅನ್ನಪೂರ್ಣೆ ಕೋಪಗೊಳ್ತಾಳೆ. ಮನೆಯ ಬೆಳವಣಿಗೆ ಕುಂಡಿತಗೊಳ್ಳುತ್ತದೆ.
ನಾಗರ ಪಂಚಮಿ
ನಾಗರ ಪಂಚಮಿ ದಿನ ತವಾ ಇಡಬಾರದು. ಚಪಾತಿ ತಯಾರಿಸುವ ತವಾ, ನಾಗ ದೇವರ ಸಂಕೇತ. ನೀವು ಈ ದಿನ ಚಪಾತಿ ಅಥವಾ ರೊಟ್ಟಿ ತಯಾರಿಸೋದ್ರಿಂದ ನಾಗ ದೇವ ಕೋಪಗೊಳ್ತಾನೆ. ಇದ್ರಿಂದ ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ನಾಗರ ಪಂಚಮಿ ದಿನ ಚಪಾತಿ, ರೊಟ್ಟಿ ಬದಲು ಬೇರೆ ಆಹಾರ ತಯಾರಿಸಿ.
ಶಾರದ ಪೂರ್ಣಿಮಾ
ಈ ರಾತ್ರಿ ಸಂಪತ್ತಿನ ದೇವತೆ ಲಕ್ಷ್ಮಿ ಭೂಮಿಗೆ ಬರ್ತಾಳೆ ಎನ್ನುವ ನಂಬಿಕೆ ಇದೆ. ಈ ದಿನ ಚಪಾತಿ ಬೇಯಿಸಬಾರದು. ಅಕ್ಕಿ ಪಾಯಸವನ್ನು ಈ ದಿನ ತಯಾರಿಸಬೇಕು. ರಾತ್ರಿಯಿಡೀ ಚಂದ್ರನ ಬೆಳಕಿನಲ್ಲಿ ಪಾಯಸವನ್ನು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ . ಇದ್ರಿಂದ ಲಕ್ಷ್ಮಿ ಖುಷಿಯಾಗ್ತಾಳೆ. ಮನೆಗೆ ಸಂತೋಷ ಮತ್ತು ಸಮೃದ್ಧಿ ತರ್ತಾಳೆ ಎಂದು ನಂಬಲಾಗಿದೆ.
ಶೀತಲಾ ಅಷ್ಟಮಿ
ಶೀತಲಾ ಅಷ್ಟಮಿಯನ್ನು ಹಿಂದೂ ತಿಂಗಳ ಫಾಲ್ಗುನ್ ಮಾಸದ ಕೃಷ್ಣ ಪಕ್ಷದ ಎಂಟನೇ ದಿನದಂದು ಆಚರಿಸಲಾಗುತ್ತದೆ. ಹೋಳಿಯಾದ ಎಂಟು ದಿನಗಳ ನಂತರ ಶೀತಲಾ ಅಷ್ಟಮಿ ಬರುತ್ತದೆ. ಶೀತಲ ದೇವಿಗೆ ತಣ್ಣನೆಯ ಆಹಾರ ಅಂದ್ರೆ ಹಿಂದಿನ ದಿನ ತಯಾರಿಸಿದ ಆಹಾರವನ್ನು ಅರ್ಪಿಸುವ ಪದ್ಧತಿ ಇದೆ. ಆದ್ದರಿಂದ, ಈ ದಿನ ಮನೆಯಲ್ಲಿ ಯಾವುದೇ ತಾಜಾ ಆಹಾರ ಅಥವಾ ಚಪಾತಿ ತಯಾರಿಸುವಂತಿಲ್ಲ. ಎಲ್ಲರೂ ಹಿಂದಿನ ದಿನ ತಯಾರಿಸಿದ ತಣ್ಣನೆಯ ಆಹಾರವನ್ನೇ ತಿನ್ನಬೇಕು. ಶೀತಲ ಅಷ್ಟಮಿಯ ಹಿಂದಿನ ದಿನ ಚಪಾತಿ ತಯಾರಿಸಿ ಪಕ್ಕಕ್ಕೆ ಇರಿಸಿ. ಮರುದಿನ ತಿನ್ನಿ.
ದೀಪಾವಳಿ
ದೀಪಾವಳಿಯಂದು ಚಪಾತಿ ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಹಲ್ವಾ, ಖೀರ್, ಪೂರಿ ಮತ್ತು ಸಿಹಿತಿಂಡಿಗಳಂತಹ ವಿಶೇಷ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ದಿನದಂತೆ ನೀವು ಚಪಾತಿ ಮಾಡಿದ್ರೆ ಲಕ್ಷ್ಮಿ ಕೋಪಗೊಳ್ತಾಳೆ.
ಕುಟುಂಬದಲ್ಲಿ ಸಾವು
ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದ್ದೆ ಹದಿಮೂರನೇ ದಿನದವರೆಗೆ ಚಪಾತಿ ತಯಾರಿಸಬಾರದು ಎನ್ನುವ ನಂಬಿಕೆ ಇದೆ. ಇದು ಶೋಕದ ಸಮಯ. ಈ ಸಮಯದಲ್ಲಿ, ಹೊರಗಿನಿಂದ ತಂದ ಆಹಾರವನ್ನು ಅಥವಾ ಮೊದಲೇ ಬೇಯಿಸಿದ ಆಹಾರವನ್ನು ಮಾತ್ರ ತಿನ್ನಬೇಕು.
ಇದು ತಿಳಿದಿರಿ
ನೀವು ಪ್ರತಿ ದಿನ ಚಪಾತಿ ತಯಾರಿಸುತ್ತಿದ್ದರೆ ಮೊದಲ ಚಪಾತಿ ಅಥವಾ ರೊಟ್ಟಿಯನ್ನು ಹಸುವಿಗೆ ನೀಡಿ. ಇದ್ರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಿರುತ್ತದೆ. ಎಲ್ಲಾ ವಾಸ್ತು ದೋಷಗಳು ದೂರವಾಗುತ್ತವೆ. ಪೂರ್ವಜರ ಆಶೀರ್ವಾದ ಸಿಗುತ್ತದೆ. ಇಷ್ಟೇ ಅಲ್ಲ ತಟ್ಟೆಗೆ ಒಂದೇ ಬಾರಿಗೆ ಮೂರು ಚಪಾತಿ ಹಾಕಬೇಡಿ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಕುಟುಂಬದೊಳಗೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಹಾಗೆಯೇ ಮನೆಯಲ್ಲಿ ತಯಾರಿಸಿದ ರೊಟ್ಟಿ ಅಥವಾ ಚಪಾತಿಯನ್ನು ಲೆಕ್ಕ ಹಾಕಬೇಡಿ. ಇದು ಆಹಾರ ಕೊರತೆಗೆ ಕಾರಣವಾಗುತ್ತದೆ.

