ಕೋಲಾರ: ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ ಹಾಗೂ ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಕಟುವಾಗಿ ಹೇಳಿದೆ. ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರ್ಕಾರಿ ಶಾಲೆ ಕಾಂಪೌಂಡ್ ಗೋಡೆ ಹಾಗೂ ಗ್ರಾಮದ ರಸ್ತೆಯ ಸರ್ಕಾರಿ ಜಾಗದಲ್ಲಿ ಕಟ್ಟಿರುವ ಮಳಿಗೆಗಳ ತೆರವಿಗೆ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಜಾರಿ ಟೇಬಲ್ ಟ್ರಸ್ಟ್(ರಿ) ಹಾಗೂ ಜಾಮೀಯಾ ಮಸ್ಟಿದ್ ಕಮಿಟಿ ಹೈಕೋರ್ಟ್‌ಗೆ ಅರ್ಜಿ ಸಲಿಸಿದ್ದವು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ವೇಮಗಲ್‌ನ ಕ್ಯಾಲನೂರಿನ ಸರ್ಕಾರಿ ಜಾಗದಲ್ಲಿ ಮಳಿಗೆ ನಿರ್ಮಿಸಿದ್ದ ಹಿಂದೂ ಟ್ರಸ್ಟ್ ಹಾಗೂ ಮಸೀದಿ ಕಮಿಟಿ ಎರಡಕ್ಕೂಸರ್ಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ಕೆಲಸ ಏನಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ.

11:31 PM (IST) Nov 21
ಚಿತ್ರದುರ್ಗದಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ, ಅಣ್ಣ-ತಮ್ಮ ಇಬ್ಬರು ಸ್ಥಳದಲ್ಲೇ ಸಾವು , ವೇಗವಾಗಿ ಸಾಗುತ್ತಿದ್ದ ಬೈಕ್ ಟ್ರಾಕ್ಟರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳೀಯರು ಅಪಘಾತಕ್ಕೆ ಕಾರಣ ಹೇಳಿದ್ದಾರೆ.
11:04 PM (IST) Nov 21
ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮೊರೆ ಹೋದ ಡಿಕೆಶಿ, ಇದೇ ದೇಗುಲ ಭೇಟಿ ಬಳಿಕ BSYಗೆ ಒಲಿದಿತ್ತು ಸಿಎಂ ಸ್ಥಾನ, ಇದೀಗ ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ನೇರವಾಗಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದೆ.
09:55 PM (IST) Nov 21
ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ. ಇದರೊಂದಿಗೆ, ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ಹೊಸ ನಿಲುಗಡೆ ನೀಡಲಾಗಿದೆ.
09:46 PM (IST) Nov 21
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಭಾರತೀಯ ವಾಯುಪಡೆಯ ಅಧಿಕಾರಿ ಮತ್ತು ಪರೀಕ್ಷಾ ಪೈಲಟ್. 2027 ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವಸಹಿತ ಮಿಷನ್ ಗಗನಯಾನಕ್ಕೆ ಆಯ್ಕೆಯಾಗಿ ತರಬೇತಿ ಪಡೆದ ನಾಲ್ಕು ಗಗನಯಾತ್ರಿಗಳಲ್ಲಿ ಅವರು ಒಬ್ಬರು.
09:04 PM (IST) Nov 21
ಸಿದ್ದರಾಮಯ್ಯನವರೇ ಸಿಎಂ, ದೊಡ್ಡವ್ರು ಹೇಳಿದ ಮೇಲೆ ನಾವು ನಮ್ರತೆಯಿಂದ ಇರ್ಬೇಕು, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡದೇ ಮನೆಗೆ ಮರಳಿದ ಡಿಕೆ ಶಿವಕುಮಾರ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
08:55 PM (IST) Nov 21
ನಟಿ ಮಾನ್ಯ ಆನಂದ್, ಧನುಷ್ ಮ್ಯಾನೇಜರ್ ಶ್ರೇಯಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾಸ್ಟಿಂಗ್ ಕೌಚ್‌ಗೆ ಆಹ್ವಾನಿಸಿದ್ದಾಗಿ ಆರೋಪಿಸಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಧನುಷ್ ಹೆಸರು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
08:51 PM (IST) Nov 21
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಜಗಳ ತಾರಕಕ್ಕೇರಿದೆ. ಹೆಸರಿನಿಂದ ಕರೆದಿದ್ದಕ್ಕೆ ಅಶ್ವಿನಿ ಗೌಡರಿಗೆ ಕೋಪ ಬಂದಿದ್ದು, ಗಿಲ್ಲಿ ನಟ ಹಾಸ್ಯದ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ.
08:47 PM (IST) Nov 21
ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ, ನಾರಾಯಣ ಶಿಂಧೆ ಎಂಬಾತ ತನ್ನ ಇಬ್ಬರು ಮಕ್ಕಳು ಹಾಗೂ ವೃದ್ಧ ತಂದೆಯೊಂದಿಗೆ ಬಾವಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಸಾಲಬಾಧೆಯಿಂದ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.
08:14 PM (IST) Nov 21
08:08 PM (IST) Nov 21
Gold prices in your city today: ನವೆಂಬರ್ 21 ರಂದು ದೇಶೀಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಕುಸಿದಿದ್ದು, ಎಂಸಿಎಕ್ಸ್ ಗೋಲ್ಡ್ ಡಿಸೆಂಬರ್ ಫ್ಯೂಚರ್‌ಗಳು 0.52% ಇಳಿಕೆಯಾಗಿ 10 ಗ್ರಾಂಗೆ ₹1,22,085 ಕ್ಕೆ ತಲುಪಿದೆ. ಬೆಳ್ಳಿ ಬೆಲೆಯೂ ಸಹ 1.82% ರಷ್ಟು ಕಡಿಮೆಯಾಗಿದೆ.
07:45 PM (IST) Nov 21
ಸಿಎಂ ಸಿದ್ದರಾಮಯ್ಯ ನಂತರ ಡಿ.ಕೆ. ಶಿವಕುಮಾರ್ ಅವರೇ ಪಕ್ಷದ ನಾಯಕರು, ಆದರೆ ಅದು ತಕ್ಷಣ ಆಗಬೇಕಿಲ್ಲ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗುವುದನ್ನು ಬಣ ರಾಜಕೀಯ ಎನ್ನಲಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
07:29 PM (IST) Nov 21
ಚಿಕ್ಕಮಗಳೂರಿನ ಮಧುಗುಂಡಿ ಗ್ರಾಮದಲ್ಲಿ ಸಂಶೋಧಕರು 'ಪಿಲಿಯಾ ಮಲೆನಾಡು' ಎಂಬ ಹೊಸ ಜಿಗಿಯುವ ಜೇಡದ ಪ್ರಭೇದವನ್ನು ಕಂಡುಹಿಡಿದಿದ್ದಾರೆ. ಸುಮಾರು 123 ವರ್ಷಗಳ ನಂತರ ಈ ಕುಲದ ಜೇಡ ಪತ್ತೆಯಾಗಿದ್ದು, ಇದೇ ಮೊದಲ ಬಾರಿಗೆ ಗಂಡು ಮತ್ತು ಹೆಣ್ಣು ಎರಡೂ ಜೇಡಗಳು ಪತ್ತೆಯಾಗಿವೆ.
07:22 PM (IST) Nov 21
07:09 PM (IST) Nov 21
ಕರ್ನಾಟಕ ಹೊಸ ಐಟಿ ನೀತಿ 2025-30 ಅನ್ನು ಘೋಷಿಸಿದ್ದು, ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು 2ನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಈ ನೀತಿಯಡಿ, ಉದ್ಯೋಗಿಗಳನ್ನು ಸ್ಥಳಾಂತರಿಸುವ ಕಂಪನಿಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಮತ್ತು ಪ್ರತಿ ಉದ್ಯೋಗಿಗೆ ₹50,000 ವರೆಗೆ ಪ್ರೋತ್ಸಾಹ ಧನ.
05:52 PM (IST) Nov 21
ಚಾಮರಾಜನಗರ ಜಿಲ್ಲೆಯ ಯಡವನಹಳ್ಳಿ ಗ್ರಾಮದಲ್ಲಿ, ಎರಡು ವರ್ಷಗಳ ಹಿಂದೆ ಸಾಮಾಜಿಕ ಬಹಿಷ್ಕಾರದಿಂದ ಆತ್ಮ*ಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬವನ್ನು ಬೆಂಬಲಿಸಿದ್ದಕ್ಕಾಗಿ 80 ಕುಟುಂಬಗಳನ್ನು ಕುಲದಿಂದ ಹೊರಹಾಕಲಾಗಿದೆ. ಕಟ್ಟೆಮನೆಯ ಈ ತೀರ್ಪಿನಿಂದಾಗಿ ಯಾವುದೇ ಶುಭ ಸಮಾರಂಭಗಳಲ್ಲಿ ಹೋಗುವಂತಿಲ್ಲ.
05:44 PM (IST) Nov 21
ನನ್ನ ನಂಬರ್ ಯಾಕೆ? ₹7 ಕೋಟಿ ರಾಬರಿ ಕೇಸ್‌ಲ್ಲಿ ಪೊಲೀಸ್ ಕದ ತಟ್ಟಿದಾಗ ಬೆಚ್ಚಿ ಬಿದ್ದ ಹಿರಿಯ ನಾಗರೀಕ, ನಿವೃತ್ತಿ ಜೀವನದಲ್ಲಿ ತಾನಾಯ್ತು, ತನ್ನ ಪಾಡಾಯ್ತು ಅಂತ ಇದ್ದ 78 ವರ್ಷದ ಹಿರಿಯ ನಾಗರೀಕನ ಪ್ರಶ್ನೆಗೆ ಸದ್ಯ ಪೊಲೀಸರ ಬಳಿಯೂ ಉತ್ತರ ಸಿಕ್ಕಿಲ್ಲ.
05:03 PM (IST) Nov 21
'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಜಿಮ್ ಟ್ರೈನರ್ ಹಾಗೂ ರೀಲ್ಸ್ ಪಾರ್ಟನರ್ ಆಗಿದ್ದ ಅರುಣ್ ವೆಂಕಟೇಶ್ ಜೊತೆ ದಿಢೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮಿಬ್ಬರ ಸಂಬಂಧವನ್ನು 'ವಿಡಿಯೋ ಪಾರ್ಟನರ್' ಎಂದು ಹೇಳಿಕೊಳ್ಳುತ್ತಿದ್ದ ಈ ಜೋಡಿ, ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.
04:56 PM (IST) Nov 21
Amruthadhaare Serial Actress Megha Shenoy Photos: ಅಮೃತಧಾರೆ ಧಾರಾವಾಹಿಯ ಸುಧಾ ಪಾತ್ರಧಾರಿ ನಟಿ ಮೇಘಾ ಶೆಣೈ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮದುವೆಯ ಅದ್ದೂರಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಹನಿಮೂನ್‌ಗೆ ತೆರಳಿದ್ದಾರೆ.
04:18 PM (IST) Nov 21
ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ನಡುವಿನ ಪ್ರೇಮ ಕಹಾನಿ ಸದ್ದು ಮಾಡುತ್ತಿದೆ. ವೀಕೆಂಡ್ ಟೆನ್ಷನ್ ನಡುವೆಯೂ, ರಾಶಿಕಾ ಶೆಟ್ಟಿ ನೀರಿನಲ್ಲಿ ಏನೋ ಕಾಣಿಸುತ್ತಿದೆ ಎಂದು ಸೂರಜ್ ತಲೆ ಕೆಡಿಸಿದ್ದು, ಇವರಿಬ್ಬರ ಜೋಡಿಗೆ ಅಭಿಮಾನಿಗಳು 'ಸುರಾಶಿ' ಎಂದು ಹೆಸರಿಟ್ಟಿದ್ದಾರೆ.
04:14 PM (IST) Nov 21
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳನ್ನು ತಳ್ಳಿಹಾಕಿದ್ದು, ತಾವೇ ಸಿಎಂ ಆಗಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರದ ಆಮದು ನೀತಿಯನ್ನು ವಿರೋಧಿಸಿ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ.
03:27 PM (IST) Nov 21
Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚನ್ ಏರಿಯಾದಲ್ಲಿ ಮಾಳು ನಿಪನಾಳ, ರಘು ಅವರು ಇದ್ದರು. ಆಗ ರಿಷಾ ನಕ್ಕಿದ್ದಾರೆ. ಅಲ್ಲಿಂದ ಒಂದು ಜಗಳ ಶುರು ಆಗಿದೆ. ಮಾಳು ಇದ್ದಕ್ಕಿದ್ದಂತೆ ಕೂಗಾಡಿದ್ದಾರೆ.
03:21 PM (IST) Nov 21
ಬೆಂಗಳೂರಿನ 7.11 ಕೋಟಿ ದರೋಡೆ ಪ್ರಕರಣದಲ್ಲಿ ಪೊಲೀಸರು ಐದೂವರೆ ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದ್ದು, ದರೋಡೆಗೆ ಬಳಸಿದ್ದ ಶಂಕಿತ ಇನೋವಾ ಕಾರು ಚಿತ್ತೂರು ಬಳಿ ಪತ್ತೆಯಾಗಿದೆ.
03:05 PM (IST) Nov 21
Bigg Boss Kannada Season 12 Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ, ಜಾಹ್ನವಿ ಮಧ್ಯೆ ಮನಸ್ತಾಪ ಇದೆ. ಈ ಬಾರಿ ಅಶ್ವಿನಿ, ಗಿಲ್ಲಿ ನಟ ಅವರು ಎರಡು ಟೀಂಗಳಾಗಿ ಆಟ ಆಡಿದ್ದಾರೆ. ಅಶ್ವಿನಿ ಗೌಡ ಲೆಕ್ಕಾಚಾರವನ್ನು ಗಿಲ್ಲಿ ಅವರು ಉಲ್ಟಾ ಮಾಡಿದ್ದಾರೆ.
02:44 PM (IST) Nov 21
ಹಿರಿಯ ಶಾಸಕ ಜಿಎಸ್ ಪಾಟೀಲ್, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ, ಅವರನ್ನು ತಮ್ಮ ಹಳೆಯ ಸ್ನೇಹಿತ ಎಂದು ಬಣ್ಣಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸಿದ್ದಾಗಿ ಹೇಳಿದರೂ, ಡಿಕೆಶಿ ಪರ ಬ್ಯಾಟಿಂಗ್ ಬೀಸಿದ್ದು ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿರುವುದು ಕುತೂಹಲ..
02:02 PM (IST) Nov 21
ಬಿಗ್ ಬಾಸ್‌ನಲ್ಲಿ ಜನಪ್ರಿಯರಾಗಿರುವ ಗಿಲ್ಲಿ ನಟ ಅಲಿಯಾಸ್ ನಟರಾಜ್, ಮಂಡ್ಯದ ರೈತ ಕುಟುಂಬದ ಹಿನ್ನೆಲೆಯುಳ್ಳವರು. ತಮ್ಮ 'ನಲ್ಲಿಮೂಳೆ' ಕಾಮಿಡಿ ವಿಡಿಯೋಗಳಿಂದ ಯೂಟ್ಯೂಬ್‌ನಲ್ಲಿ ಪ್ರಸಿದ್ಧರಾದ ಇವರ ಯೂಟ್ಯೂಬ್ ಆದಾಯದ ಅಂದಾಜು ಲೆಕ್ಕಾಚಾರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
01:55 PM (IST) Nov 21
ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರು, ತುಮಕೂರು ಮೆಟ್ರೋ ವಿಸ್ತರಣೆ ಕುರಿತ ಗೊಂದಲ ನಿವಾರಣೆಗೆ ಸಂವಾದಕ್ಕೆ ಆಹ್ವಾನಿಸಿದ್ದು, ಮೆಟ್ರೋವನ್ನು ವಸಂತನರಸಾಪುರದವರೆಗೂ ವಿಸ್ತರಿಸಲು ಸಲಹೆ ನೀಡಿದ್ದಾರೆ. ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲಿ ಸ್ಥಾಪಿಸಲು ಸರ್ಕಾರವನ್ನು ಒತ್ತಾಯ.
01:22 PM (IST) Nov 21
Traditional Indian baby shower ceremony: ಬ್ಯಾಡಗಿಯ ಗರದ ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ 200ಕ್ಕೂ ಹೆಚ್ಚು ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಸರ್ವಧರ್ಮೀಯರ ಭಾಗವಹಿಸುವಿಕೆಯಿಂದ ಭಾವೈಕ್ಯತೆಗೆ ಸಾಕ್ಷಿಯಾಯಿತು,
01:02 PM (IST) Nov 21
Homemade D-tan pack :ಬಿಸಿಲಿನಿಂದ ಕಪ್ಪಾದ ದೇಹವನ್ನು ಮೊದಲಿನಂತೆ ಹೊಳೆಯುವಂತೆ ಮಾಡಲು ಮನೆಯಲ್ಲಿಯೇ ಮಾಡಬಹುದಾದ ಸರಳ ವಿಧಾನಗಳಿವೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಕಾಫಿ ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ಬಳಸುವುದು ತುಂಬಾ ಒಳ್ಳೆಯದು.
12:52 PM (IST) Nov 21
Kannada Actress Koli Ramya News: ಕನ್ನಡದ ಕೆಲವು ರಿಯಾಲಿಟಿ ಶೋ, ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಕೋಳಿ ರಮ್ಯಾ ಅವರೀಗ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಯುಟ್ಯೂಬ್ ಚಾನೆಲ್ ಹೊಂದಿರುವ ಅವರು ಆಗಾಗ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರುತ್ತಾರೆ.
12:42 PM (IST) Nov 21
12:31 PM (IST) Nov 21
12:20 PM (IST) Nov 21
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರದ ಕೊನೆಯ ಟಾಸ್ಕ್ ನೀಡಿದ್ದರು. ‘ಸೇತುವೆ ಸವಾಲು’ ಎನ್ನುವ ಟಾಸ್ಕ್‌ನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರು ತಮ್ಮ ಟೀಂನಿಂದ ಆಡುವವರನ್ನು ಆಯ್ಕೆ ಮಾಡಬೇಕಿತ್ತು. ಈ ಆಟದಲ್ಲಿ ಸಣ್ಣಗಿರುವವರು ಒಬ್ಬರು ಸಿಕ್ಕರೆ ಆಟ ಸುಲಭವಾಗುತ್ತಿತ್ತು.
12:10 PM (IST) Nov 21
'ಗೃಹಜ್ಯೋತಿ' ಯೋಜನೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ಹೊಸ ಮನೆಗೆ ಕಾಯಂ ವಿದ್ಯುತ್ ಸಂಪರ್ಕ ಪಡೆಯಲು ಕಾನೂನಿನ ತೊಡಕು ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ 'ಸ್ವಾಧೀನಾನುಭವ ಪತ್ರ' (OC) ಸಲ್ಲಿಸದ ಕಾರಣ, ಡಿಸೆಂಬರ್‌ನ ಗೃಹಪ್ರವೇಶಕ್ಕೆ ಮುನ್ನ ತಾತ್ಕಾಲಿಕ ಸಂಪರ್ಕಅವಲಂಬಿಸಬೇಕಾಗಿದೆ.
11:22 AM (IST) Nov 21
ಬೆಂಗಳೂರಿನ ಯಲಹಂಕ ಕ್ಷೇತ್ರದ ವಾರ್ಡ್‌ಗೆ 'ಆಕಾಶ್' ಎಂದು ಮರುನಾಮಕರಣ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೆಸರಿಗೆ ಶಾಸಕ ಎಸ್.ಆರ್. ವಿಶ್ವನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಡಿಸಿಎಂ ಡಿಕೆ ಶಿವಕುಮಾರ್ ಪುತ್ರನ ಹೆಸರಿರಬಹುದು, ಕೂಡಲೇ ಹೆಸರನ್ನು ಬದಲಿಸುವಂತೆ ಆಗ್ರಹಿಸಿದ್ದಾರೆ.
11:11 AM (IST) Nov 21
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ವಿಚಾರವಾಗಿ ಒಂದಿಲ್ಲೊಂದು ವಿವಾದಗಳು ಕೇಳಿ ಬರುತ್ತಲೇ ಇರುತ್ತದೆ. ಈಗ ಮಾಜಿ ಕಾಂಗ್ರೆಸ್ ಯೂಥ್ ಸೆಕ್ರೆಟರಿ ಸಂಧ್ಯಾ ಪವಿತ್ರಾ ನಾಗರಾಜ್ ಅವರು ಕಿಚ್ಚ ಸುದೀಪ್, ಅಶ್ವಿನಿ ಗೌಡ, ರಿಷಾ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
10:41 AM (IST) Nov 21
10:11 AM (IST) Nov 21
ಹಾಸನ ಜಿಲ್ಲೆಯ ರೈತರೊಬ್ಬರು ತಮ್ಮ ಗ್ರಾಪಂ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ದಾಖಲೆ ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ. ಶುಲ್ಕವಾದ ₹32,000 ಪಾವತಿಸಲು ಹಣವಿಲ್ಲದೆ, ತಮ್ಮ ಹಾಲು ಕೊಡುವ ಹಸುವನ್ನೇ ಮಾರಾಟ ಮಾಡಿ 16,000 ಪುಟಗಳ ದಾಖಲೆಗಳನ್ನು ಪಡೆದಿದ್ದಾರೆ.
09:37 AM (IST) Nov 21
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಸ್ಯ ಸಂಪತ್ತಿನ ಸಂರಕ್ಷಣೆಗಾಗಿ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ ಫೋಟೋಶೂಟ್, ಕ್ರೀಡೆಗಳಂತಹ ಮನರಂಜನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ವಾಕಿಂಗ್‌ಗೆ ಮಾತ್ರ ಸೀಮಿತ ಸಮಯ ನಿಗದಿಪಡಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ
09:29 AM (IST) Nov 21
Bigg Boss ಮನೇಲಿ ಈ ವಾರವಂತೂ ಒಂದಲ್ಲ ಒಂದು ಜಗಳ ಆಗಿದೆ. ರಘು, ಅಶ್ವಿನಿಗೆ ಗೌಡಗೆ ಅಶ್ವಿನಿ ಎಂದಿದ್ದರು. ಇದರಿಂದ ದೊಡ್ಡ ಜಗಳ ಆಗಿದೆ. ಕ್ಯಾಪ್ಟನ್ಸಿ ಟಾಸ್ಕ್ ಇದ್ದು, ನಾನು ಆಡಬೇಕು ಎಂದು ಎಲ್ಲರೂ ಮುಗಿಬಿದ್ದಿದ್ದರು. ಕ್ಯಾಪ್ಟನ್ ಆದರೆ 1 ವಾರದ ಎಲಿಮಿನೇಶನ್‌ನಿಂದ ಇಮ್ಯುನಿಟಿ ಸಿಗುತ್ತದೆ.
09:14 AM (IST) Nov 21