ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ರಾಜ್ಯಕ್ಕೆ ಹೂಡಿಕೆ ಆಕರ್ಷಿಸಲು ಉನ್ನತ ಮಟ್ಟದ ನಿಯೋಗದೊಂದಿಗೆ ಲಂಡನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ವೇಳೆ, ಅವರು ಎಲಿಮೆಂಟ್ 6, ಎಆರ್‌ಎಂ ಲಿಂಡೆ, ಮಾರ್ಟಿನ್ ಬೇಕರ್‌ ಸೇರಿದಂತೆ ಹಲವು ಪ್ರಮುಖ ಬ್ರಿಟಿಷ್ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಬೆಂಗಳೂರು (ನ.21): ಇಂಗ್ಲೆಂಡಿನ ಪ್ರಮುಖ ಸಂಸ್ಥೆಗಳಿಂದ ರಾಜ್ಯಕ್ಕೆ ಹೂಡಿಕೆ ಆಕರ್ಷಿಸಲು ಇದೇ ನ.24ರಿಂದ 26ರವರೆಗೆ ಲಂಡನ್‌ಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಭೇಟಿ ನೀಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. 

ಗುರುವಾರ ತಮ್ಮನ್ನು ಭೇಟಿಯಾದ ಯುನೈಟೆಡ್‌ ಕಿಂಗ್‌ಡಂನ ಕಾಮನ್‌ವೆಲ್ತ್‌ ವ್ಯವಹಾರಗಳು ಮತ್ತು ಅಭಿವೃದ್ಧಿ ಸಚಿವೆ ಸೀಮಾ ಮಲ್ಹೋತ್ರ ಮತ್ತು ಭಾರತದ ಬ್ರಿಟಿಷ್‌ ಹೈಕಮಿಷನರ್‌ ಲಿಂಡಾ ಕೆಮರಾನ್‌ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಎಂ.ಬಿ.ಪಾಟೀಲ್, ಲಂಡನ್‌ ಭೇಟಿ ವೇಳೆ ಅಲ್ಲಿನ ದೈತ್ಯ ಉದ್ದಿಮೆಗಳಾದ ಎಲಿಮೆಂಟ್ 6, ಎಆರ್‌ಎಂ ಲಿಂಡೆ, ಮಾರ್ಟಿನ್ ಬೇಕರ್‌, ಫಿಡೋ ಎಐ, ಆಕ್ಸ್‌ಫರ್ಡ್‌ ಸ್ಪೇಸ್‌ ಸಿಸ್ಟಂ ಸೇರಿದಂತೆ ಹಲವು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.

ಇದನ್ನೂ ಓದಿ: Sugarcane Price Issue: ಕೇಂದ್ರದ ಎಫ್‌ಆರ್‌ಪಿಗಿಂತ ₹ 700 ಕೊಡ್ಸಿದ್ದೇವೆ -ಎಂಬಿ ಪಾಟೀಲ್

ಬ್ರಿಟನ್‌ನ ಪ್ರಮುಖ ಕಂಪನಿಗಳಿಂದ ರಾಜ್ಯಕ್ಕೆ ಹೂಡಿಕೆ ಆಕರ್ಷಿಸಲು ಲಂಡನ್‌ಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಭೇಟಿ ನೀಡಲಾಗುವುದು ಎಂದರು.