- Home
- Entertainment
- TV Talk
- Bigg Boss Kannada: ಅಶ್ವಿನಿ ಗೌಡಗೆ ನಂಬೋಕೆ ಆಗ್ಲಿಲ್ಲ; ಚದುರಂಗದಾಟ ಆಡಿದ ಜಗತ್ ಕಿಲಾಡಿ ಗಿಲ್ಲಿ ನಟ!
Bigg Boss Kannada: ಅಶ್ವಿನಿ ಗೌಡಗೆ ನಂಬೋಕೆ ಆಗ್ಲಿಲ್ಲ; ಚದುರಂಗದಾಟ ಆಡಿದ ಜಗತ್ ಕಿಲಾಡಿ ಗಿಲ್ಲಿ ನಟ!
Bigg Boss Kannada Season 12 Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ, ಜಾಹ್ನವಿ ಮಧ್ಯೆ ಮನಸ್ತಾಪ ಇದೆ. ಈ ಬಾರಿ ಅಶ್ವಿನಿ, ಗಿಲ್ಲಿ ನಟ ಅವರು ಎರಡು ಟೀಂಗಳಾಗಿ ಆಟ ಆಡಿದ್ದಾರೆ. ಅಶ್ವಿನಿ ಗೌಡ ಲೆಕ್ಕಾಚಾರವನ್ನು ಗಿಲ್ಲಿ ಅವರು ಉಲ್ಟಾ ಮಾಡಿದ್ದಾರೆ.

ಅಶ್ವಿನಿ-ಜಾನು ಏನು ಮಾತಾಡಿಕೊಂಡ್ರು?
ರಾಶಿಕಾ ಶೆಟ್ಟಿಗೆ ಗಿಲ್ಲಿ ಕಂಡರೆ ಆಗೋದಿಲ್ಲ. ಕಳೆದ ಬಾರಿ ಅವಳು ಕ್ಯಾಪ್ಟನ್ ಆಗದಿರೋಕೆ ಗಿಲ್ಲಿ ನಟ ಕಾರಣ. ಅದೆಲ್ಲ ಅವರಿಗೆ ಗೊತ್ತಿದೆ ಎಂದು ಜಾಹ್ನವಿ ಹಾಗೂ ಅಶ್ವಿನಿ ಗೌಡ ಮಾತನಾಡಿಕೊಂಡಿದ್ದಾರೆ.
ಅಶ್ವಿನಿ, ಗಿಲ್ಲಿಗೆ ಕ್ಯ
ಈ ವಾರದ ಕೊನೆಯ ಟಾಸ್ಕ್‌ಗಳ ಉಸ್ತುವಾರಿಯು ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರಿಗೆ ಸಿಕ್ಕಿತ್ತು. ಅದಾದ ಬಳಿಕ ಕ್ಯಾಪ್ಟನ್ಸಿ ಟಾಸ್ಕ್‌ಗೆ ಯಾರು ಆಡಬೇಕು ಎಂದು ಆಯ್ಕೆ ಮಾಡಬೇಕಿತ್ತು. ಆ ವೇಳೆ ಗಿಲ್ಲಿ ನಟ ಅವರು ರಾಶಿಕಾ ಶೆಟ್ಟಿ ಹೆಸರು ತಗೊಂಡಿದ್ದರು.
ರಾಶಿಕಾಗೆ ಮತ ಹಾಕಿರಲಿಲ್ಲ
ಕಾಲೇಜು ಟಾಸ್ಕ್ ನಡೆಯುತ್ತಿತ್ತು. ಆ ವೇಳೆ ಕಬಡ್ಡಿ ಆಟ ಕೂಡ ಇತ್ತು. ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಗಿಲ್ಲಿ ನಟ ಅವರು ಒಂದು ಟೀಂನಲ್ಲಿದ್ದರು. ಆಗ ರಾಶಿಕಾ ತುಂಬ ಚೆನ್ನಾಗಿ ಆಡಿದ್ದರು. ಗುಂಪಿನ ಸಹಮತದ ಪ್ರಕಾರ ಕ್ಯಾಪ್ಟನ್ಸಿ ಟಾಸ್ಕ್‌ಗೆ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಎಲ್ಲರೂ ರಾಶಿಕಾ ಶೆಟ್ಟಿಗೆ ಮತ ಹಾಕಿದ್ದರೆ, ಗಿಲ್ಲಿ ನಟ ಮಾತ್ರ ತನಗೆ ತಾನೇ ಮತ ಹಾಕಿಕೊಂಡರು. ಹೀಗಾಗಿ ಯಾರೂ ಕ್ಯಾಪ್ಟನ್ಸಿ ಟಾಸ್ಕ್‌ಗೆ ಹೋಗಲಿಲ್ಲ.
ಗಿಲ್ಲಿ ನಟ ಮಾತಿಗೆ ಬದ್ಧರಾಗಿದ್ರು
ರಾಶಿಕಾ ಶೆಟ್ಟಿ ಅಂತೂ ಕ್ಯಾಪ್ಟನ್ಸಿ ಟಾಸ್ಕ್‌ಗೆ ಹೋಗಲಿಲ್ಲ ಎಂದು ಸಿಕ್ಕಾಪಟ್ಟೆ ಅತ್ತಿದ್ದರು. ಅಂದು ಗಿಲ್ಲಿ ನಟ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಕಿಚ್ಚ ಸುದೀಪ್ ಮುಂದೆ ಕೂಡ ಅದೇ ವಿಚಾರವನ್ನು ಮಂಡಿಸಿದ್ದರು.
ಗಿಲ್ಲಿ ನಟನ ಟೀಂಣಲ್ಲಿ
ಈಗ ರಾಶಿಕಾ ಶೆಟ್ಟಿ ಅವರು ಗಿಲ್ಲಿ ನಟನ ಟೀಂನಲ್ಲಿದ್ದುಕೊಂಡು ಎರಡು ಆಟವನ್ನು ಆಡಿದ್ದಾರೆ. ಗಿಲ್ಲಿ ನಟ ಅವರು ಟೀಂನ ನಾಯಕರಾಗಿದ್ದರು. ಹೀಗಾಗಿ ಅವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಯಾರು ಆಡಬೇಕು ಎಂದು ಹೆಸರು ಹೇಳಬೇಕಿತ್ತು. ಆಗ ರಾಶಿಕಾ ಹೆಸರು ತಗೊಂಡಿದ್ದಾರೆ.
ಪಶ್ಚಾತ್ತಾಪ ಇದೆ ಎಂದ ಗಿಲ್ಲಿ ನಟ
“ಕಬಡ್ಡಿ ಟಾಸ್ಕ್ ವೇಳೆ ರಾಶಿಕಾ ಶೆಟ್ಟಿ ಅವರು ಕ್ಯಾಪ್ಟನ್ಸಿ ಟಾಸ್ಕ್ ಆಡಿ, ಕ್ಯಾಪ್ಟನ್ ಆಗಬೇಕಿತ್ತು. ಅವರು ತುಂಬ ಚೆನ್ನಾಗಿ ಆಟ ಆಡಿದ್ದರು. ನನ್ನಿಂದ ಅವರು ಕ್ಯಾಪ್ಟನ್ ಆಗೋಕೆ ಆಗಲಿಲ್ಲ. ನನಗೆ ಈ ಬಗ್ಗೆ ಪಶ್ಚಾತ್ತಾಪ ಇದೆ. ತುಂಬ ದಿನದಿಂದ ನನಗೆ ಇದು ಕಾಡುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಗಿಲ್ಲಿ ಆಯ್ಕೆ ಮೆಚ್ಚಿದ ಅಶ್ವಿನಿ ಗೌಡ
“ಈ ವಾರ ನನ್ನ ಟೀಂನಲ್ಲಿದ್ದುಕೊಂಡು ಎಲ್ಲ ಆಟವನ್ನು ಚೆನ್ನಾಗಿ ಆಡಿದ್ದಾರೆ, ನಮ್ಮ ಟೀಂ ಗೆದ್ದಿದೆ. ಹೀಗಾಗಿ ನಾನು ಈ ಬಾರಿ ಅವರಿಗೆ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆಯ್ಕೆ ಮಾಡಿದ್ದೇನೆ” ಎಂದು ಗಿಲ್ಲಿ ನಟ ಹೇಳಿದ್ದರು. ಅಶ್ವಿನಿ ಗೌಡ ಅವರು ಕೂಡ ಈ ಆಯ್ಕೆಯನ್ನು ಮೆಚ್ಚಿದರು.
ಅಶ್ವಿನಿ ಟೀಂನಲ್ಲಿ ಕಡಿಮೆ ಸದಸ್ಯರು
ಗಿಲ್ಲಿ ನಟ ಅವರು ರಾಶಿಕಾ ಶೆಟ್ಟಿಯ ಹೆಸರನ್ನು ತಗೋತಾರೆ ಎಂದು ಅಶ್ವಿನಿ ಅಂದುಕೊಂಡಿರಲಿಲ್ಲ. ಇನ್ನು ಅಶ್ವಿನಿ ಟೀಂನಲ್ಲಿದ್ದ ಧ್ರುವಂತ್ ಕೂಡ, ಗಿಲ್ಲಿ ಟೀಂ ಸೇರಿಕೊಂಡಿದ್ದಾರೆ. ಅಶ್ವಿನಿ ಟೀಂನಲ್ಲಿದ್ದವರ ಸಂಖ್ಯೆ ಕೂಡ ಕಡಿಮೆ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

