- Home
- Entertainment
- TV Talk
- Bigg Boss ವಿಷ್ಯ, Kiccha Sudeep ವಿರುದ್ಧ ದೂರು ನೀಡಿದವ್ರ ಹಿಂದಿದೆ ಕ್ರಿಮಿನಲ್ ಹಿಸ್ಟರಿ; ನಲಪ್ಪಾಡ್ ಎಚ್ಚರಿಕೆ
Bigg Boss ವಿಷ್ಯ, Kiccha Sudeep ವಿರುದ್ಧ ದೂರು ನೀಡಿದವ್ರ ಹಿಂದಿದೆ ಕ್ರಿಮಿನಲ್ ಹಿಸ್ಟರಿ; ನಲಪ್ಪಾಡ್ ಎಚ್ಚರಿಕೆ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ವಿಚಾರವಾಗಿ ಒಂದಿಲ್ಲೊಂದು ವಿವಾದಗಳು ಕೇಳಿ ಬರುತ್ತಲೇ ಇರುತ್ತದೆ. ಈಗ ಮಾಜಿ ಕಾಂಗ್ರೆಸ್ ಯೂಥ್ ಸೆಕ್ರೆಟರಿ ಸಂಧ್ಯಾ ಪವಿತ್ರಾ ನಾಗರಾಜ್ ಅವರು ಕಿಚ್ಚ ಸುದೀಪ್, ಅಶ್ವಿನಿ ಗೌಡ, ರಿಷಾ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಕ್ರಿಮಿನಲ್ ಹಿಸ್ಟರಿ ಇದೆ
ಯಾಕೆ ಮಹಿಳಾ ಆಯೋಗಕ್ಕೆ ಹೋದೆ? ಬಿಗ್ ಬಾಸ್ ಮನೆಯಲ್ಲಿ ಏನಾಗ್ತಿದೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಹಾಗಿದ್ದರೆ ಸಂಧ್ಯಾ ಹೆಸರಿನ ಹಿಂದೆಯೂ ಕ್ರಿಮಿನಲ್ ಹಿಸ್ಟರಿ ಇದೆ.
ರಕ್ಷಿತಾ ವಿಚಾರದಲ್ಲಿ ಪಿತ್ತ ಹೆಚ್ಚಾಯ್ತು?
ಸಂಧ್ಯಾ ಮಾತನಾಡಿದ್ದು, “ಅಶ್ವಿನಿ ಗೌಡ ಅವರಿಗೆ ಏಯ್ ಎಂದು ಮಾತನಾಡಬಾರದು. ಆದರೆ ಅವರು ಮಾತ್ರ ಬೇರೆಯವರಿಗೆ ಏಯ್ ಎಂದೆಲ್ಲ ಮಾತನಾಡಿಸಬಹುದು. ಹೆಣ್ಣು ಮಕ್ಕಳಿಗೆ ಗೌರವ ಕೊಡುವ ಕಿಚ್ಚ ಸುದೀಪ್ ಅವರಿಗೆ ರಕ್ಷಿತಾ ವಿಚಾರದಲ್ಲಿ ಪಿತ್ತ ಹೆಚ್ಚಾಯ್ತು? ಅಶ್ವಿನಿ ಗೌಡ ಅವರನ್ನು ಬಿಗ್ ಬಾಸ್ ಯಾಕೆ ಸಪರೇಟ್ ಆಗಿ ನೋಡ್ತಿದೆ? ಎಂದಿದ್ದಾರೆ.
ಬಡವರ ಮೇಲೆ ದೌರ್ಜನ್ಯ ಮಾಡ್ತೀರಾ?
ದೊಡ್ಡವರಿಗೆ ಬಿಗ್ ಬಾಸ್ ಶೋ ಅಂತಿದ್ರೆ, ಬಡವರ ಮನೆಯ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರ್ತೀರಾ? ಅವರ ಮೇಲೆ ಯಾಕೆ ದೌರ್ಜನ್ಯ ಮಾಡ್ತೀರಾ? ಬಿಗ್ ಬಾಸ್ ಮನೆಗೆ ಕರೆದುಕೊಳ್ಳಿ ಅಂತ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ ಕೇಳಿಕೊಂಡಿದ್ರಾ? ಎಂದು ಪ್ರಶ್ನಿಸಿದ್ದಾರೆ.
ದೂರು ಕೊಟ್ಟಿದ್ಯಾಕೆ?
ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದರೆ ಮಹಿಳಾ ಆಯೋಗಕ್ಕೆ ಹೋಗ್ತೀರಿ. ಆದರೆ ಹೆಣ್ಣಿನಿಂದ ಗಂಡಿನ ಮೇಲೆ ದೌರ್ಜನ್ಯ ಆದರೆ ಮಹಿಳಾ ಆಯೋಗ ಇರಲ್ವಾ? ಖಂಡಿತ ಇರುತ್ತದೆ. ಗಿಲ್ಲಿ ನಟ ಬಟ್ಟೆ ಎಸೆದರು ಎಂದು ದೂರು ದಾಖಲಾಗತ್ತದೆ. ಗಿಲ್ಲಿ ನಟರ ಮೇಲೆ ದೌರ್ಜನ್ಯ ಆಗಿದ್ದಕ್ಕೆ ನಾನು ದೂರು ನೀಡಿದ್ದೇನೆ ಎಂದಿದ್ದಾರೆ.
ಯಾವ ಕಡೆ ಸಮಾಜ ಸಾಗುತ್ತಿದೆ?
ರಕ್ಷಿತಾ ಶೆಟ್ಟಿ ಬೆಳೆಯುತ್ತಿರುವ ಹೆಣ್ಣು ಮಗಳು. ಅವಳ ಮಾನಹಾನಿ ತೆಗೆಯುವ ಕೆಲಸವನ್ನು ಯಾಕೆ ಮಾಡ್ತಿದೀರಾ? ರಕ್ಷಿತಾ ಕುಟುಂಬದ ಗತಿ ಏನಾಗಬೇಕು? ರಕ್ಷಿತಾ ವೈಯಕ್ತಿಕ ಜೀವನ ಏನಾಗಬೇಕು? ಯಾವ ಕಡೆ ಸಮಾಜ ಸಾಗುತ್ತಿದೆ? ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಎಸ್ ಕ್ಯಾಟಗರಿ ವಿಷಯಕ್ಕೆ ಸುದೀಪ್ ಯಾಕೆ ಮಾತನಾಡಲಿಲ್ಲ? ರಕ್ಷಿತಾಗೆ ಆಗ್ತಿರೋದು ಯಾಕೆ ಕಾಣಿಸಲಿಲ್ಲ? ಕರುಣೆಯಿಂದ ಅಭಿನಯ ಚಕ್ರವರ್ತಿ ಎಂದು ಸಿಕ್ಕಿರೋದಿಕ್ಕೆ ಹೀಗೆ ಮೌನವಾಗಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅಶ್ವಿನಿ ಗೌಡ ಇಂಗ್ಲಿಷ್ ಬಗ್ಗೆ ಚರ್ಚೆ
ಅಶ್ವಿನಿ ಗೌಡ ಅವರು ಹೊರಗಡೆ 60% ಕನ್ನಡ, 40% ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಬಿಗ್ ಬಾಸ್ ಮನೆಯೊಳಗಡೆ 60 % ಇಂಗ್ಲಿಷ್, 40% ಕನ್ನಡ ಮಾತನಾಡುತ್ತಾರೆ. ನಿಮ್ಮ ಪ್ರಚಾರದ ತೆವಲಿಗೆ ಈ ರೀತಿ ಮಾಡಬೇಡಿ ಎಂದು ಹೇಳಿದ್ದಾರೆ.
ಸಂಧ್ಯಾ ಪವಿತ್ರಾ ನಾಗರಾಜ್ ಯಾರು?
ಮಾಜಿ ಕಾಂಗ್ರೆಸ್ ಯೂಥ್ ಸೆಕ್ರೆಟರಿ ಎಂದು ಕರೆಸಿಕೊಳ್ಳುವ ಸಂಧ್ಯಾ ಪವಿತ್ರಾ ನಾಗರಾಜ್ ಅವರು ನನ್ನ ತಮ್ಮನಿಗೆ ಸರ್ಕಾರಿ ಉದ್ಯೋಗ ಕೊಡಸ್ತೀನಿ ಎಂದು ಹೇಳಿ 11.5 ಲಕ್ಷ ರೂಪಾಯಿ ವಂಚನೆ ಮಾಡಿದ್ದರು ಎಂದು ರೂಪಾ ಎನ್ನುವವರು 2024ರಲ್ಲಿ ದೂರು ನೀಡಿದ್ದರು. ಚಂದು ಎನ್ನುವವರು ಕೂಡ ಪವಿತ್ರಾ ಅವರು ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವೆ ಎಂದು ಹೇಳಿ 20 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಹೇಳಿದ್ದರು.
ಮೊಹಮ್ಮದ್ ನಲಪ್ಪಾಡ್ ಏನಂದ್ರು?
ಸಂಧ್ಯಾ ಪವಿತ್ರಾ ನಾಗರಾಜ್ ಅವರು ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡಿ, ಅವರಿಗೆ ಕೆಲಸ ಕೊಡಿಸೋದಾಗಿ ಹೇಳಿ ಹಣ ಪಡೆದು ವಂಚಿಸುತ್ತಾರೆ ಎಂದು ಪೊಲೀಸ್ ಮೂಲಗಳು ಹೇಳಿದ್ದವು. ಈ ಬಗ್ಗೆ ಮೊಹಮ್ಮದ್ ನಲಪ್ಪಾಡ್ ಅವರು ಮಾತನಾಡಿದ್ದು, “ಸಂಧ್ಯಾ ಅವರು ಕೆಲಸ ಮಾಡುತ್ತಿರಲಿಲ್ಲ. ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡು, ಅದನ್ನು ಬಳಸಿಕೊಂಡು ಬೇರೆಯವರಿಗೆ ವಂಚಿಸುತ್ತಿದ್ದರು. ಜನರು ಇಂಥವರನ್ನು ನಂಬಬಾರದು” ಎಂದು ಇಂಡಿಯಾ ಟುಡುಗೆ ಮಾಹಿತಿ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

