Traditional Indian baby shower ceremony: ಬ್ಯಾಡಗಿಯ ಗರದ ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ 200ಕ್ಕೂ ಹೆಚ್ಚು ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಸರ್ವಧರ್ಮೀಯರ ಭಾಗವಹಿಸುವಿಕೆಯಿಂದ ಭಾವೈಕ್ಯತೆಗೆ ಸಾಕ್ಷಿಯಾಯಿತು,
ಬ್ಯಾಡಗಿ (ನ.೨೧): ಗರದ ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬಲಾಯಿತು.
ಸಾಮೂಹಿಕ ಸೀಮಂತ ಕಾರ್ಯಕ್ರಮ
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹನುಮನಹಳ್ಳಿ ಹಾಲುಸ್ವಾಮಿ ಮಠದ ಶಿವಯೋಗಿಶ್ರೀಗಳು ಮಾತನಾಡಿ, ಪ್ರಪಂಚದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿಭಿನ್ನ ಧರ್ಮಗಳಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೇ ಧರ್ಮವಾಗಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಧಾರ್ಮಿಕ ಆಚರಣೆ ಹಾಗೂ ಧರ್ಮೋಪದೇಶಗಳನ್ನು ನಿರಂತರವಾಗಿ ನಡೆಸಬೇಕಾಗುತ್ತದೆ, ಅದರೆ ಇತ್ತೀಚೆಗೆ ಧಾರ್ಮಿಕ ಹಿಂಸಾಚಾರಗಳು ಯಥೇಚ್ಛವಾಗಿ ನಡೆಯುತ್ತಿರುವುದು ದುರಂತದ ಸಂಗತಿ ಅಷ್ಟಕ್ಕೂ ಸಾಲದೇ ಧರ್ಮದ ಆಚರಣೆಗಳನ್ನು ಪ್ರಶ್ನಿಸಿ ನ್ಯಾಯಾಲಯಗಳ ಕದ ತಟ್ಟಲಾಗುತ್ತಿದ್ದು, ಇಂತಹವುಗಳಿಗೆ ಮನ್ನಣೆ ಸಿಗದಂತೆ ನೋಡಿಕೊಳ್ಳುವುದು ಹೆಚ್ಚು ಸೂಕ್ತವೆಂದರು.
ಧರ್ಮದ ಬಗ್ಗೆ ವ್ಯವಸ್ಥಿತ ಅಪಪ್ರಚಾರ:
ಧರ್ಮದ ಬಗ್ಗೆ ವ್ಯವಸ್ಥಿತ ಅಪಪ್ರಚಾರ:ಒಂದು ನಿರ್ದಿಷ್ಟ ಧರ್ಮದೊಂದಿಗೆ ತನ್ನನ್ನು ತಾನು ಗುರ್ತಿಸಿಕೊಳ್ಳುವ ಮೂಲಕ ನಿರಂತರ ಸಂಪರ್ಕದೊಂದಿಗೆ ಮನುಷ್ಯ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಸಹಜ, ಆದರೆ ಇತ್ತೀಚಿನ ದಿನಗಳಲ್ಲಿ ಮೂಲಧರ್ಮಗಳಲ್ಲಿಯೇ ಮೂರ‍್ನಾಲ್ಕು ಪಂಗಡಗಳಾಗಿದ್ದು ಅವರವರ ಭಾವನೆಗೆ ತಕ್ಕಂತೆ ಧರ್ಮವನ್ನು ತಿರುಚುವ ಕೆಲವಾಗುತ್ತಿದೆ ಇಂತಹ ದುರುದ್ದೇಶದ ಧಾರ್ಮಿಕ ಆಚರಣೆಗಳು ಸಮಾಜದ ಜನರು ಒಗ್ಗಟ್ಟಾಗಿ ಕಡಿವಾಣ ಹಾಕಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಗರ್ಭಿಣಿಯರಿಗೆ ಸೀಮಂತ ಭಾವೈಕ್ಯತೆಗೆ ಸಾಕ್ಷಿ: ಮಹಿಳೆಯರಿಗೆ ಉಡಿ ತುಂಬುವುದು ವಿಶಿಷ್ಟ ಸಂಪ್ರದಾಯಗಳಲ್ಲಿ ಒಂದಾಗಿದೆ ದೇವಸ್ಥಾನದ ಆವರಣದಲ್ಲಿ ಸುಮಾರು 200ಕ್ಕೂ ಹೆಚ್ಚು ಚೊಚ್ಚಲ ಗರ್ಭೀಣಿಯರಿಗೆ ಸೀಮಂತ ಕಾರ‍್ಯಕ್ರಮ ಜರುಗಿತು, ಬಹುತೇಕ ಎಲ್ಲ ಧರ್ಮದ ಗರ್ಭಿಣಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು.


