ನವದೆಹಲಿ: ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಾದ ಮೇಕೆದಾಟು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಸ್ಥಾಯಿ ಸಮಿತಿಯು ಕೂಡಲೇ ಅನುಮೋದನೆ ನೀಡಬೇಕು ಎಂದು ಮುಖ್ಯಮಂತ್ರಿ ಸಚಿವ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನವದೆಹಲಿಯ ಪರಿಸರ ಭವನದಲ್ಲಿ ಗುರುವಾರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿದ ಡಿಕೆಶಿ, ರಾಜ್ಯದ ಪ್ರಮುಖ ಯೋಜನೆಗಳು ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಕಸ್ತೂರಿ ರಂಗನ್ ವರದಿ: ಭೌತಿಕ ಸಮೀಕ್ಷೆಗೆ ಪಟ್ಟು
ಪಶ್ಚಿಮ ಘಟ್ಟಗಳ ರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯ ಕುರಿತು ಮಾತನಾಡಿದ ಡಿಸಿಎಂ, "ರಾಜ್ಯದಲ್ಲಿ ಭೌತಿಕ ಸಮೀಕ್ಷೆ (Physical Survey) ಸಂಪೂರ್ಣವಾಗಿ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಬಾರದು," ಎಂದು ಕೇಂದ್ರ ಸಚಿವರಲ್ಲಿ ಸ್ಪಷ್ಟವಾಗಿ ಮನವಿ ಮಾಡಿದರು. ವಾಸ್ತವಿಕ ಸ್ಥಿತಿಗತಿಗಳನ್ನು ಅರಿಯದೆ ಅಂತಿಮ ನಿರ್ಧಾರ ಕೈಗೊಂಡರೆ ಸ್ಥಳೀಯ ಜನರ ಜನಜೀವನಕ್ಕೆ ತೊಂದರೆಯಾಗಲಿದೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದರು.
11:04 PM (IST) Oct 23
10:20 PM (IST) Oct 23
09:55 PM (IST) Oct 23
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥವು ಬೆಳಗಾವಿಯಲ್ಲಿ ಗೌತಮ್ ಪಾಟೀಲ್ ಅವರೊಂದಿಗೆ ಸರಳವಾಗಿ ನೆರವೇರಿತು. ರಾಜಕೀಯ ಭಿನ್ನಾಭಿಪ್ರಾಯ ಮರೆತು ಜಾರಕಿಹೊಳಿ ಸಹೋದರರು ಈ ಕೌಟುಂಬಿಕ ಸಮಾರಂಭದಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು.
09:43 PM (IST) Oct 23
09:02 PM (IST) Oct 23
₹5 ಲಕ್ಷ ಹಣ, ಕಾರು ವಾಪಸ್ ಕೊಡದೇ ಬೆದರಿಕೆ ಆರೋಪ ನಟ ಧನ್ವೀರ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಇವತ್ತು ದರ್ಶನ್ ಆಪ್ತ ಧನ್ವೀರ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಏನಿದು ಪ್ರಕರಣ? ಸ್ಟೋರಿ ಓದಿ
08:55 PM (IST) Oct 23
ಮೈಸೂರು ದಸರಾ 2026ರ ಅಂಗವಾಗಿ ಬನ್ನಿಮಂಟಪದಲ್ಲಿ ನಡೆದ ಡ್ರೋನ್ ಪ್ರದರ್ಶನ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ. 3,473 ಡ್ರೋನ್‌ಗಳ ಬೆಳಕಿನಲ್ಲಿ ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ರೂಪಿಸಲಾಯಿತು. ಸಿಇಎಸ್‌ಸಿ ಮತ್ತು ಬಾಟ್‌ಲ್ಯಾಬ್ ಡೈನಾಮಿಕ್ಸ್‌ನ ಈ ಸಾಧನೆ ಮೈಸೂರು ದಸರಾ ವೈಭವಕ್ಕೆ ಮತ್ತೊಂದು ಗರಿ ಸೇರಿಸಿದೆ.
08:54 PM (IST) Oct 23
ನಟ ಧನ್ವೀರ್ ಗೌಡ ಅವರ ಮನೆಗೆ ನುಗ್ಗಿ ರೌಡಿಗಳಿಂದ ಬೆದರಿಕೆ ಹಾಕಿಸಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಇತರ ಮೂವರ ವಿರುದ್ಧ ಧನ್ವೀರ್ ತಂದೆ ತಿಮ್ಮೇಗೌಡ ದೂರು ನೀಡಿದ್ದಾರೆ.
08:24 PM (IST) Oct 23
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಿರೂರು ಗ್ರಾಮದ ರೈತ ಬಾಳು ಹಜಾರೆ ಅವರು ಬರೋಬ್ಬರಿ 61 ಲಕ್ಷ ರೂ. ನೀಡಿ 'ಬ್ರೇಕ್ ಫೇಲ್ ಬೈಜಾ' ಎಂಬ ಖ್ಯಾತ ಓಟದ ಎತ್ತು ಖರೀದಿಸಿದ್ದಾರೆ. ಕಾರು, ಬಂಗಲೆಗಳ ಹಿಂದೆ ಬೀಳುವ ಇಂದಿನ ಕಾಲದಲ್ಲಿ, ಇವರ ಗೋಪ್ರೇಮ ಮತ್ತು ಎತ್ತಿನ ಓಟದ ಮೇಲಿನ ಆಸಕ್ತಿ ಎಲ್ಲರ ಗಮನ ಸೆಳೆದಿದೆ.
08:10 PM (IST) Oct 23
07:46 PM (IST) Oct 23
ಮಕ್ಕಳಲ್ಲಿ ಮಲಬದ್ಧತೆ (Constipation) ಕಾಡುವುದು ಈಗೀಗ ಸಾಮಾನ್ಯವಾಗಿದೆ. ಇದರಿಂದ ಮಕ್ಕಳು ಸಾಕಷ್ಟು ಒದ್ದಾಡುತ್ತಾರೆ. ಸರಿಯಾಗಿ ಊಟ ಮಾಡದಿರುವುದು, ನೀರು ಕುಡಿಯದಿರುವುದು ಇದಕ್ಕೆ ಮುಖ್ಯ ಕಾರಣ. ಈ ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
07:43 PM (IST) Oct 23
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.
07:10 PM (IST) Oct 23
ಸೋನು ನಿಗಮ್ ನಾಳೆ ಬೆಂಗಳೂರಿನ ಯಲಹಂಕದಲ್ಲಿನ ಕಾರ್ಯಕ್ರಮಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಮ್ಕನ್ನಡ ಹಾಡೇ ಹಾಡಬೇಕು, ಬೇರೆ ಹಾಡು ಹಾಡಂಗಿಲ್ಲ ಎಂದಿದ್ದಾರೆ.
06:43 PM (IST) Oct 23
06:31 PM (IST) Oct 23
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ‘ಗೀತಾಂಜಲಿ’ ಚಿತ್ರದ ‘ಓ ಪಾಪ ಲಾಲಿ’ ಹಾಡಿನ ರೆಕಾರ್ಡಿಂಗ್ ವೇಳೆ ಎದುರಿಸಿದ್ದ ಧ್ವನಿ ಸಮಸ್ಯೆ, ಶಸ್ತ್ರಚಿಕಿತ್ಸೆಗೂ ಮುನ್ನದ ಆತಂಕ, ಹಳೆಯ ಸಂದರ್ಶನದಲ್ಲಿ ಹಂಚಿಕೊಂಡಿದ್ದ ಅನುಭವಗಳು ಇಲ್ಲಿವೆ.
06:12 PM (IST) Oct 23
BMRCL ನಮ್ಮ ಮೆಟ್ರೋದ 3ನೇ ಹಂತದ 'ಆರೆಂಜ್ ಲೈನ್' ಯೋಜನೆಯಲ್ಲಿ ಭಾರಿ ಬದಲಾವಣೆ ಮಾಡಿದ್ದು, ಡಬಲ್ ಡೆಕ್ಕರ್ ಮಾದರಿಯನ್ನು ರದ್ದುಗೊಳಿಸಿದೆ. ಬದಲಾಗಿ ವಾಹನ ದಟ್ಟಣೆ ನಿಯಂತ್ರಿಸಲು 4 ಫ್ಲೈಓವರ್‌ಗಳು ಹಾಗೂ ಗೊರಗುಂಟೆಪಾಳ್ಯದಲ್ಲಿ 2 ಕಿ.ಮೀ ಉದ್ದದ ಕಿರು ಸುರಂಗ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಿದೆ.
05:48 PM (IST) Oct 23
05:43 PM (IST) Oct 23
ಕಲ್ಪನಾ ಅವರ ಬದುಕಿನ ಕೊನೆಯ ದಿನಗಳ ಕುರಿತು ಜಯಲಕ್ಷ್ಮೀ ಹಂಚಿಕೊಂಡಿರುವ ಈ ನೆನಪುಗಳು ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ. ಇಲ್ಲಿ ಉಲ್ಲೇಖಿಸಿರುವ ಘಟನೆಗಳು ಸಂದರ್ಶನದಲ್ಲಿ ಕಲ್ಪನಾರ ಸಹ ನಟಿ ಹೇಳಿದ ಹೇಳಿಕೆಗಳಾಗಿವೆ. ನಿಜವಾಗಿಯೂ ಶಾಕಿಂಗ್!
05:21 PM (IST) Oct 23
418 ಹಾರರ್ ಸಿನಿಮಾ ಹೇಗಿದೆ? ಚೈತ್ರಾ ಜೆ. ಆಚಾರ್, ರಮೇಶ್ ಇಂದಿರಾ ಅಭಿನಯದ ಈ ಚಿತ್ರದಲ್ಲಿ ಹಳೆಯ ಹಾಸ್ಟೆಲ್, 418ನೇ ಕೊಠಡಿಯ ನಿಗೂಢತೆ ಹಾಗೂ ಭಯಾನಕ ಘಟನೆಗಳು ಪ್ರಮುಖ ಆಕರ್ಷಣೆಗಳಾಗಿವೆ.
05:16 PM (IST) Oct 23
ನಮ್ಮ ಮೆಟ್ರೋದ 'ಬ್ಲೂ ಲೈನ್' ಯೋಜನೆಯ ಕೆಆರ್ ಪುರಂ ಮತ್ತು ಮಾರತಹಳ್ಳಿ ನಡುವೆ ಅಕ್ಟೋಬರ್ ಅಂತ್ಯಕ್ಕೆ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಸಚಿವ ಕೃಷ್ಣ ಬೈರೇಗೌಡ ಅವರು ಕಾಮಗಾರಿ ಪರಿಶೀಲಿಸಿ, ವಿಳಂಬ ಮಾಡದಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
05:09 PM (IST) Oct 23
ಬೆಳ್ತಗಂಡಿ ತಾಲೂಕಿನ ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರು ತನಿಖೆಗೆ ರಚನೆಗೊಂಡ ಎಸ್‌ಐಟಿ ತಂಡ ಬೆಳ್ತಂಗಡಿ ಕೋರ್ಟ್‌ನಲ್ಲೇ ಸೌಜನ್ಯ ತಾಯಿ ರಕ್ತದ ಮಾದರಿ ಸಂಗ್ರಹಿಸಿದೆ. ಜೊತೆಗೆ ಕೆಲ ದಾಖಲೆ ಸಲ್ಲಿಸಿದೆ.
04:39 PM (IST) Oct 23
04:37 PM (IST) Oct 23
ಟೀಂ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ರಿಪ್ಲೇಸ್ ಮಾಡೋದು ಯಾರು ಎಂಬ ಪ್ರಶ್ನೆ ಮೊದಲಿನಿಂದಲೂ ಇತ್ತು. ಇದೀಗ ನ್ಯೂಜಿಲೆಂಡ್ ಟಿ-20 ಸರಣಿಯಲ್ಲಿ ಅದಕ್ಕೆ ಉತ್ತರ ಸಿಕ್ಕಿದೆ. ಯಾರು ಈ ಯುವ ಪ್ರತಿಭೆ?
04:27 PM (IST) Oct 23
ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಸರ್ಕಾರ ವಿರುದ್ಧ ಮಾಜಿ ಸಿಎಂ ಸಿದ್ದಾರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ಇದು ನನ್ನ ಸರ್ಕಾರ ಅಲ್ಲ, ಬೇರೆ ಸರ್ಕಾರ, ನಾನೇನು ಮಾಡಲಿ ಎಂದು ತೀವ್ರ ಬೇಸರ ಹೊರಹಾಕಿದ್ದಾರೆ.
04:26 PM (IST) Oct 23
ತೀವ್ರ ಬರಗಾಲದ ನಡುವೆಯೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಕರ್ನಾಟಕದ ತೀವ್ರ ಆಕ್ಷೇಪದ ಹೊರತಾಗಿಯೂ ಸಿಡಬ್ಲ್ಯೂಆರ್‌ಸಿ ಶಿಫಾರಸನ್ನು ಪ್ರಾಧಿಕಾರ ಎತ್ತಿಹಿಡಿದಿದೆ.
04:08 PM (IST) Oct 23
03:41 PM (IST) Oct 23
03:32 PM (IST) Oct 23
ವಸಿಷ್ಠ ಸಿಂಹ ನಟನೆಯ ಹೊಸ ಸಿನಿಮಾ ‘ಭೀಮ್ ಆಂಡ್ ರಾವ್’ ಘೋಷಣೆಯಾಗಿದೆ. ‘ಪರಿಹಾರಕ್ಕಾಗಿ ಕ್ರಾಂತಿ’ ಎಂಬ ಸಬ್‌ಟೈಟಲ್ ಹೊಂದಿರುವ ಈ ಚಿತ್ರದ ಟೈಟಲ್ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
03:17 PM (IST) Oct 23
ಲಯ ಕೋಕಿಲ ನಿರ್ದೇಶನದ, ರಿಯಾನ್ ಹಾಗೂ ಹರ್ಷಿಕಾ ಪೂಣಚ್ಚ ಜೋಡಿಯಾಗಿ ನಟಿಸಿರುವ ‘ತಾಯ್ತ’ ಕನ್ನಡ ಹಾರರ್ ಸಿನಿಮಾ ಅ.30ಕ್ಕೆ ತೆರೆಗೆ ಬರಲಿದೆ. ಶಾಹಿದ್ ನಿರ್ಮಿಸಿರುವ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
03:10 PM (IST) Oct 23
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶುಕ್ರವಾರ ಬೆಳಿಗ್ಗೆ ಲಘು ಭೂಕಂಪನ ಸಂಭವಿಸಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದ್ದರೂ, ಯಾವುದೇ ಅಪಾಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ಸ್ಪಷ್ಟಪಡಿಸಿದೆ. ಭೂಕಂಪನದ ತೀವ್ರತೆ ಎಷ್ಟಿದೆ? ತಿಳಿಯಿರಿ.
02:21 PM (IST) Oct 23
Karnataka MLC election voting: ರಾಜ್ಯದ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ಶುಕ್ರವಾರ ಮತದಾನ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಒಟ್ಟು 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
02:09 PM (IST) Oct 23
'ಪ್ರೇಮದ ಊರಲಿ' ಸಿನಿಮಾ 100 ಕೋಟಿ ರೂ. ಗಳಿಸಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಆದರೆ, ಚಿತ್ರದ ಶೂಟಿಂಗ್ ನಡೆದ ಹಾಸನದ ಸೀಗೆಗುಡ್ಡಕ್ಕೆ ಪ್ರವಾಸಿಗರ ಲಗ್ಗೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೆ, ಜನದಟ್ಟಣೆಯಿಂದಾಗಿ ಅಲ್ಲಿನ ಮಳೆ ಮಲ್ಲೇಶ್ವರ ದೇವರ ತ್ರಿಶೂಲ ಹಿಡಿದ ಕೈ ಮುರಿದು ಬಿದ್ದಿದೆ.
02:01 PM (IST) Oct 23
ಮಲೇಷ್ಯಾದಲ್ಲಿ ಮಾತನಾಡಿದ ಸದ್ಗುರು, ಜಗತ್ತಿನಾದ್ಯಂತ ಮಣ್ಣಿನ ಫಲವತ್ತತೆ ನಾಶವಾಗುತ್ತಿದ್ದು, ಭವಿಷ್ಯದಲ್ಲಿ ಆಹಾರ ಉತ್ಪಾದನೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಎಚ್ಚರಿಸಿದ್ದಾರೆ. ‘ಭೂಮಿಯ ಮೇಲೆ ಇನ್ನು ಕೇವಲ 60 ಬೆಳೆಗಳನ್ನು ಮಾತ್ರ ತೆಗೆಯಬಹುದು’ ಎಂಬ ಶಾಕಿಂಗ್ ಸತ್ಯ ಹೇಳಿದ್ದಾರೆ! ಏನಿದು ಆತಂಕ ಕುಟ್ಟಿಸುವ ಸುದ್ದಿ?!
01:35 PM (IST) Oct 23
'ಪ್ರೇಮದ ಊರಲಿ' ಈಗ ಸಿನಿಮಾ ಸೂಪರ್ ಹಿಟ್ ಆಗಿದ್ದು, 100 ಕೋಟಿ ಕ್ಲಬ್ ಸೇಋಇದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಆ ಒಬ್ಬ ವ್ಯಕ್ತಿಗೆ ಈ ಸಿನಿಮಾ ಸಖತ್ ಸಕ್ಸಸ್ ಆಗಿ ಇತಿಹಾಸ ಸೃಷ್ಟಿಸುತ್ತೆ ಅಂತ ಗೊತ್ತಿತ್ತಂತೆ! ಯಾರು ಅದು? ಅವರಿಗೆ ಸಿಕ್ತ್ ಸೆನ್ಸ್ ಆಗಿತ್ತಾ? ಆ ಶಾಕಿಂಗ್ ಮಾಹಿತಿ ಇಲ್ಲಿದೆ ನೋಡಿ!
01:08 PM (IST) Oct 23
ಮಾಜಿ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರಲು ಮತ್ತು ಬ್ಲ್ಯಾಕ್‌ಮೇಲ್ ಮಾಡಲು ನಡೆದ ಸ್ಟಿಂಗ್ ಆಪರೇಷನ್ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎಂದು ಡಾ. ಯತೀಂದ್ರ ಆರೋಪಿಸಿದ್ದಾರೆ. ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿ ಇಬ್ಬರ ವಿಚಾರಣೆ ನಡೆಯುತ್ತಿದ್ದುದೆ.
12:22 PM (IST) Oct 23
ಶಿವಮೊಗ್ಗದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಕಚೇರಿಯಲ್ಲಿ ಹಣ ಪಡೆದು ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡುತ್ತಿರುವ ಬೃಹತ್ ಅಕ್ರಮ ಬಯಲಾಗಿದೆ. ಒಂದು ವಿಷಯಕ್ಕೆ ₹1,000 ನೀಡಿದ ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಪುಸ್ತಕ ನೋಡಿ ಪರೀಕ್ಷೆ ಬರೆಯಲು ಪ್ರಾದೇಶಿಕ ನಿರ್ದೇಶಕರ ನೇತೃತ್ವದಲ್ಲೇ ವಿಐಪಿ ವ್ಯವಸ್ಥೆ ಮಾಡಲಾಗಿದೆ.
12:15 PM (IST) Oct 23
Bengaluru STRR: ಬೆಂಗಳೂರಿನ ಹೊಸಕೋಟೆ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬದಿಂದಾಗಿ ಹೊಸಕೋಟೆ-ಹೊಸೂರು STRR ಮಾರ್ಗ ಪೂರ್ಣಗೊಳ್ಳುವುದು ತಡವಾಗಲಿದೆ. ಹೀಗಾಗಿ ಡಿಸೆಂಬರ್‌ನಲ್ಲಿ 21 ಕಿ.ಮೀ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು NHAI ನಿರ್ಧರಿಸಿದೆ.
11:44 AM (IST) Oct 23
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಕಚೇರಿಯೊಂದರಲ್ಲಿ ಅಪರೂಪದ 'ಬೆಕ್ಕು ಹಾವು' ಪತ್ತೆಯಾಗಿ ಜನರಲ್ಲಿ ಕುತೂಹಲ ಮೂಡಿಸಿದೆ. ಅರಣ್ಯ ಪಾಲಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಈ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಮನುಷ್ಯರಿಗೆ ಅಪಾಯಕಾರಿಯಲ್ಲದ ಈ ಹಾವು ಮರಗಳ ಮೇಲೆ ವಾಸಿಸುವ ನಿಶಾಚರಿ ಜೀವಿಯಾಗಿದೆ.
11:11 AM (IST) Oct 23
11:03 AM (IST) Oct 23
ಟೈಗರ್ ಶ್ರಾಫ್ ಪ್ರಕರಣ ಈಗ ರಣಬೀರ್ ಕಪೂರ್ ಮತ್ತು ಸಲ್ಮಾನ್ ಖಾನ್ ಅವರ ನಿವಾಸಗಳ ಸುತ್ತ ನಡೆದಿದೆಯೆನ್ನಲಾದ ರೆಕ್ಕಿ ಹಾಗೂ ಶಸ್ತ್ರಾಸ್ತ್ರ ಪೂರೈಕೆಯ ಜಾಲದ ತನಿಖೆಯತ್ತ ಗಮನ ಸೆಳೆದಿದೆ. ಆದರೆ, ಈ ಎಲ್ಲ ಆರೋಪಗಳ ಸತ್ಯಾಸತ್ಯತೆ ಮತ್ತು ಸಂಚಿನ ಹಿಂದಿರುವವರ ಪಾತ್ರ ತನಿಖೆ ಬಳಿಕ ಬಯಲಾಗಬೇಕಿದೆ.
10:51 AM (IST) Oct 23
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಾಪತ್ತೆಯಾಗಿದ್ದ ಆರ್‌ಎಸ್‌ಎಸ್ ದೈಹಿಕ ಪ್ರಮುಖ ಪ್ರಮೋದ್ ಮಮದಾಪುರ ಅವರ ಮೃತದೇಹ ದತ್ತ ಕೆರೆಯಲ್ಲಿ ಪತ್ತೆಯಾಗಿದೆ. ನವರಾತ್ರಿ ಅನುಷ್ಠಾನಕ್ಕೆಂದು ತೆರಳಿದ್ದ ಇವರ ಸಾವಿನ ಬಗ್ಗೆ ಕುಟುಂಬಸ್ಥರು ತನಿಖೆಗೆ ಆಗ್ರಹಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.