ಟೀಂ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ರಿಪ್ಲೇಸ್ ಮಾಡೋದು ಯಾರು ಎಂಬ ಪ್ರಶ್ನೆ ಮೊದಲಿನಿಂದಲೂ ಇತ್ತು. ಇದೀಗ ನ್ಯೂಜಿಲೆಂಡ್ ಟಿ-20 ಸರಣಿಯಲ್ಲಿ ಅದಕ್ಕೆ ಉತ್ತರ ಸಿಕ್ಕಿದೆ. ಯಾರು ಈ ಯುವ ಪ್ರತಿಭೆ?
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಪ್ರತಿಭಾವಂತ ಕ್ರಿಕೆಟಿಗ. ಮನಸ್ಸು ಮಾಡಿದ್ರೆ ಎದುರಾಳಿ ತಂಡವನ್ನು ತಮ್ಮ ಸ್ಟ್ರಾಟರ್ಜಿ ಹಾಗೂ ಗೇಮ್ಪ್ಲಾನ್ ಮೂಲಕ ಆಟದ ದಿಕ್ಕನ್ನೇ ಬದಲಿಸುವ ಚತುರ. ಆದರೆ ಅವರು ಆಟಕ್ಕಿಂತ ವಿವಾದ, ವಿವಾದಕ್ಕಿಂತ ಗಾಯದಿಂದಲೇ ಮೈದಾನದಿಂದ ದೂರ ಉಳಿದಿದ್ದೇ ಹೆಚ್ಚು. ಇದೇ ಕಾರಣಕ್ಕೆ ಇನ್ಮುಂದೆ ಅವರು ತಂಡದಲ್ಲಿ ಶಾಶ್ವತವಾಗಿ ಸ್ಥಾನ ಕಳೆದುಕೊಂಡರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಜೊತೆಗೆ ಪಾಂಡ್ಯ ಬದಲಿಗೆ ಬಿಸಿಸಿಐ ಮತ್ತೊಬ್ಬ ಆಲ್ರೌಂಡರ್ನನ್ನು ಹುಡುಕಿಕೊಂಡಿದೆ.
ಅದಕ್ಕೆ ಅವರ ಫ್ಯಾನ್ಸ್ ನಮ್ಮ ಪಾಂಡ್ಯ ಅಮವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ಮೈದಾನಕ್ಕೆ ಬರುತ್ತಾರೆ.. ಫೀಲ್ಡಿಂಗ್ ಇರಬಹುದು, ಬ್ಯಾಟಿಂಗ್ ಇರಬಹುದು ಅಥವಾ ಬೌಲಿಂಗ್ ಇರಬಹುದು.. ಬಂದ ಹೊತ್ತಲ್ಲೇ ಬಿಗ್ ಇಂಪ್ಯಾಕ್ಟ್ ಮಾಡಿ ಹೋಗಿ ಬಿಡ್ತಾರೆ. ಅದೇ ನಮ್ಮ ಪಾಂಡ್ಯಗೆ ಇರುವ ತಾಖತ್ತು, ಗತ್ತು ಅನ್ನೋದು ಅಭಿಮಾನಿಗಳ ವಾದ.
ಬಿಸಿಸಿಐ ಹಾಗೂ ಆಯ್ಕೆ ಸಮಿತಿಯು ಹಾರ್ದಿಕ್ ಪಾಂಡ್ಯ ಅವರನ್ನು ಆಡಿಸುವ ಉತ್ಸುಕದಲ್ಲಿದ್ದರೂ, ಪಾಂಡ್ಯ ಆಗಾಗ ಅಲಭ್ಯರಾಗುತ್ತಾರೆ. ಗಾಯದ ಸಮಸ್ಯೆ, ಫಿಟ್ನೆಸ್ನಿಂದ ತಂಡಕ್ಕೆ ಕೈಕೊಡುತ್ತಾರೆ..ಸದ್ಯ ಪಾಂಡ್ಯ ಅವರು ಸ್ಪೈನ್ ಇಂಜುರಿಯಿಂದ ಬಳಲುತ್ತಿದ್ದು, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್ಲೆನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅವರು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ, ಶ್ರೀಲಂಕಾ ಹಾಗೂ ಜಿಂಬಾಬ್ವೆ ವಿರುದ್ಧದ ವೈಟ್ಬಾಲ್ ಸರಣಿ ಹಾಗೂ ದೇಸಿಯ ಸೈಯದ್ ಮುಷ್ತಾಕ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಐಪಿಎಲ್ನಲ್ಲಿ ಪಾಂಡ್ಯ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.. ಐಪಿಎಲ್ನಲ್ಲಿ ಮಾತ್ರ ಪೂರ್ಣಪ್ರಮಾಣದವರೆಗೆ ಕಾಣಿಸಿಕೊಳ್ಳುವ ಪಾಂಡ್ಯ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಯಾಕೆ ಕೈಕೊಡುತ್ತಿದ್ದಾರೆ ಎಂದು ಬೇಸರವೂ ಅಭಿಮಾನಿಗಳಲ್ಲಿದೆ.
ಅದಕ್ಕೆ ಕೆಲವು ಕ್ರಿಕೆಟ್ ಪ್ರಿಯರು.. ಪಾಂಡ್ಯ ಬದಲಿಗೆ ಟೀಂ ಇಂಡಿಯಾ ಮತ್ತೊಬ್ಬ ಆಲ್ರೌಂಡರ್ನನ್ನು ಹುಡುಕಿಕೊಳ್ಳಬೇಕು ಎಂಬ ಒತ್ತಾಯ ಇತ್ತು. ಬಿಸಿಸಿಐ ಕೂಡ ಪಾಂಡ್ಯ ಬದಲಿಗೆ ಮತ್ತೊಬ್ಬ ಯುವ ಆಲ್ರೌಂಡರ್ನ ಹುಡುಕಾಟದಲ್ಲಿತ್ತು. ನ್ಯೂಜಿಲೆಂಡ್ ಸರಣಿಯಲ್ಲಿ ಅದಕ್ಕೆ ಉತ್ತರ ಸಿಕ್ಕಿದೆ ಎಂಬ ಮಾತುಗಳು ಕೇಳಿಬಂದಿವೆ. ನ್ಯೂಜಿಲೆಂಡ್ ಸರಣಿಯಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ನಮನ್ ಧೀರ್ ಪಾಂಡ್ಯ ಬದಲಿಗೆ ಸರಿಯಾದ ಪ್ಲೇಯರ್ ಎನ್ನಲಾಗುತ್ತಿದೆ.
ಯಾರು ನಮನ್ ಧೀರ್?
ನಮನ್ ಧೀರ್ ಭಾರತೀಯ ಕ್ರಿಕೆಟ್ನ ಉದಯೋನ್ಮುಕ ಆಲ್ರೌಂಡರ್. ಐಪಿಎಲ್ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದರೆ.. ದೇಸಿಯ ಟೂರ್ನಿಯಲ್ಲಿ ಪಂಜಾಬ್ ಪರ ಆಟವಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಟಿ-20 ಹಾಗೂ ಏಕದಿನ ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದಾರೆ. ಆರಂಭ ದಿನಗಳಲ್ಲಿ ತಮ್ಮ ಆಟದ ಮೂಲಕ ಗಮನ ಸೆಳೆದಿರುವ ನಮನ್ ಧೀರ್.. ಪಾಂಡ್ಯ ಬದಲಿಗೆ ಇವರೇ ಸೂಕ್ತ ಆಟಗಾರ ಎನ್ನಲಾಗುತ್ತಿದೆ..
ಸದ್ಯ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ನಿನ್ನೆ ಮೊದಲ ಟಿ-20 ಪಂದ್ಯ ನಡೆಯಿತು. ಈ ವೇಳೆ ನಮನ್ ಧೀರ್.. ಕೇವಲ 15 ಬಾಲ್ನಲ್ಲಿ 42 ರನ್ ಚಚ್ಚಿ ಬೆರಗುಗೊಳಿಸಿದ್ದಾರೆ. 280ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ನಮನ್ ಧೀರ್.. ಎರಡು ಸಿಕ್ಸರ್, ಐದು ಬೌಂಡರಿ ಬಾರಿಸಿದರು. ಇನ್ನು ವೆಸ್ಟ್ ವಿಂಡೀಸ್ ವಿರುದ್ಧದ ಟಿ-20 ಪಂದ್ಯ ಒಂದರಲ್ಲಿ 6 ಬಾಲ್ಗೆ 24 ರನ್ ಚಚ್ಚಿದ್ದರು. ಇಲ್ಲಿಯವರೆಗೆ ಮೂರು ಏಕದಿನ ಪಂದ್ಯಗಳನ್ನ ಆಡಿ 30 ರನ್ಗಳಿಸಿದ್ದಾರೆ. ಹಾಗೆಯೇ 6 ಟಿ20 ಪಂದ್ಯಗಳನ್ನ ಆಡಿ 80 ರನ್ ಬಾರಿಸಿದ್ದಾರೆ. ಇನ್ನು ಏಕದಿನ ಪಂದ್ಯಗಳಲ್ಲಿ ಒಂದು ವಿಕೆಟ್, ಟಿ-20ಯಲ್ಲಿ ಐದು ವಿಕೆಟ್ ಕಬಳಿಸಿ ಟೀಂ ಇಂಡಿಯಾಗೆ ಹೊಸ ಭರವಸೆ ಮೂಡಿಸಿದ್ದಾರೆ. ಇದೇ ಕಾರಣಕ್ಕೆ ನಮನ್ ಧೀರ್.. ಮುಂದೊಂದು ದಿನಗಳಲ್ಲಿ ಹಾರ್ದಿಕ್ ಪಾಂಡ್ಯಗೆ ಬದಲಿ ಆಲ್ರೌಂಡರ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.


