ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಸರ್ಕಾರ ವಿರುದ್ಧ ಮಾಜಿ ಸಿಎಂ ಸಿದ್ದಾರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ಇದು ನನ್ನ ಸರ್ಕಾರ ಅಲ್ಲ, ಬೇರೆ ಸರ್ಕಾರ, ನಾನೇನು ಮಾಡಲಿ ಎಂದು ತೀವ್ರ ಬೇಸರ ಹೊರಹಾಕಿದ್ದಾರೆ.
ಮೈಸೂರು (ಅ.23) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟಿಂಗ್ ವಿಚಾರ ರಾಜ್ಯದಲ್ಲಿ ಹಾಗೂ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಕಳೆದ ಹಲವು ದಿನಗಳಿಂದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ , ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ದ ಸತತ ಹೋರಾಟ ನಡೆಸುತ್ತಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ದಸಾರ ಉಸ್ತುವಾರಿ ವಿವಾದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ನನ್ನ ಸರ್ಕಾರ ಅಲ್ಲ,ನಾನೇನು ಮಾಡಲಿ
ದಸಾರಾ ಉಸ್ತುವಾರಿಗೆ ಒಂದೇ ದಿನ ಮೂವರು ಮೇಲುಸ್ತುವಾರಿ ನೇಮಿಸುವ ಅಗತ್ಯ ಇರಲಿಲ್ಲ. ಮೇಲುಸ್ತುವಾರಿ ವಹಿಸಿದ ಯಾರೂ ಕೂಡ ಮೈಸೂರು ದಸಾರಗೆ ಬರಲಿಲ್ಲ. ಆದರೂ ಸರ್ಕಾರದ ಮೇಲುಸ್ತುವಾರಿಯನ್ನು ನೇಮಿಸಿತು. ಯಾಕೆ ನೇಮಿಸದುರ ಅನ್ನೋದು ಗೊತ್ತಿಲ್ಲ. ಇದು ನನ್ನ ಸರ್ಕಾರ ಅಲ್ಲ, ಬೇರೆ ಸರ್ಕಾರ. ಇವೆಲ್ಲಾ ಮುಖ್ಯಮಂತ್ರಿಗಳ ನಿರ್ಧಾರ ನಾನೇನು ಮಾಡಲಿ ಎಂದು ಸಿದ್ದರಾಮಯ್ಯ ಅಸಮಾಧಾನ ತೋಡಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ದಸರಾ ಉಸ್ತುವಾರಿ ವಿವಾದ ಕುರಿತು ಪ್ರಶ್ನೆಗೆ ಉತ್ತರಿಸುತ್ತಾ ಬೇಸರ ಹೊರಹಾಕಿದ್ದಾರೆ. ಗೊಂದಲ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ. ಇದೀಗ ಸಿದ್ದರಾಮಯ್ಯ ಅಸಮಾಧಾನ ರಾಜಕೀಯವಾಗಿ ಕಾವು ಪಡೆದುಕೊಂಡಿದೆ. ಸ್ಟಿಂಗ್ ವಿವಾದಲ್ಲಿ ಸಿಲುಕಿರುವ ಸರ್ಕಾರಕ್ಕೆ ಇದೀಗ ಸಿದ್ದರಾಮಯ್ಯ ಅಸಮಾಧಾನ ಹಿನ್ನಡೆಯಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ.
ಶಿಷ್ಟಾಚಾರ ಉಲ್ಲಂಘನೆ ಕುರಿತು ಯತೀಂದ್ರ ಸಿದ್ದರಾಮಯ್ಯ ಬೆಂಬಲಿಗರ ಪ್ರತಿಭಟನೆ
ಸದ್ಯ ಸಿದ್ದರಾಮಯ್ಯ ದಸರಾ ಉಸ್ತುವಾರಿ ಕುರಿತು ಅಸಧಾನ ಹೊರಹಾಕಿದ್ದರೆ, ಇದಕ್ಕೂ ಮೊದಲು ಮೈಸೂರು ದಸರಾ ವಿಚಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ದಸರಾ ಸರ್ಕಾರಿ ಜಾಹೀರಾತಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಫೋಟೋ ಹಾಕದ ವಿಚಾರವಾಗಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಯತೀಂದ್ರ ಸಿದ್ದರಾಮಯ್ಯನವರ ಫೋಟೋವನ್ನು ಸರ್ಕಾರಿ ಜಾಹೀರಾತಿನಲ್ಲಿ ಹಾಕಿಲ್ಲ. ಇದು ಯತೀಂದ್ರ ಸಿದ್ದರಾಮಯ್ಯ ವರ್ಚಿಸ್ಸಿಗೆ ಧಕ್ಕೆ ತರುವ ಹುನ್ನಾರ ಎಂದು ಪ್ರತಿಭಟನೆ ನಡೆಸಿದ್ದರು. ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಸಚಿವರಾದ ಬಸಂತಪ್ಪ, ನರೇಂದ್ರಸ್ವಾಮಿಗೆ ತಡೆ ಹಾಕಲಾಗಿದೆ. ದಸರಾ ಜಾಹೀರಾತಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಫೋಟೋ ಹಾಕಿಲ್ಲ.
ಜಿಲ್ಲಾ ಉಸ್ತುವಾರಿ ಫೋಟೋ ಇಲ್ಲದೆ ಜಾಹೀರಾತು ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ಒಂದೆಡೆ ಸಿದ್ದರಾಮಯ್ಯನವರ ಅಸಮಾಧಾನ , ಇತ್ತ ಯತೀಂದ್ರ ಸಿದ್ದರಾಮಯ್ಯ ಬೆಂಬಲಿಗರು ಪ್ರತಿಭಟನೆ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.


