- Home
- Entertainment
- Sandalwood
- ಎಲ್ಲರ ಶ್ರಮ, ಪ್ರೀತಿಯಿಂದ ಮೂಡಿ ಬಂದಿರುವ ಚಿತ್ರ ತಾಯ್ತ: ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಿಷ್ಟು!
ಎಲ್ಲರ ಶ್ರಮ, ಪ್ರೀತಿಯಿಂದ ಮೂಡಿ ಬಂದಿರುವ ಚಿತ್ರ ತಾಯ್ತ: ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಿಷ್ಟು!
ಲಯ ಕೋಕಿಲ ನಿರ್ದೇಶನದ, ರಿಯಾನ್ ಹಾಗೂ ಹರ್ಷಿಕಾ ಪೂಣಚ್ಚ ಜೋಡಿಯಾಗಿ ನಟಿಸಿರುವ ‘ತಾಯ್ತ’ ಕನ್ನಡ ಹಾರರ್ ಸಿನಿಮಾ ಅ.30ಕ್ಕೆ ತೆರೆಗೆ ಬರಲಿದೆ. ಶಾಹಿದ್ ನಿರ್ಮಿಸಿರುವ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಟ್ರೇಲರ್ ಬಿಡುಗಡೆ
ಲಯ ಕೋಕಿಲ ನಿರ್ದೇಶಿಸಿ, ರಿಯಾನ್ ಹಾಗೂ ಹರ್ಷಿಕಾ ಪೂಣಚ್ಚ ಜೋಡಿಯಾಗಿ ನಟಿಸಿರುವ ‘ತಾಯ್ತ’ ಸಿನಿಮಾ ಅ.30ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಶಾಹಿದ್ ನಿರ್ಮಾಣದ ಚಿತ್ರವಿದು. ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಟ್ರೇಲರ್ ಹಾಗೂ ಹಾಡುಗಳನ್ನು ನೋಡಬಹುದು.
ಎಲ್ಲರೂ ನೋಡುವಂತಹ ಕತೆ
ಹರ್ಷಿಕಾ ಪೂಣಚ್ಚ, ‘ಒಳ್ಳೆಯ ಪಾತ್ರ ಮತ್ತು ಎಲ್ಲರೂ ನೋಡುವಂತಹ ಕತೆಯ ಚಿತ್ರದಲ್ಲಿ ನಟಿಸಿದ್ದೇನೆಂಬ ಖುಷಿ ಇದೆ. ಈ ಚಿತ್ರದಲ್ಲಿ ನನ್ನಂತೆಯೇ ತುಂಬಾ ಜನ ಕಲಾವಿದರ ಶ್ರಮ ಇದೆ. ಎಲ್ಲರ ಪ್ರೀತಿ ಮತ್ತು ಶ್ರಮದಿಂದ ಮೂಡಿ ಬಂದಿರುವ ಈ ಚಿತ್ರವನ್ನು ಎಲ್ಲರೂ ನೋಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಿ’ ಎಂದರು.
ಹಾರರ್ ಸಿನಿಮಾ ಇದು
ಲಯ ಕೋಕಿಲ, ‘ನನ್ನ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ. ಹಾರರ್ ಸಿನಿಮಾ ಇದು’ ಎಂದರು. ಲಯ ಕೋಕಿಲ ಪುತ್ರ ಭಾನುಪ್ರಿಯ, ಸಾಧುಕೋಕಿಲ, ಶೋಭರಾಜ್, ಶಾಹಿದ್, ಕರಿಸುಬ್ಬು, ಪುಷ್ಪಾಸ್ವಾಮಿ, ರೋಜಾ, ಸಿಮ್ರಾನ್, ಲಾವಣ್ಯ, ಸಹನಾ ಗೌಡ ತಾರಾಬಳಗದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

