Published : Aug 29, 2026, 07:13 AM ISTUpdated : Aug 30, 2026, 12:01 AM IST

State News Live: ಟಾಕ್ಸಿಕ್ ಬಗ್ಗೆ ರಕ್ಷಿತಾ ಪ್ರೇಮ್ ಫಸ್ಟ್ ರಿಯಾಕ್ಷನ್; ಜನ ಏನೇನೋ ಹೇಳ್ತಾರೆ, ನೀವ್ ಹೋಗಿ ಮೂವಿ ನೋಡಿ, ಆಮೆಲೆ ಮಾತಾಡಿ

ಸಾರಾಂಶ

ಬೆಂಗಳೂರು (ಆ.29): ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನೇತೃತ್ವದಲ್ಲಿ ನಡೆಯತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ವಾಲ್ಮೀಕಿ ಹಗರಣದಲ್ಲಿ 2ನೇ ಬಾರಿ ಸಚಿವ ನಾಗೇಂದ್ರ ಅವರ ತಲೆದಂಡವಾಗಿದೆ. ಅದರೊಂದಿಗೆ ದೋಸ್ತಿ ಹೋರಾಟಕ್ಕೆ ಕಾಂಗ್ರೆಸ್‌ ಮಣಿದಿದ್ದು, ಡಿಕೆ ಸಂಪುಟದ ಮೊದಲ ವಿಕೆಟ್‌ ಪತನವಾದಂತಾಗಿದೆ.ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಪಟ್ಟಂತೆ 2ನೇ ವರ್ಷದಲ್ಲಿ 2ನೇ ಬಾರಿಗೆ ಸಚಿವ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ರಾಜೀನಾಮೆ ನೀಡಿದ್ದಾರೆ. ಸಚಿವರಾಗಿ ಪದಗ್ರಹಣ ಮಾಡಿದ 25 ದಿನಕ್ಕೆ ಪದತ್ಯಾಗ ಮಾಡಿದಂತಾಗಿದೆ. ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಬಿಜೆಪಿ-ಜೆಡಿಎಸ್‌ ಹೋರಾಟಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

Rakshitha Prem Yash

12:01 AM (IST) Aug 30

ಟಾಕ್ಸಿಕ್ ಬಗ್ಗೆ ರಕ್ಷಿತಾ ಪ್ರೇಮ್ ಫಸ್ಟ್ ರಿಯಾಕ್ಷನ್; ಜನ ಏನೇನೋ ಹೇಳ್ತಾರೆ, ನೀವ್ ಹೋಗಿ ಮೂವಿ ನೋಡಿ, ಆಮೆಲೆ ಮಾತಾಡಿ

ಅವರು ಈಗಾಗಲೇ ಒಮ್ಮೆ ನೋಡಿ ಇಷ್ಟಪಟ್ಟು ಮತ್ತೆ ನೋಡೋಕೆ ಬಂದಿದಾರೆ.. ಯಾರೂ ಬೇರೆಯವರ ಒಪಿನಿಯನ್ ಕೇಳಿ, ಸಿನಿಮಾ ನೋಡದೇ ಇರಬೇಡಿ.. ನೀವು ಒಮ್ಮೆ ನೋಡಿ.. ಹಾಗೇ, ಎಲ್ಲರೂ ಥೇಟರ್‌ಗೇ ಹೋಗಿ ಈ ಮೂವಿ ನೋಡಿ..' ಎಂದು ಹೇಳಿದ್ದಾರೆ ರಕ್ಷಿತಾ ಪ್ರೇಮ್.

Read Full Story

11:40 PM (IST) Aug 29

ಯಮುನಾ ನದಿ ಅಳುತ್ತಿದೆ, ಯಾಕೆ ಗೊತ್ತಾ? ಅಕ್ಬರ್‌ ಮನ ಗೆದ್ದ ಬೀರಬಲ್‌ನ ಜಾಣ್ಮೆಯ ಉತ್ತರ!

ಅಕ್ಬರ್-ಬೀರಬಲ್ ಕಥೆಗಳಲ್ಲಿ ಬೀರಬಲ್‌ನ ಚಾಣಾಕ್ಷತನಕ್ಕೆ ಮತ್ತೊಂದು ಉದಾಹರಣೆ ಈ ಯಮುನಾ ನದಿ ಕಥೆ. ಮಳೆಗಾಲದ ಒಂದು ರಾತ್ರಿ ಯಮುನಾ ನದಿಯ ಭೋರ್ಗರೆತ ಅಕ್ಬರ್‌ಗೆ ಅಳುವಿನಂತೆ ಕೇಳಿಸುತ್ತದೆ. ಮರುದಿನ ದರ್ಬಾರ್‌ನಲ್ಲಿ ಅಕ್ಬರ್ ಇದೇ ಪ್ರಶ್ನೆಯನ್ನು ಸಭಿಕರ ಮುಂದಿಡುತ್ತಾರೆ.

Read Full Story

11:07 PM (IST) Aug 29

ನನಗೆ ಜೀಪ್ ಬೇಕು ಅಂಕಲ್, ವಿಶೇಷ ಚೇತನ ಬಾಲಕನ ಮನವಿಗೆ ತಕ್ಷಣ ಸ್ಪಂದಿಸಿದ ಹೆಚ್‌ಡಿ ಕುಮಾರಸ್ವಾಮಿ

ವಿಶೇಷ ಚೇತನ ಬಾಲಕ ತನ್ನ ತಾಯಿ ಜೊತೆ ಸಲಕರಣೆ ಪಡೆಯಲು ಆಗಮಿಸಿದ್ದರು. ಈ ವೇಳೆ ಬಾಲಕನ ಜೊತೆ ಹೆಚ್‌ಡಿ ಕುಮಾರಸ್ವಾಮಿ ಮಾತನಾಡುತ್ತಾ ಏನು ಬೇಕು ನಿನಗೆ ಎಂದು ಕೇಳಿದ್ದಾರೆ. ಬಾಲಕನ ಮಂದಿಟ್ಟ ಮನವಿಗೆ ತಕ್ಷಣ ಸ್ಪಂದಿಸಿದ ಘಟನೆ ನಡೆದಿದೆ.

Read Full Story

10:38 PM (IST) Aug 29

PDO - ಲೋಕಾ ಪೊಲೀಸರ ಡಿಜಿಟಲ್ ಟ್ರ್ಯಾಪ್; ಲಂಚಕ್ಕೆ ಬೇಡಿಕೆಯಿಟ್ಟು ಜೈಲು ಪಾಲಾದ ಗ್ರಾಪಂ ಪಿಡಿಒ ಅಧಿಕಾರಿ!

ಪಿಡಿಒ ಮೆಹಬೂಬ್ ಪಟೇಲ್, ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಫೋನ್ ಪೇ ಮೂಲಕ ₹12,000 ಲಂಚ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಡಿಜಿಟಲ್ ಸಾಕ್ಷ್ಯದೊಂದಿಗೆ ಅಧಿಕಾರಿಯನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

Read Full Story

09:52 PM (IST) Aug 29

FSSAI ಕಟ್ಟುನಿಟ್ಟಿನ ಕ್ರಮ; ಕಲಬೆರಕೆ ಶಂಕೆಯ ಹಿನ್ನೆಲೆ ಖ್ಯಾತ ಸಂಸ್ಥೆಯ ಮಸಾಲೆ ಮಾರಾಟಕ್ಕೆ ನಿಷೇಧ!

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI)ವು 'ಎವರೆಸ್ಟ್' ಮತ್ತು 'ಲಾಲ್ಜಿ ಗೋಧು' ಕಂಪನಿಗಳ ಇಂಗು ಉತ್ಪನ್ನಗಳನ್ನು ಕಳಪೆ ಗುಣಮಟ್ಟ ಮತ್ತು ತಪ್ಪು ಬ್ರಾಂಡಿಂಗ್ ಕಾರಣದಿಂದ ನಿಷೇಧಿಸಿದೆ. ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಈ ಇಂಗಿನಲ್ಲಿ ನಿಗದಿತ ಸಾರ ಇಲ್ಲದಿರುವುದು ಮತ್ತು ಪಿಷ್ಟವನ್ನು ಕಲಬೆರಕೆ ಮಾಡಿರುವುದು ದೃಢಪಟ್ಟಿದೆ.

Read Full Story

09:05 PM (IST) Aug 29

ಅಗ್ನಿಪರೀಕ್ಷೆ ಸ್ಪರ್ಧಿಗೆ ಅಣ್ಣನಾದ 'ಬಿಗ್‌ ಬಾಸ್‌ ಆನೆ'.. ಪ್ರಾಮಿಸ್ ಉಳಿಸಿಕೊಂಡ ವಿನಯ್ ಗೌಡ!

ಕೆಲವು ದಿನಗಳ ಹಿಂದಷ್ಟೇ ವಿನಯ್ ಗೌಡ ಅವರು ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಮೇಲೆ ಸ್ವಲ್ಪ ಗರಂ ಆಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಆದರೆ ಈಗ ಈ ಫೋನ್ ಗಿಫ್ಟ್ ಕೊಟ್ಟ ವಿಡಿಯೋ ವೈರಲ್ ಆಗ್ತಿದ್ದಂತೆ, ಟ್ರೋಲರ್‌ಗಳೆಲ್ಲಾ ಸೈಲೆಂಟ್ ಆಗಿದ್ದಾರೆ. ಏನಿದು ಹೊಸ ಕತೆ? ನೋಡಿ..

Read Full Story

08:55 PM (IST) Aug 29

LPG - ಗ್ಯಾಸ್ ಸಿಲಿಂಡರ್ ಇರುವವರು ತಕ್ಷಣ ಗಮನಿಸಿ - ಡೆಡ್‌ಲೈನ್‌ಗೆ ಉಳಿದಿದೆ 3 ದಿನ; ಕೂಡಲೇ ಈ ಪ್ರಕ್ರಿಯೆ ಮುಗಿಸಿ!

ಇಂಡೇನ್, ಭಾರತ್ ಮತ್ತು ಹೆಚ್‌ಪಿ ಗ್ಯಾಸ್ ಗ್ರಾಹಕರು ಆಗಸ್ಟ್ 31, 2026 ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ನಿಯಮ ಪಾಲಿಸದಿದ್ದರೆ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳ್ಳುವ ಮತ್ತು ಸಿಲಿಂಡರ್ ಬುಕಿಂಗ್‌ನಲ್ಲಿ ಅಡಚಣೆಯಾಗುವ ಸಾಧ್ಯತೆಯಿದೆ. ನಕಲಿ ಸಂಪರ್ಕಗಳನ್ನು ತಡೆಯಲು ಜಾರಿಗೆ ತಂದಿರುವ ಈ ಪ್ರಕ್ರಿಯೆಯನ್ನು ಮೊಬೈಲ್ ಆಪ್ ಮೂಲಕವೇ ಸುಲಭವಾಗಿ ಪೂರ್ಣಗೊಳಿಸಬಹುದು.
Read Full Story

08:31 PM (IST) Aug 29

Toxic ಮಧ್ಯೆ ಯಶ್ ಇನ್‌ಸ್ಟಾಗ್ರಾಮ್ ಬಯೋ ವೈರಲ್ - ‘ಒರಿಜಿನಲ್’ ಸಾಲುಗಳೇ ಈಗ ಟ್ರೋಲಿಗರಿಗೆ ಕೌಂಟರ್!

‘ಟಾಕ್ಸಿಕ್’ ಸಿನಿಮಾ ಕುರಿತ ಟ್ರೋಲ್‌ಗಳ ನಡುವೆ ಯಶ್ ಇನ್‌ಸ್ಟಾಗ್ರಾಮ್ ಬಯೋದಲ್ಲಿನ ‘Original’ ಸಾಲು ವೈರಲ್ ಆಗಿದೆ. ಫ್ಯಾನ್ಸ್ ಈ ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಶೇರ್ ಮಾಡುತ್ತಿದ್ದಾರೆ.

Read Full Story

08:19 PM (IST) Aug 29

ಚರ್ಮದ ಆರೋಗ್ಯಕ್ಕೆ ಗಂಜಿ ನೀರು ಕುಡಿಯಿರಿ; ಇದರಲ್ಲಿರೋ ಅದ್ಭುತ ಸತ್ವಗಳು ನಿಮ್ಗೆ ಗೊತ್ತಿಲ್ಲ!

ಅನ್ನ ಬಸಿದ ಗಂಜಿಯನ್ನು ಸುಮ್ಮನೆ ಚೆಲ್ಲುತ್ತೇವೆ. ಆದರೆ ಗಂಜಿ ನೀರಿನಲ್ಲಿ ಹಲವಾರು ಪ್ರಯೋಜನಗಳಿವೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ತುಂಬಾ ಒಳ್ಳೆಯದು. ಇದರ ಪ್ರಯೋಜನಗಳೇನು ಎಂದು ತಿಳಿಯೋಣ.

Read Full Story

07:49 PM (IST) Aug 29

ವೀಕೆಂಡ್ ಪ್ಲ್ಯಾನ್ ಮಾಡ್ತಿದ್ದೀರಾ? ಬೆಂಗಳೂರಿನ ಈ 5 ಪರ್ಫೆಕ್ಟ್ ಜಾಗ ಮಿಸ್ ಮಾಡ್ಬೇಡಿ!

ಈ ವೀಕೆಂಡ್ ಬೆಂಗಳೂರಲ್ಲಿ ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೀರಾ? ಕಬ್ಬನ್ ಪಾರ್ಕ್ ಸೈಕ್ಲಿಂಗ್‌ನಿಂದ ಹಿಡಿದು ಚರ್ಚ್ ಸ್ಟ್ರೀಟ್ ಸುತ್ತಾಟದವರೆಗೆ, ಇಲ್ಲಿದೆ 5 ಮಸ್ತ್ ಐಡಿಯಾಗಳು. ಲಾಲ್‌ಬಾಗ್, ಮೈಕ್ರೋಬ್ರೂವರಿ, ಕೆ.ಆರ್. ಮಾರ್ಕೆಟ್ ಕೂಡ ಲಿಸ್ಟ್‌ನಲ್ಲಿದೆ.

Read Full Story

07:34 PM (IST) Aug 29

ನೈಋತ್ಯಕ್ಕೆ ಮಂಗಳೂರು ವಿವಾದದ ನಡುವೆಯೇ ಕೊಂಕಣ ರೈಲ್ವೆ ವಿಲೀನ ಪ್ರಸ್ತಾಪ, ಕರಾವಳಿಯ ರೈಲ್ವೆ ಭವಿಷ್ಯ ಸವಾಲು!

ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಲಾಗಿದೆ, ಇದು ಪ್ರತ್ಯೇಕ ಮಂಗಳೂರು ವಿಭಾಗ ರಚನೆಯ ಮೊದಲ ಹೆಜ್ಜೆಯಾಗಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯು ಷೇರುದಾರ ರಾಜ್ಯಗಳೊಂದಿಗಿನ ಮಾತುಕತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸವಾಲುಗಳನ್ನು ಎದುರಿಸುತ್ತಿದೆ.
Read Full Story

07:28 PM (IST) Aug 29

ವಿಶ್ವದಾದ್ಯಂತ ರಿಲೀಸ್, ಭಾರತದಲ್ಲಿ ಪ್ರಕಟಣೆಗೆ ತಡೆ; ಸೋನಿಯಾ ಗಾಂಧಿ ಪುಸ್ತಕದ ಸುತ್ತ ವಿವಾದವೇಕೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಸೋನಿಯಾ ಗಾಂಧಿಯವರ ಮುಂಬರುವ ಆತ್ಮಕಥೆ "ಬಿಲಾಂಗಿಂಗ್; ಎ ಜರ್ನಿ ಆಫ್ ಲವ್" ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಕಾರಣವಾಗಿದೆ. ಪುಸ್ತಕದಲ್ಲಿನ ಚೀನಾ ಗಡಿ, ಪ್ರಧಾನಿ ಮೋದಿ, ಮತ್ತು ಆರ್‌ಎಸ್‌ಎಸ್ ಕುರಿತ ಸೂಕ್ಷ್ಮ ಭಾಗಗಳನ್ನು ಬದಲಾಯಿಸಲು ಸೋನಿಯಾ ನಿರಾಕರಿಸಿದ ಕಾರಣ, ಪೆಂಗ್ವಿನ್ ಇಂಡಿಯಾ ಪ್ರಕಾಶನ ಸಂಸ್ಥೆಯು ಭಾರತದಲ್ಲಿ ಇದನ್ನು ಪ್ರಕಟಿಸಲು ನಿರಾಕರಿಸಿದೆ.

Read Full Story

07:24 PM (IST) Aug 29

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಸಿಕ್ಕಿದೆ ಈ ಮಾಸ್ ಟೈಟಲ್ - ‘ಒರಿಜಿನಲ್‌ ಮಾನ್‌ಸ್ಟರ್‌’ ಹಿಂದೆ ಏನಿದೆ?

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅವರ ಮೊದಲ ಬಾಲಿವುಡ್ ಸಿನಿಮಾಗೆ ‘ಒರಿಜಿನಲ್‌ ಮಾನ್‌ಸ್ಟರ್‌’ ಎಂದು ಟೈಟಲ್ ಇಡಲಾಗಿದೆ. ಆರ್. ಚಂದ್ರು ನಿರ್ದೇಶನದ ಈ ಚಿತ್ರಕ್ಕೆ ‘ಓಎಂ’ ಎಂಬ ಶಾರ್ಟ್ ಟೈಟಲ್ ಬಳಸಲಾಗುತ್ತಿದೆ.

Read Full Story

06:31 PM (IST) Aug 29

Vinayakan Heartbreaking Story - 'ಮನೆಗೆ ಹೋದರೆ ಮಾತನಾಡಿಸಲು ಯಾರೂ ಇಲ್ಲ'.. ಗುಹೆಯಲ್ಲಿ ಈಗ 'ಸಿಂಹ' ಏಕಾಂಗಿ!

ಜೈಲರ್ ಚಿತ್ರದ ಯಶಸ್ಸಿನ ನಂತರ ಈ ನಟನಿಗೆ ಬೇಡಿಕೆ ಹೆಚ್ಚಿದೆ, ಕೈತುಂಬಾ ಸಿನಿಮಾಗಳಿವೆ. ಆದರೆ, "ಮನೆಗೆ ಹೋದರೆ ಮಾತನಾಡಿಸಲು ಯಾರೂ ಇಲ್ಲ" ಎನ್ನುವ ಅವರ ಮಾತುಗಳು ಯಶಸ್ಸಿನ ಹಿಂದಿರುವ ಕರಾಳ ಸತ್ಯವನ್ನು ಬಿಚ್ಚಿಟ್ಟಿವೆ. ಆದರೆ, ಗಂಡ-ಹೆಂಡ್ತಿ ಬೇರಾಗಿದ್ದು ಏಕೆ ಗೊತ್ತೇ? ಈ ಸ್ಟೋರಿ ನೋಡಿ..

Read Full Story

06:25 PM (IST) Aug 29

ಪೊಲೀಸರಿಗೆ ಹೆದರಿ ಓಡುವಾಗ ಘೋರ ದುರಂತ.. ಅನ್ಯಾಯವಾಗಿ ಪ್ರಾಣಬಿಟ್ಟ ರಮೇಶ್‌

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹೆದರಿ ಓಡುತ್ತಿದ್ದ ರಮೇಶ್ ಎಂಬಾತ ಜಾರಿ ಬಿದ್ದು ತಲೆ ಬಂಡೆಗೆ ಒಡೆದು ಮೃತಪಟ್ಟಿದ್ದಾನೆ. ರಾತ್ರಿಯಿಂದ ನಾಪತ್ತೆಯಾಗಿದ್ದ ರಮೇಶ್ ಅವರ ಶವ ಇಂದು ಅರಣ್ಯ ಹಾಗೂ ಕಾಫಿ ತೋಟದ ಪ್ರದೇಶದಲ್ಲಿ ತೀವ್ರ ರಕ್ತಸ್ರಾವವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

05:52 PM (IST) Aug 29

Hubli- Dharwad - ಎನ್. ಶಶಿಕುಮಾರ್ ದಿಢೀರ್ ಎಕ್ಸಿಟ್, ಸ್ಥಳ ರಹಿತ ವರ್ಗಾವಣೆ; ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಭೂಷಣ್ ಗುಲಾಬರಾವ್ ಕಮಿಷನರ್

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಸ್ಥಳ ನಿಯೋಜಿಸದೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಬೋರ್ಸೆ ಭೂಷಣ್ ಗುಲಾಬರಾವ್ ಅವರನ್ನು ನೂತನ ಕಮಿಷನರ್ ಆಗಿ ನೇಮಿಸಲಾಗಿದೆ. ಸೈಬರ್ ಕ್ರೈಮ್, ಡ್ರಗ್ಸ್ ಜಾಲದಂತಹ ಸವಾಲುಗಳನ್ನು ಎದುರಿಸಲಿರುವ ಗುಲಾಬರಾವ್ ಅವರ ಮೇಲೆ ಅವಳಿ ನಗರದ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.
Read Full Story

04:50 PM (IST) Aug 29

Nepal Flood - ಪ್ರವಾಹದಿಂದ ಅನಾಥವಾದ ಮಗುವಿಗೆ ತಾಯಿಯ ಮಡಿಲಾದ ಸೇನಾ ಸಿಬ್ಬಂದಿ; ಪರಿಸ್ಥಿತಿ ಹುಟ್ಟುಹಾಕಿದ ಮಾತೃ ಪ್ರೀತಿ!

ನೇಪಾಳದ ಭೀಕರ ಪ್ರವಾಹದ ನಡುವೆ, ತನ್ನ ಕುಟುಂಬದಿಂದ ಬೇರ್ಪಟ್ಟ ಪುಟ್ಟ ಬಾಲಕನೊಬ್ಬ ರಕ್ಷಣಾ ಸಿಬ್ಬಂದಿಗೆ ಸಿಕ್ಕಿದ್ದಾನೆ. ಭಯದಿಂದ ಅಳುತ್ತಿದ್ದ ಆ ಕಂದನಿಗೆ ನೇಪಾಳ ಸೇನೆಯ ಮಹಿಳಾ ಸಿಬ್ಬಂದಿಯೊಬ್ಬರು ತಾಯಿಯ ಮಮತೆಯಿಂದ ಅಪ್ಪಿಕೊಂಡು ಆರೈಕೆ ಮಾಡಿದ ಹೃದಯಸ್ಪರ್ಶಿ ಘಟನೆ ಇದು. ಈ ದೃಶ್ಯವು ವಿಪತ್ತಿನ ಸಮಯದಲ್ಲಿಯೂ ಮಾನವೀಯತೆ ಜೀವಂತವಾಗಿದೆ ಎಂಬುದನ್ನು ಸಾರುತ್ತದೆ.
Read Full Story

04:40 PM (IST) Aug 29

ಸೌತ್ ಸಿನಿಮಾಗಳಿಗೆ ದೊಡ್ಡ ಕಂಡೀಷನ್ - 'ರಾಕಾ' ಬಳಿಕ ಜಾನ್ವಿ ಕಪೂರ್ ಮುಂದಿನ ಹೆಜ್ಜೆ ಏನು?

ಸದ್ಯ ಅಲ್ಲು ಅರ್ಜುನ್ ಜೊತೆಗಿನ 'ರಾಕಾ' ಸಿನಿಮಾ ಬಿಟ್ಟರೆ ನಟಿ ಜಾನ್ವಿ ಕಪೂರ್ ಬೇರೆ ಯಾವುದೇ ದಕ್ಷಿಣ ಭಾರತದ ಚಿತ್ರಕ್ಕೆ ಸಹಿ ಹಾಕಿಲ್ಲ ಎನ್ನಲಾಗಿದೆ. ಅವರು ಬಲವಾದ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Read Full Story

04:02 PM (IST) Aug 29

ಜಿಮ್‌ನಲ್ಲಿ ಮ್ಯೂಜಿಕ್‌ ಹಾಕೋದು ಯಾಕೆ? ಇಲ್ಲಿದೆ ಆಸಕ್ತಿದಾಯಕ 5 ಕಾರಣಗಳು

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಸಂಗೀತ ಕೇಳುವುದು ದೈಹಿಕ ಆಯಾಸದ ಮೇಲಿರುವ ಗಮನವನ್ನು ಕಡಿಮೆ ಮಾಡುತ್ತದೆ ಮತ್ತು ವರ್ಕೌಟ್ ಮಾಡುವ ಉತ್ಸಾಹವನ್ನು ಹೆಚ್ಚಿಸುತ್ತದೆ. ವ್ಯಾಯಾಮದ ಅವಧಿಯನ್ನು ಶೇಕಡಾ 20 ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ಸುರಕ್ಷತೆಯ ದೃಷ್ಟಿಯಿಂದ ಹೆಡ್‌ಫೋನ್ ಸೌಂಡ್ ಮಿತವಾಗಿಡಬೇಕು.

Read Full Story

03:40 PM (IST) Aug 29

MS Dhoni - ಮೈದಾನದಿಂದ ಹೊರಗಿದ್ದರೂ ಕೋಟಿ ಕೋಟಿ ಗಳಿಕೆ; ಕ್ಯಾಪ್ಟನ್‌ ಕೂಲ್ ಧೋನಿ ತಿಂಗಳ ಆದಾಯ ಎಷ್ಟು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್!

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರವೂ ಎಂಎಸ್ ಧೋನಿ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ. ಬಿಸಿಸಿಐನಿಂದ ಮಾಸಿಕ ಪಿಂಚಣಿ, ಐಪಿಎಲ್ ಸಂಬಳ, ಮತ್ತು ಬ್ರಾಂಡ್ ಅನುಮೋದನೆಗಳಿಂದ ಅವರ ಆದಾಯ ಹರಿದುಬರುತ್ತಿದೆ. ನಿವೃತ್ತಿಯ ನಂತರವೂ ಅವರು ತಿಂಗಳಿಗೆ ಎಷ್ಟು ಗಳಿಸುತ್ತಿದ್ದಾರೆ ಗೊತ್ತಾ? ಈ ಕುರಿತು ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ.

Read Full Story

03:26 PM (IST) Aug 29

ನಟ ವಿ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ 'ಕ್ರೇಜಿ ಸ್ಟಾರ್' ಎಂಟ್ರಿ ಪಕ್ಕಾನಾ?

"ನಮ್ಮ ರವಿಮಾಮ ಇನ್ನು ಮುಂದೆ ಬರೀ ಸಿನಿಮಾ ಡೈಲಾಗ್ ಹೊಡೆಯಲ್ಲ, ಬದಲಾಗಿ ವಿಧಾನ ಪರಿಷತ್ತಿನಲ್ಲಿ ಜನರ ಧ್ವನಿಯಾಗಿ ಗರ್ಜಿಸುತ್ತಾರೆ" ಎಂದು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಚಿತ್ರರಂಗದ ಸಮಸ್ಯೆಗಳ ಜೊತೆಗೆ ಸಾಂಸ್ಕೃತಿಕ ಲೋಕದ ಏಳಿಗೆಗೆ ರವಿಚಂದ್ರನ್ ಅವರ ಅನುಭವ ಆಸ್ತಿಯಾಗಲಿದೆಯಾ?

Read Full Story

02:32 PM (IST) Aug 29

ಬರವನ್ನೇ ಹಾಸಿ ಹೊದ್ದ ಜಗಳೂರೇಕೆ ಕಾಣ್ತಿಲ್ಲ? ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿಲ್ಲ ಸ್ಥಾನ!

ತೀವ್ರ ಬರಗಾಲದಿಂದ ತತ್ತರಿಸಿರುವ ಮತ್ತು ಬೆಳೆ ನಾಶದಿಂದ ಸಂಕಷ್ಟದಲ್ಲಿರುವ ಜಗಳೂರು ತಾಲೂಕನ್ನು ಸರ್ಕಾರವು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದೆ. ಸರ್ಕಾರದ ಈ ನಿರ್ಧಾರವು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
Read Full Story

02:19 PM (IST) Aug 29

ಗೃಹಲಕ್ಷ್ಮಿಗೆ ಮೂರು ವರ್ಷದ ಸಂಭ್ರಮ - ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ವಿಧಾನಸೌಧ, ಸುವರ್ಣಸೌಧ, ಮೈಸೂರು ಅರಮನೆ!

ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಈ ಸಂಭ್ರಮದ ಸವಿನೆನಪಿಗಾಗಿ ಬೆಂಗಳೂರಿನ ವಿಧಾನಸೌಧ, ಮೈಸೂರು ಅರಮನೆ ಸೇರಿದಂತೆ ರಾಜ್ಯದ ಪ್ರಮುಖ ಕಟ್ಟಡಗಳು ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ.

Read Full Story

02:01 PM (IST) Aug 29

ಮತ್ತೆ ಮಳೆ ಬರುತ್ತಾ ಇದೆ.. ಎರಡು ದೈತ್ಯ ಮಳೆ ಮಾರುತದ ಫೋಟೋ ರಿಲೀಸ್‌ ಮಾಡಿ ಎಚ್ಚರಿಕೆ ಕೊಟ್ಟ ISRO

ಇಸ್ರೋದ ಇನ್ಸಾಟ್-3ಡಿಆರ್ ಉಪಗ್ರಹವು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಏಕಕಾಲದಲ್ಲಿ ಸಕ್ರಿಯವಾಗಿರುವ ಎರಡು ದೈತ್ಯ ಮಳೆ ಮಾರುತಗಳ ಚಿತ್ರಗಳನ್ನು ಸೆರೆಹಿಡಿದಿದೆ. ಈ ಹವಾಮಾನ ವ್ಯವಸ್ಥೆಗಳು ದೇಶದಾದ್ಯಂತ ಭಾರಿ ಮಳೆಯನ್ನು ಸುರಿಸುತ್ತಿದ್ದು, ಮುಂಬರುವ ಕೆಲವು ದಿನಗಳವರೆಗೆ ಮುಂಗಾರು ಸಕ್ರಿಯವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read Full Story

01:27 PM (IST) Aug 29

ಏನೂ ತಪ್ಪು ಮಾಡದ ಬಿ ನಾಗೇಂದ್ರನನ್ನ ಬಿಜೆಪಿ ಬಲಿ ಪಡೆದಿದೆ - ಸಿಎಂ | ಹೆಚ್‌ಡಿಕೆ ವಿರುದ್ಧವೂ ಡಿಕೆಶಿ ಕಿಡಿ

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಿರುವ ಬಿ. ನಾಗೇಂದ್ರ ಅವರು ಏನೂ ತಪ್ಪು ಮಾಡಿಲ್ಲ, ಅವರನ್ನು ಬಿಜೆಪಿ ಬಲಿ ಕೊಟ್ಟಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಭಿವೃದ್ಧಿ ಬಿಟ್ಟು ರಾಜಕಾರಣ ಮಾಡುತ್ತಿರುವ ಬಿಜೆಪಿ ಹಾಗೂ ಬಾಯಿ ಚಪಲಕ್ಕೆ ಮಾತನಾಡುವ ಹೆಚ್‌ಡಿಕೆಗೆ ತಿರುಗೇಟು.

Read Full Story

01:20 PM (IST) Aug 29

'ಶಾಸಕನಿಗೆ ಕೆಲಸ ಮಾಡ್ತಿದ್ದೀಯಾ ಇಲ್ಲ ಜನ್ರಿಗೆ ಕೆಲಸ ಮಾಡ್ತಿದ್ದೀಯಾ' ಮದ್ದೂರು ನಗರಸಭೆ ಕಮೀಷನರ್‌ ರಾಧಿಕಾಗೆ HDK ಫುಲ್‌ ಕ್ಲಾಸ್‌!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ, ಅಭಿವೃದ್ಧಿ ಕಾಮಗಾರಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

12:52 PM (IST) Aug 29

ದುಡ್ಡಿದ್ರೆ ದಸರಾ, ಇಲ್ದಿದ್ರೆ ಹರೋಹರ; ಅರಮನೆ ಆವರಣದ ಗಜಪಡೆ ನೋಡೋಕು ಅರಣ್ಯ ಇಲಾಖೆಯಿಂದ ಹಣ ವಸೂಲಿ!

ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಯನ್ನು ಅರಮನೆ ಆವರಣದಲ್ಲಿ ವೀಕ್ಷಿಸಲು ಅರಣ್ಯ ಇಲಾಖೆಯು ಹೊಸದಾಗಿ ಪ್ರವೇಶ ಶುಲ್ಕವನ್ನು ವಿಧಿಸಿದೆ. ವಯಸ್ಕರಿಗೆ ₹100 ಹಾಗೂ ಮಕ್ಕಳಿಗೆ ₹50 ದರ ನಿಗದಿಪಡಿಸಿದ್ದು, ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ ಮತ್ತು ಶುಲ್ಕ ರದ್ದತಿಗೆ ಆಗ್ರಹಿಸಲಾಗಿದೆ.
Read Full Story

12:47 PM (IST) Aug 29

'ಏಯ್ ನಾಗೇಂದ್ರ, ನಿನ್ನದು ಕರ್ಮದ ಕಣ್ಣೀರು ಕಣೋ..' ವಾಲ್ಮೀಕಿ ಹಗರಣ, ಚಾರ್ಜ್‌ಶೀಟ್ ಇಟ್ಟುಕೊಂಡು ರೆಡ್ಡಿ ವಾಗ್ದಾಳಿ!

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗೇಂದ್ರ ರಾಜೀನಾಮೆ ವೇಳೆ ಹಾಕಿದ್ದು 'ಕರ್ಮದ ಕಣ್ಣೀರು' ಎಂದಿರುವ ಅವರು, ಹಗರಣದ ಹಣದಲ್ಲಿಯೇ ವೈಯಕ್ತಿಕ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.

Read Full Story

12:41 PM (IST) Aug 29

Yash Movie - ಟಾಕ್ಸಿಕ್ ಗಲ್ಲಾಪೆಟ್ಟಿಗೆಗೆ ಮೂರು ದಿನದಲ್ಲಿ ಸೇರಿದ್ದೆಷ್ಟು ಕೋಟಿ ?

ಗೀತು ಮೋಹನದಾಸ್ ನಿರ್ದೇಶನದ, ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮೊದಲ ದಿನವೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ, ಚಿತ್ರವು ಬಿಡುಗಡೆಯಾದ ಮೂರೇ ದಿನಗಳಲ್ಲಿ ಉತ್ತಮ ಕಲೆಕ್ಷನ್ ದಾಟಿ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ತನ್ನ ಯಶಸ್ಸನ್ನು ಸಾಬೀತುಪಡಿಸಿದೆ.

Read Full Story

12:28 PM (IST) Aug 29

ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಡೆಗಣನೆ - ಮಾಜಿ ಸಂಸದ ಆಯನೂರು ಮಂಜುನಾಥ್ ಆರೋಪ

ಶಿವಮೊಗ್ಗದಲ್ಲಿ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಗಳನ್ನು ಕಡೆಗಣಿಸುತ್ತಿದೆ ಎಂದು ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು ಆರೋಪಿಸಿದ್ದಾರೆ. ಸ್ಥಳೀಯ ನಿಗಮ ಮಂಡಳಿಗಳಲ್ಲಿ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದು, ಅವರ ಬೇಡಿಕೆಯನ್ನು ಬೆಂಬಲಿಸಿರುವ ಮಾಜಿ ಸಂಸದ ಆಯನೂರು ಮಂಜುನಾಥ್, ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.
Read Full Story

12:00 PM (IST) Aug 29

'ಟಾಕ್ಸಿಕ್' ನೆಗೆಟಿವ್ ರೀವ್ಯೂ-ಟಾಕ್ ಬಗ್ಗೆ ಶಿವರಾಜ್‌ಕುಮಾರ್ ಖಡಕ್ ಮಾತು.. ಯಶ್ ಬಗ್ಗೆ 'ಹ್ಯಾಟ್ರಿಕ್ ಹೀರೋ' ಹೇಳಿದ್ದಿಷ್ಟು!

ಕಬ್ಜ ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಿರ್ದೇಶಕ ಆರ್. ಚಂದ್ರು ಈಗ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣನ ಜೊತೆಗೆ ತೆಲುಗಿನ ಖ್ಯಾತ ನಟ ಸುನೀಲ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ, ಟಾಕ್ಸಿಕ್ ಬಗ್ಗೆ ಶಿವಣ್ಣ ಹೇಳಿದ್ದೇನು? ನೋಡಿ..

Read Full Story

11:43 AM (IST) Aug 29

ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್‌ - ಬೇಡಿಕೆ ಮೇರೆಗೆ ಎರಡು ಹೊಸ ರೈಲುಗಳ ಘೋಷಣೆ...! ಇಲ್ಲಿದೆ ನೋಡಿ ಸಂಪೂರ್ಣ ರೈಲ್ವೆ ವೇಳಾಪಟ್ಟಿ

ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಕಟಣೆಯಂತೆ, ಶಿವಮೊಗ್ಗ ಮತ್ತು ಆಂಧ್ರಪ್ರದೇಶದ ಮಚಿಲಿಪಟ್ಟಣಂ ಹಾಗೂ ಗುಂತಕಲ್ ನಡುವೆ ವಿಶೇಷ ರೈಲು ಸೇವೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ. ಈ 'ಬೇಡಿಕೆಯ ಮೇರೆಗೆ ರೈಲು' (TOD) ಸೇವೆಯು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಆಂಧ್ರದೊಂದಿಗೆ ಸಂಪರ್ಕವನ್ನು ಸುಲಭಗೊಳಿಸಲಿದೆ.
Read Full Story

11:35 AM (IST) Aug 29

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿವಾದಿತ ಪೆಪ್ಟೈಡ್ ಪಾರ್ಟಿ ರದ್ದು, ಆಯೋಜಕರಿಗೆ ಎಫ್‌ಡಿಎ ಶೋಕಾಸ್ ನೋಟಿಸ್

ಬೆಂಗಳೂರಿನ ಕೋರಮಂಗಲದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ವಿವಾದಾತ್ಮಕ 'ಪೆಪ್ಟೈಡ್ ಪಾರ್ಟಿ'ಯನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ (FDA) ತನಿಖೆಯ ನಂತರ ರದ್ದುಗೊಳಿಸಲಾಗಿದೆ. ಎಫ್‌ಡಿಎ ನೋಟಿಸ್‌ಗೆ ಉತ್ತರವಾಗಿ, ಆಯೋಜಕರಾದ ಅಪ್‌ಸರ್ಜ್ ಲ್ಯಾಬ್ಸ್ ಕಾರ್ಯಕ್ರಮವನ್ನು ರದ್ದುಪಡಿಸಿ, ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದೆ.
Read Full Story

10:37 AM (IST) Aug 29

25 ವರ್ಷಗಳ ಬಳಿಕ ಬೈರಗಾನಹಳ್ಳಿ ಗ್ರಾಮದಲ್ಲಿ ಸಪ್ಪಲಮ್ಮದೇವಿಯ ಮೆರವಣಿಗೆ; ಹಬ್ಬದ ಸಂಭ್ರಮ

ಶಿಡ್ಲಘಟ್ಟ ತಾಲೂಕಿನ ಬೈರಗಾನಹಳ್ಳಿ ಗ್ರಾಮದಲ್ಲಿ ಸುಮಾರು 25 ವರ್ಷಗಳ ನಂತರ ಸಪ್ಪಲಮ್ಮದೇವಿ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು. ಗ್ರಾಮದ ಯುವಕರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು, ಊರಿನ ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲರನ್ನೂ ಒಗ್ಗೂಡಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
Read Full Story

10:22 AM (IST) Aug 29

ಆಲಮಟ್ಟಿ-ಯಾದಗಿರಿ ನಡುವಿನ 162 km ರೈಲು ಮಾರ್ಗ - ಗರಿಗೆದರಿದ ನಿರೀಕ್ಷೆ; ಟೆಂಡರ್ ಆಹ್ವಾನ

ಆಲಮಟ್ಟಿಯಿಂದ ಯಾದಗಿರಿವರೆಗಿನ 162 ಕಿ.ಮೀ. ರೈಲ್ವೆ ಮಾರ್ಗದ ಸರ್ವೇ ಕಾರ್ಯಕ್ಕೆ ಟೆಂಡರ್ ಕರೆದಿರುವುದು ದಶಕಗಳ ಬೇಡಿಕೆಗೆ ಮರುಜೀವ ನೀಡಿದೆ. ಈ ಯೋಜನೆಯು ಕೇವಲ ಪ್ರಯಾಣವನ್ನು ಸುಲಭಗೊಳಿಸದೆ, ವಿಜಯಪುರ-ಯಾದಗಿರಿ ಭಾಗದ ಆರ್ಥಿಕ, ಸಾಮಾಜಿಕ, ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.
Read Full Story

10:01 AM (IST) Aug 29

ಪರ್ತಗಾಳಿ ಶ್ರೀರಾಮನ ಕಂಚಿನ ಪ್ರತಿಮೆಗೆ ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

ಗೋವಾದ ಪರ್ತಗಾಳಿಯ ಶ್ರೀ ಸಂಸ್ಥಾನ ಗೋಕರ್ಣ ಮಠದಲ್ಲಿ ಸ್ಥಾಪಿಸಲಾದ ಶ್ರೀರಾಮನ ಕಂಚಿನ ಪ್ರತಿಮೆಯು ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

Read Full Story

09:54 AM (IST) Aug 29

ಅನುಮೋದನೆ ಸಿಕ್ಕರೂ ಗದಗ-ಯಲವಿಗಿ ರೈಲು ಮಾರ್ಗದ ಯೋಜನೆ ವಿಳಂಬಕ್ಕೆ ಕಾರಣ ಏನು? ಮನವಿ ಸಲ್ಲಿಕೆ

ಗದಗ-ಯಲವಿಗಿ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರೈಲ್ವೆ ಮಾರ್ಗ ಹೋರಾಟ ಸಮಿತಿಯು ನೂತನ ಸಭಾಪತಿ ಜಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದೆ.
Read Full Story

08:53 AM (IST) Aug 29

ಬಿ ನಾಗೇಂದ್ರ ರಾಜೀನಾಮೆ ಆಯ್ತು, ಕೆಪಿಎಸ್‌ಸಿ ಎಇಇ ನೇಮಕಾತಿ ಹಗರಣದಲ್ಲಿ ಈಗ ಪ್ರಿಯಾಂಕ್ ಖರ್ಗೆ ಸರದಿ! ಹೆಚ್‌ಡಿಕೆ ಗಂಭೀರ ಆರೋಪ!

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ನಡೆದ ಎಇಇ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ. ರಾಜೀನಾಮೆಗೆ ಆಗ್ರಹ

Read Full Story

08:52 AM (IST) Aug 29

ಮೈಸೂರು ರೈಲ್ವೆ ವಲಯಕ್ಕೆ ಸೇರ್ಪಡೆ ಬೆನ್ನಲ್ಲೇ, ಮಂಗಳೂರಿನಿಂದ ಬೆಂಗಳೂರಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಸ್ಪೆಷಲ್‌ ಟ್ರೇನ್‌!

ಓಣಂ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ದಕ್ಷಿಣ ರೈಲ್ವೆಯು ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರಿನ SMVT ಟರ್ಮಿನಲ್‌ಗೆ ಏಕಮುಖ ವಿಶೇಷ ಎಕ್ಸ್‌ಪ್ರೆಸ್ ರೈಲು (06072) ಓಡಿಸಲಿದೆ. ಶನಿವಾರ ಮಂಗಳೂರಿನಿಂದ ಹೊರಟು, ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ, ಭಾನುವಾರ ಮುಂಜಾನೆ ಬೆಂಗಳೂರು ತಲುಪಲಿದೆ.

Read Full Story

08:51 AM (IST) Aug 29

ಮಕ್ಕಾದಲ್ಲಿ ಕಣ್ಣೀರಿಟ್ಟ ರಾಖಿ ಸಾವಂತ್.. ನೇಪಾಳಕ್ಕಾಗಿ ಪ್ರಾರ್ಥನೆ, ಆದ್ರೆ ನೆಟ್ಟಿಗರು ಏನಂದ್ರು ಗೊತ್ತಾ?

ಬಾಲಿವುಡ್ ನಟಿ ರಾಖಿ ಸಾವಂತ್ ಮಕ್ಕಾದಲ್ಲಿ ಉಮ್ರಾ ನೆರವೇರಿಸುವ ವೇಳೆ ನೇಪಾಳದ ಭೀಕರ ಪ್ರವಾಹ ಪೀಡಿತರ ರಕ್ಷಣೆಗಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದ್ದಾರೆ. ಪವಿತ್ರ ಕಾಬಾ ಮುಂದೆ ಅವರು ಭಾವುಕರಾಗಿ ಪ್ರಾರ್ಥಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Read Full Story

More Trending News