Published : Feb 05, 2026, 07:39 AM ISTUpdated : Feb 05, 2026, 11:16 PM IST

State News Live: WPL 2026 - ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!

ಸಾರಾಂಶ

ಬೆಂಗಳೂರು (ಫೆ.5): ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಚೆನ್ನೈ-ಬೆಂಗಳೂರು, ಹೈದರಾಬಾದ್- ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಜತೆಗೆ ಪುಣೆ- ಬೆಂಗಳೂರು ರೈಲು ಕಾರಿಡಾರ್ ಕೂಡ ಅನುಷ್ಠಾನವಾಗುವ ಸೂಚನೆ ಸಿಕ್ಕಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೈಸ್ಪೀಡ್ ರೈಲು ಕಾರಿಡಾರ್ ಮಾರ್ಗಕ್ಕೆ ಪುಣೆ- ಬೆಂಗಳೂರು ಸೇರಿಸುವಂತೆ ಮನವಿ ಮಾಡಿದರು. ಇದಕ್ಕೆ ವೈಷ್ಣವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚೆನ್ನೈ, ಹೈದ್ರಾಬಾದ್‌ ಬದಲಿಗೆ ಪುಣೆ-ಬೆಂಗಳೂರು ಮಾರ್ಗದಲ್ಲಿ ಹೈಸ್ಪೀಡ್ ರೈಲು ಓಡಿಸಿದರೆ ಬೆಳಗಾವಿ, ಹುಬ್ಬ ಳ್ಳಿ, ಹಾವೇರಿ, ದಾವಣಗೆರೆ, ತುಮಕೂರಿಗೆ ಅನುಕೂಲವಾಗಲಿದೆ ಎಂದು ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯ ಸರ್ಕಾರದ ಸಚಿವರು ಆಗ್ರಹಿಸಿದ್ದರು.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:16 PM (IST) Feb 05

WPL 2026 - ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!

ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿದೆ. 204 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ರೋಚಕ ಜಯ ಸಾಧಿಸಿದೆ.

Read Full Story

09:56 PM (IST) Feb 05

ಭಾರತೀಯ ವಾಯುಪಡೆ ಅಚ್ಚರಿ ಮಾಹಿತಿ ನೀಡಿದ ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ

ಈಸ್ಟರ್ನ್ ಏರ್ ಕಮಾಂಡ್‌ನ ಮುಖ್ಯಸ್ಥರಾದ ಏರ್ ಮಾರ್ಷಲ್ ಇಂದರ್‌ಪಾಲ್ ಸಿಂಗ್ ವಾಲಿಯಾ ಅವರು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಪೂರ್ವ ವಲಯದಲ್ಲಿ ಭಾರತೀಯ ವಾಯುಪಡೆಯ ವ್ಯೂಹಾತ್ಮಕ ಪಾತ್ರ, ಕಾರ್ಯಾಚರಣೆಯ ಸನ್ನದ್ಧತೆ, ಎದುರಿಸುತ್ತಿರುವ ಸವಾಲುಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.

Read Full Story

09:23 PM (IST) Feb 05

ಜೈಲಲ್ಲಿದ್ದ ಶಾಸಕ ಸತೀಶ್ ಸೈಲ್ ಗಂಭೀರ ಅನಾರೋಗ್ಯ - ವೈದ್ಯಕೀಯ ಜಾಮೀನು ಕೊಟ್ಟ ಹೈಕೋರ್ಟ್!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಕರ್ನಾಟಕ ಹೈಕೋರ್ಟ್ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ತೀವ್ರ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ, ಲಿವರ್ ಕಸಿ ಚಿಕಿತ್ಸೆಗಾಗಿ ಕಠಿಣ ಷರತ್ತುಗಳೊಂದಿಗೆ ಈ ರಿಲೀಫ್ ನೀಡಲಾಗಿದೆ.
Read Full Story

09:14 PM (IST) Feb 05

ಫೆಬ್ರವರಿ ಉತ್ತರಾರ್ಧದಲ್ಲಿ ಪಂಚಕ್ರಗಿ ಯೋಗದಿಂದ ಇಡೀ ತಿಂಗಳು ಒಂದು ರಾಶಿಗೆ ಮಾತ್ರ ಜಾಕ್‌ಪಾಟ್

ಫೆಬ್ರವರಿ ಉತ್ತರಾರ್ಧದಲ್ಲಿ ರೂಪುಗೊಳ್ಳುವ 'ಪಂಚಕ್ರಗಿ ರಾಜಯೋಗ'ದಿಂದ ಧನು ರಾಶಿಯವರಿಗೆ ವೃತ್ತಿ, ವ್ಯಾಪಾರ ಮತ್ತು ಪ್ರೇಮ ಜೀವನದಲ್ಲಿ ಉತ್ತಮ ಫಲಗಳಿವೆ. ಮೇಲಧಿಕಾರಿಗಳ ಬೆಂಬಲ, ವ್ಯವಹಾರದಲ್ಲಿ ದುಪ್ಪಟ್ಟು ಲಾಭ ಮತ್ತು ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿಯೂ ಸ್ಥಿರವಾಗಿರುತ್ತದೆ.

Read Full Story

09:14 PM (IST) Feb 05

ನಾದಬ್ರಹ್ಮ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 'ಜೀವಮಾನ ಸಾಧನೆ' ಪ್ರಶಸ್ತಿ

ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಜೀವಮಾನ ಸಾಧನೆ ಪ್ರಶಸ್ತಿ' ಘೋಷಿಸಲಾಗಿದೆ. ಕರ್ನಾಟಕ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದ್ದು, ಕನ್ನಡ ಚಿತ್ರರಂಗಕ್ಕೆ ಅವರ ನಾಲ್ಕು ದಶಕಗಳ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.
Read Full Story

08:56 PM (IST) Feb 05

ನೀನು ದನ ಕಾಯ್ತಿದ್ದವನು, ನಿರ್ಮಾಪಕರ ರಕ್ತ ಹೀರಿ ಕೋಟಿ ಒಡೆಯನಾದೆ - ಜೋಗಿ ಪ್ರೇಮ್ ವಿರುದ್ಧ ಸಿಡಿದ ಕನಕಪುರ ಶ್ರೀನಿವಾಸ್!

'ಕಾಟನ್‌ಪೇಟೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್, ನಿರ್ದೇಶಕ ಪ್ರೇಮ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರೇಮ್ ನಿರ್ಮಾಪಕರನ್ನು ಹಾಳುಮಾಡಿದ್ದಾರೆ ಎಂದ ಅವರು, ನಟ ಧ್ರುವ ಸರ್ಜಾ ಹಾಗೂ ಇಂದಿನ ನಟರ ವರ್ತನೆ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Read Full Story

08:28 PM (IST) Feb 05

ಕುಶಾಲನಗರದ ತೋಟದಲ್ಲಿ ನಟಿ ಸನ್ನಿ ಲಿಯೋನ್ 'ಪ್ರತ್ಯಕ್ಷ'; ರೈತನ ಶ್ರೀಮಂತಿಕೆ ಕಂಡು ನೆಟ್ಟಿಗರು ಫಿದಾ, ವಿಡಿಯೋ ವೈರಲ್!

ಮೈಸೂರು-ಕೊಡಗು ಗಡಿಭಾಗದಲ್ಲಿ ಅಂದರೆ ಬೆಟ್ಟದಪುರದಿಂದ ಕುಶಾಲನಗರಕ್ಕೆ ತೆರಳುವ ರಸ್ತೆಯ ಬದಿಯ ತೋಟವೊಂದರಲ್ಲಿ ಸನ್ನಿ ಲಿಯೋನ್ ಕಂಡುಬಂದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Read Full Story

08:12 PM (IST) Feb 05

ಪೊಲೀಸ್ ಅಧಿಕಾರಿಗಳೇ ಸಂಚರಿಸಿದ ಸರ್ಕಾರಿ ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲ! ನಿಜವಾಗಿ ಕಾನೂನು ಯಾರಿಗೆ?

ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳು ಸಂಚರಿಸುತ್ತಿದ್ದ ಸರ್ಕಾರಿ ವಾಹನವೊಂದರ ಹಿಂಬದಿಯ ನಂಬರ್ ಪ್ಲೇಟ್ ನಾಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.  ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

Read Full Story

08:01 PM (IST) Feb 05

ಡಿಕೆಶಿಗೆ ಜಾವಾ ಬೈಕ್‌ಗೆ ಪೆಟ್ರೋಲ್ ಹಾಕಿಸಲು ಕಾಸಿರಲಿಲ್ಲ, ನಾನೇ ಕೊಟ್ಟಿದ್ದೆ; ನಾನೇ 'ಕನಕಪುರ ಬಂಡೆ' ಶ್ರೀನಿವಾಸ್!

ಚಲನಚಿತ್ರ ನಿರ್ಮಾಪಕ ಕನಕಪುರ ಶ್ರೀನಿವಾಸ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾವೇ ಮೂಲ 'ಕನಕಪುರ ಬಂಡೆ' ಎಂದಿರುವ ಅವರು, ಹಿಂದೆ ಡಿಕೆಶಿಗೆ ಪೆಟ್ರೋಲ್‌ಗೂ ಹಣವಿರಲಿಲ್ಲ, ನಾನೇ ಕೊಡುತ್ತಿದ್ದೆ ಎಂದು ಹೇಳಿದ್ದಾರೆ.

Read Full Story

07:46 PM (IST) Feb 05

ವನ್ಯಜೀವಿ ವಲಯದಲ್ಲಿ ಅಕ್ರಮ ವಸತಿ ಬಡಾವಣೆ ನಿರ್ಮಾಣ - ಆನೆಗಳ ಲಗ್ಗೆ, ಪರಿಸರವಾದಿಗಳ ಆತಂಕ

ಮಂಡ್ಯದ ಮಳವಳ್ಳಿ ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಗುಂಡಾಪುರ ಗ್ರಾಮದಲ್ಲಿ ನಿಯಮ ಉಲ್ಲಂಘಿಸಿ ಅಕ್ರಮ ವಸತಿ ಬಡಾವಣೆ ನಿರ್ಮಿಸಲಾಗುತ್ತಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಭೂ ಪರಿವರ್ತನೆ ಮಾಡಿ, ತಡೆಯಾಜ್ಞೆ ಇದ್ದರೂ ಕಾಮಗಾರಿ ಮುಂದುವರಿಸಲಾಗಿದೆ.

Read Full Story

07:30 PM (IST) Feb 05

ಮಂಡ್ಯ-ಹಾಸನ ಮೈತ್ರಿಗೆ ಷರತ್ತು ಹಾಕಿದ ಮಾಜಿ ಶಾಸಕ ಪ್ರೀತಂಗೌಡ! ದೆಹಲಿಯಲ್ಲೇ ಅಂತಿಮ ತೀರ್ಮಾನ

ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸುವಷ್ಟು ಶಕ್ತಿಶಾಲಿಯಾಗಿದೆ  . ಒಂದು ವೇಳೆ ಜೆಡಿಎಸ್ ಜೊತೆ ಮೈತ್ರಿ ಮುಂದುವರೆದಲ್ಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50ರಷ್ಟು ಸ್ಥಾನಗಳನ್ನು ತಮಗೆ ಬಿಟ್ಟುಕೊಡಬೇಕೆಂದು ಬಿಜೆಪಿ ಮುಖಂಡ ಪ್ರೀತಂ ಗೌಡ ಬೇಡಿಕೆ ಇಟ್ಟಿದ್ದಾರೆ.

Read Full Story

07:11 PM (IST) Feb 05

ಈ ಮೂರು ರಾಶಿಯವರು ಅಪ್ಪಿ-ತಪ್ಪಿಯೂ ಬೆಳ್ಳಿ ಧರಿಸಲೇಬೇಡಿ - ದಟ್ಟ ದರಿದ್ರ ಹೆಗಲೇರೋದು ಗ್ಯಾರಂಟಿ!

ಜ್ಯೋತಿಷ್ಯದ ಪ್ರಕಾರ, ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದ ಬೆಳ್ಳಿಯು ಎಲ್ಲ ರಾಶಿಗಳಿಗೂ ಶುಭ ತರುವುದಿಲ್ಲ. ಕರ್ಕಾಟಕ, ವೃಶ್ಚಿಕ, ಮತ್ತು ಮೀನ ರಾಶಿಯವರಿಗೆ ಇದು ಅದೃಷ್ಟ ತರುತ್ತದೆ. ಆದರೆ, ಈ ಮೂರು ರಾಶಿಯವರು ಬೆಳ್ಳಿ ಧರಿಸಿದರೆ ದಟ್ಟ ದರಿದ್ರವು ಹಿಂಬಾಲಿಸಿಕೊಂಡು ಬರುತ್ತದೆ.

Read Full Story

07:10 PM (IST) Feb 05

ಕಂಪ್ಲಿ–ಗಂಗಾವತಿ ಸೇತುವೆ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ

ಕಂಪ್ಲಿ ಮತ್ತು ಗಂಗಾವತಿ ಸಂಪರ್ಕಿಸುವ ತುಂಗಭದ್ರಾ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಕಾರ್ಯ ಆರಂಭವಾಗಿದೆ. ಲೋಕೋಪಯೋಗಿ ಇಲಾಖೆಯು ನದಿ ದಂಡೆಯ ಎರಡೂ ಬದಿಗಳಲ್ಲಿ ಮಣ್ಣಿನ ಸಾಮರ್ಥ್ಯವನ್ನು ಪರಿಶೀಲಿಸುತ್ತಿದ್ದು, ಇದರ ಆಧಾರದ ಮೇಲೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಿದೆ.

Read Full Story

07:00 PM (IST) Feb 05

ಲವ್​ ಮಾಡೋದೆಲ್ಲಾ ಸ್ಕ್ರಿಪ್ಟೆಡ್​ - ರಿಯಾಲಿಟಿ ಷೋಗಳ ಬಗ್ಗೆ ಅರಿವಿಲ್ಲದೇ Bigg Boss ಕಾವ್ಯಾ ಶೈವ ರಿವೀಲ್​ ಮಾಡಿದ್ದೇನು?

ಬಿಗ್​ಬಾಸ್​ ಸೀಸನ್​ 12ರ ಸ್ಪರ್ಧಿಗಳಾದ ಕಾವ್ಯಾ ಶೈವ ಮತ್ತು ಗಿಲ್ಲಿ ನಟರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳಿದ್ದವು. ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯಾ ತಮ್ಮ ಮತ್ತು ಗಿಲ್ಲಿಯ ಸ್ನೇಹ  ಬಗ್ಗೆ ಹೇಳುತ್ತಲೇ ಅರಿವಿಲ್ಲದೇ  ರಿಯಾಲಿಟಿ ಷೋಗಳ ಸತ್ಯವನ್ನೂ ಅನಾವರಣಗೊಳಿಸಿದ್ದಾರೆ. 

Read Full Story

06:55 PM (IST) Feb 05

ಇಸ್ಪೀಟ್ ಜೂಜು ಆಡಬೇಕೆ? ಕನಕಗಿರಿಗೆ ಬನ್ನಿ!

ಕನಕಗಿರಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಇಸ್ಪೀಟ್ ಜೂಜು ಮತ್ತು ಕಳ್ಳತನಗಳು ಮಿತಿಮೀರಿವೆ. ಹಗಲುರಾತ್ರಿ ಎನ್ನದೆ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
Read Full Story

06:55 PM (IST) Feb 05

U19 World Cup - ಟಾಪ್ 07 ರನ್ ಸರದಾರರಲ್ಲಿ ಭಾರತದ ಏಕೈಕ ಆಟಗಾರ! ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?

ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯ ಮಾತ್ರ ಬಾಕಿ ಇದೆ. ಟೂರ್ನಿಯ ಟಾಪ್ 10 ರನ್ ಗಳಿಸಿದವರ ಪಟ್ಟಿಯಲ್ಲಿ ಕೇವಲ ಒಬ್ಬನೇ ಭಾರತೀಯ ಆಟಗಾರನಿದ್ದಾನೆ, ಅದು ವೈಭವ್ ಸೂರ್ಯವಂಶಿ. ಅಫ್ಘಾನಿಸ್ತಾನದ ಶಿನೋಜಾದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ...

Read Full Story

06:44 PM (IST) Feb 05

'ಕನ್ಯೆ ಸಿಗೋ ಹಾಗೆ ಮಾಡಪ್ಪೋ ಮೈಲಾರ ಲಿಂಗ' - ಮದುವೆಗಾಗಿ ಮಂಟಪ ಕಟ್ಟಿ, ಮನೆಗಾಗಿ ಕಲ್ಲು ಜೋಡಿಸಿ ಯುವಕರ ಮೊರೆ!

ಹೂವಿನ ಹಡಗಲಿಯ ಪ್ರಸಿದ್ಧ ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ, ಕನ್ಯೆ ಸಿಗದೆ ಕಂಗಾಲಾದ ನೂರಾರು ಅವಿವಾಹಿತ ಯುವಕರು ವಿಶಿಷ್ಟ ಹರಕೆ ಸಲ್ಲಿಸಿದರು. ಕಾರ್ಣೀಕ ನಡೆಯುವ ಸ್ಥಳದಲ್ಲಿ ಸಾಂಕೇತಿಕವಾಗಿ 'ಮದುವೆ ಮಂಟಪ'ಗಳನ್ನು ನಿರ್ಮಿಸಿ, ತಮಗೆ ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡರು.
Read Full Story

06:38 PM (IST) Feb 05

ಸುಚಿತ್ರಾಗೆ ಐಷಾರಾಮಿ ಬದುಕು, ರೀಲ್ಸ್ ಶೋಕಿ, ಸ್ವಂತ ಕಂಪೆನಿ-ದುಬಾರಿ ಕಾರು-ಬೆಲೆಬಾಳು ಗಿಫ್ಟ್ ಕೊಟ್ಟಿದ್ದ ಕಮಲಾಕರ ಭಟ್

ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣದಲ್ಲಿ, ಸುಚಿತ್ರಾ ಜೊತೆಗಿನ ಆತನ ಸಂಬಂಧ ಮತ್ತು ಐಷಾರಾಮಿ ಜೀವನಶೈಲಿ ಬೆಳಕಿಗೆ ಬಂದಿದೆ. ಕಮಲಾಕರ್ ಭಟ್, ಸುಚಿತ್ರಾಳಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಲ್ಲದೆ, ತನ್ನ 'ಕನಸು ಎಂಟರ್‌ಪ್ರೈಸಸ್' ಸಂಸ್ಥೆಯ ಜವಾಬ್ದಾರಿಯನ್ನೂ ವಹಿಸಿದ್ದನು.

Read Full Story

06:06 PM (IST) Feb 05

ಮದುವೆಯಾದ ಬಳಿಕ ಗಂಡ ಹೆಂಡತಿ ನಡುವೆ ಜಗಳ, ಬರೋಬ್ಬರಿ 20 ವರ್ಷ ಮಾತೇ ಇಲ್ಲ, ಆದ್ರೂ ಮೂವರು ಮಕ್ಕಳು!

ಜಪಾನಿನ ಒಟೌ ಮತ್ತು ಯುಮಿ ಕಟಯಾಮಾ ದಂಪತಿ, ಪತಿಯ ಅಸೂಯೆಯಿಂದಾಗಿ ಸುಮಾರು 20 ವರ್ಷಗಳ ಕಾಲ ಪರಸ್ಪರ ಮಾತನಾಡದೆ ದಾಂಪತ್ಯ ನಡೆಸಿದರು. ಒಂದೇ ಮನೆಯಲ್ಲಿದ್ದು ಮೂರು ಮಕ್ಕಳನ್ನು ಬೆಳೆಸಿದ ಇವರ ಮೌನ, ಕೊನೆಗೆ ತಮ್ಮ ಮಗನ ಪ್ರಯತ್ನದಿಂದ ಟಿವಿ ಕಾರ್ಯಕ್ರಮವೊಂದರ ಮೂಲಕ ಮುರಿಯಿತು.
Read Full Story

05:42 PM (IST) Feb 05

ಧಾರವಾಡ ಕವಿವಿ ಆವರಣದಲ್ಲಿ ಮಂಗಗಳ ದಾಳಿಗೆ ಹೆದರಿ ಕಟ್ಟಡದ ಮೇಲಿಂದ ಬಿದ್ದು ಸಂಶೋಧನಾ ವಿದ್ಯಾರ್ಥಿನಿ!

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಮಂಗಗಳ ಹಾವಳಿ ನಿಯಂತ್ರಿಸಲು ಆಡಳಿತ ಮಂಡಳಿ ವಿಫಲವಾಗಿದೆ.

Read Full Story

05:22 PM (IST) Feb 05

ಗಂಗಾವತಿ ಮುಸ್ಲಿಂ ಯುವತಿ ಜೊತೆಗಿದ್ದ ಹಿಂದೂ ಯುವಕನ ಮೇಲೆ ಹಲ್ಲೆ - ಯುವತಿ ತಾಯಿ ಕೊಟ್ರು ಬಿಗ್ ಟ್ವಿಸ್ಟ್!

ಗಂಗಾವತಿಯಲ್ಲಿ ಮುಸ್ಲಿಂ ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಹಲ್ಲೆಗೊಳಗಾದ ಯುವಕನ ಪರವಾಗಿ ಯುವತಿಯ ತಾಯಿಯೇ ನಿಂತಿದ್ದು, ಆತ ನಮ್ಮ ಮಗನಿದ್ದಂತೆ ಮತ್ತು ಸಹಾಯಕ್ಕೆ ಬಂದಿದ್ದ ಎಂದು ಸ್ಪಷ್ಟನೆ ನೀಡಿದ್ದಾರೆ. 

Read Full Story

05:12 PM (IST) Feb 05

ಪುಟ್ಟ ಕಂದನ ಬಿಟ್ಟು ವಿದೇಶಕ್ಕೆ ಹೋದ ತಾಯಿ - ಅಮ್ಮನಿಗಾಗಿ ಮಗು ಅಳುವ ವೀಡಿಯೋ ವೈರಲ್ ಆಗ್ತಿದ್ದಂತೆ ವ್ಯಾಪಕ ಆಕ್ರೋಶ

ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೊರಟ ಒಂಟಿ ತಾಯಿಯೊಬ್ಬರು, ತನ್ನ 3 ವರ್ಷದ ಮಗಳನ್ನು ಪೋಷಕರ ಬಳಿ ಬಿಟ್ಟು ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಗಳಿಗೆ ವಿದಾಯ ಹೇಳುವ ಭಾವುಕ ಕ್ಷಣದ ವೀಡಿಯೋ ವೈರಲ್ ಆಗಿದ್ದು, ಪುಟ್ಟ ಮಗುವನ್ನು ಬಿಟ್ಟು ಹೋದ ತಾಯಿಯ ನಿರ್ಧಾರಕ್ಕೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

Read Full Story

04:56 PM (IST) Feb 05

ನನಗೆ ಆ ಫೀಲಿಂಗ್​ ತರಿಸೋನು ಬೇಕು - 2ನೇ ಮದ್ವೆ ಬಗ್ಗೆ ಕೊನೆಗೂ Nivedita Gowda ರಿವೀಲ್​

ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಅವರ ಜೀವನಶೈಲಿ ಸಂಪೂರ್ಣ ಬದಲಾಗಿದೆ. ಇದೀಗ ಎರಡನೇ ಮದುವೆಗೆ ಸಿದ್ಧ ಎಂದು ಹೇಳಿಕೊಂಡಿರುವ ಅವರು, ತಮಗೆ ಬೇಕಾದ ಹುಡುಗ ಹೇಗಿರಬೇಕು ಎಂಬುದನ್ನು ವಿವರಿಸಿದ್ದಾರೆ ಹಾಗೂ ಆರ್ಥಿಕವಾಗಿ ಸದೃಢಳಾಗಲು ಐಟಂ ಸಾಂಗ್ ಮಾಡಲು ಸಿದ್ಧ ಎಂದಿದ್ದಾರೆ.
Read Full Story

04:54 PM (IST) Feb 05

ಭತ್ತದ ಗದ್ದೆಯಲ್ಲಿ ಹಳದಿ ಚಿನ್ನ ಬೆಳೆಯುತ್ತಿರುವ ತುಂಗಭದ್ರೆ ಒಡಲಿನ ರೈತರು; ಕಡಿಮೆ ನೀರು, ಅಧಿಕ ಲಾಭ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು, ಎರಡನೇ ಬೆಳೆಗೆ ನೀರಿನ ಕೊರತೆಯಿಂದಾಗಿ ಭತ್ತಕ್ಕೆ ಪರ್ಯಾಯವಾಗಿ ಸಾಸಿವೆ ಕೃಷಿಗೆ ಮೊರೆ ಹೋಗಿದ್ದಾರೆ. ಕಡಿಮೆ ಖರ್ಚು ಮತ್ತು ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಈ ಬೆಳೆಯು, ಉತ್ತಮ ಮಾರುಕಟ್ಟೆ ದರದಿಂದಾಗಿ ರೈತರಿಗೆ ಆರ್ಥಿಕವಾಗಿ ವರದಾನವಾಗಿದೆ.

Read Full Story

04:44 PM (IST) Feb 05

ವಿದೇಶಿ ಪ್ರಜೆಗಳಿಗೆ ಮನೆ ಕೊಡುವಾಗ ನಿಯಮ ಉಲ್ಲಂಘನೆ, ಪೊಲೀಸರ ನಿಯಮಿತ ತಪಾಸಣೆ ವೇಳೆ ಬಯಲಾದ ಸತ್ಯ, ಓನರ್ ಮೇಲೆ ಕೇಸ್

ಕೊತ್ತನೂರಿನಲ್ಲಿ ಸುಡಾನ್ ದೇಶದ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡಿ, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ಮನೆ ಮಾಲೀಕ ರಿಯಾಜ್ ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿದೆ. ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವಾಗ ಪಾಲಿಸಬೇಕಾದ ಕಾನೂನು ನಿಯಮಗಳನ್ನು ಉಲ್ಲಂಘಿಸಲಾಗಿದೆ.

Read Full Story

04:14 PM (IST) Feb 05

Kannada Serial TRP - ಹೊಸ ಧಾರಾವಾಹಿಗಳ ದಾಳಿ; ಹಳೆ ಸೀರಿಯಲ್‌ಗಳಿಗೆ ನಡುಕ; ಟಾಪ್‌ 1 ಪಟ್ಟ ಯಾರಿಗೆ?

Top Ten Kannada Serials: ಈ ವಾರದ ಟಿಆರ್‌ಪಿ ಲಿಸ್ಟ್‌ ರಿಲೀಸ್‌ ಆಗಿದೆ. ಇನ್ನು ಹೊಸ ಧಾರಾವಾಹಿಗಳ ಪ್ರಸಾರ ಕೂಡ ಆಗುತ್ತಲಿದೆ. ಯಾವ ಧಾರಾವಾಹಿಗೆ ಯಾವ ಸ್ಥಾನ ಸಿಕ್ಕಿದೆ? ಟಾಪ್‌ 10 ಧಾರಾವಾಹಿಗಳು ಯಾವುವು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

04:04 PM (IST) Feb 05

ಜ್ಯೋತಿಷಿ ಕಮಲಾಕರ್ ಭಟ್ ಅಸಲಿ ಮುಖ, ಮೊನ್ನೆ ಹೋದೋರು ಇನ್ನೂ ಬಂದಿಲ್ಲ, ಮನೆ ಓನರ್ ಬಿಚ್ಚಿಟ್ರು ಹಲವು ವಿಷ್ಯ!

ಸಿದ್ದಾಪುರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಶಿವಮೊಗ್ಗದ ಮನೆಯೊಂದರಲ್ಲಿ ವಾಸವಿದ್ದರು. ಈ ಕುರಿತು ಮಾತನಾಡಿದ ಮನೆ ಮಾಲೀಕ ನಾಗೇಶ್, ಜ್ಯೋತಿಷಿಯ ಸಾರ್ವಜನಿಕ ಜೀವನ, ಸುಚಿತ್ರಾ ಜೊತೆಗಿನ ಸಂಬಂಧ  ಬಗ್ಗೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

Read Full Story

03:53 PM (IST) Feb 05

Photos - ಕಟ್ಟಿದ ಒಂದು ತಿಂಗಳಿಗೆ ಮನೆ ಹಾಳು; ಮತ್ತೆ ರಾಯಲ್ ಮನೆ ಕಟ್ಟಿದ ಮಂಗಳೂರಿನ‌ Madhyama Kutumba

Madhyama Kutumba Vlogs: ಮಂಗಳೂರಿನ ಪ್ರಿಯಾ ಮೋನಿಕಾ ಎನ್ನುವ ಯುಟ್ಯೂಬರ್‌ವೊಬ್ಬರು ವರ್ಷದ ಹಿಂದೆಯೇ ಮನೆ ಕಟ್ಟಿಸಿದ್ದಾರೆ. ಆದರೆ ಮನೆ ಕಟ್ಟಿಸಿ ಒಂದು ತಿಂಗಳಿಗೆ ಮನೆ ಹಾಳಾಗಿದೆ. ಈಗ ಅವರು ಹೊಸದಾಗಿ ಗೃಹ ಪ್ರವೇಶ ಮಾಡಿದ್ದಾರೆ.

 

Read Full Story

03:40 PM (IST) Feb 05

ಮಗಳು ತಂದ ಕೋಟ್ಯಾಧಿಪತಿ ಸೌಭಾಗ್ಯ; ಹೆಣ್ಣುಮಗು ಹುಟ್ಟಿದ ತಿಂಗಳಿಗೆ ಅಪ್ಪನಿಗೆ ₹49 ಕೋಟಿ ಲಾಟರಿ!

ಉಡುಪಿ ಮೂಲದ ಶಂತನು ಶೆಟ್ಟಿಗಾರ್ ಎಂಬ ಯುವಕನಿಗೆ ಅಬುದಾಬಿಯಲ್ಲಿ 49 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಒಂದು ತಿಂಗಳ ಹಿಂದಷ್ಟೇ ಹೆಣ್ಣು ಮಗುವಿನ ತಂದೆಯಾಗಿದ್ದ ಇವರಿಗೆ, ಮಗಳು ಹುಟ್ಟಿದ ಸೌಭಾಗ್ಯದಿಂದಲೇ ಈ ಅದೃಷ್ಟ ಬಂದಿದೆ ಎಂದು ಕುಟುಂಬಸ್ಥರು ಸಂಭ್ರಮಿಸುತ್ತಿದ್ದಾರೆ.

Read Full Story

03:22 PM (IST) Feb 05

Affair Signs - ಅಕ್ರಮ ಸಂಬಂಧ ಇದ್ರೆ ನಿಮ್ಮ ಜಾತಕದಲ್ಲೇ ಗೊತ್ತಾಗುತ್ತೆ! ಆ ಸೂಚನೆಗಳೇನು?

Illicit Relationship: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿನ ಗ್ರಹಗಳ ಸ್ಥಿತಿ, ಸಂಯೋಗಗಳು, ಆ ವ್ಯಕ್ತಿಯ ನಡತೆ, ಸಂಬಂಧಗಳ ಮೇಲೆ ಬಲವಾದ ಪ್ರಭಾವ ಬೀರುತ್ತವೆ. ಶುಕ್ರ (Venus), ಮಂಗಳ (Mars), ರಾಹು (Rahu) ಗ್ರಹಗಳು ಜಾತಕದಲ್ಲಿ ಪ್ರೇಮ, ಕಾಮ, ಸುಖವನ್ನು ಪ್ರತಿನಿಧಿಸುತ್ತವೆ.

 

Read Full Story

03:21 PM (IST) Feb 05

50 ಲಕ್ಷ ತೆರಿಗೆ ಸಂಗ್ರಹಿಸಿದ ಗ್ರಾಮ ಪಂಚಾಯ್ತಿ - ಹೈಟೆಕ್ ಆಯ್ತು ಧಾರವಾಡದ ಪುಟ್ಟ ಹಳ್ಳಿ

ಧಾರವಾಡ ತಾಲೂಕಿನ ಗ್ರಾಮ ಪಂಚಾಯಿತಿಯು, ತಾನು ಸಂಗ್ರಹಿಸಿದ ತೆರಿಗೆ ಹಣದಲ್ಲಿಯೇ ಇಡೀ ಗ್ರಾಮದ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಮಾದರಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಅಪರಾಧ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.

Read Full Story

03:20 PM (IST) Feb 05

ಕಮಲಾಕರ್ ಗುರೂಜಿ ಅನೈತಿಕ ಸಂಬಂಧದ ಕುರುಹು, ಇಬ್ಬರ ಸಂಬಂಧಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಇಲ್ಲೇ!

ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ನಡುವಿನ ಅನೈತಿಕ ಸಂಬಂಧದ ಕುರಿತು ಮಗಳು ಸುಮಶ್ರೀ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧದ ಹಿನ್ನೆಲೆಯಲ್ಲಿ, ಸುಚಿತ್ರಾ ತನ್ನ ಪತಿ ಮತ್ತು ಕುಟುಂಬದ ಮೇಲೆ ದಾಳಿ ನಡೆಸಿ, ದೊಡ್ಡಪ್ಪನನ್ನು ಕೊಲೆ ಮಾಡಿಸಿದ್ದಾರೆ.

Read Full Story

02:51 PM (IST) Feb 05

ಮಂಗಳೂರು - ಸ್ಕೂಟರ್‌ಗೆ ಖಾಸಗಿ ಬಸ್ ಡಿಕ್ಕಿ; ನಿಶ್ಚಿತಾರ್ಥವಾಗಿದ್ದ ಯುವತಿ ಸಾವು, ಗ್ರಾಮಸ್ಥರು ಪ್ರತಿಭಟನೆ

ಮಂಗಳೂರಿನ ನಂತೂರು ವೃತ್ತದ ಬಳಿ ಖಾಸಗಿ ಬಸ್ಸುಗಳ ಅತಿವೇಗದ ಚಾಲನೆಗೆ ಮತ್ತೊಂದು ಬಲಿ ಸಂದಿದೆ. ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎಂಬ ಯುವತಿ ಬಸ್ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ

Read Full Story

02:39 PM (IST) Feb 05

ಬಿಗ್ ಬಾಸ್ ಬುಜ್ಜಿ ರಜತ್‌ನದ್ದು ಮಚ್ಚು ಆಯ್ತು, ಈಗ ಸಿಗರೇಟ್ ಶೋಕಿ; ಪಾರಂಪರಿಕ ಕಟ್ಟಡಕ್ಕೆ ಹಾನಿ ಆರೋಪದಡಿ ದೂರು!

ಬಿಗ್‌ಬಾಸ್ ಖ್ಯಾತಿಯ ರಜತ್, ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿಕೊಂಡು ಹೊಸ ವಿವಾದ ಸೃಷ್ಟಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಕನ್ನಡಪರ ಸಂಘಟನೆಯೊಂದು ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
Read Full Story

02:35 PM (IST) Feb 05

ಸೈಲೆಂಟಾಗಿ ಬಾರ್ಬಿ ಡಾಲ್‌ ನಿವೇದಿತಾ ಗೌಡಗೆ ಟಕ್ಕರ್‌ ಕೊಟ್ಟ ಪಳಾರ್‌ ಗಿಲ್ಲಿ!

ಬಿಗ್‌ಬಾಸ್‌ ಗೆದ್ದ ನಂತರ ಗಿಲ್ಲಿ ನಟನ ಜನಪ್ರಿಯತೆ ಗಗನಕ್ಕೇರಿದ್ದು, ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. 2.2 ಮಿಲಿಯನ್ ಫಾಲೋವರ್ಸ್‌ ಹೊಂದುವ ಮೂಲಕ, ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿದ್ದ ನಿವೇದಿತಾ ಗೌಡ ಅವರ ದಾಖಲೆಯನ್ನು ಮುರಿದಿದ್ದಾರೆ.

Read Full Story

02:34 PM (IST) Feb 05

ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ 2026ರಲ್ಲಿ Gold Rate ಕಡಿಮೆ ಆಗೋದು ಯಾವಾಗ? ಯಾವಾಗ ಏರಿಕೆ ಆಗುತ್ತೆ?

Gold Rate Today: 2026ನೇ ವರ್ಷವು ಹೂಡಿಕೆದಾರರಿಗೆ, ಗ್ರಾಹಕರಿಗೆ ಒಂದು ಸವಾಲಿನ ವರ್ಷವಾಗಲಿದೆ. ಜಾಗತಿಕ ಅಸ್ಥಿರತೆಯಿದೆ, ಗ್ರಹಗತಿಗಳ ಬದಲಾವಣೆ ಕೂಡ ಇದ್ದು, ಬಂಗಾರದ ಬೆಲೆ ಹೊಸ ದಾಖಲೆ ಬರೆಯುವ ಸಾಧ್ಯತೆ ಯಿದೆ. ಜ್ಯೋತಿಷ್ಯದ ಪ್ರಕಾರ ಯಾವಾಗ ಬಂಗಾರದ ಬೆಲೆ ಇಳಿಯಲಿದೆ?

Read Full Story

01:49 PM (IST) Feb 05

ಇದು ರಕ್ಷಿತಾ ಶೆಟ್ಟಿ ಪವಾಡ - Bigg Boss ಕರಿಬಸಪ್ಪ ಸಕತ್​ ಫೇಮಸ್​- ವಿಶೇಷ ವಿಡಿಯೋ ಮೂಲಕ ಥ್ಯಾಂಕ್ಸ್​

ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಕರಿಬಸಪ್ಪ ಅವರು ಬಿಗ್ ಬಾಸ್ ನಂತರವೂ ಟ್ರೆಂಡಿಂಗ್‌ನಲ್ಲಿದ್ದಾರೆ. ಇದಕ್ಕೆ ಕಾರಣ, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ . ಈ ತಮಾಷೆಯ ಘಟನೆಗಾಗಿ ಮತ್ತು ತನ್ನನ್ನು ಟ್ರೆಂಡಿಂಗ್‌ನಲ್ಲಿಟ್ಟಿದ್ದಕ್ಕಾಗಿ ಕರಿಬಸಪ್ಪ ರಕ್ಷಿತಾಗೆ ಧನ್ಯವಾದ ತಿಳಿಸಿದ್ದಾರೆ.

Read Full Story

01:46 PM (IST) Feb 05

ಬಾಲಿವುಡ್‌ ನಟಿ ದೀಪಿಕಾ ಬ್ಯಾಗ್‌ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ

 ‘ನನ್ನ ಬ್ಯಾಗ್‌ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ, ಮಗಳು ಎರಡು ದಿನದ ಹಿಂದೆ ತಿಂದು ಬಿಟ್ಟಿದ್ದ ತೇಪ್ಲಾ (ತಿಂಡಿ).

 ಅವಳು ಬಂದಮೇಲೆ ನನ್ನ ಬದುಕೇ ಅವಳಾಗಿದ್ದಾಳೆ. ಮಗಳು ದುವಾ ನನ್ನ ಅಬ್ಸೆಶನ್‌’. ಇದು ಮಗಳ ಕುರಿತಾಗಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆಡಿರುವ ಮಾತು

Read Full Story

01:39 PM (IST) Feb 05

ಚಿನ್ನದ ನಿಧಿ ಸಿಕ್ಕ ಲಕ್ಕುಂಡಿಗೆ ಭೇಟಿಕೊಟ್ಟ ಸಂಸದ ಗದ್ದಿಗೌಡರ್; ನಿಧಿ ಕೊಟ್ಟ ಗಿರಿಜಮ್ಮಗೆ ಮತ್ತೊಂದು ಭರವಸೆ!

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಉತ್ಖನನ ಸ್ಥಳಕ್ಕೆ ಸಂಸದ ಪಿ.ಸಿ. ಗದ್ದಿಗೌಡರ್ ಭೇಟಿ ನೀಡಿ ಪರಿಶೀಲಿಸಿದರು. ನಿಧಿ ಒಪ್ಪಿಸಿದ ಗಿರಿಜವ್ವ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದರು. ಅಲ್ಲದೆ, ಜಾತ್ರೆ ನಡೆಸುವ ಕುರಿತು ಗ್ರಾಮಸ್ಥರ ಮನವಿಗೆ ಸ್ಪಂದಿಸಿದರು.

Read Full Story

01:30 PM (IST) Feb 05

ಬೆಂಗಳೂರು ಚಿತ್ರೋತ್ಸವದಲ್ಲಿ ಇಂದು ನೋಡಬಹುದಾದ ಅತ್ಯುತ್ತಮ 10 ಸಿನಿಮಾಗಳು

ಬೆಂಗಳೂರು ಚಿತ್ರೋತ್ಸವ ಇನ್ನೇನು ಅಂತಿಮ ಕ್ಷಣ ತಲುಪುತ್ತಿದ್ದು, ಫೆ.5ರಂದು ನೋಡಬಹುದಾದ 10 ಸಿನಿಮಾಗಳ ಪಟ್ಟಿ ಇಲ್ಲಿದೆ , ಅವು ಯಾವ ಭಾಷೆ ಸಿನಿಮಾಗಳೆನ್ನುವ ಮಾಹಿತಿ ನಿಮಗಾಗಿ ಇಲ್ಲಿದೆ

Read Full Story

More Trending News