MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕಮಲಾಕರ್ ಗುರೂಜಿ ಅನೈತಿಕ ಸಂಬಂಧದ ಕುರುಹು, ಇಬ್ಬರ ಸಂಬಂಧಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಇಲ್ಲೇ!

ಕಮಲಾಕರ್ ಗುರೂಜಿ ಅನೈತಿಕ ಸಂಬಂಧದ ಕುರುಹು, ಇಬ್ಬರ ಸಂಬಂಧಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಇಲ್ಲೇ!

ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ನಡುವಿನ ಅನೈತಿಕ ಸಂಬಂಧದ ಕುರಿತು ಮಗಳು ಸುಮಶ್ರೀ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧದ ಹಿನ್ನೆಲೆಯಲ್ಲಿ, ಸುಚಿತ್ರಾ ತನ್ನ ಪತಿ ಮತ್ತು ಕುಟುಂಬದ ಮೇಲೆ ದಾಳಿ ನಡೆಸಿ, ದೊಡ್ಡಪ್ಪನನ್ನು ಕೊಲೆ ಮಾಡಿಸಿದ್ದಾರೆ.

2 Min read
Author : Gowthami K
Published : Feb 05 2026, 03:20 PM IST
Share this Photo Gallery
  • FB
  • TW
  • Linkdin
  • Whatsapp
17
ಪಂಪ ನಗರ ಮನೆಯಲ್ಲಿ ಅನೈತಿಕ ಸಂಬಂಧದ ಕುರುಹು
Image Credit : Asianet News

ಪಂಪ ನಗರ ಮನೆಯಲ್ಲಿ ಅನೈತಿಕ ಸಂಬಂಧದ ಕುರುಹು

ಶಿವಮೊಗ್ಗದಲ್ಲಿ ನಡೆದ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ಹೊಸ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಶಿವಮೊಗ್ಗದ ಪಂಪ ನಗರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ನಡುವೆ ಕಳೆದ 9 ತಿಂಗಳಿಂದ ಅಕ್ರಮ ಸಂಬಂಧ ಇತ್ತು ಎಂಬುದಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳನ್ನು, ಚಾಕು ಇರಿತ ಪ್ರಕರಣದಲ್ಲಿ ಹಲ್ಲೆಗೊಳಗಾದ ಮಹೇಶ್ ಅವರ ಪುತ್ರಿ ಸುಮಶ್ರೀ ಬಹಿರಂಗಪಡಿಸಿದ್ದಾರೆ.

27
ಅನೈತಿಕ ಸಂಸಾರಕ್ಕೆ ಸಾಕ್ಷಿಯಾಗಿತ್ತು ಪಂಪ ನಗರದ ಮನೆ
Image Credit : Asianet News

ಅನೈತಿಕ ಸಂಸಾರಕ್ಕೆ ಸಾಕ್ಷಿಯಾಗಿತ್ತು ಪಂಪ ನಗರದ ಮನೆ

ಶಿವಮೊಗ್ಗದ ಪಂಪ ನಗರದಲ್ಲಿ ಸುಚಿತ್ರಾ ಜೊತೆ ಜ್ಯೋತಿಷಿ ಕಮಲಾಕರ್ ಭಟ್ ವಾಸವಾಗಿದ್ದ. ಪಂಪ ನಗರದಲ್ಲಿ ಬಾಡಿಗೆ ಮನೆ ಮಾಡಿ ಸುಚಿತ್ರಾ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳನ್ನು ಇರಿಸಿದ್ದ. ಅಲ್ಲಿಯ ಪಕ್ಕದಲ್ಲಿ ಕನಸು ಎಂಟರ್ಪ್ರೈಸಸ್ ಹೆಸರಿನ ಜ್ಯೋತಿಷಿ ಕೇಂದ್ರದ ಬಿಪಿಓ ನಡೆಸುತ್ತಿದ್ದ. ಕಳೆದ 9 ತಿಂಗಳಿಂದ ಸುಚಿತ್ರ ಮತ್ತು ಆಕೆಯ ಮಕ್ಕಳು ಪಂಪ ನಗರದ ಇದೇ ಮನೆಯಲ್ಲಿ ವಾಸವಾಗಿದ್ದರು. ಪಂಪ ನಗರದ ಈ ಮನೆಯಲ್ಲಿ ಸುಚಿತ್ರ ಮತ್ತು ಕಮಲಾಕರ ಭಟ್ ಒಂದು ಕೋಣೆಯಲ್ಲಿ ವಾಸವಾಗಿದ್ದರೆ ಆಕೆಯ ಮಕ್ಕಳು ಮತ್ತೊಂದು ಕೋಣೆಯಲ್ಲಿ ವಾಸವಾಗಿದ್ದರು . ಅವರಿಬ್ಬರ ಅನೈತಿಕ ಸಂಸಾರಕ್ಕೆ ಈ ಮನೆ ಸಾಕ್ಷಿಯಾಗಿತ್ತು.

Related Articles

Related image1
ಉತ್ತರಕನ್ನಡ: ಕೊಲೆ ಕೇಸಲ್ಲಿ ಜ್ಯೋತಿಷಿ ಕಮಲಾಕರ ಭಟ್‌ಗೆ ನ್ಯಾಯಾಂಗ ಬಂಧನ
Related image2
ಕಲಾಕಾರ್ ಗುರೂಜಿ ಕಮಲಾಕರ್ ಭಟ್; ಗಂಡ ಡ್ಯೂಟಿಗೆ ಹೋದಾಗ, ಒಬ್ಬಂಟಿ ಆಂಟಿಯನ್ನ ಪಟಾಯಿಸಿದ್ದು ಹೇಗೆ?
37
ಮಗಳ ಎಕ್ಸ್‌ಕ್ಲೂಸಿವ್ ಮಾತು
Image Credit : Asianet News

ಮಗಳ ಎಕ್ಸ್‌ಕ್ಲೂಸಿವ್ ಮಾತು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಎಕ್ಸ್‌ಕ್ಲೂಸಿವ್ ಚಿಟ್ ಚಾಟ್‌ನಲ್ಲಿ, ಸುಮಶ್ರೀ ತಮ್ಮ ತಾಯಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ನಡುವೆ ಇದ್ದ ಅಕ್ರಮ ಸಂಬಂಧದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. “ಕಳೆದ 9 ತಿಂಗಳಿಂದ ನನ್ನ ತಾಯಿ ಮತ್ತು ಕಮಲಾಕರ್ ಭಟ್ ನಡುವೆ ಅಕ್ರಮ ಸಂಬಂಧ ಇತ್ತು. ಅದರಿಂದ ಬೇಸತ್ತು ನಾನು ತಂದೆಯೊಂದಿಗೆ ಇರಬೇಕು ಎಂದು ನಿರ್ಧರಿಸಿದ್ದೆ. ನಾನು ನನ್ನ ತಂದೆ ಮಹೇಶ್ ಅವರಿಗೆ ಕರೆ ಮಾಡಿ, ‘ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗದಿದ್ದರೆ ನಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದೆ” ಎಂದು ಸುಮಶ್ರೀ ತಿಳಿಸಿದ್ದಾರೆ.

47
ಮನೆಯಿಂದ ಹೊರ ಹೋದ ಮಗಳು
Image Credit : Asianet News

ಮನೆಯಿಂದ ಹೊರ ಹೋದ ಮಗಳು

ಅದರಂತೆ ಫೆಬ್ರವರಿ 1ರಂದು ಶಿವಮೊಗ್ಗದಿಂದ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ, ಅಲ್ಲಿಂದ ಸಂಜೆ 7.30ರ ನಂತರ ತಂದೆಯ ಮನೆಗೆ ಹೋಗಿದ್ದೆ ಎಂದು ಅವರು ಹೇಳಿದ್ದಾರೆ. “ದೊಡ್ಡಪ್ಪ, ದೊಡ್ಡಮ್ಮ ಸೇರಿದಂತೆ ಮನೆಯವರು ಎಲ್ಲರೂ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡರು” ಎಂದು ಸುಮಶ್ರೀ ಹೇಳಿದ್ದಾರೆ.

57
ರಾತ್ರಿ ನಡೆದ ಭೀಕರ ದಾಳಿ
Image Credit : Asianet News

ರಾತ್ರಿ ನಡೆದ ಭೀಕರ ದಾಳಿ

ಆದರೆ ಅದೇ ದಿನ ರಾತ್ರಿ ಸುಮಾರು 10.30ರ ವೇಳೆಗೆ, ಸುಚಿತ್ರಾ ಕಾರಿನಲ್ಲಿ ಐದಾರು ಜನರೊಂದಿಗೆ ಬಂದು ಮನೆಗೆ ದಾಳಿ ನಡೆಸಿದರು“ಅವರು ಏಕಾಏಕಿ ಮನೆಗೆ ನುಗ್ಗಿ ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ನನ್ನ ದೊಡ್ಡಪ್ಪ ವಸಂತ್ ಅವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ” ಎಂದು ಸುಮಶ್ರೀ ಕಣ್ಣೀರಿಟ್ಟಿದ್ದಾರೆ. “ನಮ್ಮ ತಾಯಿ ಮುಸ್ಲಿಂ ಯುವಕರೊಂದಿಗೆ ಬಂದಿದ್ದರು. ಅವರು ಹಿಂದಿಯಲ್ಲಿ ‘ಇವನನ್ನು ಬಿಡಬೇಡಿ’ ಎಂದು ನನ್ನ ತಂದೆಯ ವಿರುದ್ಧ ಅವರಿಗೆ ಸೂಚಿಸುತ್ತಿದ್ದರು” ಎಂದು ಗಂಭೀರ ಆರೋಪ ಮಾಡಿದ್ದಾರೆ.

67
ಮಗಳನ್ನು ಕೂಡಿ ಹಾಕಿದ ಪಾಪಿ ತಾಯಿ
Image Credit : Asianet News

ಮಗಳನ್ನು ಕೂಡಿ ಹಾಕಿದ ಪಾಪಿ ತಾಯಿ

ಗಲಾಟೆ ಹೆಚ್ಚಾಗುತ್ತಿದ್ದಂತೆ, “ನನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಹೊರಗೆ ಬರಬೇಡ ಎಂದು ಹೇಳಿದರು. ದೊಡ್ಡಪ್ಪನನ್ನು ಕೊಲೆ ಮಾಡಿದ ಬಳಿಕ, ನನ್ನ ತಂದೆಗೆ ಚಾಕು ಇರಿದರು. ತಂದೆಯನ್ನು ರಕ್ಷಿಸಲು ಬಂದ ಮತ್ತೊಬ್ಬರ ಮೇಲೂ ಚಾಕು ದಾಳಿ ನಡೆಸಲಾಯಿತು. ನಂತರವೇ ಪೊಲೀಸರು ಸ್ಥಳಕ್ಕೆ ಬಂದರು” ಎಂದು ಸುಮಶ್ರೀ ವಿವರಿಸಿದ್ದಾರೆ.

77
ದೊಡ್ಡಪ್ಪನಿಗೆ ಚಿಕ್ಕ ಚಿಕ್ಕ ಮಕ್ಕಳು ಇದ್ದಾರೆ, ಸುಮಶ್ರೀ ಕಣ್ಣೀರು
Image Credit : Asianet News

ದೊಡ್ಡಪ್ಪನಿಗೆ ಚಿಕ್ಕ ಚಿಕ್ಕ ಮಕ್ಕಳು ಇದ್ದಾರೆ, ಸುಮಶ್ರೀ ಕಣ್ಣೀರು

“ನನ್ನ ದೊಡ್ಡಪ್ಪನಿಗೆ ಚಿಕ್ಕ ಚಿಕ್ಕ ಮಕ್ಕಳು ಇದ್ದಾರೆ. ಏನೂ ಅರಿಯದ ಮಕ್ಕಳು ಇಂದು ತಬ್ಬಲಿಯಾಗಿದ್ದಾರೆ. ನಮ್ಮ ತಾಯಿಯ ಅನೈತಿಕ ಸಂಬಂಧದ ಪರಿಣಾಮವಾಗಿ ನನ್ನ ದೊಡ್ಡಮ್ಮ ವಿಧವೆಯಾಗಿದ್ದಾರೆ. ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. ನನ್ನ ತಂದೆಗೂ ಚಾಕುವಿನ ಏಟು ಬಿದ್ದಿದೆ” ಎಂದು ಈ ಮೂಲಕ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ನಡುವಿನ ಅಕ್ರಮ ಸಂಬಂಧ ಮತ್ತು ಅದರ ಪರಿಣಾಮವಾಗಿ ನಡೆದ ಹಿಂಸಾತ್ಮಕ ಘಟನೆಗಳ ಕುರಿತು ಮಗಳು ಸುಮಶ್ರೀ ಎಳೆ ಎಳೆಯಾಗಿ ಬಹಿರಂಗಪಡಿಸಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಶಿವಮೊಗ್ಗ
ಜ್ಯೋತಿಷ್ಯ
ಉತ್ತರ ಕನ್ನಡ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಮಂಗಳೂರು: ಸ್ಕೂಟರ್‌ಗೆ ಖಾಸಗಿ ಬಸ್ ಡಿಕ್ಕಿ; ನಿಶ್ಚಿತಾರ್ಥವಾಗಿದ್ದ ಯುವತಿ ಸಾವು, ಗ್ರಾಮಸ್ಥರು ಪ್ರತಿಭಟನೆ
Recommended image2
ಸಾವಿನಲ್ಲೂ ಸಾರ್ಥಕತೆ ಮೆರೆದ ನೊಂದ ಕುಟುಂಬ; ಗಂಡನ ಸಾವಿನ ನೋವಲ್ಲೂ ಅಂಗಾಂಗ ದಾನಕ್ಕೆ ಮುಂದಾದ ಪತ್ನಿ
Recommended image3
ಬಿಗ್ ಬಾಸ್ ಬುಜ್ಜಿ ರಜತ್‌ನದ್ದು ಮಚ್ಚು ಆಯ್ತು, ಈಗ ಸಿಗರೇಟ್ ಶೋಕಿ; ಪಾರಂಪರಿಕ ಕಟ್ಟಡಕ್ಕೆ ಹಾನಿ ಆರೋಪದಡಿ ದೂರು!
Related Stories
Recommended image1
ಉತ್ತರಕನ್ನಡ: ಕೊಲೆ ಕೇಸಲ್ಲಿ ಜ್ಯೋತಿಷಿ ಕಮಲಾಕರ ಭಟ್‌ಗೆ ನ್ಯಾಯಾಂಗ ಬಂಧನ
Recommended image2
ಕಲಾಕಾರ್ ಗುರೂಜಿ ಕಮಲಾಕರ್ ಭಟ್; ಗಂಡ ಡ್ಯೂಟಿಗೆ ಹೋದಾಗ, ಒಬ್ಬಂಟಿ ಆಂಟಿಯನ್ನ ಪಟಾಯಿಸಿದ್ದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved