ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೊರಟ ಒಂಟಿ ತಾಯಿಯೊಬ್ಬರು, ತನ್ನ 3 ವರ್ಷದ ಮಗಳನ್ನು ಪೋಷಕರ ಬಳಿ ಬಿಟ್ಟು ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಗಳಿಗೆ ವಿದಾಯ ಹೇಳುವ ಭಾವುಕ ಕ್ಷಣದ ವೀಡಿಯೋ ವೈರಲ್ ಆಗಿದ್ದು, ಪುಟ್ಟ ಮಗುವನ್ನು ಬಿಟ್ಟು ಹೋದ ತಾಯಿಯ ನಿರ್ಧಾರಕ್ಕೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಉನ್ನತ ಶಿಕ್ಷಣಕ್ಕಾಗಿ ಪುಟ್ಟ ಕಂದನ ಬಿಟ್ಟು ಹೋದ ತಾಯಿ

ಅನೇಕರು ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ತಮ್ಮ ಉದ್ಯೋಗದ ಅನಿವಾರ್ಯತೆಯ ಕಾರಣಕ್ಕೆ ಪುಟ್ಟ ಮಕ್ಕಳನ್ನು ಪೋಷಕರ ಬಳಿಯೂ ಬೇಬಿ ಸಿಟ್ಟಿಂಗ್‌ನಲ್ಲೋ ಬಿಟ್ಟು ಕೆಲಸಕ್ಕೆ ಓಡುತ್ತಾರೆ. ಹಾಗೆಯೇ ಇಲ್ಲೊಬ್ಬರು ಮಹಿಳೆ ತಮ್ಮ 3ವರ್ಷದ ಮಗಳನ್ನು ಪೋಷಕರೊಂದಿಗೆ ಬಿಟ್ಟು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಅವರು ವಿಮಾನ ಏರುವ ವೇಳೆ ತನ್ನನ್ನೇ ಅವಲಂಬಿಸಿದ ತನಗಾಗಿ ಅಳುತ್ತಿದ್ದ ಪುಟ್ಟ ಮಗಳನ್ನು ಬಿಟ್ಟು ಹೋಗಲಾಗದ ಭಾವುಕ ಕ್ಷಣದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ವೀಡಿಯೋ ನೋಡಿ ಪುಟ್ಟ ಮಗುವನ್ನು ಬಿಟ್ಟು ಶಿಕ್ಷಣಕ್ಕಾಗಿ ವಿದೇಶಕ್ಕೆ ಹಾರಿದ ತಾಯಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಕೆಲ ದಿನಗಳ ಹಿಂದೆ ಮಾನಸ ಬಾನೋಟ್ ಎಂಬುವವರು ತಮಗೆ ಮಗಳು ಹಾಗೂ ಮನೆಯವರು ಕಣ್ಣೀರಿಡುತ್ತಲೇ ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುತ್ತಿರುವ ಭಾವುಕ ಕ್ಷಣದ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ತಮ್ಮ ಹೈದರಾಬಾದ್‌ನಲ್ಲಿರುವ ಪೋಷಕರ ಜೊತೆಗೆ ತಮ್ಮ ಮೂರು ವರ್ಷದ ಮಗಳನ್ನು ಬಿಟ್ಟು ಮಾನಸ ಅವರು ಕೆನಡಾಗೆ ಹೋಗಿದ್ದಾರೆ. 28 ವರ್ಷದ ಮಾನಸ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ತಾನೊಬ್ಬಳು ಒಂಟಿ ತಾಯಿ ಆಗಿದ್ದು,ಪ್ರಸ್ತುತ ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗುತ್ತಿದ್ದೇನೆ. ನನ್ನ ಹಾಗೂ ನನ್ನ ಮಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದಕ್ಕಾಗಿ ತಾನು ಹೋಗುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಆದರೆ ಇದು ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಯ್ತು, ಅಷ್ಟು ಸಣ್ಣ ಮಗಳನ್ನು ಬಿಟ್ಟು ವಿದೇಶದಲ್ಲಿ ಶಿಕ್ಷಣ ಪಡೆಯುವ ಅಗತ್ಯ ಇತ್ತಾ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: ಸರಾಯಿ ಅಂಗಡಿ ವಿರುದ್ಧ ರೊಚ್ಚಿಗೆದ್ದು ರಸ್ತೆಯಲ್ಲೇ ಮದ್ಯದ ಹೊಳೆ ಹರಿಸಿದ ಮಹಿಳೆಯರು: 15 ಲಕ್ಷ ಮೌಲ್ಯದ ಮದ್ಯ ಉಡೀಸ್

ವೈರಲ್ ಆದ ವೀಡಿಯೋದಲ್ಲಿ ಮಾನಸ ಹೀಗೆ ಬರೆದುಕೊಂಡಿದ್ದರು. 23 ಕೇಜಿ ತೂಕವನ್ನಷ್ಟೇ ವಿಮಾನದಲ್ಲಿ ಅವಕಾಶ ನೀಡುತ್ತಾರೆ. ನಾನು ನನ್ನ ಹೃದಯದ ಅತೀ ಭಾರವಾದ ತುಂಡೊಂದನ್ನು ಬಿಟ್ಟು ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ವೀಡಿಯೋದಲ್ಲಿ ಅವರ ಮಗು ತಾಯಿ ಜೊತೆ ಹೋಗುವುದಾಗಿ ಅಳುತ್ತಿದ್ದರೆ, ಅತ್ತ ತಾಯಿ ಮಾನಸ ಆಕೆಗೆ ದೂರದಿಂದಲೇ ಬಾಯ್ ಹೇಳುತ್ತಾ ಭಾರವಾದ ಹೃದಯದಿಂದ ವಿಮಾನ ನಿಲ್ದಾಣ ಪ್ರವೇಶಿಸಿದ್ದರು. ಈ ವೀಡಿಯೋವನ್ನು 2.8 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಜೊತೆಗೆ ಆ ಸಿಂಗಲ್ ತಾಯಿ ಮಗುವನ್ನು ಬಿಟ್ಟು ಹೋಗಿದ್ದ ಬೇಸರ ವ್ಯಕ್ತಪಡಿಸಿದ್ದಾರೆ.

ನಿಮಗೆ ನಿಮ್ಮ ಪುಟ್ಟ ಮಗುವನ್ನು ಮತ್ತೊಂದು ದೇಶದಲ್ಲಿ ಬಿಟ್ಟು ಹೋಗುವಷ್ಟು ನಿಮಗೆ ಉದ್ಯೋಗ ಅಥವಾ ಕೆಲಸ ಅಗತ್ಯವಿತ್ತಾ, ಅದು ನನ್ನ ಕನಸಿನ ಉದ್ಯೋಗ ಎಂದು ದಯವಿಟ್ಟು ಹೇಳಬೇಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಏಕೆ ಆಕೆಯನ್ನು ನಿಮ್ಮ ಜೊತೆಗೇ ಯಾಕೆ ಕರೆದುಕೊಂಡು ಹೋಗುತ್ತಿಲ್ಲ. ಸಿಂಗಲ್ ಮದರ್ ಅಂತ ಕಾರಣ ಹೇಳಬೇಡಿ. ನಾನು ಕೂಡ ಸಿಂಗಲ್ ಮದರ್, ಆದರೆ ನನ್ನ ಮಗಳು ಯಾವಾಗಲೂ ನನ್ನ ಜೊತೆಗೆ ಇದ್ದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಮಗುವಿಗಿಂತ ಭೌತಿಕ ವಾಸ್ತವ ನಿಮಗೆ ಹೆಚ್ಚಾಯ್ತಾ ಎಂದು ಒಬ್ಬರು ಕೇಳಿದ್ದಾರೆ. ನಿಮ್ಮೀ ನಿರ್ಧಾರ ನಿಮ್ಮ ಮಗಳ ಹೃದಯದಲ್ಲಿ ಶಾಶ್ವತವಾದ ನೋವನ್ನು ಉಂಟು ಮಾಡಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: 

ತನ್ನಿಂದ ಜನಿಸಿದವಳನ್ನೇ ಗರ್ಭಿಣಿ ಮಾಡಿದ ಪಾಪಿ : ಅತ್ಯಾ*ಚಾರವೆಸಗಿದ್ದು ಒಬ್ಬರು ಇಬ್ಬರು ಅಲ್ಲ: DNA ಟೆಸ್ಟ್ ನಡೆಸಿದಾಗ ಆಘಾತ

ಆದರೆ ತಮ್ಮ ವಿರುದ್ಧ ವ್ಯಕ್ತವಾದ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಮಾನಸ, ಕೆನಡಾದಲ್ಲಿ ಓದುತ್ತಿರುವುದರಿಂದ ತನ್ನ 3 ವರ್ಷದ ಮಗಳನ್ನು ಭಾರತದಲ್ಲಿಯೇ ಬಿಡಲು ಬಯಸಿದ್ದಾಗಿ ಹೇಳಿದ್ದಾರೆ. 28 ವರ್ಷದ ಮಾನಸಾ ಕೆನಡಾದ ಡಾಲ್‌ಹೌಸಿ ವಿಶ್ವವಿದ್ಯಾಲಯದಿಂದ ಇಂಟರ್ನೆಟ್ ವರ್ಕಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ತನ್ನ ದಾಂಪತ್ಯದಲ್ಲಿ ಕೌಟುಂಬಿಕ ಹಿಂಸಾಚಾರದ ನಂತರ ಮಾರ್ಚ್ 2022 ರಲ್ಲಿ ಮಗಳು ಜನಿಸಿದ ನಂತರ ಪತಿಯಿಂದ ದೂರಾಗಿದ್ದಾಗಿ ಹೇಳಿದ್ದಾರೆ.

ಪತಿಯನ್ನು ತೊರೆದ ನಂತರ ಮಗಳನ್ನು ಪೋಷಿಸಲು, ಮಾನಸಾ ಮೊದಲು ಭಾರತದಲ್ಲಿ ಉದ್ಯೋಗವನ್ನು ಮಾಡಿದ್ದಾರೆ. ಬಹಳ ಹೋರಾಟದ ನಂತರ ತಿಂಗಳಿಗೆ ₹ 40,000 ಸಂಬಳದ HR ಉದ್ಯೋಗ ಸಿಕ್ತು.ನಾನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಕೈಗೆ ಸಂಬಳ ತಿಂಗಳಿಗೆ ₹ 35,000 ಸಿಗುತಿತ್ತು. ಅದು ನನ್ನನ್ನು ಮತ್ತು ನನ್ನ ಮಗಳನ್ನು ಪೋಷಿಸಲು ಸಾಕಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ತಾನು ಹೆಚ್ಚು ಸಂಪಾದಿಸಬೇಕು ಎಂದು ಅರಿತುಕೊಂಡ ಮಾನಸಾ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದಳು. ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ ಕೆನಡಾಕ್ಕೆ ತೆರಳಿದರು. ಅವರ ತಂದೆ ಅವರ ಬೋಧನಾ ಶುಲ್ಕವನ್ನು ಭರಿಸುತ್ತಿದ್ದಾರೆ, ಆದರೆ ಅವರು ತಮ್ಮನ್ನು ತಾವು ಪೋಷಿಸಿಕೊಳ್ಳಲು ಕೆನಡಾದಲ್ಲಿ ಎರಡು ಟೆಂಪರರಿ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ಕಾಫಿ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ ಮತ್ತು ನಂತರ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತೇನೆ. ಮಗಳಿಗೆ ಪಾಸ್‌ಪೋರ್ಟ್ ಪಡೆಯಲು ಪತಿಯ ಒಪ್ಪಿಗೆ ಬೇಕು. ಆಕೆಯ ಪಾಸ್‌ಪೋರ್ಟ್ ಇಲ್ಲ, ನನ್ನ ಮಗಳಿಗೆ ಮೂರು ವರ್ಷ. ನನ್ನ ಮಾಜಿ ಪತಿ ಯಾವುದೇ ಸಂವಹನಕ್ಕೆ ಪ್ರತಿಕ್ರಿಯಿಸುವುದಿಲ್ಲ, ಮತ್ತು ನಾನು ಇದರ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ. ಅವರು ನನ್ನ ಮಗಳು ಪಾಸ್‌ಪೋರ್ಟ್ ಪಡೆಯುವುದನ್ನು ನಿರ್ಬಂಧಿಸುತ್ತಿದ್ದಾರೆ. ಹೀಗಾಗಿ ಮಗಳನ್ನು ಪೋಷಕರೊಂದಿಗೆ ಬಿಟ್ಟು ಹೋಗುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.

View post on Instagram