MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನನಗೆ ಆ ಫೀಲಿಂಗ್​ ತರಿಸೋನು ಬೇಕು: 2ನೇ ಮದ್ವೆ ಬಗ್ಗೆ ಕೊನೆಗೂ Nivedita Gowda ರಿವೀಲ್​

ನನಗೆ ಆ ಫೀಲಿಂಗ್​ ತರಿಸೋನು ಬೇಕು: 2ನೇ ಮದ್ವೆ ಬಗ್ಗೆ ಕೊನೆಗೂ Nivedita Gowda ರಿವೀಲ್​

ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಅವರ ಜೀವನಶೈಲಿ ಸಂಪೂರ್ಣ ಬದಲಾಗಿದೆ. ಇದೀಗ ಎರಡನೇ ಮದುವೆಗೆ ಸಿದ್ಧ ಎಂದು ಹೇಳಿಕೊಂಡಿರುವ ಅವರು, ತಮಗೆ ಬೇಕಾದ ಹುಡುಗ ಹೇಗಿರಬೇಕು ಎಂಬುದನ್ನು ವಿವರಿಸಿದ್ದಾರೆ ಹಾಗೂ ಆರ್ಥಿಕವಾಗಿ ಸದೃಢಳಾಗಲು ಐಟಂ ಸಾಂಗ್ ಮಾಡಲು ಸಿದ್ಧ ಎಂದಿದ್ದಾರೆ.

2 Min read
Author : Suchethana D
Published : Feb 05 2026, 04:56 PM IST
Share this Photo Gallery
  • FB
  • TW
  • Linkdin
  • Whatsapp
16
ತುಂಡುಡುಗೆ ಬ್ಯೂಟಿ
Image Credit : Asianet News

ತುಂಡುಡುಗೆ ಬ್ಯೂಟಿ

Bigg Bossನಿಂದ ಫೇಮಸ್​ ಆಗಿರೋ ನಿವೇದಿತಾ ಗೌಡ (Niveditha Gowda) ಅವರ ಲೆವೆಲ್ಲೇ ಈಗ ಬೇರೆಯಾಗಿದೆ. ಚಂದನ್​ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಬಳಿಕ, ಫಾರಿನ್​ ಟೂರ್​ ಹೆಚ್ಚಾಗಿದೆ, ಜೊತೆಗೆ ತುಂಡುಡುಗೆ ಕುಣಿತವೂ ಅಷ್ಟೇ ಜೋರಾಗಿದೆ. ವಾಣಿ ಎನ್ನುವ ಸ್ನೇಹಿತೆಯ ಜೊತೆ ಟ್ರೋಲ್​ ಆಗುವಂಥ ರೀಲ್ಸ್​ ಮಾಡುತ್ತಾ ಅಷ್ಟೇ (ಕು)ಖ್ಯಾತಿಯನ್ನೂ ಗಳಿಸುತ್ತಿದ್ದಾರೆ. ಟ್ರೋಲ್​ ಆದಷ್ಟೂ ಹೆಚ್ಚು ಹೆಚ್ಚು ಫೇಮಸ್​ ಆಗುತ್ತಾ, ಹೆಚ್ಚಿಗೆ ದುಡಿಯುತ್ತಿದ್ದಾರೆ. ಇಂಥವರಿಗಾಗಿಯೇ ಕಾದು ಕುಳಿತಿರುವ ಕೆಲವು ರಿಯಾಲಿಟಿ ಷೋಗಳಲ್ಲಿಯೂ ಭರ್ಜರಿ ಆಫರ್​ ಪಡೆಯುತ್ತಿದ್ದಾರೆ.

26
ಬೇರೆ ಲೆವೆಲ್​
Image Credit : Instagram

ಬೇರೆ ಲೆವೆಲ್​

ಒಟ್ಟಿನಲ್ಲಿ ನಿವೇದಿತಾ ಗೌಡ ಅವರ ರೇಂಜ್​ ಇದೊಂದು ವರ್ಷದಲ್ಲಿ ಬೇರೆಯದ್ದೇ ಲೆವೆಲ್ಲಿಗೆ ಹೋಗಿದೆ ಎನ್ನಬಹುದು. ಇನ್ನೂ ವಯಸ್ಸು 20 ಇರುವಾಗಲೇ ಬಿಗ್​ಬಾಸ್​ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್​ ಶೆಟ್ಟಿಯವರ ಲವ್​ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್​ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿರುವಾಕೆಯೇ.

Related Articles

Related image1
ಇದು ರಕ್ಷಿತಾ ಶೆಟ್ಟಿ ಪವಾಡ: Bigg Boss ಕರಿಬಸಪ್ಪ ಸಕತ್​ ಫೇಮಸ್​- ವಿಶೇಷ ವಿಡಿಯೋ ಮೂಲಕ ಥ್ಯಾಂಕ್ಸ್​
Related image2
Bigg Boss ಗಿಲ್ಲಿ ನಟನಿಗೆ ಸೊಂಟನೇ ಇಲ್ಲ ಎಂದೋರು ಇದನ್ನು ನೋಡ್ಬೇಕಂತೆ! ಅಂಥದ್ದೇನಿದೆ ನೋಡಿ
36
ಎರಡನೆಯ ಮದ್ವೆ ಬಗ್ಗೆ
Image Credit : Instagram

ಎರಡನೆಯ ಮದ್ವೆ ಬಗ್ಗೆ

ಇದಾಗಲೇ ಎರಡನೆಯ ಮದುವೆಯ ಬಗ್ಗೆ ಕೆಲವು ಮಾಧ್ಯಮಗಳ ಮುಂದೆ ನಿವೇದಿತಾ ಗೌಡ ಹೇಳಿಕೊಂಡಿದ್ದು ಇದೆ. ಸದ್ಯ ಮದುವೆ ಎಂದರೆ ಭಯ ಎಂದೆಲ್ಲಾ ಹೇಳಿದ್ದರು. ಆದರೆ ಈಚಿಗಿನ ಒಂದು ಸಂದರ್ಶನದಲ್ಲಿ ನಿವೇದಿತಾ, ಎರಡನೆಯ ಮದುವೆಗೆ ತಾವು ಸಿದ್ಧ ಎಂದು ಹೇಳಿದ್ದಾರೆ. ನನ್ನ ಅಮ್ಮ ನನಗೆ ಯಾವಾಗ ಮದುವೆ ಆಗಬೇಕು ಎನ್ನಿಸುತ್ತದೆ ಆಗ ಆಗು ಎಂದು ಹೇಳಿದ್ದಾರೆ. ಆದ್ದರಿಂದ ಮದುವೆ ಆಗುತ್ತೇನೆ ಎಂದಿದ್ದಾರೆ.

46
ನಿವೇದಿತಾ ಹೇಳಿದ್ದೇನು?
Image Credit : Instagram

ನಿವೇದಿತಾ ಹೇಳಿದ್ದೇನು?

ಇದೇ ವೇಳೆ, ತಮ್ಮನ್ನು ಮದುವೆಯಾಗುವ ಹುಡುಗನ ಬಗ್ಗೆ ಮಾತನಾಡಿರುವ ನಿವ್ವಿ, ನನ್ನನ್ನು ಆತ ತುಂಬಾ ಇಷ್ಟಪಡಬೇಕು. ಅದಕ್ಕಿಂತಲೂ ಹೆಚ್ಚಾಗಿ ನನಗೆ ಆ ಫೀಲಿಂಗ್​ ಬರುವಂತೆ ಮಾಡಬೇಕು. ಸದ್ಯ ಭಯ ಇದೆ. ಆ ಭಯವನ್ನು ಹೋಗಲಾಡಿಸುವ ಸಿಕ್ಕರೆ ಆಗುತ್ತೇನೆ. ಅವನು ಫೀಲಿಂಗ್​ ಬರಿಸುವುದರ ಜೊತೆಗೆ ನನ್ನನ್ನು ತುಂಬಾ ಇಷ್ಟಪಡುವವನಾಗಿರಬೇಕು ಎಂದಿದ್ದಾರೆ.

56
ನೆಟ್ಟಿಗರಿಂದ ಪ್ರಶ್ನೆ
Image Credit : Instagram

ನೆಟ್ಟಿಗರಿಂದ ಪ್ರಶ್ನೆ

ಇದನ್ನು ಕೇಳಿದ ನೆಟ್ಟಿಗರು, ಹಾಗಿದ್ರೆ ಚಂದನ್​ ಶೆಟ್ಟಿ ಹೀಗೆಲ್ಲಾ ಇರಲಿಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ! ಇದಾಗಲೇ ಚಂದನ್​ ಶೆಟ್ಟಿ (Chandan Shetty) ಅವರು ಸಂದರ್ಶನದಲ್ಲಿ, ನಿವೇದಿತಾ ಅವರಿಗೆ ಐಷಾರಾಮಿ ಜೀವನ ಬೇಕು. ಇದೇ ಕಾರಣಕ್ಕೆ ತಮಗೂ ಈಕೆಗೂ ಹೊಂದಾಣಿಕೆ ಆಗಿಲ್ಲ ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ನಿವೇದಿತಾ, ನನಗೆ ಐಷಾರಾಮಿ ಜೀವನ ಬೇಕು ನಿಜ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ನಾನೇ ದುಡಿಯುತ್ತಿದ್ದೇನೆ. ಫೈನಾನ್ಷಿಯಲಿ ನಾನು ಯಾರ ಸಹಾಯವನ್ನೂ ಕೇಳುವವಳಲ್ಲ, ಚಂದನ್​ ಶೆಟ್ಟಿ ಜೊತೆಗೆ ಇರುವಾಗಲೂ ನನ್ನದೇ ದುಡ್ಡಿನಿಂದ ವಸ್ತು ಖರೀದಿಸುತ್ತಿದ್ದೆ ಎಂದಿದ್ದರು.

66
ಐಟಂ ಸಾಂಗ್​ಗೆ ರೆಡಿ ಎಂದಿದ್ದ ನಿವೇದಿತಾ
Image Credit : Instagram

ಐಟಂ ಸಾಂಗ್​ಗೆ ರೆಡಿ ಎಂದಿದ್ದ ನಿವೇದಿತಾ

ಆರ್ಥಿಕ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಗುರಿ ಇಟ್ಟುಕೊಂಡಿರುವ ನಿವೇದಿತಾ ಗೌಡ, ಇದಕ್ಕಾಗಿ ಈಗ ಯಾವ ಹಂತಕ್ಕಾದರೂ ಹೋಗಲು ರೆಡಿ ಇದ್ದಾರೆ. ಸಿನಿಮಾದಲ್ಲಿ ನಟನೆ ಮಾಡುವ ಆಸೆ ಇದೆ. ಅದು ಸಿಗದೇ ಹೋದರೆ ಐಟಂ ಸಾಂಗ್​ ಆದ್ರೂ ಓಕೆ, ನನಗೆ ದುಡ್ಡು ಬೇಕು ಅರ್ಥಾತ್​ Finacially strong ಆಗಬೇಕು. ಅದಕ್ಕಾಗಿ ನನಗೆ ಇಷ್ಟವಾದದ್ದನ್ನು ನಾನು ಏನು ಬೇಕಾದರೂ ಮಾಡಲು ಸೈ ಎಂದು ಧೈರ್ಯದಿಂದ ಹೇಳಿದ್ದಾರೆ ನಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನಿವೇದಿತಾ ಗೌಡ
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು

Latest Videos
Recommended Stories
Recommended image1
Kannada Serial TRP: ಹೊಸ ಧಾರಾವಾಹಿಗಳ ದಾಳಿ; ಹಳೆ ಸೀರಿಯಲ್‌ಗಳಿಗೆ ನಡುಕ; ಟಾಪ್‌ 1 ಪಟ್ಟ ಯಾರಿಗೆ?
Recommended image2
Photos: ಕಟ್ಟಿದ ಒಂದು ತಿಂಗಳಿಗೆ ಮನೆ ಹಾಳು; ಮತ್ತೆ ರಾಯಲ್ ಮನೆ ಕಟ್ಟಿದ ಮಂಗಳೂರಿನ‌ Madhyama Kutumba
Recommended image3
Bhagyalakshmi: ಭಾಗ್ಯನ ಬಿಟ್ಟು ಹೊರಟೇ ಹೋದ್ನಾ ಆದಿ?... ಖಂಡಿತಾ ಇಲ್ಲ, ‘ಮಿಲನ’ ಮೂವಿ ಗ್ಯಾರಂಟಿ ಎಂದ ವೀಕ್ಷಕರು
Related Stories
Recommended image1
ಇದು ರಕ್ಷಿತಾ ಶೆಟ್ಟಿ ಪವಾಡ: Bigg Boss ಕರಿಬಸಪ್ಪ ಸಕತ್​ ಫೇಮಸ್​- ವಿಶೇಷ ವಿಡಿಯೋ ಮೂಲಕ ಥ್ಯಾಂಕ್ಸ್​
Recommended image2
Bigg Boss ಗಿಲ್ಲಿ ನಟನಿಗೆ ಸೊಂಟನೇ ಇಲ್ಲ ಎಂದೋರು ಇದನ್ನು ನೋಡ್ಬೇಕಂತೆ! ಅಂಥದ್ದೇನಿದೆ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved