MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • News
  • State
  • ಮಗಳು ತಂದ ಕೋಟ್ಯಾಧಿಪತಿ ಸೌಭಾಗ್ಯ; ಹೆಣ್ಣುಮಗು ಹುಟ್ಟಿದ ತಿಂಗಳಿಗೆ ಅಪ್ಪನಿಗೆ ₹49 ಕೋಟಿ ಲಾಟರಿ!

ಮಗಳು ತಂದ ಕೋಟ್ಯಾಧಿಪತಿ ಸೌಭಾಗ್ಯ; ಹೆಣ್ಣುಮಗು ಹುಟ್ಟಿದ ತಿಂಗಳಿಗೆ ಅಪ್ಪನಿಗೆ ₹49 ಕೋಟಿ ಲಾಟರಿ!

ಉಡುಪಿ ಮೂಲದ ಶಂತನು ಶೆಟ್ಟಿಗಾರ್ ಎಂಬ ಯುವಕನಿಗೆ ಅಬುದಾಬಿಯಲ್ಲಿ 49 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಒಂದು ತಿಂಗಳ ಹಿಂದಷ್ಟೇ ಹೆಣ್ಣು ಮಗುವಿನ ತಂದೆಯಾಗಿದ್ದ ಇವರಿಗೆ, ಮಗಳು ಹುಟ್ಟಿದ ಸೌಭಾಗ್ಯದಿಂದಲೇ ಈ ಅದೃಷ್ಟ ಬಂದಿದೆ ಎಂದು ಕುಟುಂಬಸ್ಥರು ಸಂಭ್ರಮಿಸುತ್ತಿದ್ದಾರೆ.

2 Min read
Author : Sathish Kumar KH
Published : Feb 05 2026, 03:40 PM IST
Share this Photo Gallery
  • FB
  • TW
  • Linkdin
  • Whatsapp
15
ಹೆಣ್ಣು ಮಗು ಹುಟ್ಟಿದ ಬೆನ್ನಲ್ಲೇ ₹49 ಕೋಟಿ ಲಾಟರಿ
Image Credit : Asianet News

ಹೆಣ್ಣು ಮಗು ಹುಟ್ಟಿದ ಬೆನ್ನಲ್ಲೇ ₹49 ಕೋಟಿ ಲಾಟರಿ

ಉಡುಪಿ/ಶಿವಮೊಗ್ಗ (ಫೆ.05): 'ಮನೆಗೆ ಹೆಣ್ಣು ಮಗು ಬಂದರೆ ಮಹಾಲಕ್ಷ್ಮಿಯೇ ಬಂದಂತೆ' ಎಂಬ ಹಿರಿಯರ ಮಾತು ಕರಾವಳಿಯ ಯುವಕನ ಬಾಳಿನಲ್ಲಿ ಅಕ್ಷರಶಃ ನಿಜವಾಗಿದೆ. ತಿಂಗಳ ಹಿಂದಷ್ಟೇ ಹೆಣ್ಣು ಮಗುವಿನ ತಂದೆಯಾಗಿದ್ದ ಉಡುಪಿ ಮೂಲದ ಯುವಕನೊಬ್ಬನಿಗೆ ಅಬುದಾಬಿಯಲ್ಲಿ ಬರೋಬ್ಬರಿ 49 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಓಮನ್‌ನಲ್ಲಿ ಉದ್ಯೋಗದಲ್ಲಿರುವ ಕಾಪು ತಾಲೂಕಿನ ಕಟಪಾಡಿ ಮಟ್ಟು ಗ್ರಾಮದ ಶಾಂತನು ಶೆಟ್ಟಿಗಾರ್ ಅವರೇ ಈ ಅದೃಷ್ಟಶಾಲಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಗಳು ತಂದ ಸೌಭಾಗ್ಯ
Image Credit : Asianet News

ಮಗಳು ತಂದ ಸೌಭಾಗ್ಯ

ಶಾಂತನು ಶೆಟ್ಟಿಗಾರ್ ಅವರಿಗೆ ವಿವಾಹವಾಗಿದ್ದು, ಕೇವಲ ಒಂದು ತಿಂಗಳ ಹಿಂದಷ್ಟೇ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಗಾಗಿ ಪತ್ನಿ ಸದ್ಯ ತೀರ್ಥಹಳ್ಳಿಯ ತವರು ಮನೆಯಲ್ಲಿದ್ದಾರೆ. ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ತಂದೆಗೆ ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಬಂದಿರುವುದನ್ನು ಕಂಡು ಮನೆಯವರು ಇದನ್ನು 'ಮಗಳು ತಂದ ಸೌಭಾಗ್ಯ' ಎಂದೇ ಸಂಭ್ರಮಿಸುತ್ತಿದ್ದಾರೆ. ಈ ಸುದ್ದಿಯನ್ನು ಫೋನ್ ಮೂಲಕ ಶಾಂತನು ತಮ್ಮ ಮನೆಯವರಿಗೆ ತಿಳಿಸಿದ್ದು, ಮಟ್ಟು ಗ್ರಾಮದಲ್ಲಿರುವ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ತಂದೆ, ತಾಯಿ, ಸಹೋದರ ಹಾಗೂ ದೊಡ್ಡಪ್ಪ ಸಿಹಿ ಹಂಚಿ ಸಂತೋಷಪಟ್ಟಿದ್ದಾರೆ.

Related Articles

Related image1
ಭಾರಿ ಗಳಿಕೆ, ಉದ್ಯೋಗದಲ್ಲಿ ಬಡ್ತಿ, ಈ 4 ರಾಶಿಗೆ ಫೆಬ್ರವರಿಯಲ್ಲಿ ಬಂಪರ್‌ ಲಾಟರಿ
Related image2
ಅಬ್ಬಬ್ಬಾ! .. ಅಬುದಾಭಿಯಲ್ಲಿ ಭರ್ಜರಿ ₹49 ಕೋಟಿ ಲಾಟ್ರಿ ಗೆದ್ದ ಉಡುಪಿಯ ಶಂತನು!
35
ಗೆಳೆಯನ ಜೊತೆಗೂಡಿ ಟಿಕೆಟ್ ಖರೀದಿ
Image Credit : Asianet News

ಗೆಳೆಯನ ಜೊತೆಗೂಡಿ ಟಿಕೆಟ್ ಖರೀದಿ

ಓಮನ್‌ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಾಂತನು, ಆಗಾಗ ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದರು. ಈ ಬಾರಿ ಅಬುದಾಬಿಯ 'ಬಿಗ್ ಟಿಕೆಟ್ ಲಕ್ಕಿ ಡ್ರಾ'ದಲ್ಲಿ (Big Ticket Lucky Draw) ಪಾಲ್ಗೊಳ್ಳಲು ನಿರ್ಧರಿಸಿದ್ದರು. 500 ದಿರ್ಹಂ (ಭಾರತೀಯ ಮೌಲ್ಯದ ಪ್ರಕಾರ ಸುಮಾರು 12,000 ರೂ.) ನೀಡಿ ಲಾಟರಿ ಖರೀದಿಸಬೇಕಿತ್ತು. ಇದಕ್ಕಾಗಿ ಅವರು ತಮ್ಮ ಸ್ನೇಹಿತನ ಜೊತೆಗೂಡಿ ಹಣ ಹೂಡಿಕೆ ಮಾಡಿ ಟಿಕೆಟ್ ಖರೀದಿಸಿದ್ದರು. ಈ ಟಿಕೆಟ್‌ಗೆ ಈಗ ಬರೋಬ್ಬರಿ 20 ಮಿಲಿಯನ್ ದಿರ್ಹಂ, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 49 ಕೋಟಿ ರೂ. ಜಾಕ್‌ಪಾಟ್ ಹೊಡೆದಿದೆ.

45
ದೈವದ ಕೃಪೆ ಎಂದ ಕುಟುಂಬ
Image Credit : Asianet News

ದೈವದ ಕೃಪೆ ಎಂದ ಕುಟುಂಬ

ಶಾಂತನು ಅವರ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ತಾಯಿ ಗುಣವತಿ ಗೃಹಿಣಿ. ಈ ಹಿಂದೆ ಕೃಷಿಯನ್ನೇ ಅವಲಂಬಿಸಿದ್ದ ಈ ಕುಟುಂಬಕ್ಕೆ ಈಗ ಅದೃಷ್ಟದ ಬಾಗಿಲು ತೆರೆದಿದೆ. ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಶಾಂತನು, ನಂತರ ಡಿಪ್ಲೋಮಾ ಮಾಡಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಮಗನ ಸಾಧನೆ ಮತ್ತು ಅದೃಷ್ಟದ ಬಗ್ಗೆ ಮಾತನಾಡಿರುವ ಶಾಂತನು ಅವರ ದೊಡ್ಡಪ್ಪ ಶ್ರೀನಿವಾಸ ಅವರು, 'ಇದು ದೈವದ ಕೃಪೆ ಮತ್ತು ಮಗುವಿನ ಅದೃಷ್ಟ. ಬಂದಿರುವ ಬಹುಮಾನದ ಹಣವನ್ನು ಒಳ್ಳೆಯ ಕಾರ್ಯಕ್ಕೆ ಮತ್ತು ಸರಿಯಾದ ರೀತಿಯಲ್ಲಿ ವಿನಿಯೋಗಿಸುವ ಶಕ್ತಿಯನ್ನು ಭಗವಂತ ಅವನಿಗೆ ನೀಡಲಿ' ಎಂದು ಹಾರೈಸಿದ್ದಾರೆ.

55
ಮುಂದಿನ ನಿರ್ಧಾರವೇನು?
Image Credit : Asianet News

ಮುಂದಿನ ನಿರ್ಧಾರವೇನು?

ನೇರ ಪ್ರಸಾರದಲ್ಲಿ ಲಕ್ಕಿ ಡ್ರಾ ಬಹುಮಾನ ಘೋಷಣೆಯಾಗುತ್ತಿದ್ದಂತೆ ಶಾಂತನು ಸಂತೋಷಕ್ಕೆ ಪಾರವೇ ಇರಲಿಲ್ಲ. ಸದ್ಯ ಬಹುಮಾನದ ಮೊತ್ತವನ್ನು ತಮ್ಮ ಸ್ನೇಹಿತನೊಂದಿಗೆ ಹಂಚಿಕೊಳ್ಳುವುದಾಗಿ ಶಾಂತನು ತಿಳಿಸಿದ್ದಾರೆ. ಆದರೆ, ತಮ್ಮ ಪಾಲಿನ ಹಣವನ್ನು ಏನು ಮಾಡಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ತಿಂಗಳ ಬಳಿಕ ಊರಿಗೆ ಬರುವುದಾಗಿ ಶಾಂತನು ತಿಳಿಸಿದ್ದು, ಆಗ ಕುಟುಂಬಸ್ಥರೊಡನೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ, ಕಡಲತಡಿಯ ಮಟ್ಟು ಗ್ರಾಮದ ಯುವಕನೊಬ್ಬ ಈಗ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವುದು ಜಿಲ್ಲೆಯಾದ್ಯಂತ ಚರ್ಚೆಯ ವಿಷಯವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಉಡುಪಿ
ಕರ್ನಾಟಕ ಸುದ್ದಿ
ಲಾಟರಿ
ದುಬೈ
ಶಿವಮೊಗ್ಗ

Latest Videos
Recommended Stories
Recommended image1
ಆದಾಯದಲ್ಲಿ ನೈಋತ್ಯ ರೈಲ್ವೆಗೆ ಗೋಲ್ಡನ್ ಆಗಸ್ಟ್: ₹805.70 ಕೋಟಿ ಮಾಸಿಕ ಆದಾಯ ಗಳಿಸಿ ಹೊಸ ದಾಖಲೆ!
Recommended image2
ಕನ್ನಡದಲ್ಲಿ ನಟಿಸಿದ್ದ ಈ ವ್ಯಕ್ತಿ, ಇಂದು ಹೈಕೋರ್ಟ್ ಜಡ್ಜ್! ಒಂದೇ ದಿನ 555 ಕೇಸ್ ವಿಚಾರಣೆ, ನ್ಯಾ.ನಾಗಪ್ರಸನ್ನ ದಾಖಲೆ
Recommended image3
ದಕ್ಷಿಣ ಭಾರತದಾದ್ಯಾಂತ ಇಡಿ ಬೃಹತ್ ಬೇಟೆ: ಕರ್ನಾಟಕ ಸೇರಿ 4 ರಾಜ್ಯಗಳ 30 ಕಡೆ ಏಕಕಾಲಕ್ಕೆ ದಾಳಿ, ಬೆಂಗಳೂರಲ್ಲೂ ರೇಡ್!
Related Stories
Recommended image1
ಭಾರಿ ಗಳಿಕೆ, ಉದ್ಯೋಗದಲ್ಲಿ ಬಡ್ತಿ, ಈ 4 ರಾಶಿಗೆ ಫೆಬ್ರವರಿಯಲ್ಲಿ ಬಂಪರ್‌ ಲಾಟರಿ
Recommended image2
ಅಬ್ಬಬ್ಬಾ! .. ಅಬುದಾಭಿಯಲ್ಲಿ ಭರ್ಜರಿ ₹49 ಕೋಟಿ ಲಾಟ್ರಿ ಗೆದ್ದ ಉಡುಪಿಯ ಶಂತನು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved