- Home
- Karnataka Districts
- ಜ್ಯೋತಿಷಿ ಕಮಲಾಕರ್ ಭಟ್ ಅಸಲಿ ಮುಖ, ಮೊನ್ನೆ ಹೋದೋರು ಇನ್ನೂ ಬಂದಿಲ್ಲ, ಮನೆ ಓನರ್ ಬಿಚ್ಚಿಟ್ರು ಹಲವು ವಿಷ್ಯ!
ಜ್ಯೋತಿಷಿ ಕಮಲಾಕರ್ ಭಟ್ ಅಸಲಿ ಮುಖ, ಮೊನ್ನೆ ಹೋದೋರು ಇನ್ನೂ ಬಂದಿಲ್ಲ, ಮನೆ ಓನರ್ ಬಿಚ್ಚಿಟ್ರು ಹಲವು ವಿಷ್ಯ!
ಸಿದ್ದಾಪುರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಶಿವಮೊಗ್ಗದ ಮನೆಯೊಂದರಲ್ಲಿ ವಾಸವಿದ್ದರು. ಈ ಕುರಿತು ಮಾತನಾಡಿದ ಮನೆ ಮಾಲೀಕ ನಾಗೇಶ್, ಜ್ಯೋತಿಷಿಯ ಸಾರ್ವಜನಿಕ ಜೀವನ, ಸುಚಿತ್ರಾ ಜೊತೆಗಿನ ಸಂಬಂಧ ಬಗ್ಗೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಪಂಪಾ ನಗರದ ಮನೆ ಓನರ್ ಏನು ಹೇಳಿದ್ರು
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಸೋಮವಾರ ರಾತ್ರಿ ಮನೆಗೆ ನುಗ್ಗಿ ಒಬ್ಬರ ಹತ್ಯೆ ನಡೆಸಿ, ಉಳಿದವರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಪ್ರಕರಣ ಸಂಬಂಧ ಒಂದೊಂದೇ ವಿಚಾರಗಳು ಹೊರಬರುತ್ತಿದೆ. ಜ್ಯೊತೀಷಿ ತನ್ನ ಪತ್ನಿ ಮರಣದ ಬಳಿಕ ಸುಚಿತ್ರಾ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಶಿವಮೊಗ್ಗದ ಪಂಪಾ ನಗರದ ಮನೆಯೊಂದರಲ್ಲಿ ವಾಸವಿದ್ದರು. ಇದೀಗ ಮನೆ ಮಾಲೀಕ ನಾಗೇಶ್ ಜ್ಯೋತಿಷಿ ಕಮಲಾಕರ ಭಟ್ ಬಗ್ಗೆ ಮಾತನಾಡಿದ್ದಾರೆ.
ಮುದುವಾಳದಲ್ಲಿ 10 ಎಕರೆ ಜಮೀನು ತೆಗೆದುಕೊಂಡಿದ್ದರು
ಶಿವಮೊಗ್ಗದ ಪಂಪಾ ನಗರದ ಮನೆ ಮಾಲೀಕ ನಾಗೇಶ್ ಹೇಳಿಕೆ ನೀಡಿ, ನಮ್ಮ ಅಕ್ಕನ ಮಗನ ಮನೆಯಲ್ಲಿ ನಾಲ್ಕು ವರ್ಷಗಳಿಂದ ಇದ್ದರು. ಮುದುವಾಳದಲ್ಲಿ 10 ಎಕರೆ ಜಮೀನು ತೆಗೆದುಕೊಂಡಿದ್ದರು. ನಮ್ಮ ಲಾರಿ ಇತ್ತು ಮೂರು ದೇವಸ್ಥಾನ ಕಟ್ಟಿಸಿದ್ರು ಚೆನ್ನಾಗೆ ಇದ್ದರು. ನಮ್ಮ ಅಂಗಡಿ ಮಳಿಗೆಯಲ್ಲಿ ಕಾಲ್ ಸೆಂಟರ್ ಮಾಡಿ ಇಲ್ಲೇ ಇದ್ದರು. 1008 ಹೋಮ ಮಾಡಿದರು ತಾವೇ ಕುಳಿತು ಹೋಮ ಮಾಡುತ್ತಿದ್ದರು. ಎಲ್ಲರಿಗೂ ಸಹಾಯ ಮಾಡುವ ಸ್ವಭಾವ ಇತ್ತು. ಇಲ್ಲೇ ಮೇಲ್ಗಡೆ ಆ ಸುಚಿತ್ರ ಜೊತೆ ಮನೆ ಮಾಡಿಕೊಂಡಿದ್ದರು. ನಂತರ ಅಲ್ಲಿಯ ಮನೆ ಖಾಲಿ ಮಾಡಿ ಆರು ತಿಂಗಳ ಹಿಂದೆ ನಮ್ಮ ಅಕ್ಕನ ಮಗನ ಮನೆಗೆ ಬಂದಿದ್ದಾರೆ. ನಮ್ಮಲ್ಲಿ ಬಾಡಿಗೆ ಎಲ್ಲ ಚೆನ್ನಾಗಿ ಕೊಟ್ಟಿದ್ದಾರೆ ಯಾವುದೇ ತೊಂದರೆ ಇಲ್ಲ.
ಮೊನ್ನೆ ರಾತ್ರಿ ಏನೋ ಗಲಾಟೆ ಆಯ್ತಂತೆ, ಹೋದೋರು ಇನ್ನೂ ಬಂದಿಲ್ಲ.
ಕಮಲಾಕರ ಭಟ್ಟರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ . ಸುಚಿತ್ರ ಮೇಲ್ಗಡೆ ಮನೆ ಮಾಡಿಕೊಂಡಿದ್ದರು. ಇದೀಗ ಈ ಮನೆಗೆ ಬಂದು ಸೇರಿದ್ದರು. ಮೊನ್ನೆ ರಾತ್ರಿ ಏನೋ ಗಲಾಟೆ ಆಯ್ತಂತೆ, ಹೋದೋರು ಇನ್ನೂ ಬಂದಿಲ್ಲ. ಆಕಾಶ್ ಕಾಲ್ ಸೆಂಟರ್ ಕೆಲಸಕ್ಕೆ ಇದ್ದ ಹುಡುಗ. ಅನ್ನಕ್ಕಾಗಿ ಬಂದಿದ್ದ ಹುಡುಗ ಅವರ ಜೊತೆಯಲ್ಲಿ ಹೋಗಿದ್ದಕ್ಕೆ ಆರೋಪಿಯಾಗಿದ್ದಾನೆ. ಸಹಾಯ ಮಾಡುವ ಉದ್ದೇಶದಿಂದ ಸ್ವಾಮೀಜಿ ಹೋಗಿದ್ದಾನೆ. ಆದರೆ ಈಗ ಈ ರೀತಿಯಾಗಿದೆ.
ಅವರ ಪತ್ನಿ ಕೊರೋನಾದಲ್ಲಿ ಸಾವನಪ್ಪಿದ್ದರು
ಸ್ವಾಮೀಜಿ ನನಗೆ 8 ವರ್ಷದಿಂದ ಪರಿಚಯ ಅವರ ಪತ್ನಿ ಕೊರೋನಾದಲ್ಲಿ ಸಾವನಪ್ಪಿದ್ದರು. ಸುಚಿತ್ರ ನಮ್ಮ ಊರ ಕಡೆಯವರು ನಮ್ಮ ಸಂಬಂಧಿಕರೆಂದು ಹೇಳಿದರು. ಕಮಲಾಕರ ಭಟ್ಟರ ಪತ್ನಿ ನಮಗೆ ಪರಿಚಯ. ಮುದುವಾಳದಲ್ಲಿ ಗೋಶಾಲೆ ಮಾಡಿದಾಗ ನಾವು ಅಲ್ಲಿ ಕೆಲಸ ಮಾಡಿಸ್ತಾ ಇದ್ವಿ. ಸುಚಿತ್ರಾ ಅವರು ಬಂದ ಮೇಲೆ ಎರಡು ಮೂರು ಕಾರು ತೆಗೆದುಕೊಂಡಿದ್ದಾರೆ ಬುಲೆಟ್ ಕೂಡ ತೆಗೆದುಕೊಂಡಿದ್ದಾರೆ. ಅವರು ಜೊತೆಗೆ ಎಲ್ಲ ಓಡಾಡುತ್ತಿದ್ದರು ಟೂರ್ ಎಲ್ಲ ಮಾಡ್ತಾ ಇದ್ರು. ಅವರು ಮತ್ತು ಸುಚಿತ್ರಾ ರಿಲ್ ಮಾಡ್ತಾ ಇದ್ರು, ನಮ್ ಹುಡುಗ ಕೂಡ ಇವರ ಜೊತೆ ಕೆಲಸಕ್ಕೆ ಇದ್ದ. ಕಾರ್ ಓಡಿಸಿಕೊಂಡು ಅವರ ಜೊತೆಗೆ ಎಲ್ಲ ಓಡಾಡಿಕೊಂಡಿದ್ದ. ದೇಣಿಗೆಯನ್ನೆಲ್ಲಾ ಕೊಡುತ್ತಿದ್ದರು ಯಾರನ್ನೂ ಹಾಗೆ ವಾಪಾಸು ಕಳಿಸುತ್ತಿರಲಿಲ್ಲ. ಒಳ್ಳೆ ಸಾಮರ್ಥ್ಯ ಇರುವ ಭಟ್ರು. ಪ್ರತಿ ಸಂಕಷ್ಟಿಯಲ್ಲೂ ತಪ್ಪದೆ ಪೂಜೆ ಮಾಡಿಸ್ತಾ ಇದ್ರು ಎಂದು ಮನೆ ಮಾಲೀಕ ನಾಗೇಶ್ ಹೇಳಿಕೆ ನೀಡಿದ್ದಾರೆ.
ಆರೋಪಿಗಳು ಯಾರು?
ಸದ್ಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಸೋಮವಾರ ರಾತ್ರಿ ಮನೆಗೆ ನುಗ್ಗಿ ಒಬ್ಬರ ಹತ್ಯೆ ನಡೆಸಿ, ಉಳಿದವರ ಮೇಲೆ ಹಲ್ಲೆ ನಡೆಸಿದ ಘಟನೆಯ ಆರೋಪಿಗಳಾದ ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಏಳೂ ಜನರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಫೆ. 2ರಂದು ನಡೆದಿದ್ದ ಈ ಘಟನೆಯಲ್ಲಿ ಭಾಗಿಯಾಗಿದ್ದ ಸುಚಿತ್ರಾ, ಲೋಕನಾಥ ನಾಯ್ಕ, ಜ್ಯೋತಿಷಿ ಕಮಲಾಕರ ಭಟ್ಟ ಮತ್ತು ಆಕಾಶ್ ಎಂ. ಅವರನ್ನು ಪೊಲೀಸರು ಬಂಧಿಸಿ ಫೆ. 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಂದು ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಉಳಿದ ಆರೋಪಿಗಳಾದ ಮಹಮ್ಮದ್ ಮುಫೂಜ್, ಫೈಸಲ್ ಹಾಗೂ ಇರ್ಫಾನ್ ಅವರನ್ನು ಪತ್ತೆಹಚ್ಚಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅನೈತಿಕ ಸಂಬಂಧ:
ಅವರಗುಪ್ಪದ ಮಹೇಶ ನಾಯ್ಕ ಎಂಬುವರು ಹೊಸೂರಿನ ಸುಚಿತ್ರಾಳನ್ನು ವಿವಾಹವಾಗಿದ್ದು, ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕೆಲ ತಿಂಗಳ ಹಿಂದೆ ಸುಚಿತ್ರಾ ಗಂಡನನ್ನು ತೊರೆದು ಮಕ್ಕಳನ್ನು ಕರೆದುಕೊಂಡು ಶಿವಮೊಗ್ಗದ ಕಮಲಾಕರ ಭಟ್ ಮನೆಯಲ್ಲಿ ವಾಸವಾಗಿದ್ದಳು. ಈ ಹೆಣ್ಣುಮಕ್ಕಳು ಕಮಲಾಕರ-ಸುಚಿತ್ರಾ ನಡುವಿನ ಅನೈತಿಕ ಸಂಬಂಧ ಹಾಗೂ ಅವರು ನೀಡುತ್ತಿದ್ದ ಹಿಂಸೆ ಕುರಿತು ತಂದೆಗೆ ಮಾಹಿತಿ ನೀಡಿದ್ದಾರೆ. ಆಗ ಫೆ.1ರಂದು ಮಗಳು ಮನೆಗೆ ಬಂದಿದ್ದಳು. ಇದರಿಂದ ಕೋಪಗೊಂಡ ಸುಚಿತ್ರಾ, ಕಮಲಾಕರ, ಉಳಿದ ಆರೋಪಿಗಳೊಂದಿಗೆ ಗಂಡ ಮಹೇಶ ನಾಯ್ಕ ಮನೆಗೆ ನುಗ್ಗಿ ಮಗಳನ್ನು ಕರೆದೊಯ್ಯಲು ಯತ್ನಿಸಿದ್ದಾರೆ. ಆಗ ನಡೆದ ವಾಗ್ವಾದ, ತಳ್ಳಾಟದಲ್ಲಿ ವಸಂತಗೆ ಚಾಕು ಇರಿಯಲಾಗಿತ್ತು.

