- Home
- Entertainment
- TV Talk
- Photos: ಕಟ್ಟಿದ ಒಂದು ತಿಂಗಳಿಗೆ ಮನೆ ಹಾಳು; ಮತ್ತೆ ರಾಯಲ್ ಮನೆ ಕಟ್ಟಿದ ಮಂಗಳೂರಿನ Madhyama Kutumba
Photos: ಕಟ್ಟಿದ ಒಂದು ತಿಂಗಳಿಗೆ ಮನೆ ಹಾಳು; ಮತ್ತೆ ರಾಯಲ್ ಮನೆ ಕಟ್ಟಿದ ಮಂಗಳೂರಿನ Madhyama Kutumba
Madhyama Kutumba Vlogs: ಮಂಗಳೂರಿನ ಪ್ರಿಯಾ ಮೋನಿಕಾ ಎನ್ನುವ ಯುಟ್ಯೂಬರ್‌ವೊಬ್ಬರು ವರ್ಷದ ಹಿಂದೆಯೇ ಮನೆ ಕಟ್ಟಿಸಿದ್ದಾರೆ. ಆದರೆ ಮನೆ ಕಟ್ಟಿಸಿ ಒಂದು ತಿಂಗಳಿಗೆ ಮನೆ ಹಾಳಾಗಿದೆ. ಈಗ ಅವರು ಹೊಸದಾಗಿ ಗೃಹ ಪ್ರವೇಶ ಮಾಡಿದ್ದಾರೆ.

madhyama kutumba vlogs
ಮಧ್ಯಮ ಕುಟುಂಬ ಎಂಬ ಯುಟ್ಯೂಬ್ ಚಾನೆಲ್ ಹೊಂದಿರುವ ಪ್ರಿಯಾ ಅವರು ಗಂಡ, ಮಕ್ಕಳು ಎಂದು ವಿಡಿಯೋಗಳನ್ನು ಮಾಡಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಇವುಗಳನ್ನು ನೋಡುವವರ ಸಂಖ್ಯೆ ದೊಡ್ಡದಿದೆ.
ವರ್ಷದ ಹಿಂದೆ ಮನೆ ಕಟ್ಟಿಸಿದ್ರು
ವರ್ಷದ ಹಿಂದೆ ಇವರು ಕನಸಿನ ಮನೆಗೆ ಕಾಲಿಟ್ಟಿದ್ದರು. ಮಂಗಳೂರಿನಲ್ಲಿಯೇ ಅತಿ ಸುಂದರವಾಗಿ, ದೊಡ್ಡದಾಗಿ ಮನೆ ಕಟ್ಟಿಸಲಾಗಿತ್ತು. ಅದ್ದೂರಿಯಾಗಿ ಗೃಹ ಪ್ರವೇಶ ಕೂಡ ಮಾಡಿದ್ದರು.
ಒಂದೇ ತಿಂಗಳಲ್ಲಿ ಹಾಳಾಗಿತ್ತು
ಆದರೆ ಆ ಹೊಸ ಮನೆಯಲ್ಲಿ ಸಮಸ್ಯೆ ಆಗಿತ್ತು. ಪ್ರಿಯಾ ಮೋನಿಕಾ ಅವರ ಮನೆಯನ್ನು ಮಹಿಳೆಯೋರ್ವರು ಇಂಟಿರಿಯರ್ ಡಿಸೈನ್ ಮಾಡಿಸಿದ್ದರು. ಆದರೆ ಮನೆ ಕಟ್ಟಿಸಿದ ಒಂದು ತಿಂಗಳಿಗೆ ಮನೆಯೆಲ್ಲವೂ ಫಂಗಸ್ ಬೆಳೆದು ಹಾಳಾಗಿತ್ತು.
ಮೋಸ ಆಗಿದೆ
ಪ್ರಿಯಾ ಮೋನಿಕಾ ಅವರು ಮೋಸ ಆಗಿದೆ ಎಂದು ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಆದರೆ ಬೇರೆ ದಾರಿ ಇಲ್ಲದೆ ಅವರು ಮತ್ತೆ ಬಾಡಿಗೆ ಮನೆಗೆ ಹೋಗಿದ್ದರು.
ಈಗ ಹೊಸ ಇಂಟಿರಿಯರ್
ಹಳೆಯ ಮನೆಯ ಇಂಟಿರಿಯರ್ ಎಲ್ಲವನ್ನು ತೆಗೆದು, ಮತ್ತೆ ಹೊಸದಾಗಿ ಇಂಟಿರಿಯರ್ ಹಾಕಿದ್ದಾರೆ. ಈಗ ಹೊಸ ಮನೆಗೆ ಬೇರೆ ಏನೂ ಬೇಡ, ಎಲ್ಲವೂ ಪರ್ಪೆಕ್ಟ್ ಆಗಿದೆ, ತೃಪ್ತಿಯಿದೆ ಎಂದು ಹೇಳಿದ್ದಾರೆ. ಇನ್ನು ಹೊಸದಾಗಿ ಮತ್ತೆ ಗೃಹ ಪ್ರವೇಶ ಕೂಡ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

