ಕೊಪ್ಪಳ: ಇಸ್ಲಾಂ ಧರ್ಮದ ಕುರಿತ ತಮ್ಮ ಹೇಳಿಕೆಗೆ ಎರಡು ದಿನಗಳಿಂದ ವ್ಯಾಪಕ ಪ್ರಚಾರ ಕೊಟ್ಟಿರುವುದಕ್ಕೆ ಧನ್ಯವಾದ, ಇಲ್ಲದಿದ್ದರೆ ಬಸವರಾಜ ರಾಯರೆಡ್ಡಿ ಅಂದರೆ ಯಾರಿಗೂ ಗೊತ್ತಿರಲಿಲ್ಲ. ಸೌದಿ ಅರೇಬಿಯಾ, ಇರಾನ್‌ನಲ್ಲೆಲ್ಲ ಪ್ರಚಾರ ಸಿಕ್ಕಿದೆ ಎಂದು ಮುಖ್ಯಮಂತ್ರಿ ಅವರೂ ಹೇಳಿದ್ದಾರೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಾತನಾಡಿದ ಅವರು, 2 ದಿನ ಪ್ರಚಾರ ಕೊಟ್ಟಿದ್ದಕ್ಕೆ ಧನ್ಯವಾದ. ಧರ್ಮದ ವಿಚಾರವಾಗಿ ನನ್ನ ಹೇಳಿಕೆಯಿಂದ ನನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕಿದೆ. ದೇಶದ ಬೇರೆ ಬೇರೆ ನಾಯಕರು ಮಾತನಾಡುತ್ತಾರೆ. ನನ್ನ ಹೇಳಿಕೆಯನ್ನು ಅರ್ಧ ಬಳಸಿದ್ದರಿಂದ ಖ್ಯಾತಿ, ಅಪಖ್ಯಾತಿ ಉಂಟಾಗಿದೆ. ದಯವಿಟ್ಟು ಮಾಧ್ಯಮದವರು ಹೇಳಿಕೆಯನ್ನು ಪೂರ್ಣವಾಗಿ ಪ್ರಸಾರ ಮಾಡುವಂತೆ ಮನವಿ ಮಾಡಿದರು.
11:13 PM (IST) Sep 03
11:12 PM (IST) Sep 03
ಬಾಲಾಕೋಟ್ ವೈಮಾನಿಕ ದಾಳಿಯ ಹೀರೋ, ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ತಮಾನ್ ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿದ್ದಾರೆ. ಅವರು ಈಗ ಗೋವಾ ಮೂಲದ 'FLY91' ಎಂಬ ಖಾಸಗಿ ವಿಮಾನಯಾನ ಸಂಸ್ಥೆ ಸೇರಿ, ವಾಣಿಜ್ಯ ಪೈಲಟ್ ಆಗಿ ಹೊಸ ವೃತ್ತಿಜೀವನ ಆರಂಭಿಸಿದ್ದಾರೆ. ಈ ಸ್ಟೋರಿ ಅವರ ವಾಯುಪಡೆಯ ಸಂಬಳ ಮತ್ತು ವಾಣಿಜ್ಯ ಪೈಲಟ್ ಆಗಿ ನಿರೀಕ್ಷಿಸಬಹುದಾದ ವೇತನವನ್ನು ವಿಶ್ಲೇಷಿಸುತ್ತದೆ.
10:54 PM (IST) Sep 03
10:52 PM (IST) Sep 03
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಕೃತಕ ಬುದ್ಧಿಮತ್ತೆ ಆಧಾರಿತ 'ಯೂನಿಫೈಡ್ ಏಜೆಂಟ್ ಪ್ರೋಟೋಕಾಲ್' ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ವ್ಯವಸ್ಥೆಯು ಗ್ರಾಹಕರ ಅನುಮತಿಯೊಂದಿಗೆ ಸಣ್ಣಪುಟ್ಟ ಯುಪಿಐ ವಹಿವಾಟುಗಳನ್ನು ಪಿನ್ ನಮೂದಿಸದೆಯೇ ಸ್ವಯಂಚಾಲಿತವಾಗಿ ಪೂರ್ಣಗೊಳಿಸಲಿದೆ.
09:55 PM (IST) Sep 03
09:53 PM (IST) Sep 03
09:36 PM (IST) Sep 03
09:28 PM (IST) Sep 03
‘ಟಾಕ್ಸಿಕ್’ ಸಿನಿಮಾ ವೀಕ್ಷಿಸಿದ ನಟ ಶಿವರಾಜ್ ಕುಮಾರ್, ಯಶ್ ಅಭಿನಯ ಹಾಗೂ ಚಿತ್ರದ ಕೊನೆಯ 20 ನಿಮಿಷಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಥಿಯೇಟರ್‌ಗೆ ತೆರಳಿದ ಶಿವಣ್ಣ, ‘ಟಾಕ್ಸಿಕ್’ ನಮ್ಮ ಹುಡುಗನ ಸಿನಿಮಾ ಎಂದು ಯಶ್‌ಗೆ ಬೆಂಬಲ ಸೂಚಿಸಿದ್ದಾರೆ.
09:23 PM (IST) Sep 03
ಕೆಲ ವಿದ್ಯಮಾನದಿಂದಾಗಿ ಮುಂದಿನ ಆರು ತಿಂಗಳಲ್ಲಿ ಜಾಗತಿಕ ಹಾಗೂ ಭಾರತದ ಹವಾಮಾನದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಹವಾಮಾನ ಇಲಾಖೆ ಹೇಳಿದ್ದಾದರೂ ಏನು? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ.
09:13 PM (IST) Sep 03
09:06 PM (IST) Sep 03
ಕೇಂದ್ರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ, ಉದ್ಯಾನವನ ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದು, ಬರ ಹಾಗೂ ಕಸ್ತೂರಿರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ.
09:01 PM (IST) Sep 03
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಮಹತ್ವಾಕಾಂಕ್ಷೆಯ AI ಆಧಾರಿತ ಸಿನಿಮಾದ ಬಗ್ಗೆ ಮಾತನಾಡಿದ ರವಿಚಂದ್ರನ್, ಚಿತ್ರದ ಚಿತ್ರೀಕರಣದಿಂದ ಹಿಡಿದು ಸಂಗೀತ, ಎಡಿಟಿಂಗ್ ಹಾಗೂ ಸಿಜಿಐವರೆಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
08:30 PM (IST) Sep 03
ನಿಷ್ಕರ್ಷ ಕನ್ನಡ ಚಿತ್ರರಂಗದ ಮರೆಯಲಾಗದ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದು. ಡಾ. ವಿಷ್ಣುವರ್ಧನ್, ಅನಂತ್ ನಾಗ್ ಹಾಗೂ ಬಿ.ಸಿ. ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ 1993ರ ಸಿನಿಮಾವನ್ನು ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದಾರೆ.
08:30 PM (IST) Sep 03
ಬಾಲ್ಯದಲ್ಲಿ ಅಪ್ಪ ಮಗಳಿಗೆ ಎಲ್ಲವನ್ನೂ ಕೊಡಿಸುವ ಸಾಹುಕಾರ! ತನಗೆ ಎಷ್ಟೇ ಕಷ್ಟವಾಗಲಿ, ನೋವಿರಲಿ, ನಲಿವು ಇರಲಿ! ಮಗಳು ಕೇಳಿದಳು ಅಂದ್ರೆ ಮುಗೀತು, ಕ್ಷಣಾರ್ಧದಲ್ಲಿ ಅದು ಕಣ್ಮುಂದೆ ಇರುವಂತೆ ನೋಡಿಕೊಳ್ತಾನೆ. ಅಂತಹುದೇ ಒಂದು ಘಟನೆ ನಡೆದಿದೆ. ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
08:22 PM (IST) Sep 03
ಟೀಂ ಇಂಡಿಯಾದ ಮಾಜಿ ಆಟಗಾರ 2027ರ ಏಕದಿನ ವಿಶ್ವಕಪ್‌ಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಕುರಿತು ಬಿಗ್ ಪ್ರಿಡಿಕ್ಷನ್ ನುಡಿದಿದ್ದಾರೆ. ಆ ನಿಟ್ಟಿನಲ್ಲಿ 2027ರ ಕುರಿತು ಅವರು ಹೇಳಿದ್ದೇನು ಗೊತ್ತಾ? ಇಲ್ಲಿದೆ ಅದಕ್ಕೆ ಉತ್ತರ!
08:00 PM (IST) Sep 03
ಗಂಗಾವತಿ ಭಾಗಕ್ಕೆ ಮಾತ್ರ ಸೀಮಿತವಾಗದೆ ಸೋಮನಾಳ, ಮೈಲಾಪುರ, ಚಿಕ್ಕಡಂಕನಕಲ್ ಹಾಗೂ ಕಾರಟಗಿ ಭಾಗಗಳಲ್ಲಿಯೂ ಕೆಲ ಪ್ರಭಾವಿ ರೈತರು ಕಾಲುವೆಗೆ ಅಕ್ರಮವಾಗಿ ಪೈಪ್‌ಗಳನ್ನು ಜೋಡಿಸಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
07:46 PM (IST) Sep 03
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿ ನಿಧಿ ಸಿಗುತ್ತದೆ ಎಂಬ ನಂಬಿಕೆಯಿಂದ ಮನೆಯ ಬೆಡ್‌ರೂಂನಲ್ಲೇ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ಬಿಹಾರ ಮೂಲದ ಆರು…
07:45 PM (IST) Sep 03
ಟೀಂ ಇಂಡಿಯಾ ಆಯ್ಕೆ ಬಗ್ಗೆ ಅಸಮಾಧಾನ ಭುಗಿಲೇಳೋದು ಹೊಸದೇನೂ ಅಲ್ಲ. ಅಫ್ಘಾನ್ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟ ಬೆನ್ನಲ್ಲೇ ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಎಸ್.ಬದರಿನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಆಕ್ರೋಶಕ್ಕೆ ಕಾರಣ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
07:11 PM (IST) Sep 03
ನಿಮ್ಮ ಇಪಿಎಸ್ ಪಿಂಚಣಿ ನಿಜವಾಗಿಯೂ ಎಷ್ಟು? ಖಾಸಗಿ ಉದ್ಯೋಗಿಗಳ ಪಿಂಚಣಿ ಲೆಕ್ಕಾಚಾರದ ಸೂತ್ರ, ವೇತನ ಮಿತಿ ಮತ್ತು ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡುವುದರ ಮೂಲಕ ಇಲ್ಲಿ ನೀಡಿರುವ ವಿಧಾನದೊಂದಿಗೆ ನೀವೆ ಲೆಕ್ಕಹಾಬಹುದು.
06:14 PM (IST) Sep 03
ಶಾಸಕ ಬಸವರಾಜ್ ರಾಯರೆಡ್ಡಿ ಅವರ ಇಸ್ಲಾಂ ಪರ ಹೇಳಿಕೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ವಿನೂತನ ಪ್ರತಿಭಟನೆ ನಡೆಸಿವೆ. ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಹಣ ಸಂಗ್ರಹಿಸಲು ಭಿಕ್ಷಾಟನೆ ಅಭಿಯಾನ ನಡೆಸಿದ ಕಾರ್ಯಕರ್ತರು, ಅವರ ರಾಜೀನಾಮೆಗೆ ಆಗ್ರಹಿಸಿದರು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
05:48 PM (IST) Sep 03
‘ಪ್ಯಾರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ರವಿಚಂದ್ರನ್ ಹಾಗೂ ರಾಶಿಕಾ ಶೆಟ್ಟಿ ಅಪ್ಪ-ಮಗಳಾಗಿ ಕಾಣಿಸಿಕೊಂಡಿದ್ದಾರೆ. ಎಸ್. ಸುಪ್ರೀತ್ ನಿರ್ದೇಶನದ ಈ ಸಿನಿಮಾದಲ್ಲಿ ತಂದೆಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಮಗಳ ಭಾವನಾತ್ಮಕ ಕಥೆಯ ಜೊತೆಗೆ ಯುವ ಜೋಡಿಯ ಪ್ರೇಮಕಥೆಯೂ ಇದೆ.
05:08 PM (IST) Sep 03
ರಾಜ್ಯದ 847 ವಸತಿ ಶಾಲೆಗಳಲ್ಲಿ ಕಳಪೆ ಗುಣಮಟ್ಟದ ಧಾನ್ಯಗಳನ್ನು ಪೂರೈಕೆ ಮಾಡುವ ಮೂಲಕ ನೂರಾರು ಕೋಟಿ ರೂಪಾಯಿಗಳ ಬೃಹತ್ ಭ್ರಷ್ಟಾಚಾರ ನಡೆದಿದೆ ಎಂದು ಎಂಎಲ್‌ಸಿ ರವಿಕುಮಾರ್ ಆರೋಪಿಸಿದ್ದಾರೆ. ಈ ಹಗರಣದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
05:00 PM (IST) Sep 03
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ತಾನು 11ನೇ ತರಗತಿ ನಂತರ ಓದು ನಿಲ್ಲಿಸಿದ್ದಕ್ಕೆ ಈಗಲೂ ಪಶ್ಚಾತ್ತಾಪ ಪಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತನ್ನ ಮಕ್ಕಳು ಶಿಕ್ಷಣವನ್ನು ಪೂರ್ಣಗೊಳಿಸಬೇಕು ಎಂಬ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.
04:59 PM (IST) Sep 03
04:38 PM (IST) Sep 03
ಹಿರಿಯ ಕನ್ನಡ ನಟಿ ಜಯಲಕ್ಷ್ಮೀ ಪಾಟೀಲ್ ಕಳೆದ ಆರು ತಿಂಗಳಿಂದ ಧಾರಾವಾಹಿಗಳಿಂದ ದೂರ ಉಳಿದಿದ್ದಾರೆ. ತೀವ್ರ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅವರು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
04:34 PM (IST) Sep 03
ಪೆನ್ಷನ್‌ಬಜಾರ್ ಮತ್ತು ಉಬುಂಟು ಕನ್ಸೋರ್ಟಿಯಂ, ಮಹಿಳಾ ಕಾರ್ಮಿಕರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಒದಗಿಸಲು ಒಪ್ಪಂದ ಮಾಡಿಕೊಂಡಿವೆ. ಈ ಪಾಲುದಾರಿಕೆಯು ಮಹಿಳೆಯರಲ್ಲಿ ದೀರ್ಘಕಾಲೀನ ಉಳಿತಾಯ ಮತ್ತು ಆರ್ಥಿಕ ಭದ್ರತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
04:26 PM (IST) Sep 03
ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕನ ಪುತ್ರಿ ಐಶ್ವರ್ಯಗೆ ಕಾನೂನು ಸಂಕಷ್ಟ ಎದುರಾಗಿದೆ. ಹಾಗಾದರೆ ಆಗಿದ್ದೇನು ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
04:20 PM (IST) Sep 03
04:10 PM (IST) Sep 03
ಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಡಿಕೆಶಿ ಹೆಗ್ಡೆ, ಸೋಮಾರಿತನದಿಂದಲೇ ತಮಗೆ ದೊಡ್ಡ ಆಲೋಚನೆಗಳು ಬರುತ್ತವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ತಮ್ಮ ಅತ್ತೆ ಮಾಳವಿಕಾ ಸಿದ್ಧಾರ್ಥ್ ಅವರ ಸಲಹೆಯನ್ನು ಉಲ್ಲೇಖಿಸಿದ್ದಾರೆ.
04:08 PM (IST) Sep 03
ಸೂರ್ಯ 48 ಸಿನಿಮಾದಲ್ಲಿ ನಟಿಸುತ್ತಿರುವ ಕಯಾದು ಲೋಹರ್, ನಟ ಸೂರ್ಯ ಜೊತೆ ಶೂಟಿಂಗ್ ಮಾಡುವ ಅನುಭವದ ಬಗ್ಗೆ ಮಾತನಾಡಿದ್ದಾರೆ. ಮೊದಲ ದಿನ ಸೂರ್ಯ ಜೊತೆ ನಟಿಸುವಾಗ ಸಂಕೋಚ ಮತ್ತು ಆತಂಕವಿತ್ತು, ನಾಲ್ಕು ದಿನಗಳಾದರೂ ಆ ಭಾವನೆ ಇನ್ನೂ ಇದೆ ಎಂದು ನಟಿ ಹೇಳಿಕೊಂಡಿದ್ದಾರೆ.
03:59 PM (IST) Sep 03
03:53 PM (IST) Sep 03
ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಜೊತೆ ಸಚಿವ ಈಶ್ವರ್ ಖಂಡ್ರೆ ಸಿಹಿ ಸವಿದ ಫೋಟೋ ವೈರಲ್ ಆಗಿದ್ದು, ಭಾಲ್ಕಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಫೋಟೋವನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಸಚಿವರ ವಿರುದ್ಧ ರಾಜಕೀಯ ಗಿಮಿಕ್ ಆರೋಪ ಮಾಡಿದ್ದು, ಅಕ್ರಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ.
03:30 PM (IST) Sep 03
ನಿತ್ಯಾ ಮೆನನ್ ಅವರ ಅಸಲಿ ಹೆಸರೇನು ಎಂಬುದನ್ನು ನಟಿಯೇ ಬಹಿರಂಗಪಡಿಸಿದ್ದಾರೆ. ಕುಟುಂಬದಲ್ಲಿ ಸರ್‌ನೇಮ್ ಬಳಸದೇ ಇರುವ ನಿರ್ಧಾರ ಹಾಗೂ ತಮ್ಮ ಹೆಸರಿನ ಹಿಂದಿನ ಕುತೂಹಲಕಾರಿ ಕಥೆಯನ್ನು ನಿತ್ಯಾ ಮೆನನ್ ಹಂಚಿಕೊಂಡಿದ್ದಾರೆ.
03:26 PM (IST) Sep 03
ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಕಾಫಿ ಬೆಳೆಗೆ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದರಿಂದ ಕಾಫಿ ಕಾಯಿಗಳು ಕೊಳೆತು ಉದುರುತ್ತಿದೆ. ಈ ಅನಿರೀಕ್ಷಿತ ರೋಗದಿಂದ ಶೇ. 40-50ರಷ್ಟು ಬೆಳೆ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರು ಸರ್ಕಾರದ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.
02:41 PM (IST) Sep 03
02:36 PM (IST) Sep 03
ಮೈಸೂರು-ಅಜ್ಮೀರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16281/16282) ಸೆಪ್ಟೆಂಬರ್ 5 ರಿಂದ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ರೈಲು ದಕ್ಷಿಣ, ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹಾಸನ, ಹುಬ್ಬಳ್ಳಿ, ಬೆಳಗಾವಿ ಮೂಲಕ ಹಾದುಹೋಗಿ, ಮಹಾರಾಷ್ಟ್ರ, ಗುಜರಾತ್ ಮಾರ್ಗವಾಗಿ ಅಜ್ಮೀರ್ ತಲುಪಲಿದೆ.
02:22 PM (IST) Sep 03
01:16 PM (IST) Sep 03
01:08 PM (IST) Sep 03
12:39 PM (IST) Sep 03
ಮಲೆ ಮಹದೇಶ್ವರ ವನ್ಯಧಾಮದ ಹನೂರು ವಲಯದಲ್ಲಿ, ನೀರು ಕುಡಿಯಲು ಬಂದ ಕಡವೆಯನ್ನು ಬೇಟೆಗಾರರು ನಾಡಬಂದೂಕಿನಿಂದ ಗುಂಡಿಕ್ಕಿ ಕೊಂದಿದ್ದಾರೆ. ಕಡವೆಯ ಮಾಂಸವನ್ನು ಮೂರು ತುಂಡು ಮಾಡಿ ಸಾಗಿಸಲು ಯತ್ನಿಸುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ, ಬೇಟೆಗಾರರು ಪರಾರಿ, ಪತ್ತೆಗೆ ಕ್ರಮ.