ಬೆಂಗಳೂರು (ಡಿ.26): ಒಂದೆಡೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಸರತ್ತು ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಶುಕ್ರ ವಾರ ಸಂಜೆ ತೆರಳಲಿದ್ದಾರೆ. ಆದರೆ ಈ ವೇಳೆ ಅವಕಾಶ ಸಿಕ್ಕರೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತ್ರ ಅವರು ಹೈಕಮಾಂಡ್ ಜತೆ ಚರ್ಚಿಸುವ' ಸಾಧ್ಯತೆ ಇದೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:27 PM (IST) Dec 26
ಅರಾವಳಿ ಪರ್ವತ ಶ್ರೇಣಿಯನ್ನು ಗಣಿಗಾರಿಕೆ ಮಾಫಿಯಾದಿಂದ ರಕ್ಷಿಸಲು ರಾಷ್ಟ್ರೀಯ ಯುವ ಕಾಂಗ್ರೆಸ್ 'ಅರಾವಳಿ ಸತ್ಯಾಗ್ರಹ' ಎಂಬ 1,000 ಕಿ.ಮೀ. ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಈ ಹೋರಾಟದ ಮೂಲಕ, ಅಕ್ರಮ ಗಣಿಗಾರಿಕೆ ನಿಲ್ಲಿಸುವುದು ಮತ್ತು ಅರಾವಳಿ 'ನಿರ್ಣಾಯಕ ಪರಿಸರ ವಲಯ' ಎಂದು ಘೋಷಿಸುವಂತೆ ಒತ್ತಾಯ.
11:00 PM (IST) Dec 26
10:35 PM (IST) Dec 26
10:22 PM (IST) Dec 26
ಮೈಸೂರಿನಲ್ಲಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ. ಇದೇ ವೇಳೆ ಮೃತ ವ್ಯಾಪಾರಿ ಸಲೀಂ ಮೇಲೆ ಅನುಮಾನಗಳು ಹೆಚ್ಚುತ್ತಿದೆ. ಇದಕ್ಕೆ ಕೆಲ ಕಾರಣಗಳು ಇವೆ.
10:05 PM (IST) Dec 26
Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ತೇಜಸ್ ಮರಳಿ ಬಂದಾಗಿದೆ, ನಿತ್ಯಾ ಹಾಗೂ ತೇಜಸ್ ಮದುವೆ ಮಾಡಿಸಬೇಕು ಎಂದು ಕರ್ಣ ರೆಡಿಯಾಗಿದ್ದಾನೆ. ಅಷ್ಟರೊಳಗಡೆ ನಿತ್ಯಾ ಮಗುವಿಗೆ ತೊಂದರೆ ಆಗುವ ಸಂದರ್ಭ ಬಂದಿದೆ. ಹಾಗಾದರೆ ಮುಂದೆ ಏನಾಗಲಿದೆ?
09:40 PM (IST) Dec 26
ಪ್ರಧಾನಿ ಮೋದಿ ಲಕ್ನೋ ಭೇಟಿಯ ನಂತರ, ಕಾರ್ಯಕ್ರಮದ ವೇದಿಕೆಯನ್ನು ಅಲಂಕರಿಸಲು ತಂದಿದ್ದ ಹೂವಿನ ಕುಂಡಗಳನ್ನು ಸ್ಥಳೀಯರು ಕದ್ದೊಯ್ದಿದ್ದಾರೆ. ಸ್ಕೂಟರ್ ಮತ್ತು ಬೈಕ್‌ಗಳಲ್ಲಿ ಬಂದು ಜನರು ಹೂವಿನ ಗಿಡಗಳನ್ನು ಕೊಂಡೊಯ್ಯುತ್ತಿರುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
09:29 PM (IST) Dec 26
ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ಈಗ ಮತ್ತೊಮ್ಮೆ ತನ್ನ ಕೇಡಿ ಬುದ್ಧಿ ಪ್ರದರ್ಶನ ಮಾಡಿದ್ದಾನೆ. ಅಜ್ಜಿ ಅವಳ ಆಸ್ತಿಯನ್ನು ಗೌತಮ್‌ಗೆ ಬರೆದಮೇಲೆ ಅವನಿಗೆ ಆಕಾಶ್ ಎಂಬ ಅಸ್ತ್ರ ಸಿಕ್ಕಿದೆ. ಮೋಸದಿಂದ ಅವನು ಆಕಾಶ್‌ನನ್ನು ಮನೆಗೆ ಕರೆದುಕೊಂಡು ಬಂದು, ಇನ್ನಷ್ಟು ಆಸ್ತಿ ಕಬಳಿಸುವ ಪ್ಲ್ಯಾನ್ ಮಾಡಿದ್ದಾನೆ.
09:23 PM (IST) Dec 26
ಹಾವೇರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ದಂಧೆ ಬಯಲಾಗಿದ್ದು, ಕುಖ್ಯಾತ ಅಕ್ಕಿ ಕಳ್ಳ ಸಚಿನ್ ಕಬ್ಬೂರ್‌ನಿಂದ 63 ಟನ್ ಅಕ್ಕಿ ಮತ್ತು 50 ಕ್ವಿಂಟಾಲ್ ಗೋಧಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ಹಲವು ಪ್ರಕರಣಗಳಿದ್ದರೂ ಕ್ರಮವಿಲ್ಲ!
08:43 PM (IST) Dec 26
ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೆರಿಯನ್ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶುವಿನ ತಲೆಗೆ ಬ್ಲೇಡ್ ತಗುಲಿ ಗಾಯವಾಗಿದೆ. ನಾರ್ಮಲ್ ಡೆಲಿವರಿ ಸಾಧ್ಯವಿಲ್ಲವೆಂದು ಹೇಳಿ ಆಪರೇಷನ್ ಮಾಡಲಾಗಿದ್ದು, ಘಟನೆಯ ನಂತರ ವೈದ್ಯರು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.
08:38 PM (IST) Dec 26
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 28 ರಂದು ಕಾರವಾರದ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಐಎನ್ಎಸ್ ವಿಕ್ರಾಂತ್ ಯುದ್ಧನೌಕೆ ಹಾಗೂ ಸಬ್‌ಮರೀನ್ ವೀಕ್ಷಿಸಲಿದ್ದು, ಭದ್ರತಾ ದೃಷ್ಟಿಯಿಂದ ಕಾರವಾರ-ಅಂಕೋಲಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
07:45 PM (IST) Dec 26
ತಿರುಪತಿಗೆ ತಿರುಮಲನಿಗೆ ಮುಡಿ ಕೊಟ್ಟ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಭಾರಿ ಬದಲಾವಣೆ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಇದೀಗ ಐಪಿಎಲ್ ಮರಳಿ ತರಲು ಪ್ರಯತ್ನದಲ್ಲಿ ಆರಂಭಿಕ ಯಶಸ್ಸು ಕಂಡಿದ್ದಾರೆ.
07:34 PM (IST) Dec 26
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ರಸ್ತೆ ದಾಟುತ್ತಿದ್ದ ಏಳು ವರ್ಷದ ಬಾಲಕಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
07:28 PM (IST) Dec 26
07:14 PM (IST) Dec 26
07:02 PM (IST) Dec 26
ಐಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರಧಾನಿ ಮೋದಿಯವರನ್ನು ಟೀಕಿಸಲು ಎಐ-ಸೃಷ್ಟಿತ ನಕಲಿ ಚಿತ್ರವನ್ನು ಬಳಸಿದ್ದಾರೆಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ನಡೆ 'ದ್ವೇಷ ಭಾಷಣ ತಡೆ ಬಿಲ್'ನ ಉಲ್ಲಂಘನೆಯಾಗಿದ್ದು, ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
06:42 PM (IST) Dec 26
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸನ್ಯಾಸ ಜೀವನದ 50ನೇ ವರ್ಷದ ಸಾರ್ಥಕ ಕ್ಷಣದ ನೆನಪಿಗಾಗಿ ಉಡುಪಿ ಶ್ರೀಕೃಷ್ಣನಿಗೆ 'ಪಾರ್ಥಸಾರಥಿ ಸುವರ್ಣ ರಥ' ಸಮರ್ಪಣೆಯಾಗುತ್ತಿದೆ. ಅಷ್ಟಮಠಗಳಿಗೆ ಸರಿಸಮನಾಗಿ ಎಂಟನೇ ರಥವಾಗಿ ಸೇರ್ಪಡೆಯಾಗುತ್ತಿರುವ ಈ ರಥವನ್ನು ಮಳೆಗಾಲದಲ್ಲೂ ಎಳೆಯಬಹುದಾಗಿದೆ.
06:26 PM (IST) Dec 26
06:10 PM (IST) Dec 26
06:04 PM (IST) Dec 26
06:01 PM (IST) Dec 26
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟನಿಗೆ ಎಲ್ಲರೂ ಪ್ರತಿಸ್ಪರ್ಧಿಗಳೇ. ಆಟದ ವಿಚಾರಕ್ಕೋ ಇನ್ಯಾವುದೋ ವಿಚಾರಕ್ಕೋ ಗಿಲ್ಲಿ ಕೂಡ ಅನೇಕರ ಜೊತೆ ಜಗಳ ಆಡಿದ್ದುಂಟು, ವಾದ-ವಿವಾದದಲ್ಲಿ ಭಾಗಿ ಆಗಿದ್ದುಂಟು. ಆದರೆ ಆ ಸ್ಪರ್ಧಿಗಳ ಮನೆಯವರು ಗಿಲ್ಲಿ ಪರವಾಗಿರೋದು ವಿಶೇಷವಾಗಿದೆ.
05:40 PM (IST) Dec 26
05:36 PM (IST) Dec 26
ಪುರಸಭೆಯ ನೂತನ ಅಧ್ಯಕ್ಷೆ 'ರಾಹುಕಾಲ'ದ ಕಾರಣ ನೀಡಿ ಅಧಿಕಾರ ಸ್ವೀಕರಿಸಲು ವಿಳಂಬ ಮಾಡಿದರು. ಈ ಘಟನೆಯಿಂದಾಗಿ ಅಧಿಕಾರಿಗಳು ಮತ್ತು ಕಾರ್ಯಕರ್ತರು ಸುಮಾರು 45 ನಿಮಿಷ ಕಾಯಬೇಕಾಯಿತು, ಇದು ಸಾರ್ವಜನಿಕ ಸೇವೆಯಲ್ಲಿ ವೈಜ್ಞಾನಿಕ ಮನೋಭಾವದ ಚರ್ಚೆಯನ್ನು ಹುಟ್ಟುಹಾಕಿದೆ.
05:23 PM (IST) Dec 26
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಅಪ್ಪ ಶರತ್ ಮತ್ತು ಮಗಳು ಹಿತಾ ನಡುವಿನ ಬಾಂಧವ್ಯವು ವೀಕ್ಷಕರ ಮನಗೆದ್ದಿದೆ. ತಾಯಿಯ ಸಾವಿಗೆ ಅಪ್ಪನೇ ಕಾರಣವೆಂದು ಮಗಳು ನಂಬಿದ್ದು, ಇವರಿಬ್ಬರನ್ನು ಒಂದು ಮಾಡಲು ದುರ್ಗಾ ಪ್ರಯತ್ನಿಸುತ್ತಿದ್ದಾಳೆ.
05:09 PM (IST) Dec 26
04:44 PM (IST) Dec 26
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಪಾಲಕರ ಮೀಟಿಂಗ್ಸ್‌ನಲ್ಲಿ ಮನೆಯವರು ಚೆನ್ನಾಗಿದ್ದಾರಾ? ಎಲ್ಲವೂ ಆರಾಮಾ ಎಂದು ಕೇಳೋದುಂಟು. ಆದರೆ ಕಾವ್ಯ ಶೈವ ಮನೆಯವರು ಬಂದಾಗ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋದು, ಯಾವ ರೀತಿ ಆಟ ಆಡೋದು ಎಂದು ಒಪನ್ ಆಗಿ ಚರ್ಚೆ ಮಾಡೋ ಬಗ್ಗೆ ಚರ್ಚೆಯಾಗಿದೆ.
04:34 PM (IST) Dec 26
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ, ಮೃತಪಟ್ಟ ಬಲೂನ್ ವ್ಯಾಪಾರಿ ಸಲೀಂ ಅವರನ್ನೇ ಪ್ರಮುಖ ಆರೋಪಿಯನ್ನಾಗಿಸಿ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗಾಯಗೊಂಡ ಪ್ರವಾಸಿಗರೊಬ್ಬರ ದೂರಿನ ಮೇರೆಗೆ, ನಿರ್ಲಕ್ಷ್ಯತನದ ಆರೋಪದ ಮೇಲೆ ಈ ಕ್ರಮ.
04:27 PM (IST) Dec 26
ಬೆಂಗಳೂರಿನ 'ನಮ್ಮ ಮೆಟ್ರೋ' ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರೊಂದಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಯುವತಿಯ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಎನ್‌ಸಿಆರ್ ದಾಖಲಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
03:45 PM (IST) Dec 26
03:38 PM (IST) Dec 26
ಚಿತ್ರದುರ್ಗ ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾದ ಬೆಂಗಳೂರಿನ ಗಗನಶ್ರೀ ಬೆನ್ನುಮೂಳೆ ಮುರಿತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದಾಗ ನಡೆದ ಈ ದುರಂತದಲ್ಲಿ ಆಕೆಯ ಸ್ನೇಹಿತೆ ರಶ್ಮಿ ಮೃತಪಟ್ಟಿದ್ದು, ಕಣ್ಣೆದುರೇ ನಡೆದ ಘಟನೆಯಿಂದ ಗಗನಶ್ರೀ ಆಘಾತಕ್ಕೊಳಗಾಗಿದ್ದಾರೆ.
03:23 PM (IST) Dec 26
ತೆಲುಗು ನಟ ಶಿವಾಜಿ ಮಹಿಳೆಯರ ಬಗ್ಗೆ ಅನುಚಿತ ಹೇಳಿಕೆ ನೀಡಿದ್ದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಶಿವಾಜಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಮಹಿಳಾ ಆಯೋಗ ಕೂಡ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಅವರು ಕ್ಷಮೆ ಕೇಳಿದ್ದಾರೆ.
03:21 PM (IST) Dec 26
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ, ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ BIAL ಪಿಕ್-ಅಪ್ ವ್ಯವಸ್ಥೆಯನ್ನು ತಿದ್ದುಪಡಿ ಮಾಡಿದೆ. ಉಚಿತ ಪಾರ್ಕಿಂಗ್ ಅವಧಿಯನ್ನು 15 ನಿಮಿಷಗಳಿಗೆ ವಿಸ್ತರಿಸಲಾಗಿದೆ.
02:48 PM (IST) Dec 26
Meghana Raj Hosts Grand Christmas Party for Sandalwood Friends ನಟಿ ಮೇಘನಾ ರಾಜ್ ಅವರು ತಮ್ಮ ಮಗ ಮತ್ತು ಸ್ಯಾಂಡಲ್‌ವುಡ್‌ನ ಆತ್ಮೀಯ ಸ್ನೇಹಿತೆಯರಾದ ರಕ್ಷಿತಾ, ಶ್ರುತಿ, ಮಾಳವಿಕಾ ಅವಿನಾಶ್ ಅವರೊಂದಿಗೆ ಕ್ರಿಸ್‌ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
02:47 PM (IST) Dec 26
ಬಿಗ್‌ಬಾಸ್ ಮನೆಯಲ್ಲಿ ಕುಟುಂಬಸ್ಥರ ಮಿಲನದ ಭಾಗವಾಗಿ ಮ್ಯೂಟಂಟ್ ರಘು ಅವರ ಪತ್ನಿ ಗ್ರೀಷ್ಮಾ ಆಗಮಿಸಿದ್ದಾರೆ. ಪತ್ನಿಯನ್ನು ಕಂಡು ಭಾವುಕರಾದ ರಘು, ಆಕೆಯ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸಿದರು.
01:56 PM (IST) Dec 26
ಟಾಲಿವುಡ್ ನಟ ಶಿವಾಜಿ ಹೊತ್ತಿಸಿದ ಬೆಂಕಿ ಇನ್ನೂ ಆರೇ ಇಲ್ಲ. ಅದರಲ್ಲೂ ಅನಸೂಯಾ ಈ ವಿಷಯದಲ್ಲಿ ತುಂಬಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಶಿವಾಜಿ ಮೇಲೆ ಗರಂ ಆಗಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದೇನು?
01:29 PM (IST) Dec 26
01:25 PM (IST) Dec 26
ಸರಣಿ ಸೋಲುಗಳಿಂದ ಕಂಗೆಟ್ಟಿರುವ ನಟಿ ಇತ್ತೀಚೆಗೆ ಪವನ್ ಕಲ್ಯಾಣ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಅರ್ಥಪೂರ್ಣವಾಗಿ ಅಂತ್ಯಗೊಂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
01:23 PM (IST) Dec 26
ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ಹಾಗೂ ಜೈಲು ಶಿಕ್ಷೆಯ ಎಚ್ಚರಿಕೆ ನೀಡಲಾಗಿದೆ.
01:17 PM (IST) Dec 26
01:16 PM (IST) Dec 26
ಮದುವೆಯಾಗಿ ಒಂದೂವರೆ ತಿಂಗಳಲ್ಲೇ ನವವಧು ಗಾನವಿ ಆ*ತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಹಾಗೂ ಪತಿ ಸೂರಜ್ ನಪುಂಸಕ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪತಿ, ಅತ್ತೆ ಹಾಗೂ ನಾದಿನಿಯನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.
01:08 PM (IST) Dec 26
ಡಿಸೆಂಬರ್ 25 ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹಬ್ಬ ಎಂದೇ ಹೇಳಬಹುದು. ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಒಂದು ಕಡೆ ರಿಲೀಸ್ ಆದರೆ, ಇನ್ನೊಂದು ಕಡೆ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ರಿಲೀಸ್ ಆಗಿದೆ. ಹಾಗಾದರೆ ಮಾರ್ಕ್ ಸಿನಿಮಾ ಕಲೆಕ್ಷನ್ ಎಷ್ಟು?