- Home
- Entertainment
- Sandalwood
- Mark Movie Collection: ಕಿಚ್ಚ ಸುದೀಪ್ 'ಮಾರ್ಕ್' ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಎಷ್ಟು?
Mark Movie Collection: ಕಿಚ್ಚ ಸುದೀಪ್ 'ಮಾರ್ಕ್' ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಎಷ್ಟು?
ಡಿಸೆಂಬರ್ 25 ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹಬ್ಬ ಎಂದೇ ಹೇಳಬಹುದು. ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಒಂದು ಕಡೆ ರಿಲೀಸ್ ಆದರೆ, ಇನ್ನೊಂದು ಕಡೆ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ರಿಲೀಸ್ ಆಗಿದೆ. ಹಾಗಾದರೆ ಮಾರ್ಕ್ ಸಿನಿಮಾ ಕಲೆಕ್ಷನ್ ಎಷ್ಟು?

ಎರಡು ವರ್ಷದ ಬಳಿಕ ಕಾಣಿಸಿಕೊಂಡ್ರು
ಕಿಚ್ಚ ಸುದೀಪ್ ಅವರು ಎರಡು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡರು. ಮ್ಯಾಕ್ಸ್ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಕಿಚ್ಚ ಸುದೀಪ್ ಈ ಬಾರಿ ವಿಜಯ್ ಕಾರ್ತಿಕ್ ನಿರ್ದೇಶನದ ‘ಮಾರ್ಕ್’ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಮಲೈಕಾ ಹಾಡು ಕೂಡ ಮೋಡಿ ಮಾಡಿತ್ತು. ಡ್ಯಾನ್ಸ್ ಬರಲ್ಲ ಎನ್ನುತ್ತಿದ್ದ ಸುದೀಪ್ ಕುಣಿತ ವೀಕ್ಷಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತು.
ರಜೆಗಳು ಸಿಗುತ್ತವೆ
45 ಸಿನಿಮಾ ಪ್ರದರ್ಶನ ಆಗುತ್ತಿರುವುದರಿಂದ ಥಿಯೇಟರ್‌ಗಳು ಹಂಚಿಕೆ ಆಗಬೇಕು, ಇನ್ನು ಆ ಸಿನಿಮಾದಲ್ಲಿ ಕೂಡ ಕನ್ನಡದ ಮೂವರು ಸ್ಟಾರ್ ನಟರು ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಪೈರಸಿ ಸಮಸ್ಯೆ ಕೂಡ ಇದೆ. ಇನ್ನು ಮಾರ್ಕ್ ಕೂಡ ಇರೋದರಿಂದ ಯಾವ ಸಿನಿಮಾವನ್ನು ನೋಡಬೇಕು ಎಂದು ವೀಕ್ಷಕರು ಕೂಡ ಯೋಚನೆ ಮಾಡುತ್ತಿರುತ್ತಾರೆ. ಡಿಸೆಂಬರ್ ಅಂತ್ಯ ಆಗಿರೋದಿಕ್ಕೆ ಸ್ವಲ್ಪ ರಜೆಗಳು ಕೂಡ ಸಿಗುವುದು.
ಕಂಟೆಂಟ್ ಮುಖ್ಯ
ಸಿನಿಮಾದಲ್ಲಿ ಕಂಟೆಂಟ್ ಮುಖ್ಯ, ಸಿನಿಮಾದಲ್ಲಿ ಕಂಟೆಂಟ್ ಚೆನ್ನಾಗಿಲ್ಲ ಎಂದರೂ ಯಾರೂ ಕೂಡ ನೋಡೋದಿಲ್ಲ. ನಾವು ವಿಭಿನ್ನವಾಗಿ ಸಿನಿಮಾ ಮಾಡಿದ್ದೇವೆ, ಜನರಿಗೆ ಈ ಸಿನಿಮಾ ಇಷ್ಟ ಆಗುವುದು ಎಂಬ ನಂಬಿಕೆ ಇದೆ ಎಂದು ಸುದೀಪ್ ಹೇಳಿದ್ದರು.
ಮಾರ್ಕ್ ಅಬ್ಬರ ಹೇಗಿದೆ?
ಅಂದಹಾಗೆ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದಲ್ಲಿ ಯೋಗಿ ಬಾಬು ಕೂಡ ನಟಿಸಿದ್ದಾರೆ, ನಿಶ್ವಿಕಾ ನಾಯ್ಡು ಡ್ಯಾನ್ಸ್ ಇದೆ. ಗಮನಸೆಳೆದಿದ್ದ ಈ ಸಿನಿಮಾವನ್ನು ಸಾಕಷ್ಟು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಾದರೆ ಮೊದಲ ದಿನ ಎಷ್ಟು ಕಲೆಕ್ಷನ್ ಆಯ್ತು?
ಎಷ್ಟು ಕಲೆಕ್ಷನ್ ಆಯ್ತು?
ಮಾರ್ಕ್ ಸಿನಿಮಾವು ಮೊದಲ ದಿನ 15.9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಇನ್ನು ವೀಕೆಂಡ್ ಕೂಡ ಹತ್ತಿರ ಇರೋದರಿಂದ ಇನ್ನಷ್ಟು ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

