ಸಿನಿ ಸ್ನೇಹಿತೆಯರ ಜೊತೆ ಭರ್ಜರಿಯಾಗಿ ಕ್ರಿಸ್‌ಮಸ್ ಆಚರಿಸಿದ ಮೇಘನಾ ರಾಜ್!
Meghana Raj Hosts Grand Christmas Party for Sandalwood Friends ನಟಿ ಮೇಘನಾ ರಾಜ್ ಅವರು ತಮ್ಮ ಮಗ ಮತ್ತು ಸ್ಯಾಂಡಲ್‌ವುಡ್‌ನ ಆತ್ಮೀಯ ಸ್ನೇಹಿತೆಯರಾದ ರಕ್ಷಿತಾ, ಶ್ರುತಿ, ಮಾಳವಿಕಾ ಅವಿನಾಶ್ ಅವರೊಂದಿಗೆ ಕ್ರಿಸ್‌ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

ಫ್ರೆಂಡ್ಸ್, ಮಗ ಹಾಗೂ ಪಾರ್ಟಿ ಅಂದ್ಕೊಂಡು ಜೀವನವನ್ನ ಹೊಸದಾಗಿ ಅನುಭವಿಸುತ್ತಿರುವ ನಟಿ ಮೇಘನಾ ರಾಜ್ ಕ್ರಿಸ್‌ಮಸ್ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಚಿರಂಜೀವಿ ಸರ್ಜಾ ಸಾವಿನ ಬಳಿಕ ತಮ್ಮ ಎಲ್ಲಾ ಸಂಭ್ರಮದಲ್ಲಿ ಸಿನಿರಂಗದ ಆತ್ಮೀಯ ಸ್ನೇಹಿತರನ್ನು ಒಂದು ಮಾಡುವ ಮೇಘನಾ ರಾಜ್ ಈ ಬಾರಿ ಕ್ರಿಸ್‌ಮಸ್‌ಅನ್ನೂ ಕೂಡ ಹಾಗೆಯೇ ಆಚರಿಸಿದ್ದಾರೆ.
ಕ್ರಿಸ್‌ಮಸ್ ಚೆನ್ನಾಗಿ ಆಚರಿಸಿದೆವು. ಥ್ಯಾಂಕ್ ಯು ಮೇಘನಾ ರಾಜ್. ಅದ್ಭುತ ಗೆಟ್‌ಟುಗೆದರ್ ಇದಾಗಿತ್ತು. ಇದು ತುಂಬಾ ದಿನದಿಂದ ಪೆಂಡಿಂಗ್ ಇತ್ತು ಎಂದು ನಟಿ ರಕ್ಷಿತಾ ಬರೆದುಕೊಂಡಿದ್ದಾರೆ.
ರಕ್ಷಿತಾ ಸಂಭ್ರಮದ ಐದು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ರಕ್ಷಿತಾ ಅವರು ಧರಿಸಿದ್ದ ಡ್ರೆಸ್‌ಗೆ ಫಿದಾ ಆಗಿದ್ದಾರೆ.
ಮೇಘನಾ ರಾಜ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರುತಿ, ಶ್ರುತಿ ಅವರ ಪುತ್ರಿ ಗೌರಿ, ಮಾಳವಿಕಾ ಅವಿನಾಶ್ ರಕ್ಷಿತಾ ಹಾಗೂ ಮೇಘನಾ ರಾಜ್ ಅವರ ತಾಯಿ ಹಿರಿಯ ನಟಿ ಪ್ರಮೀಳಾ ಜೋಶಾಯ್ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

