ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದ ಬೆಂಗಳೂರಿನ ನವವಿವಾಹಿತೆ ಗಾನವಿ, ಅರ್ಧಕ್ಕೆ ಮರಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಸೂರಜ್ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಮೃತಳ ಕುಟುಂಬಸ್ಥರು ಪತಿಯ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹನಿಮೂನ್‌ಗೆ ಶ್ರೀಲಂಕಾ ದೇಶಕ್ಕೆ ತೆರಳಿದ್ದ ನವ ವಿಹಾಹಿತೆಯೊಬ್ಬಳು ಅರ್ಧಕ್ಕೆ ಮರಳಿ ಬಂದು ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣವೀಗ ತಿರುವು ಪಡೆಯುತ್ತಿದೆ. ರಾಮಮೂರ್ತಿ ನಗರದ ಗಾನವಿ (26) ಹನಿಮೂನ್ ಮೊಟಕುಗೊಳಿಸಿ ಬಂದು ನೇಣುಬಿಗಿದುಕೊಂಡಿದ್ದರು. ಇದೀಗ ಗಾನವಿ ಕುಟುಂಬಸ್ಥರು ಆಕೆಯ ಗಂಡ ಸೂರಜ್ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರಕರಣದ ದೂರಿನ ಹಿನ್ನೆಲೆಯಲ್ಲಿ ಸೂರಜ್ ಮನೆ ಬಳಿ ಸ್ಥಳೀಯ ಪೊಲೀಸರು ಆಗಮಿಸಿದ್ದು,ಮನೆ ಒಳಗೆ ಹೋಗಲು ಪೊಲೀಸರು ಪರದಾಡುತ್ತಿದ್ದಾರೆ. ಯಾಕೆಂದರೆ ಮನೆಯೊಳಗೆ ಯಾರೂ ಬರದಂತೆ ಗೇಟ್‌ಗೆ ನಾಯಿ ಕಟ್ಟಿ ಲಾಕ್ ಮಾಡಲಾಗಿದೆ. ಮನೆಯಿಂದ ಯಾರೂ ಹೊರಬರದ ಕಾರಣ ಮನೆಒಳಗೆ ಹೋಗಲು ಪೊಲೀಸ್ ಸಿಬ್ಬಂದಿ ಪರದಾಟ. ಈ ಹಿನ್ನೆಲೆಯಲ್ಲಿ ಮೃತದೇಹ ಮನೆ ಮುಂದೆ ತಂದು ಪ್ರತಿಭಟನೆ ಮಾಡಲು ಕುಟುಂಬಸ್ಥರ ಸಿದ್ಧತೆ ನಡೆಸುತ್ತಿದ್ದಾರೆ.

100 ಕ್ಕೂ ಹೆಚ್ಚು ಜನರಿಂದ ಪ್ರತಿಭಟನೆ

ಇದಕ್ಕೂ ಮುನ್ನ ಆಸ್ಪತ್ರೆ ಬಳಿ ಕುಟುಂಬಸ್ಥರು ಸಂಬಂಧಿಕರು ಆರೋಪಿಗಳನ್ನ ಬಂಧಿಸಬೇಕೆಂದು ಪ್ರತಿಭಟನೆ ನಡೆಸಿದರು. ಪತಿ ಸೂರಜ್, ಅಣ್ಣ ಸಂಜಯ್, ತಾಯಿ ಜಯಂತಿ ಬಂಧಿಸಲು ಆಗ್ರಹಸಿದರು. ಸೂರಜ್ ನಪುಂಸಕ ಹಣದಾಹಿ ಕುಟುಂಬ ಎಂದು ಕುಟುಂವಸ್ಥರು ಆರೋಪಿಸಿದರು. ಇದೀಗ ಸೂರಜ್ ಮನೆ ಮುಂದೆ 100 ಕ್ಕೂ ಹೆಚ್ಚು ಜನರಿಂದ ಪ್ರತಿಭಟನೆ ನಡೆಯುತ್ತಿದೆ. ಅಂಬ್ಯುಲೆನ್ಸ್ ನಲ್ಲಿ ಶವ ತಂದು ಪ್ರತಿಭಟನೆ ನಡೆಸಲು ಮುಂದಾದರು. ಮುಖ್ಯರಸ್ತೆಯಿಂದ ಮನೆ ಬಳಿ ಶವ ತರಲು ಪೊಲೀಸರು ಬಿಡಲಿಲ್ಲ. ಹೀಗಾಗಿ ಪೊಲೀಸರ ಜೊತೆ ವಾಗ್ವಾದ ನಡೆದಿದೆ. ಅಂಬ್ಯುಲೆನ್ಸ್ ಡ್ರೈವರ್ ಮೂವ್ ಆಗದ ಹಾಗೆ ಪೊಲೀಸರು ತಡೆದಿದ್ದು, ಪೊಲೀಸರಿಗೆ ಧಿಕ್ಕಾರ ಕೂಗಿ ಸಂಬಂಧಿಕರ ಪ್ರತಿಭಟನೆ.

ಆತ ಗಂಡಸೇ ಅಲ್ಲ!

ಗಾನವಿ ದೊಡ್ಡಮ್ಮ ರಾಧಾ ಹೇಳಿಕೆ ನೀಡಿ, ನಾನೇ ಒಳ್ಳೆ ಸಂಬಂಧ ಅಂತ ಮದುವೆ ಮಾಡಿಸಲು ಮುಂದಾದೆ. ಅವರು ಹೇಳಿದಂತೆ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಟ್ಟಿದ್ದೆವು. ವರದಕ್ಷಿಣೆ, ಒಡವೆಗಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಮದುವೆ ಆಗಿ ತಿಂಗಳಾದರೂ ನಮ್ಮ ಹುಡುಗಿಯನ್ನ ಆತ ಟಚ್ ಕೂಡಾ ಮಾಡಿಲ್ಲ. ಹನಿಮೂನ್ ಅನ್ನು ಪದೇ ಪದೇ ಮುಂದೆ ಹಾಕುವ ಕೆಲಸ ಮಾಡ್ತಿದ್ದ. ಹನಿಮೂನ್ ಹೋದರೂ ಇಬ್ಬರ ನಡುವೆ ಏನು ನಡೆದಿಲ್ಲ. ಮದುವೆ ನಡೆದ ದಿನದಿಂದಲೂ ಗಾನವಿಗೆ ಹಿಂಸೆ ನೀಡಿದ್ದಾರೆ. ಒಡವೆ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಆತನಲ್ಲಿದ್ದ ಸಮಸ್ಯೆಯನ್ನ ಮುಚ್ಚಿಡಲು ಗಾನವಿಗೆ ಹಿಂಸೆ ನೀಡಿದ್ದಾನೆ.

ಕಳೆದ ಭಾನುವಾರವೇ ಶ್ರೀಲಂಕಾ ಹನಿಮೂನ್ ನಿಂದ ವಾಪಸ್ ಬಂದಿದ್ದಾರೆ. ಅಮ್ಮನ ನೋಡೋಕೆ ಮನೆಗೆ ಕರ್ಕೊಂಡು ಬಂದೆ ಅಂತಾನೆ. ಅಮ್ಮನ ಜೊತೆ ಇರೋಕೆ ಯಾಕೆ ಮದುವೆ ಮಾಡ್ಕೋಬೇಕಿತ್ತು. ಪ್ರಶ್ನೆ ಮಾಡಿದ್ರೆ ನಿಮ್ಮ ಮಗಳನ್ನ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅಂತಾರೆ. ಮನೆಗೆ ಕರೆದುಕೊಂಡು ಬರುವಾಗ ನನ್ನ ಕಳಿಸಬೇಡ ಸೂರಜ್ ನಿನ್ನ ಜೊತೆ ಇರ್ತೀನಿ ನಮ್ಮ ಮನೆಯವರ ಮರ್ಯಾದೆ ಹೋಗುತ್ತೆ ಅಂತ ನಮ್ಮ ಮಗಳು ಕಾಲು ಹಿಡಿದು ಬೇಡಿಕೊಂಡಳು. ಏನೇ ಹಿಂಸೆ ಆದ್ರೂ ನಾನು ಇಲ್ಲೇ ಇರ್ತೀನಿ ಅಂತ ಬೇಡಿಕೊಂಡಳು. ರೂಮ್ ಡೋರ್ ತೆಗೆದಿಟ್ಟುಕೊಂಡು ನಮ್ಮ ಹುಡುಗಿ ಕೂತ್ಕೋಬೇಕಿತ್ತು. ಅವರ ಮನೆಗೆ ಹೋದಾಗಿನಿಂದ ಮಗಳಿಗೆ ಅತ್ತು ಅತ್ತು ಸಾಕಾಗಿದೆ. ನಮಗೆ ನ್ಯಾಯ ಬೇಕು. ಮಗಳ ಸಾವಿಗೆ ನ್ಯಾಯ ಬೇಕು. ಮನೆಯಲ್ಲಿ ಕರೆತಂದಾಗ ಅಮ್ಮನನ್ನ ಹೊರಗೆ ಕಳಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.

ಮೂವರ ವಿರುದ್ಧ ದೂರು

ಗಾನವಿ ಚಿಕ್ಕಪ್ಪ ಕಾರ್ತಿಕ್ ಹೇಳಿಕೆ ನೀಡಿ, ಮೂವರ ವಿರುದ್ಧ ದೂರು ನೀಡಲಾಗಿದೆ. ಗಾನವಿ ಗಂಡ ಸೂರಜ್, ಅವರ ಅತ್ತೆ, ಸಂಜಯ್ ಎಂಬುವರ ವಿರುದ್ಧ ದೂರು. ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ನೀಡಲಾಗಿದೆ. ಮದುವೆ ಬಳಿಕ ಆಭರಣಕ್ಕಾಗಿ ಸಾಕಷ್ಟು ಕಿರುಕುಳ ನೀಡಿದ್ದಾರೆ. ಇನ್ನೋವಾ ಕಾರು ಯಾವಾಗ ಕೊಡ್ತಾರೆ ಅಂತ ಕಾಟ ಕೊಡ್ತಿದ್ದ. ಮದುವೆ ನಂತರ ಸಂಸಾರಿಕ ವಿಚಾರದ ಬಗ್ಗೆ ಆತನಿಗೆ ಆಸಕ್ತಿ ಇರಲಿಲ್ಲ. ಅದನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದಾರೆ. ಪೊಲೀಸರು ದೂರು ತಗೊಂಡು ತನಿಖೆ ಮಾಡ್ತಿದ್ದಾರೆ. ಮೂವರ ಪೋನ್ ಸ್ವಿಚ್ ಆಫ್ ಆಗಿದೆ. ಅವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಕಳೆದ ಅಕ್ಟೋಬರ್ 29 ರಂದು ಗಾನವಿ - ಸೂರಜ್ ಮದುವೆ ಆಗಿತ್ತು. ವಿವಾಹವಾದ ಒಂದು ತಿಂಗಳ ನಂತರ ಬೀಗರ ಒತ್ತಾಯಕ್ಕೆ ಮಣಿದು ಅರಮನೆ ಮೈದಾನದಲ್ಲಿ ಮದುವೆ ಆರತಾಕ್ಷತೆಯನ್ನು ಗಾನವಿ ಕುಟುಂಬದವರು ನಡೆಸಿದ್ದರು. ಆನಂತರ ಶ್ರೀಲಂಕಾಕ್ಕೆ 10 ದಿನಗಳು ಹನಿಮೂನ್‌ಗೆ ನವ ಜೋಡಿಯನ್ನು ಕಳುಹಿಸಿದ್ದರು. ಆದರೆ ಅರ್ಧದಲ್ಲೇ ಹನಿಮೂನ್ ಮೊಟಕುಗೊಳಿಸಿ ವಾಪಸ್‌ ಬಂದಿದ್ದರು.