ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಗೆ ಭಾನುವಾರ ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅಧಿಕ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಂಪೂರ್ಣ ದೇವಳದ ಪರಿಸರ ಜಾತ್ರೆಯ ಸಂಭ್ರಮ ನೆನಪಿಸುವಂತಿತ್ತು. ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ ಸೇರಿದಂತೆ ಎಲ್ಲೆಡೆ ಭಕ್ತರು ತುಂಬಿದ್ದರು. ಹಲವರು ವಿಶೇಷವಾಗಿ ಆಶ್ಲೇಷಾಬಲಿ, ನಾಗಪ್ರತಿಷ್ಠೆ ಹಾಗೂ ಸರ್ಪಸಂಸ್ಕಾರ ಸೇವೆ ಸಲ್ಲಿಸಿದರು.
ಕಳೆದೊಂದು ತಿಂಗಳಿನಿಂದಲೂ ಕುಕ್ಕೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭಕ್ತರ ನಿಯಂತ್ರಣಕ್ಕಾಗಿ ದೇವಸ್ಥಾನದ ಸಿಬ್ಬಂದಿ ಮೆಗಾಫೋನ್ ಬಳಸುತ್ತಿದ್ದಾರೆ.ಥಬೀದಿ ಪಕ್ಕದ ಪ್ರದೇಶ ಸೇರಿದಂತೆ ಕ್ಷೇತ್ರದ ಸುತ್ತಲಿನ ಪಾರ್ಕಿಂಗ್ ಸ್ಥಳಗಳು ಸಂಪೂರ್ಣ ಭರ್ತಿಯಾಗಿದ್ದವು.
10:50 PM (IST) May 25
ಅರಣ್ಯ ಪ್ರದೇಶವು ಮೀಸಲು ಅರಣ್ಯ, ವನ್ಯಜೀವಿ ಧಾಮಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ನದಿ ಮೂಲಗಳ ಮೂಲಕ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
09:33 PM (IST) May 25
08:39 PM (IST) May 25
ಬೇಸಿಗೆ ರಜೆಗೆಂದು ತಾತನ ಮನೆಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
08:20 PM (IST) May 25
ವೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ಅವರು ತಮ್ಮ ಭಕ್ತರಿಗೆ ಭಾವುಕ ಮನವಿಯೊಂದನ್ನು ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ.
08:11 PM (IST) May 25
08:04 PM (IST) May 25
ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮಾಡಿದ್ದಕ್ಕೆ ಕಾವ್ಯಾ ಕಣ್ಣೀರು ಹಾಕಿದರು..!
07:53 PM (IST) May 25
ಜಿಲ್ಲೆಯಲ್ಲಿ ಎಷ್ಟು ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಪರಿವರ್ತನೆ ಮಾಡಬಹುದು. ಸಮೀಪದ ಎಷ್ಟು ಶಾಲೆಗಳನ್ನು ಕೆಪಿಎಸ್ ಶಾಲೆಗಳಿಗೆ ವಿಲೀನಗೊಳಿಸಬಹುದು ಎಂಬ ಬಗ್ಗೆ ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಿ ಕೊಳ್ಳಲಾಗಿದೆ.
07:33 PM (IST) May 25
ವರದಿ:ಮಂಡ್ಯ ಮಂಜುನಾಥ
ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ ನಡೆಸದೆಯೇ,ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು 1.11ಕೋಟಿ ರೂ ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬಹಿರಂಗವಾಗಿದೆ. ಮೂರು ಬಾರಿ ಸ್ಫೋಟಕ್ಕೆ ಯತ್ನ ವಿಫಲವಾದರೂ ಇಷ್ಟು ದೊಡ್ಡ ಮೊತ್ತದ ಖರ್ಚು,ತೆರಿಗೆ ವಂಚನೆ ಅನುಮಾನಗಳಿಗೆ ಕಾರಣ.
06:50 PM (IST) May 25
ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅಭಿನಯದ ಕನ್ನಡ ಚಲನಚಿತ್ರ "ಮ್ಯಾಂಗೋ ಪಚ್ಚ" ಇದೇ ಜೂನ್ 5ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿನ್ನೆಲೆ ಚಿತ್ರದ ನಾಯಕ ಸಂಚಿತ್ ಸಂಜೀವ್..
06:34 PM (IST) May 25
ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ.
06:10 PM (IST) May 25
06:03 PM (IST) May 25
05:27 PM (IST) May 25
05:24 PM (IST) May 25
ರೈತರನ್ನು ರಕ್ಷಿಸಬೇಕಾದ ಎಪಿಎಂಸಿಯಲ್ಲೇ ರೈತರಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶಿಸಬೇಕು ಇಲ್ಲವಾದರೆ, ಹೋರಾಟ ಅನಿವಾರ್ಯವಾಗಲಿದೆ ಎಂದು ಸಿ.ಟಿ.ರವಿ ಎಚ್ಚರಿಸಿದ್ದಾರೆ.
05:14 PM (IST) May 25
05:08 PM (IST) May 25
ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಟಿ20 ಪಂದ್ಯವೊಂದರಲ್ಲಿ 200 ರನ್ ಗಳಿಸುವ ಮೂಲಕ ಕ್ರಿಸ್ ಗೇಲ್ ಅವರ 175 ರನ್‌ಗಳ ದಾಖಲೆಯನ್ನು ಮುರಿಯುವ ಮಹತ್ವಾಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಕೆವಿನ್ ಪೀಟರ್ಸನ್ ಅವರೊಂದಿಗಿನ ಸಂದರ್ಶನದಲ್ಲಿ ತಮ್ಮ ಮತ್ತಷ್ಟು ಗುರಿ ರಿವೀಲ್ ಮಾಡಿದ್ದಾರೆ.
05:05 PM (IST) May 25
ಜಿಲ್ಲೆಯ ಭಟ್ಕಳ ಮತ್ತೆ ಹಿಂದು ಮುಸ್ಲಿಂ ಗದ್ದಲ ಗಲಾಟೆಗೆ ಸಾಕ್ಷಿ ಆಗಿದೆ. ಹಿಂದು ಧಾರ್ಮಿಕತೆಯ ಸಂಕೇತವಾದ ಮೂರಿನ ಕಟ್ಟೆ ಮರು ನಿರ್ಮಾಣ ಹಾಗೂ ಮುಸ್ಲಿಮರಿಂದ ಮೂರಿನ ಕಟ್ಟೆ ಧ್ವಂಸ ವಿಚಾರ ಈಗ ತಾರಕಕ್ಕೇರಿದೆ.
04:42 PM (IST) May 25
04:36 PM (IST) May 25
ನೈಋತ್ಯ ಮುಂಗಾರು ಕರ್ನಾಟಕದತ್ತ ವೇಗವಾಗಿ ಮುನ್ನುಗ್ಗುತ್ತಿದ್ದು, ರಾಜ್ಯಾದ್ಯಂತ ಮುಂದಿನ ವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯ ಎಚ್ಚರಿಕೆ ನೀಡಲಾಗಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೇ 27ರಂದು ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
04:20 PM (IST) May 25
ನಗರದ ಮಧ್ಯಭಾಗದಲ್ಲಿರುವ ಓಬೇರಾಯನ ಕಾಲದ ಹಳೆ ಪ್ರವಾಸಿ ಮಂದಿರ ಅಧೋಗತಿಯತ್ತ ಸಾಗಿದೆ. ಸುಮಾರು 60 ವರ್ಷಗಳ ಹಳೆಯ ಪ್ರವಾಸಿ ಮಂದಿರಕ್ಕೆ ಮುಕ್ತಿ ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ..
03:05 PM (IST) May 25
IRCTC ತನ್ನ ಪ್ರಸಿದ್ಧ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ ಅನ್ನು 2026-27ರ ಋತುವಿಗಾಗಿ ಸಂಪೂರ್ಣವಾಗಿ ನವೀಕರಿಸಿ ಮರುಚಾಲನೆ ಮಾಡುತ್ತಿದೆ. ಈ ರೈಲು ಆಧುನಿಕ ಸೌಕರ್ಯಗಳೊಂದಿಗೆ ದಕ್ಷಿಣ ಭಾರತದ ಪ್ರಮುಖ ತಾಣಗಳನ್ನು ಒಳಗೊಂಡ 3 ವಿಶೇಷ ಪ್ರವಾಸ ಯೋಜನೆಗಳನ್ನು ನೀಡುತ್ತಿದೆ.
01:39 PM (IST) May 25
01:28 PM (IST) May 25
01:03 PM (IST) May 25
'ಶ್ರೀರಸ್ತು ಶುಭಮಸ್ತು' ಖ್ಯಾತಿಯ ಲಾವಣ್ಯ ಭಾರದ್ವಾಜ್ ಮತ್ತು 'ಅಮೃತಧಾರೆ' ಖ್ಯಾತಿಯ ಶಶಿ ಹೆಗ್ಡೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವದಂದು ಸುದ್ದಿಯನ್ನು ಹಂಚಿಕೊಂಡಿದ್ದು, 'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ ಪ್ರೇಮಕಥೆ ಕುತೂಹಲಕಾರಿಯಾಗಿದೆ.
01:02 PM (IST) May 25
12:15 PM (IST) May 25
11:40 AM (IST) May 25
11:12 AM (IST) May 25
10:44 AM (IST) May 25
ಬಿಗ್ ಬಾಸ್ ಖ್ಯಾತಿಯ ನಟಿ ಮತ್ತು ನಿರೂಪಕಿ ಜಾಹ್ನವಿ ಇದೀಗ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಅವರು ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಈ ಬೆಳವಣಿಗೆಯ ಜೊತೆಗೆ ಅವರ ವಿಡಿಯೋ ವೈರಲ್ ಆಗ್ತಿದೆ.
10:37 AM (IST) May 25
10:03 AM (IST) May 25
ಮೂಲವ್ಯಾಧಿ ಎನ್ನುವುದು ಮುಚ್ಚಿಡುವ ವಿಷಯವಲ್ಲ. ನೋವು ಅಥವಾ ರಕ್ತಸ್ರಾವ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನೆನಪಿಡಿ, ನಿರ್ಲಕ್ಷ್ಯ ಮಾಡಿದರೆ ಸಣ್ಣ ಸಮಸ್ಯೆ ದೊಡ್ಡ 'ಆಪರೇಷನ್' ಹಂತಕ್ಕೆ ಹೋಗಬಹುದು. ಈ ಬೇಸಿಗೆಯಲ್ಲಿ ನಿಮ್ಮ ಹೊಟ್ಟೆಯನ್ನು ತಂಪಾಗಿಡಿ, ಮೂಲವ್ಯಾಧಿಯಿಂದ ದೂರವಿರಿ!
09:47 AM (IST) May 25
08:53 AM (IST) May 25
ಮುಂದಿನ 7 ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿದ್ದು, ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಧಾರಾಕಾರ ಮಳೆಯಿಂದ ಪ್ರವಾಸಿಗರಿಗೆ ತೊಂದರೆಯಾಗಿದೆ. ರಾಜ್ಯದ ಹಲವೆಡೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
08:14 AM (IST) May 25
07:44 AM (IST) May 25
07:22 AM (IST) May 25
06:31 AM (IST) May 25
06:21 AM (IST) May 25
06:11 AM (IST) May 25
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಭೇಟಿಯ ಹಿನ್ನೆಲೆಯಲ್ಲಿ, ಎಸ್.ಐ.ಕೋಡಿಹಳ್ಳಿ ಗೇಟ್‌ನಿಂದ ಹಲ್ಲೇಗೆರೆವರೆಗೆ 7.5 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ 11.4 ಕೋಟಿ ರು. ಅನುದಾನವನ್ನು ಅನುಮೋದಿಸಿದೆ.
05:52 AM (IST) May 25