MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Karnataka Districts
  • ಭಟ್ಕಳದ ಮೂರಿನಕಟ್ಟೆ ವಿವಾದ ಹಿನ್ನೆಲೆ 3 ದಿನ ನಿಷೇಧಾಜ್ಞೆ ಜಾರಿ! ಅಷ್ಟಕ್ಕೂ ಮಧ್ಯರಾತ್ರಿ ನಡೆದಿದ್ದೇನು?

ಭಟ್ಕಳದ ಮೂರಿನಕಟ್ಟೆ ವಿವಾದ ಹಿನ್ನೆಲೆ 3 ದಿನ ನಿಷೇಧಾಜ್ಞೆ ಜಾರಿ! ಅಷ್ಟಕ್ಕೂ ಮಧ್ಯರಾತ್ರಿ ನಡೆದಿದ್ದೇನು?

ಉತ್ತರ ಕನ್ನಡದ ಭಟ್ಕಳದಲ್ಲಿ 'ಮೂರಿನಕಟ್ಟೆ' ಶ್ರದ್ಧಾಕೇಂದ್ರದ ದ್ವಂಸ ಮತ್ತು ಪುನರ್ ನಿರ್ಮಾಣದ ವಿಚಾರವಾಗಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

2 Min read
Author : Sathish Kumar KH
Published : May 25 2026, 08:14 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶ್ರದ್ಧಾಕೇಂದ್ರದ ವಿವಾದವೊಂದು ತಾರಕಕ್ಕೇರಿದ್ದು, ಪಟ್ಟಣದಲ್ಲಿ ಕ್ಷಣಕ್ಷಣಕ್ಕೂ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಭಟ್ಕಳದ ಪ್ರಸಿದ್ಧ 'ಮೂರಿನಕಟ್ಟೆ' ದ್ವಂಸ ಹಾಗೂ ಪುನರ್ ನಿರ್ಮಾಣದ ವಿಚಾರವಾಗಿ ಎರಡು ಕೋಮುಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಮೂರು ದಿನಗಳ ಕಾಲ ಭಟ್ಕಳದಲ್ಲಿ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಿ ಭಟ್ಕಳ ಉಪವಿಭಾಗಾಧಿಕಾರಿ (AC) ಆದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಇಂದಿನಿಂದ 3 ದಿನಗಳ ಕಾಲ ನಿಷೇಧಾಜ್ಞೆ ಅನ್ವಯ

ಭಟ್ಕಳ ಪಟ್ಟಣ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ದಿನಾಂಕ 25-05-2026ರ ಬೆಳಗ್ಗೆ 6 ಗಂಟೆಯಿಂದ 27-05-2026 ರಂದು ಬೆಳಿಗ್ಗೆ 06-00 ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಈ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಸಾರ್ವಜನಿಕ ಶಾಂತಿಗೆ ಭಂಗ ತಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಂಡು ತಕ್ಷಣವೇ ಪ್ರಕರಣ ದಾಖಲಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ಎಚ್ಚರಿಸಿದೆ.

Related Articles

Related image1
Bhatkal: ಅನ್ಯಕೋಮಿನವರಿಂದ ಮುರಿನಕಟ್ಟೆ ಧ್ವಂಸ: ಭಟ್ಕಳ ಪಟ್ಟಣದಲ್ಲಿ ಉದ್ವಿಘ್ನ ಪರಿಸ್ಥಿತಿ
Related image2
ಭಟ್ಕಳ ಕಪ್ಪೆಚಿಪ್ಪು ದುರಂತದಲ್ಲಿ ನಾಪತ್ತೆಯಾಗಿದ್ದ ಮಂಜಮ್ಮ ಶವ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ
36
Image Credit : Asianet News

ಅಸಲಿಗೆ ಭಟ್ಕಳದಲ್ಲಿ ನಡೆದಿದ್ದೇನು? (ವಿವಾದದ ಹಿನ್ನೆಲೆ)

ಭಟ್ಕಳದಲ್ಲಿ ಭಾನುವಾರ (ಮೇ 24) ಮುಂಜಾನೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಒಟ್ಟುಗೂಡಿ ಐತಿಹಾಸಿಕ ಮೂರಿನಕಟ್ಟೆಯನ್ನು ಪುನರ್ ನಿರ್ಮಾಣ ಮಾಡಿದ್ದರು. ಆದರೆ, ಈ ನಿರ್ಮಾಣ ಕಾರ್ಯಕ್ಕೆ ಮುಸ್ಲಿಂ ಸಮುದಾಯದವರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಭಾನುವಾರ ಸಂಜೆ ಮುಸ್ಲಿಂ ಸಮುದಾಯದ ಕೆಲವರು ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದ ಮೂರಿನಕಟ್ಟೆಯನ್ನು ದ್ವಂಸಗೊಳಿಸಿದ್ದಾರೆ ಎನ್ನಲಾಗಿದೆ.

46
Image Credit : Asianet News

ಶ್ರದ್ಧಾಕೇಂದ್ರದ ದ್ವಂಸ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಭಟ್ಕಳ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು. ಮೂರಿನಕಟ್ಟೆ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಭಾರಿ ವಾಗ್ವಾದ ಮತ್ತು ತಳ್ಳಾಟ-ನೂಕಾಟ ನಡೆಯಿತು.

56
Image Credit : Asianet News

ಮಧ್ಯರಾತ್ರಿ ಹೈಡ್ರಾಮಾ: ಕಾರ್ಯಕರ್ತರ ಬಂಧನ

ಪೊಲೀಸ್ ಠಾಣೆ ಎದುರು ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ, ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಮಧ್ಯರಾತ್ರಿ ಮತ್ತೆ ಮೂರಿನಕಟ್ಟೆ ಸ್ಥಳಕ್ಕೆ ಧಾವಿಸಿ, ಪುನಃ ಕಟ್ಟಡ ನಿರ್ಮಾಣ ಮಾಡಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಹಿಂದೂ ಪರ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಇದರಿಂದಾಗಿ ಮಧ್ಯರಾತ್ರಿ ಇಡೀ ಭಟ್ಕಳದಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು.

66
Image Credit : Asianet News

ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು

ಸದ್ಯ ಮೂರಿನಕಟ್ಟೆ ವಿವಾದಿತ ಸ್ಥಳದಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದ್ದು, ಬಿಗುವಿನ ವಾತಾವರಣ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಮೂರಿನಕಟ್ಟೆ ಸುತ್ತಮುತ್ತ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ತುಕಡಿಗಳನ್ನು ನಿಯೋಜಿಸಲಾಗಿದ್ದು, ಇಡೀ ಭಟ್ಕಳ ಪಟ್ಟಣ ಪೊಲೀಸರ ಸರ್ಪಗಾವಲಿನಲ್ಲಿ ನಿಂತಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದು, ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಉತ್ತರ ಕನ್ನಡ
ಕರ್ನಾಟಕ ಪೊಲೀಸ್
ಪೊಲೀಸ್

Latest Videos
Recommended Stories
Recommended image1
ಹುಬ್ಬಳ್ಳಿ ಗಣೇಶೋತ್ಸವ: ಫ್ಲೈಓವರ್ ದಾಟಲಿವೆಯೇ ಬೃಹತ್ ಗಣಪತಿಗಳು? ಪರ‍್ಯಾಯ ಮಾರ್ಗ
Recommended image2
ನಗರದ ಶೇ.30 ಪೌರಕಾರ್ಮಿಕರು ಕೆಲಸಕ್ಕೆ ಚಕ್ಕರ್‌, ಮೂರು ಬಾರಿ ನೋಟಿಸ್‌ ಬಳಿಕ ವಜಾ: ಕೃಷ್ಣ ಬೈರೇಗೌಡ
Recommended image3
Koppal: AI ಚಿತ್ರ ಮೂಲಕ ಹೊಲದ ಬಳಿ ಗುಡ್ಡದಲ್ಲಿ 'ಹುಲಿ' ಇದೆ ಎಂದು ಹೆದರಿಸಿದ ಯುವಕ
Related Stories
Recommended image1
Bhatkal: ಅನ್ಯಕೋಮಿನವರಿಂದ ಮುರಿನಕಟ್ಟೆ ಧ್ವಂಸ: ಭಟ್ಕಳ ಪಟ್ಟಣದಲ್ಲಿ ಉದ್ವಿಘ್ನ ಪರಿಸ್ಥಿತಿ
Recommended image2
ಭಟ್ಕಳ ಕಪ್ಪೆಚಿಪ್ಪು ದುರಂತದಲ್ಲಿ ನಾಪತ್ತೆಯಾಗಿದ್ದ ಮಂಜಮ್ಮ ಶವ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved