ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ.

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಾಮರಾಜನಗರ (ಮೇ.25): ಗ್ಯಾರಂಟಿ ಸರ್ಕಾರದ ಬಳಿ ಮಾಸಾಶನ ನೀಡಲೂ ಹಣ ಇಲ್ವಾ ಅನುಮಾನ ಮೂಡ್ತಿದೆ. ಇದಕ್ಕೆ ಕಾರಣ ಕಳೆದ ಎರಡು ಮೂರು ತಿಂಗಳಿಂದ ಮಾಸಾಶನ ಪಡೆಯಲು ವೃದ್ದರು, ವಿಧವೆಯರು ಅಂಗವಿಕಲರು ದಿನ ನಿತ್ಯ ಅಲೆದಾಡುತ್ತಿದ್ದಾರೆ. ಮಾಸಾಶನ ನಂಬಿಕೊಂಡಿರುವವರ ಪರಿಸ್ಥಿತಿ ಆಯೋಮಯವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ. ನಮ್ಮ ಜೀವನಕ್ಕೆ ಸರ್ಕಾರದ ಮಾಸಾಶನ ಕೂಡ ಆಧಾರವಾಗಿದೆ, ಆದ್ರೆ ಕಳೆದೆರಡು ಮೂರು ತಿಂಗಳಿಂದ ಬಂದಿಲ್ಲ. ಜೀವನ ನಡೆಸುವುದು ಕೂಡ ದುಸ್ತರವಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟಾರೆ 84,136 ವೃದ್ಧರು, 40,272 ವಿಧವೆಯರು, 20,760 ಅಂಗವಿಕಲರು ಹಾಗು 8772 ಮನಸ್ವಿನಿ ಯೋಜನೆಯ ಫಲಾನುಭವಿಗಳಿದ್ದಾರೆ. ಮಾಸಾಶನವನ್ನೆ ನಂಬಿಕೊಂಡ ಅಸಹಾಯಕರ ಪರಿಸ್ಥಿತಿ ಅಯೋಮಯವಾಗಿದೆ. ಸರ್ಕಾರವೇ ದುಡ್ಡು ಕೊಡ್ತಿಲ್ಲ, ನಾವೆಲ್ಲಿ ಕೊಡೋಣ ಎಂದು ಅಧಿಕಾರಿಗಳು ಹೇಳ್ತಿದ್ದಾರೆ ಅಂತಾ ವೃದ್ದರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರದ ಬಳಿ ಹಣ ಇಲ್ವಾ?

ಇನ್ನೂ ಪದೇಪದೇ ಬರಬೇಡಿ ಅಂತ ಅಧಿಕಾರಿಗಳು ವೃದ್ದರನ್ನು ಗದರಿಸುತ್ತಾರಂತೆ, ಮಾಸಾಶನ ನೀಡಲೂ ಸರ್ಕಾರದ ಬಳಿ ಹಣ ಇಲ್ವಾ? ಎಂಬ ಅನುಮಾನ ಉಂಟಾಗಿದೆ. ಮೂರು ತಿಂಗಳಿಂದ ಪೋಸ್ಟ್ ಆಫೀಸ್, ಬ್ಯಾಂಕ್ಗಳಿಗೆ ಅಲೆಯುತ್ತಿರು ವೃದ್ಧರು, ವಿಧವೆಯರು, ಅಂಗವಿಕಲರು ಪರದಾಟ ಪಡುತ್ತಿದ್ದಾರೆ. ಚಾಮರಾಜನಗರ ತಾಲೂಕು ಉಮ್ಮತ್ತೂರು ಗ್ರಾಮವೊಂದರಲ್ಲೇ 1500 ಕ್ಕು ಹೆಚ್ಚು ಫಲಾನುಭವಿಗಳಿದ್ದಾರೆ. ಬ್ಯಾಂಕು, ಪೋಸ್ಟ್ ಆಫೀಸ್ಗೆ ನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಕಣ್ಣು ಕಾಣೋಲ್ಲ.

ಮತ್ತೆ ಕೆಲವರಿಗೆ ಮಕ್ಕಳೂ ಇಲ್ಲ, ನಡೆದಾಡಲು ದೇಹದಲ್ಲಿ ಶಕ್ತಿ ಇಲ್ಲ ಮಾಸಾಶನವನ್ನೇ ನಂಬಿಕೊಂಡು ಜೀವನ ನಡೆಸ್ತಿರೋ ವೃದ್ಧರ ಪರಿಸ್ಥಿತಿ ಮಾತ್ರ ಯಾರಿಗೂ ಹೇಳತೀರದಾಗಿದೆ. ಒಟ್ನಲ್ಲಿ ಸರ್ಕಾರ ಅಂಗವಿಕಲರು, ವಿಧವೆಯರು ಹಾಗೆಯೆ ವೃದ್ದರಿಗೆ ಹಣ ಕೊಡದ ಹಿನ್ನಲೆ ಪ್ರತಿನಿತ್ಯ ಯಾವಾಗ ಷೆನ್ಷನ್ ಬರುತ್ತೆ ಚಾತಕ ಪಕ್ಷಿಗಳಂತೆ ಕಾದಿದ್ದಾರೆ. ಅಲ್ಲದೇ ಎಷ್ಟೋ ಜನ ವೃದ್ದರು ಕೂಡ ಜೀವನಕ್ಕೆ ಈ ಮಾಸಾಶನ ನಂಬಿಕೊಂಡಿದ್ದು, ಶೀಘ್ರದಲ್ಲೇ ಸರ್ಕಾರ ಹಣ ಬಿಡುಗಡೆ ಮಾಡ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ.