ಹೊಸಕೋಟೆಯಿಂದ ಮಲ್ಲಸಂದ್ರ-ತಿರುಮಲಶೆಟ್ಟಿಹಳ್ಳಿ ಮಾರ್ಗವಾಗಿ ಚಿಕ್ಕತಿರುಪತಿಗೆ ಸಂಚರಿಸುತ್ತಿದ್ದ ಎರಡು ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ, ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಕೆಆರ್‌ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಶಶಿಕುಮಾರ್ ಅವರು ಬಿಎಂಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು: ಹೊಸಕೋಟೆಯಿಂದ ಮಲ್ಲಸಂದ್ರ-ತಿರುಮಲಶೆಟ್ಟಿಹಳ್ಳಿ ಮಾರ್ಗವಾಗಿ ಚಿಕ್ಕತಿರುಪತಿಗೆ ಸಂಚರಿಸುತ್ತಿದ್ದ ಎರಡು ಬಿಎಂಟಿಸಿ ಬಸ್‌ಗಳ ಸಂಚಾರ ಪುನಾರಂಭ ಮಾಡಬೇಕು ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಶಶಿಕುಮಾರ್ ಮನವಿ ಮಾಡಿದರು.

ನಗರದ ಬಿಎಂಟಿಸಿ 39ನೇ ಘಟಕದಲ್ಲಿ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅನಗೊಂಡನಹಳ್ಳಿ ಹೋಬಳಿ ಭಾಗಗಳಿಂದ ಹೊಸಕೋಟೆ ನಗರಕ್ಕೆ ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ, ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಹೊಸಕೋಟೆ ನಗರಕ್ಕೆ ಬಂದು ಹೋಗುತ್ತಾರೆ. ಆದರೆ ನಿತ್ಯ ಸಂಚಾರ ಮಾಡುತ್ತಿದ್ದ ಹೊಸಕೋಟೆ-ಚಿಕ್ಕತಿರುಪತಿ ಬಿಎಂಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವುದರಿಂದ ಈ ಭಾಗದ ಹಿರಿಯ ನಾಗರಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅಲ್ಲದೆ ನಿತ್ಯ ಸಂಚಾರಕ್ಕೆ ಆಟೋಗಳಲ್ಲೆ ಸಂಚಾರ ಮಾಡಬೇಕಿದೆ. ಆದ್ದರಿಂದ ಮೊದಲಿನಂತೆ ಹೊಸಕೋಟೆ-ಮಲ್ಲಸಂದ್ರ-ತಿರುಮಲಶೆಟ್ಟಿಹಳ್ಳಿ ಮಾರ್ಗವಾಗಿ ಚಿಕ್ಕತಿರುಪತಿಗೆ ಸಂಚಾರ ಮಾಡುತ್ತಿದ್ದ ಬಸ್‌ಗಳನ್ನು ಪುನಾರಂಭಿಸಬೇಕು ಎಂದರು.
ಘಟಕದ ವ್ಯವಸ್ಥಾಪಕ ರಾಜೇಶ್ ಅವರಿಗೆ ಮನವಿ ಸಲ್ಲಿಸಿದ್ದು ಉನ್ನತ ಮಟ್ಟದ ಅಧಿಕಾರಿಗಳಿಗೂ ಮನವಿ ತಲುಪಿಸಲಾಗುವುದು ಎಂದರು.
ಬಿಎಂಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಕೆ
ಕೆಆರ್‌ಎಸ್ ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಜು, ಉಪಾಧ್ಯಕ್ಷ ಅಶೋಕ್, ಜಂಟಿ ಕಾರ್ಯದರ್ಶಿ ಮಕ್ತಿಯಾರ್, ಸಂಘಟನಾ ಕಾರ್ಯದರ್ಶಿ ಸೌಮ್ಯ, ಮುನಿರಾಜು ಮುಖಂಡ ಶ್ರೀನಿವಾಸ್, ಶ್ರೀಧರ್ ಇತರರು ಹಾಜರಿದ್ದರು.
ಹೊಸಕೋಟೆಯಿಂದ ಮಲ್ಲಸಂದ್ರ-ತಿರುಮಲಶೆಟ್ಟಿಹಳ್ಳಿ ಮಾರ್ಗವಾಗಿ ಚಿಕ್ಕತಿರುಪತಿಗೆ ಸಂಚರುಸುತ್ತಿದ್ದ ಬಿಎಂಟಿಸಿ ಬಸ್‌ಗಳ ಸಂಚಾರ ಪುನರಾರಂಭಿಸಬೇಕೆಂದು ಕೆಆರ್‌ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿಎಂ.ಶಶಿಕುಮಾರ್ ಬಿಎಂಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.


