ಹುಬ್ಬಳ್ಳಿಯಲ್ಲಿ 'ಲವ್ ಜಿಹಾದ್' ಪ್ರಕರಣಗಳು ಹೆಚ್ಚುತ್ತಿದ್ದು, ಐಷಾರಾಮಿ ಜೀವನದ ಆಮಿಷವೊಡ್ಡಿ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಲಾಗುತ್ತಿದೆ. ಮಾದಕ ದ್ರವ್ಯ ನೀಡಿ, ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುವ ಜಾಲದ ಬಗ್ಗೆ ಈ ಲೇಖನ ಎಚ್ಚರಿಸುತ್ತದೆ. ಇತ್ತೀಚೆಗೆ ನಡೆದ ಸಾಜಿದ್ ಉಣಕಲ್ ಪ್ರಕರಣವೂ ಸೇರಿದಂತೆ, ಇಂತಹ ಘಟನೆಗಳ ಬಗ್ಗೆ ಪೊಲೀಸರು ಮತ್ತು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡುತ್ತಿವೆ.

ಥಳುಕು ಬಳುಕು, ಬಣ್ಣಬಣ್ಣದ ಮಾತು, ಐಷಾರಾಮಿ ಕಾರು, ಬೈಕು, ಹೀರೋಗಳ ಸ್ಟೈಲ್​ನಲ್ಲಿ ಹೇರ್​ಸ್ಟೈಲ್​, ದಿನವೂ ಪಿಕ್​ ಅಪ್​ ಡ್ರಾಪ್​, ಶ್ರೀಮಂತಿಕೆ, ಇಂಥ ಕನಸನ್ನು ಕಾಣುವುದು ಎಲ್ಲಿಯವರೆಗೆ ಹಿಂದೂ ಯುವತಿಯರು ಬಿಡುವುದಿಲ್ಲವೋ ಅಲ್ಲಿಯವರೆಗೆ ಅಂಥವರೇ ಬೆತ್ತಲಾಗುವುದು ಗ್ಯಾರೆಂಟಿ ಎನ್ನುವುದು ಪದೇ ಪದೇ ಸಾಬೀತಾಗುತ್ತಿದ್ದರೂ ನನ್ನವ ಎಲ್ಲರಂಥವನಲ್ಲ ಎಂದರೆ ನಿಮ್ಮ ವಿಡಿಯೋಗಳು ಪೋ*ರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆಗಿಯೋ, ಇಲ್ಲವೇ ಮಕ್ಕಳನ್ನು ಹೆರುವ ಮಷಿನ್​ ಆಗಿಯೋ, ಬೀದಿಗೆ ಬರುವುದೋ ಕೊನೆಗೆ ಆ*ತ್ಮಹತ್ಯೆ ಒಂದೇ ದಾರಿ ಎಂದುಕೊಳ್ಳುವುದೋ ತಪ್ಪಲ್ಲ ಎಂದು ಪೊಲೀಸರು, ಹಿಂದೂ ಸಂಘಟನೆಗಳು ದಿನನಿತ್ಯವೂ ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ.

ಅದೆಷ್ಟೋ ಹಿಂದೂ ಯುವತಿಯರು ನರಕದ ಬಾಯಿಗೆ ಹೋಗಿ ಹೇಳಿಕೊಳ್ಳಲಾಗದ ಸಂಕಷ್ಟ ಅನುಭವಿಸುತ್ತ ಕೊನೆಗೆ ಸಾವಿನ ಹಾದಿ ಹಿಡಿದಿರುವ ಬಗ್ಗೆ ಪೊಲೀಸರು ಪತ್ರಿಕಾಗೋಷ್ಠಿ ಮಾಡಿ ಎಚ್ಚರ ಕೊಡುತ್ತಲೇ ಇದ್ದರೂ, ನಾನು ಎಜುಕೇಟೆಡ್​, ನನಗೆ ಇವೆಲ್ಲಾ ಬುದ್ಧಿಮಾತು ನಿಮ್ಮಿಂದ ಕಲಿಯಬೇಕಿಲ್ಲ ಎನ್ನುವ ಯುವತಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.

ಲವ್​ ಜಿಹಾದ್​ ಕೇಂದ್ರ

ಇದಾಗಲೇ ಹುಬ್ಬಳ್ಳಿಯ ಲವ್​ ಜಿಹಾದ್​ ಕೇಂದ್ರವಾಗಿದೆ. ಹುಬ್ಬಳ್ಳಿಯ ಜಿಮ್​ ಓನರ್​ ಸಮೀರ್​ ಮುಲ್ಲಾ ಸೇರಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೊಬೈಲ್​ಗಳಲ್ಲಿ ಹಿಂದೂ ಯುವತಿಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಕೆಲವೊಂದನ್ನು ಖುದ್ದು ಯುವತಿಯರೇ ಖುಷಿಯಿಂದ ತೆಗೆದುಕೊಂಡರೆ, ಇನ್ನು ಕೆಲವು ಮಾದಕ ದ್ರವ್ಯ ನೀಡಿಯೋ ಅಥವಾ ಇನ್ನೇನೋ ಕೊಟ್ಟು ಯುವತಿಯರನ್ನು ಬೆತ್ತಲು ಮಾಡಿ, ರೇ*ಪ್ ಮಾಡಿರುವ ವಿಡಿಯೋ ಅವು. ಇಷ್ಟಾದರೂ ಯುವತಿಯರು ಥಳಕು ಬಳುಕಿನದ್ದಕ್ಕೆ ಮೊರೆ ಹೋಗುತ್ತಿರುವುದು ಹುಬ್ಬಳ್ಳಿಯಿಂದಲೇ ವರದಿಯಾಗಿದೆ. ​

ಬ್ರೈನ್​ವಾಷ್​

ಕಾಲೇಜು ಯುವತಿಯೊಬ್ಬಳ ಬ್ರೈನ್​ವಾಷ್​ ಮಾಡಿ ಆಕೆಯನ್ನುತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಸಾಜಿದ್ ಉಣಕಲ್ ಎಂಬಾತ ಹಿಂದೂ ಸಂಘಟನೆ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹುಬ್ಬಳ್ಳಿಯ ಸಾಗರ್ ಕಾಲೋನಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿರುವ ಈತ ಆಕೆಗೆ ಮಾದಕ ದ್ರವ್ಯ ನೀಡಿ ಬೆತ್ತಲುಮಾಡಿದ್ದ ಎನ್ನುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಜರಂಗದಳ, ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನ ಮನೆಗೆ ತೆರಳಿ ಯುವಕನಿಗೆ ಥಳಿಸಿ ಯುವತಿಯನ್ನು ಮನೆಗೆ ಕಳುಹಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಠಾಣೆ ಪೊಲೀಸರು ಸಾಜಿದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.