ಬಳ್ಳಾರಿಯಲ್ಲಿ ಪಡಿತರ ಅಕ್ಕಿಯನ್ನು ಕಳ್ಳಸಾಗಾಟ ಮಾಡುತ್ತಿದ್ದ ಅಡ್ಡೆ ಮೇಲೆ ತಡ ರಾತ್ರಿ ದಾಳಿ ಮಾಡಲಾಗಿದೆ. ಬಳ್ಳಾರಿ ಸಹಾಯಕ ಆಯುಕ್ತರಾದ ರಾಜೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬಳ್ಳಾರಿ ನಗರದ ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ಘಟನೆ ನಡೆದಿದೆ. ದಾಳಿ ವೇಳೆ ಗುಜರಾತ್ ಮೂಲದ ಲಾರಿಯಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದ 523 ಪಡಿತರ ಅಕ್ಕಿ ಚೀಲ ವಶಪಡಿಸಲಾಗಿದೆ. ಇತ್ತ ರಾಜ್ಯ ರಾಜಕಾರಣ ಮತ್ತೆ ರಂಗೇರುತ್ತಿದೆ. ದಾವೋಸ್‌ನಲ್ಲಿ ಡಿಕೆ ಶಿವಕುಮಾರ್, ಅಧಿಕಾರದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಕೈಬಿಡಿಲ್ಲ ಎಂದಿದ್ದಾರೆ. ರಾಜ್ಯ ರಾಜಕರಾಣ ಹಾಗೂ ಪ್ರತಿ ಕ್ಷಣದ ಲೈವ್ ಅಪ್‌ಡೇಟ್ ಇಲ್ಲಿದೆ.
12:02 AM (IST) Jan 24
11:18 PM (IST) Jan 23
ಸತತ ನಾಲ್ಕು ದಿನಗಳ ರಜೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಬೆಂಗಳೂರಿನಿಂದ ತಮ್ಮ ಊರುಗಳತ್ತ ಹೊರಟಿದ್ದಾರೆ. ಇದರಿಂದಾಗಿ, ನಗರದ ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿವೆ
10:54 PM (IST) Jan 23
10:32 PM (IST) Jan 23
allari G Square Fire ಬಳ್ಳಾರಿಯ ಜೀ ಸ್ಕೈರ್ ಲೇಔಟ್ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಬೆಂಕಿಯ ಕಾರಣ ಪತ್ತೆಹಚ್ಚಲು ಎಫ್‌ಎಸ್‌ಎಲ್ ತಂಡ ತನಿಖೆ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಮುಖಂಡರು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ
09:21 PM (IST) Jan 23
ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲು, ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ₹3,000 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ
08:53 PM (IST) Jan 23
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರೊಂದು ಹಲವು ಬಾರಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ವೃದ್ಧ ದಂಪತಿಗಳು ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ
08:28 PM (IST) Jan 23
ಬಿಗ್‌ಬಾಸ್ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಬ್ಯುಸಿಯಾಗಿದ್ದ 'ಗಿಲ್ಲಿ' ನಟ, ಆಂಕರ್ ಅನುಶ್ರೀ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ. ತಮ್ಮನ್ನು ಮದುವೆಗೆ ಆಹ್ವಾನಿಸದಿದ್ದಕ್ಕೆ ತಮಾಷೆಯಾಗಿ ಕಾಲೆಳೆದ ಅವರು, ಮುಂದೆ 'ಸೀಮಂತ'ಕ್ಕೆ ಕರೆಯುತ್ತೀರಾ ಎಂದು ಕೇಳಿ ನಗಿಸಿದ್ದಾರೆ.
08:11 PM (IST) Jan 23
08:02 PM (IST) Jan 23
ಬಿಗ್‌ಬಾಸ್ 12 ವಿನ್ನರ್ ಗಿಲ್ಲಿ ನಟ, ರನ್ನರ್ ಅಪ್ ರಕ್ಷಿತಾ ಶೆಟ್ಟಿ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ರಕ್ಷಿತಾ ತನ್ನ ಲೇಡಿ ವರ್ಷನ್ ಇದ್ದಂತೆ, ಆಕೆಯಲ್ಲಿ ತನ್ನ ಅಮ್ಮನನ್ನು ಕಂಡೆ ಎಂದು ಗಿಲ್ಲಿ ಹೇಳಿಕೊಂಡಿದ್ದಾರೆ. ರಕ್ಷಿತಾ ಬಗ್ಗೆ ಗಿಲ್ಲಿ ಹೇಳಿದ್ದೇನು?
07:53 PM (IST) Jan 23
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಯಶಸ್ವಿಯಾಗಿ ತನಿಖೆ ನಡೆಸಿದ ಎಸ್‌ಐಟಿ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಈ ತಂಡದೊಂದಿಗೆ ಇತರೆ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ ಅಧಿಕಾರಿಗಳು ಸೇರಿ 30 ಸಿಬ್ಬಂದಿಗಳಿಗೆ 35 ಲಕ್ಷ ರೂ. ಬಹುಮಾನ ನೀಡಲಾಗಿದೆ.
07:34 PM (IST) Jan 23
07:15 PM (IST) Jan 23
ಭಾರತೀಯ ಮದ್ಯ ತಯಾರಿಕಾ ಕಂಪನಿ 'ಅಮೃತ್' ಡಿಸ್ಟಿಲರಿಯ 'ಅಮೃತ್ ಎಕ್ಸ್‌ಪೆಡಿಶನ್' ವಿಸ್ಕಿಯು, ಜಿಮ್ ಮುರ್ರೆಯವರ 'ವಿಸ್ಕಿ ಬೈಬಲ್ 2025-26' ಆವೃತ್ತಿಯಲ್ಲಿ ವಿಶ್ವದ ಮೂರನೇ ಅತ್ಯುತ್ತಮ ವಿಸ್ಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬೆಲೆ ಸುಮಾರು 10 ಲಕ್ಷ ರೂಪಾಯಿ ಆಗಿದೆ. ವಿಷೇಷತೆ ಏನಿದೆ ನೋಡಿ..
07:15 PM (IST) Jan 23
ಗದಗದ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಹಿನ್ನೆಲೆಯಲ್ಲಿ, 1878ರ ಭಾರತೀಯ ನಿಧಿ ಕಾಯ್ದೆ ಮತ್ತು 1972ರ ಪ್ರಾಚೀನ ವಸ್ತುಗಳ ಕಾಯ್ದೆಯ ಪ್ರಕಾರ ನಿಧಿಯ ಮಾಲೀಕತ್ವವನ್ನು ಹೇಗೆ ನಿರ್ಧರಿಸಲಾಗುತ್ತದೆ ಮತ್ತು ವಸ್ತುಗಳ ವಯಸ್ಸನ್ನು ಪತ್ತೆಹಚ್ಚುವ ವೈಜ್ಞಾನಿಕ ವಿಧಾನಗಳೇನು ಎಂಬುದನ್ನು ಇದು ಚರ್ಚಿಸುತ್ತದೆ.
06:49 PM (IST) Jan 23
06:30 PM (IST) Jan 23
ಅಜಿತ್ ಎದುರು ಈ ನಟಿ ನಟಿಸಬೇಕಿತ್ತು. ಆದರೆ ಆರಂಭದಲ್ಲಿ, ಪ್ರಸಿದ್ದ ನಟಿ ಸಮೀರಾ ರೆಡ್ಡಿ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಯಿತು. ಅಲ್ಲಿ ಆದ ಸಮಸ್ಯೆ ಏನೆಂದರೆ, ಸಮೀರಾ ರೆಡ್ಡಿಿಗೆ ತಮಿಳು ಬರುತ್ತಿರಲಿಲ್ಲ, ನಿರ್ದೇಶಕರಿಗೆ ಹಿಂದಿ ಬರುತ್ತಿರಲಿಲ್ಲ. ಇದರಿಂದಾಗಿ ಮತ್ತೆ ಆ ಪಾತ್ರಕ್ಕೆ ಇವರೇ ಬಂದರು.
06:09 PM (IST) Jan 23
ಝೈದ್ ಖಾನ್, ರಚಿತಾ ರಾಮ್, ಮಲೈಕಾ ವಸುಪಾಲ್ ನಟನೆಯ ಕಲ್ಟ್ ಸಿನಿಮಾ ಇಂದು ರಿಲೀಸ್ ಆಗಿದೆ. ಅನಿಲ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಸಂದರ್ಶನ ಇಲ್ಲಿದೆ.
06:06 PM (IST) Jan 23
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬ್ಯಾನರ್ ತೆರವು ವಿಚಾರವಾಗಿ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾದೆ.
05:54 PM (IST) Jan 23
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಸೀರಿಯಲ್‌ನಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕವೇ ಮನೆಮಾತಾಗಿರುವ ಕಿರಣ್ ರಾಜ್, ಇದೀಗ ಮತ್ತೊಮ್ಮೆ ಕನ್ನಡಿಗರ ಹೃದಯ ಗೆಲ್ಲುವ ಕೆಲಸ ಮಾಡಿದ್ದಾರೆ. ಇದರ ಜತೆಗೆ ನಿಮ್ಮಿಂದು ಒಂದು ಸಹಾಯ ಕೇಳಿದ್ದಾರೆ. ಏನದು? ನೋಡೋಣ ಬನ್ನಿ
05:43 PM (IST) Jan 23
Sri Sujayeendra Tirtha Aradhana celebrated with devotion at Mantralayam ಮಂತ್ರಾಲಯದ ಪುಣ್ಯಕ್ಷೇತ್ರದಲ್ಲಿ ಇಂದು ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಆರಾಧನಾ ಮಹೋತ್ಸವದ ಭವ್ಯ ಕ್ಷಣಗಳನ್ನು ಬಿಂಬಿಸುವ 10 ಫೋಟೋ ಗ್ಯಾಲರಿ ಇಲ್ಲಿದೆ.
05:21 PM (IST) Jan 23
Bigg Boss Kannada Season 12 Winner Gilli Nata : ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗೆದ್ದಿರುವ ಗಿಲ್ಲಿ ನಟ ಅವರು ಡಾ ಶಿವರಾಜ್‌ಕುಮಾರ್, ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಭೇಟಿ ಮಾಡಿದ್ದರು.
05:07 PM (IST) Jan 23
ಮೇಕ್‌ಮೈಟ್ರಿಪ್ ತನ್ನ ವೇದಿಕೆಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ AI ಚಾಲಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಹೊಸ ಸೌಲಭ್ಯಗಳು ವಸತಿ ಮತ್ತು ಇಂಟರ್‌ಸಿಟಿ ಬಸ್ ಬುಕಿಂಗ್‌ಗಳಲ್ಲಿ ಸುರಕ್ಷಿತ ಆಯ್ಕೆಗಳನ್ನು ಸೂಚಿಸುತ್ತವೆ. ಮಹಿಳೆಯರ ಪಕ್ಕದ ಸೀಟು ಮಹಿಳೆಯರಿಗೇ ಮೀಸಲಾಗುವಂತೆ ವ್ಯವಸ್ಥೆಯಿದೆ.
04:31 PM (IST) Jan 23
04:27 PM (IST) Jan 23
04:16 PM (IST) Jan 23
ಗಿಲ್ಲಿ ನಟ ಅವರು ಹೋದಲ್ಲಿ ಬಂದಲ್ಲಿ ಜನರು ಸೇರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗ ಅವರು ಬಂಗಾರದ ಅಂಗಡಿ ಉದ್ಘಾಟನೆಗೆ ಆಗಮಿಸಿದ್ದರು. ಆ ವೇಳೆ ಅವರಿಗೆ ಬಂಗಾರದ ಆಭರಣ ಹಾಕಲಾಗಿದೆ.
04:11 PM (IST) Jan 23
04:11 PM (IST) Jan 23
04:06 PM (IST) Jan 23
Shivamogga thirthahalli missing man body found At tunga river ಮನೆಯಿಂದ ತೋಟಕ್ಕೆ ಹೋಗುತ್ತೇನೆಂದು ಮನೆಯಿಂದ ಹೊರಗೆ ಹೋದ ವ್ಯಕ್ತಿ ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಇಂದು (ಶುಕ್ರವಾರ) ತುಂಗಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.
03:42 PM (IST) Jan 23
ಗದಗ ಜಿಲ್ಲೆಯ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನದ 8ನೇ ದಿನ, ಸುಟ್ಟ ಮಣ್ಣಿನ ಬಿಲ್ಲೆ, ನಿಗೂಢ ಮೂಳೆ ಹಾಗೂ ಅರ್ಧ ಕೆಜಿ ತೂಕದ ಲೋಹದ ಉಂಡೆಯಂತಹ ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ಈ ಶೋಧವು ಇತಿಹಾಸಕಾರರು, ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿದೆ.
03:33 PM (IST) Jan 23
ನಟಿ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು, 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ದಿನಗಳಲ್ಲಿ ಯಶ್ ಮತ್ತು ಅಚ್ಯುತ್ ಕುಮಾರ್ ಜೊತೆ ಕಂಡ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ತಾವು ಐಷಾರಾಮಿ ಕಾರು, ಅಚ್ಯುತ್ ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಯಶ್ ಪ್ಯಾನ್-ಇಂಡಿಯಾ ಸ್ಟಾರ್ ಆಗುವ ಕನಸು ಕಂಡಿದ್ದು ನನಸಾಗಿವೆ.
03:29 PM (IST) Jan 23
ಕನಸಿಗೆ ದೇವರು ಬಂದು ಹೇಳಿದ ಜಾಗದಲ್ಲಿ ಅಗೆದರೆ ಕೈಗೆ ಸಿಕ್ಕೇಬಿಡ್ತು ಅಲಾಯಿ ದೇವರು. ಮುಸ್ಲಿಮರೇ ಇರದ ಈ ಗ್ರಾಮದಲ್ಲಿ ಅಲಾಯಿ ದೇವರು ಪತ್ತೆಯಾಗಿದ್ದು, ಮಸೀದಿಗೆ ಸ್ಥಳಾಂತರ ಮಾಡಲಾಗಿದೆ.ಏನಿದರ ಅಸಲಿಯತ್ತು?
03:13 PM (IST) Jan 23
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಅರ್ಧ ಕೆಜಿ ಚಿನ್ನದ ನಿಧಿ ಪತ್ತೆಯಾಗಿದ್ದು, ಈ ಸ್ಥಳವು ಈಗ ಜಾಗತಿಕ ಗಮನ ಸೆಳೆಯುತ್ತಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರ ಕಾರ್ಯಕ್ಕೆ ಫ್ರಾನ್ಸ್ ಪ್ರವಾಸಿಗರು 'ಮಿರಾಕಲ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
03:04 PM (IST) Jan 23
Udaya Awards: ನಟ ಶಿವರಾಜ್ ಕುಮಾರ್, ಪ್ರಕಾಶ್ ರಾಜ್, ಡಾಲಿ ಧನಂಜಯ್, ಶ್ರೀನಾಥ್, ಉಮಾಶ್ರೀ, ಸಾಧುಕೋಕಿಲ, ಕವಿ ಬಿ.ಆರ್.ಲಕ್ಷ್ಮಣರಾವ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ʻಉದಯ ಕನ್ನಡಿಗ-2025ʼ ಪುರಸ್ಕಾರ ಶನಿವಾರ, ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
02:50 PM (IST) Jan 23
02:15 PM (IST) Jan 23
01:37 PM (IST) Jan 23
ಬಿಗ್ ಬಾಸ್ ವಿಜೇತ ಗಿಲ್ಲಿನಟನಿಗೆ ಈಗ ಶುಕ್ರದೆಸೆ ಆರಂಭವಾಗಿದೆ. ಕಾರ್ಯಕ್ರಮಗಳ ಉದ್ಘಾಟನೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಇತ್ತೀಚೆಗೆ ಚಿನ್ನದ ಮಳಿಗೆ ಉದ್ಘಾಟನೆ ವೇಳೆ ಉದ್ಯಮಿ ಶರಣವ ಹಾಕಿರೋ ಚಿನ್ನದ ಸರಕ್ಕೆ ಗಿಲ್ಲಿನಟ ಸುಸ್ತಾಗಿ ಹೋಗಿದ್ದಾರೆ!
01:31 PM (IST) Jan 23
ನಟ ದರ್ಶನ್ ಮತ್ತು ಅವರ ಮಗ ವಿನೀಶ್ ನಡುವಿನ ಜಗಳದಂತೆ ಕಾಣುವ ವಿಡಿಯೋವೊಂದು ವೈರಲ್ ಆಗಿದೆ. ಆದರೆ, ಇದು 'ಡೆವಿಲ್' ಸಿನಿಮಾದ ಚಿತ್ರೀಕರಣದ ದೃಶ್ಯವಾಗಿದ್ದು, ಇದರಲ್ಲಿ ವಿನೀಶ್ ದರ್ಶನ್‌ರ ಡಬಲ್ ರೋಲ್‌ಗೆ ಡ್ಯೂಪ್ ಆಗಿ ನಟಿಸಿದ್ದಾರೆ.
01:16 PM (IST) Jan 23
Mahanati Show Gagana On Bigg Boss Kannada Season 12 Winner Gilli Nata: ಗಿಲ್ಲಿ ನಟ, ಮಹಾನಟಿ ಶೋ ಖ್ಯಾತಿಯ ಗಗನಾ ಅವರು ಡ್ಯಾನ್ಸಿಂಗ್ ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಗೆ ಗಿಲ್ಲಿ ನಟ ಹೋದ ಬಳಿಕ, ಗಗನಾ ಅವರು ಗಿಲ್ಲಿ ಬಗ್ಗೆ ಮಾತನಾಡಿರಲಿಲ್ಲ. ಈಗ ಮಾತನಾಡಿದ್ದಾರೆ.
01:06 PM (IST) Jan 23
12:49 PM (IST) Jan 23
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಅವರು ಲವ್ ಮಾಡುತ್ತಿದ್ದಾರಾ? ಮದುವೆ ಆಗುತ್ತಾರಾ ಎಂಬ ಪ್ರಶ್ನೆಯೇ ಕೇಳಿ ಬರುತ್ತಿದೆ. ನಾನು ಮದುವೆ ಆಗೋದಿಲ್ಲ ಎಂದು ಕಾವ್ಯ ಅವರು ಹೇಳಿದ್ದಾರೆ. ಈಗ ಗಿಲ್ಲಿ ಅವರು ಉತ್ತರ ಕೊಟ್ಟಿದ್ದಾರೆ.
12:41 PM (IST) Jan 23
29 ವರ್ಷಗಳ ಹಿಂದೆ ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭೀಕರ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನಾದ ಚಿಕ್ಕ ಹನುಮ ಅಲಿಯಾಸ್ ಕೃಷ್ಣಪ್ಪನನ್ನು, ಆಂಧ್ರಪ್ರದೇಶದಲ್ಲಿ ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.