ಭದ್ರಾವತಿಯಲ್ಲಿ ವಾಸವಾಗಿದ್ದ ವೃದ್ಧ ದಂಪತಿ ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಪೊಲೀಸರ ತನಿಖೆಯಿಂದ, ಹಣದಾಸೆಗಾಗಿ ಅವರ ಸೋದರನ ಮಗನಾದ ಆಯುರ್ವೇದ ವೈದ್ಯನೇ, ಅರಿವಳಿಕೆ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವುದು ಬಯಲಾಗಿದೆ. ಈ ಮೂಲಕ ನಂಬಿಕೆಯೇ ಅವರ ಸಾವಿಗೆ ಕಾರಣವಾಯಿತು.

ಅವ್ರಿಬ್ಬರು ಬದುಕಿನ ಮುಸ್ಸಂಜೆಯಲ್ಲಿದ್ದ ವೃದ್ಧ ದಂಪತಿ. ನಿವೃತ್ತ ಜೀವನವನ್ನ ಇರೋದ್ರಲ್ಲೆ ನೆಮ್ಮದಿಯಾಗಿ ಕಳೆಯುತ್ತಿದ್ದರು. ಮೂರ್ ಮೂರ್ ಜನ ಮಕ್ಕಳಿದ್ರೂ ಕೂಡ ವೃದ್ದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ರು. ಬೆಳಗ್ಗೆ ಸಂಜೆಯಾದ್ರೆ ವಾಕಿಂಗ್ ಮಾಡ್ಕೊಂಡು ಓಡಾಡ್ಕೋಂಡು ಹೇಗೋ ತಮ್ ಪಾಡಿಗೆ ತಾವು ಇದ್ರು. ಆದ್ರೆ ಏಕಾಏಕಿ ಶವವಾಗಿ ಪತ್ತೆಯಾಗಿದ್ದಾರೆ. ಗಂಡನ ಶವ ಹಾಲ್ ನಲ್ಲಿ ಪತ್ತೆಯಾದ್ರೆ, ಹೆಂಡತಿ ಶವ ರೂಮ್ ನಲ್ಲಿ ಪತ್ತೆಯಾಗಿತ್ತು. ಪ್ರೋಫೆಷನಲ್ ಆಗಿ ಮರ್ಡರ್ ಮಾಡಿದ್ದ ಕಿರಾತಕ ಯಾಮಾರಿ ಅಲ್ಲೇ ಸಾಕ್ಷ್ಯವನ್ನು ಬಿಟ್ಟು ಹೋಗಿದ್ದ. ಅಸಲಿಗೆ ಆ ವೃದ್ಧ ದಂಪತಿಗೆ ಹೆಣ ಹಾಕಿದವ್ನು ಅವ್ರ ವಂಶದ ಕುಡಿಯೇ ಆಗಿದ್ದ. ಈ ಸ್ಟೋರಿಯಲ್ಲಿ ಏನಾಯ್ತು ಅನ್ನೋದನ್ನು ನೋಡೋಣ ಬನ್ನಿ.

ಈ ಆಧುನಿಕ ಯುಗದಲ್ಲಿ ದುಡ್ಡಿಗಾಗಿ ಮನುಷ್ಯ ಯಾವ ಲೆವೆಲ್ ಬೇಕಾದ್ರು ಹೋಗ್ತಾನೆ ಅನ್ನೋದನ್ನು ನಾವು ಈ ಹಿಂದೆ ನೋಡ್ತಾನೆ ಇದ್ವಿ. ಇಂತಹದ್ದೆ ಒಂದು ಘಟನೆ ಮಲೆನಾಡು ಶಿವಮೊಗ್ಗದಲ್ಲಿ ನಡೆದು ಹೋಗಿದೆ. ಹೌದು ವೃದ್ದ ದಂಪತಿಯ ಕೋಲ್ಡ್ ಬ್ಲಡ್ ಮರ್ಡರ್ ಇಡೀ ಶಿವಗಮೊಗ್ಗವನ್ನೇ ಬೆಚ್ಚಿ ಬೀಳಿಸಿದೆ..

ಒಂದು ಕಡೆ ತನ್ನ ತನಿಖೆಯನ್ನು ನಡೆಸ್ತಿರುವ ಸೋಕೋ ಟೀಂ, ಹಾಗೂ ಡಾಗ್ ಸ್ಕ್ವಾಡ್, ಮತ್ತೊಂದೆಡೆ ಏನಾಯ್ತು ಅನ್ನೋ ಕುತೂಹಲದಲ್ಲಿರುವ ಸಾರ್ವಜನಿಕರು.. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಭದ್ರಾವತಿಯ ಬೂತನಗುಡಿ. ಯೆಸ್ ಈ ಬೂತನಗುಡಿಯಲ್ಲಿ ಒಂದು ಮರ್ಡರ್ ನಡೆದುಹೋಗಿದೆ. ಅದು ವೃದ್ದ ದಂಪತಿಯದ್ದು..

ಸಾವಿಗೀಡಾದ ನತದೃಷ್ಟ ದಂಪತಿಗಳ ಪೈಕಿ 70 ವರ್ಷದ ಚಂದ್ರಪ್ಪ ಹಾಗೂ 65 ವರ್ಷದ ಜಯಮ್ಮ. ಭದ್ರಾವತಿಯ ಬೂತನಗುಡಿಯಲ್ಲಿ ವಾಸವಾಗಿರ್ತಾರೆ. ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಪ್ಪ ಕೆಲ ವರ್ಷಗಳ ಹಿಂದೆಯೆ ನಿವೃತ್ತಿ ಹೊಂದಿದ್ರು. ಇನ್ನೂ ಜಯಮ್ಮ ಹೌಸ್ ವೈಫ್. ಇಬ್ರಿಗೂ ಕೂಡ 3 ಮಂದಿ ಗಂಡು ಮಕ್ಕಳಿದ್ರು. ಆದ್ರೆ ದಂಪತಿ ಮಾತ್ರ ಪ್ರತ್ಯೇಕವಾಗಿ ವಾಸವಾಗಿದ್ರು.

ಬದುಕಲ್ಲಿ ವಯೋಸಹಜ ಕೆಲ ಖಾಯಿಲೆಗಳು ಬಿಟ್ರೆ ಇನ್ನೇನು ಇರ್ಲಿಲ್ಲ. ಒಂದ್ ಲೆವೆಲ್ ಗೆ ನೆಮ್ಮದಿಯಲ್ಲಿ ತನ್ನ ರಿಟೈರ್ಡ್ ಲೈಫ್ ಅನ್ನು ಚಂದ್ರಪ್ಪ ತನ್ನ ಹೆಂಡತಿ ಜಯಮ್ಮ ಜೊತೆ ಕಳೆಯುತ್ತಿದ್ದರು. ಬೆಳಗ್ಗೆ ಹಾಗೂ ಸಂಜೆ ಭದ್ರಾವತಿಯ ಕನಕ ಮಂಟಪದ ಬಳಿ ವಾಕಿಂಗ್ ಮಾಡ್ಕೊಂಡು ದಿನ ಮುಂದೂಡ್ತಿದ್ದರು. ಮಕ್ಕಳು ಇವ್ರಿಂದ ದೂರ ಇದ್ರೂ ಕೂಡ ಪ್ರತಿನಿತ್ಯ ಫೋನ್ ಮಾಡಿ ವಿಚಾರಿಸಿಕೊಳ್ತಿದ್ರು..

ಅದೇ ಭಾನುವಾರ ಸಂಜೆಯೂ ಸಹ ಇವ್ರ ಮಗ ಆದರ್ಶ ಫೋನ್ ಮಾಡಿದ್ದಾನೆ. ಆದ್ರೆ ಇಬ್ರೂ ಕೂಡ ಫೋನ್ ರಿಸೀವ್ ಮಾಡಿರಲ್ಲ. ಏನೋ ಮಲ್ಗಿರ್ಬೇಕು ಅಂತ ಆತನೂ ಸುಮ್ನೆ ಆಗ್ತಾನೆ. ಆದ್ರೆ ಮತ್ತೆ ಪುನಃ ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ಫೋನ್ ಮಾಡಿದ್ದ. ಆಗ್ಲೂ ಕೂಡ ಚಂದ್ರಪ್ಪ ಫೋನ್ ರಿಸೀವ್ ಮಾಡಿರಲ್ಲ. ಈ ವೇಳೆ ಆದರ್ಶಗೆ ಸಂಶಯ ಬರುತ್ತೆ. ಏನಾಯ್ತೋ ಏನೋ ಅಂತ ಭಯದಿಂದಲೇ ಪಕ್ಕದ ಮನೆಯ ಒಬ್ರಿಗೆ ಕರೆ ಮಾಡಿ ಸಾರ್ ನಮ್ಮ ಅಪ್ಪ ಅಮ್ಮ ಫೋನ್ ಎತ್ತುತ್ತಿಲ್ಲ ಏನಾಯ್ತು ಒಂದು ಸಲ ನೋಡಿ ಸಾರ್ ಎಂದು ಹೇಳ್ತಾನೆ.

ಹೀಗೆ ಪಕ್ಕದ ಮನೆಯವ್ರು ಬಂದು ನೋಡಿದಾಗ ಚಂದ್ರಪ್ಪ ಹಾಲ್ ನಲ್ಲಿ ಮಲ್ಗಿದ್ರೆ, ಜಯಮ್ಮ ರೂಮ್ ನಲ್ಲಿ ಮಲ್ಗಿರ್ತಾರೆ. ಮೊದಲಿಗೆ ಬಂದು ಮಾತಾಡಿಸಿದಾಗ ಇಬ್ರು ಕೂಡ ಮಾತಾಡಿರಲ್ಲ. ಹೀಗಾಗಿ ಆದರ್ಶನಿಗೆ ಸಾರ್ ನಿಮ್ ಅಪ್ಪ ಅಮ್ಮ ಇಬ್ರೂ ಮಾತಾಡ್ತಿಲ್ಲ. ಅಲ್ಲದೇ ನಿಮ್ ತಾಯಿ ಬಾಯಲ್ಲಿ ನೊರೆ ಬರ್ತಿದೆ ಸಾರ್ ಎಂದಿದ್ದ. ಇದನ್ನು ಕೇಳಿದ ಆದರ್ಶಗೆ ಒಂದು ಕ್ಷಣ ಎದೆ ಧಸಕ್ ಅಂದಿತ್ತು.

ಆದರ್ಶ ತನ್ನ ಮನೆಯವ್ರಿಗೆಲ್ಲಾ ಫೋನ್ ಮಾಡಿ ವಿಷಯ ಮುಟ್ಟಿಸಿದ್ದ. ಮೊದಲಿಗೆ ಭದ್ರಾವತಿ ಹಳೆ ಪಟ್ಟಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ರು. ಪೊಲೀಸರು ಬಂದು ನೋಡಿದಾಗ ಸಾವು ಕನ್ಫರ್ಮ್ ಆಗಿತ್ತು. ಮೊದಲಿಗೆ ಯುಡಿಆರ್ ಮಾಡ್ಕೊಂಡು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ರು. ಈ ಕ್ರೈಂ ಸೀನ್ ಅನ್ನೂ ಬಹಳ ಸೂಕ್ಷ್ಮವಾಗಿ ಅಬ್ಸರ್ವ್ ಮಾಡಿದಾಗ ಪೊಲೀಸರಿಗೆ ಒಂದು ಡೌಟ್ ಬಂದಿತ್ತು.

ಅದೇನಂದ್ರೆ ಚಂದ್ರಪ್ಪ ಹಾಗೂ ಜಯಮ್ಮ ಬಾಡಿಗಳ ಮಧ್ಯೆ ಅದೊಂದು ಮೆಡಿಕಲ್ ದಾಖಲೆಗಳು ಇದ್ವು. ಇನ್ನೂ ಬಹಳ ಸೂಕ್ಷ್ಮವಾಗಿ ಅಬ್ಸರ್ವ್ ಮಾಡಿದಾಗ ಇಬ್ರ ಕೈನಲ್ಲಿ ಇಂಜೆಕ್ಷನ್ ಕೊಟ್ಟಿರುವ ಮಾರ್ಕ್ ಇತ್ತು ಅಲ್ಲದೆ, ಮೃತರ ದೇಹದ ಮೇಲೆ ಇದ್ದ ಆಭರಣಗಳು ಕಳುವಾಗಿದ್ದವು. ಅಲ್ಲದೆ ಮನೆಯಲ್ಲಿ ಅಡುಗೆ ಮಾಡಲಾಗಿತ್ತು. ಆದ್ರೆ ಊಟ ಖಾಲಿ ಆಗಿರ್ಲಿಲ್ಲ. ಇತ್ತ ಬಾಡಿ ಮೇಲೆ ಇದ್ದ ಆಭರಣ ಕಳುವು ಆಗಿದ್ದನ್ನು ನೋಡಿ ಮನೆಯಲ್ಲಿ ಇದ್ದ ಬೀರು, ಕಬೋರ್ಡ್ ಅನ್ನೂ ನೋಡಿದ್ರೆ, ಅಲ್ಲೂ ಕೂಡ ಆಭರಣಗಳು ಕಳುವಾಗಿದ್ದವು. ಆದ್ರೆ ಎಲ್ಲೂ ಮನೆಗೆ ಫೋರ್ಸ್ ಎಂಟ್ರಿ ಇರ್ಲಿಲ್ಲ. ಇದು ಪೊಲೀಸರಿಗೆ ತಲೆ ನೋವಾಗಿತ್ತು. ಹೀಗಾಗಿ ಸ್ಥಳದಲ್ಲಿ ಯಾವೆಲ್ಲಾ ಸಾಕ್ಷ್ಯಗಳು ಲಭ್ಯವಾಗುತ್ತೋ ಅದನ್ನೇ ಇಟ್ಕೊಂಡು ಪೊಲೀಸರು ತನಿಖೆಯನ್ನು ಶುರು ಮಾಡಿದ್ರು.

ಆಗ ಗೊತ್ತಾದ ಮಾಹಿತಿಯೇ ವೃದ್ದ ದಂಪತಿಯ ಮನೆಗೆ ಒಬ್ಬ ವ್ಯಕ್ತಿ ಎಂಟ್ರಿ ಆಗಿದ್ದ. ಅಲ್ಲಿ ಪೊಲೀಸರಿಗೆ ಕ್ಲೂ ಸಿಗುತ್ತೆ. ಅಲ್ಲಿಂದ ಪೊಲೀಸರು ತಮ್ಮ ಇನ್ವೆಸ್ಟಿಗೇಷನ್ ಅನ್ನೂ ಮುಂದುವರಿಸ್ತಾರೆ. ಹಾಗಾದ್ರೆ ಮನೆಗೆ ಬಂದ ಆ ವ್ಯಕ್ತಿ ಯಾರು? ಆತನೇ ಈ ಕೊಲೆಯನ್ನು ಮಾಡುದ್ನಾ? ಪಕ್ಕ ಫ್ರೊಫೆಷನಲ್ ಕಿಲ್ಲರ್ ಥರ ಯೋಚನೆ ಮಾಡಿ ಕೊಂದಿದ್ದಾನೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ರು.

ವೃದ್ಧ ದಂಪತಿಯ ಸಾವು ಕೊಲೆ ಅನ್ನೋದೇನೋ ಪ್ರೂವ್ ಆಯ್ತು. ಆದ್ರೆ ಕೊಲೆಗಾರ ಯಾರು ಅನ್ನೋದು ಪೊಲೀಸರಿಗೆ ತಲೆ ನೋವಾಗಿತ್ತು. ಮನೆಗೆ ಯಾವುದೇ ಫೋರ್ಸ್ ಎಂಟ್ರಿ ಇರ್ಲಿಲ್ಲ. ಎಲ್ಲವೂ ಇದ್ದ ಹಾಗೆ ಇತ್ತು, ಆದ್ರೆ ಚಿನ್ನಾಭರಣ ಮಾತ್ರ ಇರ್ಲಿಲ್ಲ. ಹೀಗಾಗಿ ಇದು ಮರ್ಡರ್ ಫಾರ್ ಗೈನ್ ಅನ್ನೋದು ಪಕ್ಕಾ ಆಗಿತ್ತು. ಆದ್ರೆ ಯಾರು ಅನ್ನೋದು ಹುಡುಕಾಟದಲ್ಲಿ ಇದ್ದಾಗಲೇ ಪೊಲೀಸರಿಗೆ ಗೊತ್ತಾಗಿದೆ. ಅಂದು ರಾತ್ರಿ ಮನೆಗೆ ಒಬ್ಬ ಎಂಟ್ರಿ ಕೊಟ್ಟಿದ್ದ. ಆತನೇ ಚಂದ್ರಪ್ಪ ಅವರ ಅಣ್ಣನ ಮಗ ಮಲ್ಲೇಶ್. ಅರರೆ ಸ್ವತಃ ದೊಡ್ಡಪ್ಪನ ಮನೆಗೆ ಆತ ಬಂದಿದ್ದಾದ್ರೂ ಏಕೆ? ಆತನೇ ನಿಜವಾದ ಕೊಲೆಗಾರನಾ? ಬೇರೆ ಯಾರಾದ್ರೂ ಇದ್ರಾ ಅನ್ನೋದರ ತನಿಖೆಗೆ ಇಳಿದಾಗ ಗೊತ್ತಾಗಿದ್ದೆ ಬಹು ದೊಡ್ಡ ರಹಸ್ಯ. ಆತ ಎಂಟ್ರಿ ಕೊಟ್ಟ ನಂತರ ಏನೇನ್ ಆಯ್ತು? ಕೊಲೆಗಾರ ಕೊಲೆ ಮಾಡಿದ್ದಾದ್ರೂ ಯಾಕೆ..?

ಪೊಲೀಸರು ತನಿಖೆ ನಡೆಸುವಾಗಲೇ ಗೊತ್ತಾಗಿದ್ದು ಕೊಲೆಯ ದಿನ ಚಂದ್ರಪ್ಪ ಅವ್ರ ಅಣ್ಣನ ಮಗ ಮಲ್ಲೇಶ್ ಮನೆಗೆ ಎಂಟ್ರಿ ಕೊಟ್ಟಿದ್ದ. ಪೊಲೀಸರು ಆತನನ್ನ ವಶಕ್ಕೆ ಪಡೆದು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದ್ರು. ಆಗ ಕಂಪ್ಲೀಟ್ ಆಗಿ ಎಲ್ಲಾ ವಿಚಾರವನ್ನು ಮಲ್ಲೇಶ ಕಕ್ಕಿದ್ದ. ಈ ಜೋಡಿ ಕೊಲೆಯ ಆರೋಪಿ ಬೇರೆ ಯಾರೂ ಅಲ್ಲ, ಮೃತ ಚಂದ್ರಪ್ಪ ಅವರ ಸಹೋದರ ಫಾಲಾಕ್ಷಪ್ಪ ನವರ ಪುತ್ರ ಡಾ.ಮಲ್ಲೇಶ್. ಆರೋಪಿ ಡಾ. ಮಲ್ಲೇಶ್ ಬಿ. ಬೀರನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಆಯುರ್ವೇದ ವೈದ್ಯನಾಗಿದ್ದಾನೆ. ವಿಶೇಷವೆಂದರೆ ವೃದ್ಧ ದಂಪತಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಈತನ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದರು.

ಸುಳಿವು ಬಿಟ್ಟುಕೊಟ್ಟ ಚಾಲಾಕಿ ಕೊಲೆಗಾರ:

ದಂಪತಿಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ವೈದ್ಯ, ಅವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಯಾವುದೇ ಗಾಯ ಮಾಡದೆ ಮಂಡಿ ನೋವು ಕಡಿಮೆಯಾಗಲು ಇಂಜೆಕ್ಷನ್ ಕೊಡುವುದಾಗಿ ಹೇಳಿ ಅತ್ಯಂತ ಚಾಣಾಕ್ಷತನದಿಂದ ಕೊಲೆ ಮಾಡಿದ್ದಾನೆ . ಆಯುರ್ವೇದ ವೈದ್ಯನಾಗಿದ್ದ ಮಲ್ಲೇಶ್ ಮೈತುಂಬ ಸಾಲ ಮಾಡಿಕೊಂಡಿದ್ದ. ತನ್ನ ಸಾಲ ತೀರಿಸಲು ಒಮ್ಮೆ ದೊಡ್ಡಪ್ಪ ಚಂದ್ರಪ್ಪನವರ ಬಳಿ 15 ಲಕ್ಷ ಕೊಡುವಂತೆ ಕೂಡ ಕೇಳಿದ್ದ. ಅವರು ಸಾಲ ಕೊಡಲು ನಿರಾಕರಿಸಿದ್ದರು.

ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಮಲ್ಲೇಶ್ ದೊಡ್ಡಪ್ಪ ದೊಡ್ಡಮ್ಮನ ಬಳಿ ಇದ್ದ ಬಂಗಾರದ ಮೇಲೆ ಕಣ್ಣು ಹಾಕಿದ್ದ. ಅಂತೆಯೇ ಜ. 19 ರಂದು ಮಧ್ಯಾಹ್ನ ಮನೆಗೆ ಬಂದು ದೊಡ್ಡಪ್ಪ ದೊಡ್ಡಮ್ಮನನ್ನು ನಂಬಿಸಿ ಸುಮಾರು 50 ಎಂ ಜಿ ಅನಸ್ತೇಶಿಯಾ ಇಂಜೆಕ್ಷನ್ ಓವರ್ ಡೋಸ್ ಕೊಟ್ಟು ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಅವರ ಬಂಗಾರ ತೆಗೆದುಕೊಂಡು ಹೋಗಿ ಅಡವಿಟ್ಟು ತನ್ನ ಸಾಲ ಕೂಡ ತೀರಿಸಿಕೊಂಡಿದ್ದ ಈ ಮಲ್ಲೇಶ

ಭದ್ರಾವತಿ ಹಳೆ ಪಟ್ಟಣ ಪೊಲೀಸರು ಇಮಿಡಿಯಟ್ಲಿ ಅರೆಸ್ಟ್ ಮಾಡಿ ಜತೆಗೆ ಎಲ್ಲಾ ರಿಕವರಿ ಮಾಡುವ ಕೆಲಸ ಮಾಡ್ತಿದ್ದಾರೆ. ಇನ್ನೂ ಚಂದ್ರಪ್ಪ-ಜಯಮ್ಮ ಮಕ್ಕಳು ಆತನಿಗೆ ಶಿಕ್ಷೆ ಆಗುವ ತನಕ ನಮ್ ಅಪ್ಪಅಮ್ಮನ ಆತ್ಮಕ್ಕೆ ಶಾಂತಿ ಸಿಗಲ್ಲ ಎಂದು ಗೋಗರಿಯುತ್ತಿದ್ದಾರೆ.

ನೋಡುದ್ರಲ್ಲಾ ಹಣದ ಆಸೆಗಾಗಿ ಮನುಷ್ಯ ಎಂತ ಲೆವೆಲ್ ಗಾದ್ರೂ ಹೋಗ್ತಾನೆ ಅನ್ನೋದನ್ನ. ವೈದ್ಯೋ ನಾರಾಯಣ ಹರಿ ಅಂತಾರೆ. ಅಂತದ್ರಲ್ಲಿ ಜನರ ಜೀವ ಉಳಿಸಬೇಕಾದ ಡಾಕ್ಟರ್ ಹಣದ ಆಸೆಗಾಗಿ ಬದುಕಿನ ಮುಸ್ಸಂಜೆಯಲ್ಲಿರುವ ಹಿರಿ ಜೀವಗಳನ್ನು ಸಾವಿನ ಮನೆ ಸೇರಿಸಿದ್ದು ಕರುಣಾಜನಕವಾಗಿದೆ. ಇತ್ತ ತಂದೆ ತಾಯಿಗಳನ್ನು ಕಳ್ಕೊಂಡು ಮಕ್ಕಳು ಅನಾಥರಾದ್ರೆ ಒಳ್ಳೆ ಬದುಕನ್ನು ಬದುಕಬೇಕಿದ್ದ ಡಾಕ್ಟರ್ ಜೈಲಲ್ಲಿ ಮುದ್ದೆ ಮುರಿಯುವಂತಾಗಿದೆ.