ಮೈಸೂರಿನಲ್ಲಿ ಪೇಂಟಿಂಗ್ ಕೆಲಸಕ್ಕೆಂದು ಹೋದ 44 ವರ್ಷದ ಸತೀಶ್ ಎಂಬುವವರು, ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಕಂಟ್ರಾಕ್ಟರ್ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಇದೀಗ ಪತ್ನಿ ಮತ್ತು ಮಕ್ಕಳು ಅನಾಥರಾಗಿದ್ದಾರೆ.
ಮೈಸೂರು (ಜ.23): ಪತಿ ಕೆಲಸಕ್ಕೆ ಹೋಗಿದ್ದಾನೆ, ದುಡಿದು ಸಂಜೆ ಬರ್ತಾನೆ, ಬಂದ ತಕ್ಷಣ ಊಟಕ್ಕೆ ಹಾಕೊಣ ಅಂತ ಹೆಂಡತಿ ಅಡುಗೆ ಮಾಡಿಕೊಂಡು ಕಾಯ್ತಿದ್ರು. ಅದೇರೀತಿ ಮಕ್ಕಳು ಕೂಡ ತಂದೆ ಬರುವ ದಾರಿಕಾಯ್ತಿದ್ರು. ಆದ್ರೆ ಕೆಲಸಕ್ಕೆ ಹೋದವನು ದೊಡ್ಡ ಕಟ್ಟಡದಿಂದ ಬಿದ್ದು ಸಾವನ್ನಪಿದ್ದಾನೆ. ಈಗ ಹೆಂಡತಿ ಮಕ್ಕಳು ದಿಕ್ಕು ಕಾಣದೆ ಗೋಳಾಡುತ್ತಿದ್ದಾರೆ.
ಗಂಡನನ್ನು ಕಳೆದು ಕೊಂಡು ಬಿದ್ದು ಒದ್ದಾಡುತ್ತಿರುವ ಪತ್ನಿ, ತಂದೆ ಕಳೆದುಕೊಂಡು ಕಣ್ಣೀರು ಹಾಕುತ್ತ ಭವಿಷ್ಯದ ದಾರಿ ಕಾಣೆದೆ ಗೋಳಾಡುತ್ತಿರುವ ಮಕ್ಕಳು, ಇಂತಹ ಮನಕಲಕುವ ದೃಶ್ಯ ಕಂಡು ಬಂದಿದ್ದು ಮೈಸೂರಿನ ಜಿಲ್ಲಾಸ್ಪತೆ ಶವಗಾರದಲ್ಲಿ. ನಗರದ ಕ್ಯಾತಮಾರನ ಹಳ್ಳಿ ನಿವಾಸಿ ಸತೀಶ್ 44 ಪೇಂಟಿಂಗ್ ಕೆಲಸಕ್ಕೆ ಹೋಗಿ ದೊಡ್ಡ ಕಟ್ಟಡದ ಮೇಲೆ ಬಣ್ಣ ಬಳಿಯುತ್ತಿದ್ದ ಸಮಯದಲ್ಲಿ ಹಗ್ಗ ತುಂಡಾಗಿ ಮೇಲಿಂದ ಕೆಳಗೆ ಬಿದ್ದು ಒದ್ದಾಡಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೈಸೂರು ನಗರದ ದಿವಾನ್ ರಸ್ತೆಯಲ್ಲಿರುವ ಸಂಕಲ್ಪ ಎನ್ ಕ್ಲೇವ್ ಅಪಾರ್ಟ್ಮೆಂಟ್ ಗೆ ಬಣ್ಣ ಹೊಡೆಯುತ್ತಿದ್ದ ಸಂಧರ್ಭದಲ್ಲಿ ದುರ್ಘಟನೆ ನಡೆದಿದೆ. ಎಲ್ಲ ದೃಶ್ಯಗಳು ಪಕ್ಕದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೇಂಟಿಂಗ್ ಕೆಲಸ ಮಾಡಿಕೊಂಡು ಮಕ್ಕಳನ್ನ ಚೆನ್ನಾಗಿ ವ್ಯಾಸಂಗ ಮಾಡಿಸಬೇಕು ಒಳ್ಳೆ ಭವಿಷ್ಯ ರೂಪಿಸಬೇಕು ಹೆಂಡತಿಯನ್ನು ಚೆನ್ನಾಗಿ ನೊಡ್ಕೊಬೇಕು ಅಂತೆ ಆಸೆ ಯಿಂದ ಹಣ ಸಂಪಾದನೆಗೆ ಪೇಂಟಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಕುಟುಂಬಕ್ಕೆ ಆಸಾರೆಯಾಗಿದ್ರು ಈಗ ಕೆಲಸಕ್ಕೆ ಹೋಗಿ ಸಾವನ್ನಪಿದ್ದಾನೆ. ಕೆಲಸಕ್ಕೆ ಕರೆದುಕೊಂಡು ಬಂದ ಕಂಟ್ರಾಕ್ಟರ್ ಸೇಫ್ಟಿ ವಹಿಸಿ ಮೇಲಕ್ಕೆ ಹತ್ತಿಸಬೇಕಿತ್ತು. ಆದ್ರೆ ಯಾವುದೇ ಸೇಫ್ಟಿ ಇಲ್ಲದೆ ಮೇಲೆಕ್ಕೆ ಹತ್ತಿಸಿ ಕೆಲಸಮಾಡಿಸುತ್ತಿದ್ದ ಇದು ಸತೀಶ್ ಸಾವಿಗೆ ಕಾರಣವಾಗಿದೆ. ಸಾವಿಗೆ ಕಂಟ್ರಾಕ್ಟರ್ ಕಾರಣನಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಮಾಡುತ್ತಿದ್ದಾರೆ.
ಅಪಾರ್ಟ್ಮೆಂಟ್ ಗೆ ಬಣ್ಣ ಹೊಡೆಯಲು ಹೋಗ್ತಾರೆ ಅಂತ ಹೇಳಿದ್ರೆ ನನ್ನ ಗಂಡನನ್ನ ಕಳುಹಿಸುತ್ತಿರಲಿಲ್ಲ. ಕಂಟ್ರಾಕ್ಟರ್ ದೀಪಕ್ ನಿರ್ಲ್ಯಕ್ಷಕ್ಕೆ ನನ್ನ ಗಂಡ ಸಾವನಪ್ಪಿದ್ದಾನೆ. ನನ್ನ ಗಂಡನ ಸಾವಿಗೆ ನ್ಯಾಯ ಬೇಕು ಅಂತ ಕಣ್ಣೀರು ಹಾಕುತ್ತಿದ್ದಾರೆ.
ಕ್ಯಾಮೆರಾಮನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.


