Published : Mar 21, 2025, 07:35 AM ISTUpdated : Mar 21, 2025, 10:48 PM IST

Karnataka News Live 21st March: ಮನೆಯಿಂದ 88 ಕೆಜಿ ಚಿನ್ನ ಸೇರಿ 100 ಕೋಟಿ ರೂ ಮೌಲ್ಯದ ವಸ್ತು ಜಪ್ತಿ, ಇದು ಅತೀದೊಡ್ಡ ದಾಳಿ

ಸಾರಾಂಶ

ಬೆಂಗಳೂರು (ಮಾ.11): ದೇಶದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ ಆರಂಭವಾಗಲಿದೆ. ಏಪ್ರಿಲ್‌ 14ರವರೆಗೆ ಪರೀಕ್ಷೆ ನಡೆಯಲಿದೆ.ಒಟ್ಟು 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆಗೆ ಎದೆಗುಂದಬೇಡಿ. ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಶುರು. 9ರ ಒಳಗಾಗಿ ಪರೀಕ್ಷಾ ಕೇಂದ್ರವನ್ನು ತಲುಪಿ. ಅದರೊಂದಿಗೆ ರಾಜ್ಯದಲ್ಲಿ ಹನಿಟ್ರ್ಯಾಪ್‌ ವಿವಾದ ಜೋರಾಗಿದೆ. ಗುರುವಾರ ವಿಧಾನಸಭೆಯಲ್ಲಿಯೇ ಈ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ 48 ರಾಜಕಾರಣಿಗಳ ಹನಿಟ್ರ್ಯಾಪ್‌ ನಡೆದಿದೆ ಎಂದು ಸ್ವತಃ ಸಹಕಾರ ಸಚಿವ ಕೆಎನ್‌ ರಾಜಣ್ಣ ತಿಳಿಸಿದ್ದು, ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ.

Karnataka News Live 21st March: ಮನೆಯಿಂದ  88 ಕೆಜಿ ಚಿನ್ನ ಸೇರಿ 100 ಕೋಟಿ ರೂ ಮೌಲ್ಯದ ವಸ್ತು ಜಪ್ತಿ, ಇದು ಅತೀದೊಡ್ಡ ದಾಳಿ

10:48 PM (IST) Mar 21

ಮನೆಯಿಂದ 88 ಕೆಜಿ ಚಿನ್ನ ಸೇರಿ 100 ಕೋಟಿ ರೂ ಮೌಲ್ಯದ ವಸ್ತು ಜಪ್ತಿ, ಇದು ಅತೀದೊಡ್ಡ ದಾಳಿ

ಇದು ದೇಶದ ಇತಿಹಾಸದಲ್ಲಿ ಇತ್ತೀಚೆಗೆ ನಡೆದ ಅತೀ ದೊಡ್ಡ ಜಪ್ತಿ. ಮನೆಯೊಂದರ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಬರೋಬ್ಬರಿ 88ಕೆಜಿ ಚಿನ್ನ, 19.6 ಕೆಜಿ ಆಭರಣ, 1.3 ಕೋಟಿ ರೂ ನಗದು ಸೇರಿದಂತೆ 100 ಕೋಟಿ ಮೌಲ್ಯದ ವಸ್ತುಗಳು ಸೀಝ್ ಮಾಡಿದ್ದಾರೆ. ಇದರ ಮಾಲೀಕ ಯಾರು?

ಪೂರ್ತಿ ಓದಿ

10:32 PM (IST) Mar 21

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ಹೊರ ಬಂದ ನಟಿ; ಪ್ರಮುಖ ಪಾತ್ರದ ಬದಲಾವಣೆಗೆ ವೀಕ್ಷಕರು ಶಾಕ್!

Shravani Subramanya Serial: ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಿಂದ ನಟಿ ಹೊರಬಂದಿದ್ದು, ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಪ್ರಮುಖ ಪಾತ್ರದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಕಾರಣಾಂತರಗಳಿಂದ ನಟಿ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ ಎಂಬ  ಮಾತುಗಳು ಕೇಳಿ ಬರುತ್ತಿವೆ.

ಪೂರ್ತಿ ಓದಿ

10:27 PM (IST) Mar 21

ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್‌ ರೇಟಿಂಗ್, ಪಿ. ಜಿ. ಚೆನ್ನಾಗಿಲ್ಲ ಎಂದ ವಿದ್ಯಾರ್ಥಿಗೆ ಮಾಲೀಕನ ಹಲ್ಲೆ

ಪೇಯಿಂಗ್ ಗೆಸ್ಟ್ (ಪಿ.ಜಿ.) ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್‌ರೇಟಿಂಗ್ ಕೊಟ್ಟು ಚೆನ್ನಾಗಿಲ್ಲ ಎಂದು ಕಾಮೆಂಟ್ ಹಾಕಿದ್ದಕ್ಕೆ ಪಿ. ಜಿ. ಮಾಲೀಕ ಮತ್ತು ಆತನ ಸಹಚರರು ಸೇರಿ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಕದ್ರಿಯಲ್ಲಿ ಸಂಭವಿಸಿದೆ.

ಪೂರ್ತಿ ಓದಿ

10:04 PM (IST) Mar 21

₹30,000 ಹೈಕ್‌ಗಾಗಿ ನೋಯ್ಡಾದಿಂದ ಬೆಂಗಳೂರು ಬಂದು ಕೆಟ್ಟೆ, ಚರ್ಚೆಯಾಗುತ್ತಿದೆ ಉದ್ಯೋಗಿಯ ಕಾರಣ

ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ತಿಂಗಳಿಗೆ 30,000 ರೂಪಾಯಿ ಹೈಕ್ ಕೊಟ್ಟ ಕಾರಣ ಬೆಂಗಳೂರಿಗೆ ಶಿಫ್ಟ್ ಆಗಿದ್ದಾನೆ. ಆದರೆ  ಸಂಬಂಳ ಹೆಚ್ಚಾದರೂ ಬೆಂಗಳೂರು ಎಲ್ಲಾ ಖುಷಿಯನ್ನೇ ನುಂಗಿ ಹಾಕಿದೆ ಎಂದು ಉದ್ಯೋಗಿ ನೋವು ತೋಡಿಕೊಂಡಿದ್ದಾನೆ. ಇದಕ್ಕೆ ಕಾರಣವನ್ನೂ ನೀಡಿದ್ದಾನೆ.

ಪೂರ್ತಿ ಓದಿ

09:26 PM (IST) Mar 21

ಸ್ಮಾರ್ಟ್ ಮೀಟರ್ ಹಗರಣ: 7,408 ಕೋಟಿ ರೂ. ಗೋಲ್ ಮಾಲ್? ಜನರ ಹಣ ಯಾರ ಜೇಬಿಗೆ?

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ರಾಜ್ಯಗಳಿಗಿಂತ ಹೆಚ್ಚಿನ ದರದಲ್ಲಿ ಸ್ಮಾರ್ಟ್ ಮೀಟರ್ ಖರೀದಿಸಿ 7,408 ಕೋಟಿ ರೂ. ಗೋಲ್ ಮಾಲ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಪೂರ್ತಿ ಓದಿ

09:20 PM (IST) Mar 21

70, 90 ಗಂಟೆ ಕೆಲಸಕ್ಕೆ ಪರಿಹಾರ ಕೊಟ್ಟ ಬೆಂಗಳೂರಿಗ, ಈತನ ಐಡಿಯಾಗೆ ದಿಗ್ಗಜರೆ ಕಕ್ಕಾಬಿಕ್ಕಿ

ವಾರದಲ್ಲಿ 70 ಗಂಟೆ ಕೆಲಸ ಮಾಡಿ, 90 ಗಂಟೆ ಕೆಲಸ ಮಾಡಿ ಎಂದು ಹಲವು ಕಂಪನಿಗಳು ಸಿಇಒ, ಮುಖ್ಯಸ್ಥರು ಸಲಹೆ ನೀಡಿದ್ದಾರೆ. ಈ ಚರ್ಚೆ ತಣ್ಣಾಗಾದ ಬೆನ್ನಲ್ಲೇ ಬೆಂಗಳೂರಿಗ ಇದೀಗ ವರ್ಕ್ ಲೈಫ್ ಬ್ಯಾಲೆನ್ಸ್‌ಗೆ ಭರ್ಜರಿ ಪರಿಹಾರ ಸೂಚಿಸಿದ್ದಾನೆ. ಈತ ಕೊಟ್ಟ ಐಡಿಯಾಗೆ ಹಲವು ಕಂಪನಿಗಳ ಬಾಸ್‌ ಕಕ್ಕಾಬಿಕ್ಕಿಯಾಗಿದ್ದಾರೆ.

ಪೂರ್ತಿ ಓದಿ

09:14 PM (IST) Mar 21

ಕೊರೋನಾದಲ್ಲಿ ಹೆಣದಿಂದ ಬಿಜೆಪಿ ಹಣ ಮಾಡಿರುವುದು ಬಯಲು: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿ ಅವಧಿಯಲ್ಲಿನ ಕೊರೋನಾ ಸಾವುಗಳ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ‘ನ್ಯಾ. ಕುನ್ಹಾ ವರದಿಯಲ್ಲಿ ಬಿಜೆಪಿಯವರು ಹೆಣದಿಂದ ಹಣ ಮಾಡಿರುವುದು ಬಯಲಾಗಿದೆ. ಕಂಬಿ ಎಣಿಸಲು ಸಜ್ಜಾಗಿ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ ನೀಡಿದ್ದಾರೆ. 

ಪೂರ್ತಿ ಓದಿ

08:57 PM (IST) Mar 21

ಬೇಸಿಗೆಯ ಊಟಕ್ಕೆ ರುಚಿಕರ ಹುಳಿ-ಮಜ್ಜಿಗೆ ಸೂಪರ್! ಇದನ್ನು ಮಾಡೋದು ತುಂಬಾ ಸುಲಭ!

ಬೇಸಿಗೆಗೆ ತಂಪಾದ ಹಸಿ ಮಜ್ಜಿಗೆ ಹುಳಿ ಮಾಡುವ ಸರಳ ವಿಧಾನ ಇಲ್ಲಿದೆ. ಮೊಸರು, ತೆಂಗಿನ ತುರಿ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಮಜ್ಜಿಗೆ ಹುಳಿಯನ್ನು ತಯಾರಿಸಿ.

ಪೂರ್ತಿ ಓದಿ

08:37 PM (IST) Mar 21

ನರೇಂದ್ರ ಮೋದಿಯೇ ದೇಶದ ಹನಿಟ್ರ್ಯಾಪ್ ಪಿತಾಮಹ; ಬಿ.ಕೆ.ಹರಿಪ್ರಸಾದ್ ಆರೋಪ

ವಿಧಾನ ಪರಿಷತ್‌ನಲ್ಲಿ ಬಿ.ಕೆ. ಹರಿಪ್ರಸಾದ್ ಅವರು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಅವರೇ ಹನಿಟ್ರ್ಯಾಪ್‌ನ ಪಿತಾಮಹ ಎಂದು ಆರೋಪಿಸಿದ್ದಾರೆ. ಸಂಜಯ್ ಜೋಶಿ ಅವರ ಹನಿಟ್ರ್ಯಾಪ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.

ಪೂರ್ತಿ ಓದಿ

07:49 PM (IST) Mar 21

ತಿಮ್ಮಪ್ಪನ ದರ್ಶನಕ್ಕೆ ಶಿಫಾರಸು ಬಗ್ಗೆ ಆಂಧ್ರ ಸಿಎಂ ಜತೆ ಚರ್ಚೆ: ಸಚಿವ ರಾಮಲಿಂಗಾರೆಡ್ಡಿ

ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ದರ್ಶನಕ್ಕಾಗಿ ಶಾಸಕರ ಶಿಫಾರಸು ಪತ್ರಗಳನ್ನು ಸ್ವೀಕರಿಸಿ ಅವಕಾಶ ನೀಡುವ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿಯವರಿಗೆ ಮನವಿ ಮಾಡುವ ಚಿಂತನೆಯಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.  

ಪೂರ್ತಿ ಓದಿ

07:44 PM (IST) Mar 21

58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಸಚಿವ ಮಧು ಬಂಗಾರಪ್ಪ

2017ರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (ಸಿಅಂಡ್‌ ಆರ್‌) ಶೀಘ್ರ ತಿದ್ದುಪಡಿ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. 

ಪೂರ್ತಿ ಓದಿ

07:06 PM (IST) Mar 21

ನಂದಿನಿ ಇಡ್ಲಿ-ದೋಸೆ ಹಿಟ್ಟು ಹಾಲಿನ ಬೂತ್ ಜೊತೆಗೆ ಚಿಲ್ಲರೆ ಅಂಗಡಿ, ಇ-ಕಾಮರ್ಸ್ ಡೆಲಿವರಿ ಆಪ್‌ಗಳಲ್ಲೂ ಲಭ್ಯ!

ನಂದಿನಿ ಪ್ರೊಟೀನ್ ಭರಿತ ಇಡ್ಲಿ-ದೋಸೆ ಹಿಟ್ಟು ಏಪ್ರಿಲ್ 1 ರಿಂದ ಚಿಲ್ಲರೆ ಮಳಿಗೆಗಳು, ಆಪ್‌ಗಳು, ಇ-ಕಾಮರ್ಸ್ ತಾಣಗಳು ಮತ್ತು ಮಾಲ್‌ಗಳಲ್ಲಿ ಲಭ್ಯವಿರಲಿದೆ. ಮಾರಾಟವನ್ನು ಹೆಚ್ಚಿಸಲು ಕೆಎಂಎಫ್ ಖಾಸಗಿ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಪೂರ್ತಿ ಓದಿ

07:05 PM (IST) Mar 21

ಬೇಸಿಗೆಯಲ್ಲೂ ತುಂಬಿ ತುಳುಕುತ್ತಿರುವ ಬಂಡೀಪುರದ ಕಾಡಿನ ಕೆರೆ: ದಾಹ ತಣಿಸಿಕೊಂಡು ವಿಹರಿಸುತ್ತಿರುವ ಮೂಕ ಪ್ರಾಣಿಗಳು!

ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇದೀಗ ವನ್ಯಪ್ರಾಣಿಗಳ ನೀರಿನ ದಾಹ ನೀಗಿಸಲು ರಾಜ್ಯದಲ್ಲೇ ಮೊದಲ ಬಾರಿಗೆ ಕಾಡಿನೊಳಗೆ ಕೆರೆ ಅಭಿವೃದ್ಧಿಪಡಿಸಿದೆ. 

ಪೂರ್ತಿ ಓದಿ

06:42 PM (IST) Mar 21

IPL 2025 ಪಾಯಿಂಟ್ಸ್ ಪಟ್ಟಿಯಲ್ಲಿ ಆರ್‌ಸಿಬಿ ಸ್ಥಾನದ ಭವಿಷ್ಯ ನುಡಿದ ಗಿಲ್‌ಕ್ರಿಸ್ಟ್, ಫ್ಯಾನ್ಸ್ ಶಾಕ್

ಐಪಿಎಲ್ 2025 ಟೂರ್ನಿ ಕುರಿತು ಹಲವರು ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಆ್ಯಡಮ್ ಗಿಲ್‌ಕ್ರಿಸ್ಟ್ ಈ ಬಾರಿಯ ಐಪಿಎಲ್ ಅಂತ್ಯದ ವೇಳೆ ಆರ್‌ಸಿಬಿ ಯಾವ ಸ್ಥಾನದಲ್ಲಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣನ್ನೂ ಕೊಟ್ಟಿದ್ದಾರೆ.

ಪೂರ್ತಿ ಓದಿ

06:03 PM (IST) Mar 21

ಪ್ರಧಾನಿ ನರೇಂದ್ರ ಮೋದಿಯವರೇ ನನಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡಿ; ಪತ್ರ ಬರೆದ 80 ವರ್ಷದ ಅಜ್ಜಿ!

ಉತ್ತರ ಕನ್ನಡ ಜಿಲ್ಲೆಯ 80 ವರ್ಷದ ವೃದ್ಧೆಯೊಬ್ಬರು ಆಧಾರ್ ಕಾರ್ಡ್‌ಗಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಅಲೆದಾಡಿದ್ದರೂ, ಈವರೆಗೆ ಯಾರೂ ಮಾಡಿಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಪೂರ್ತಿ ಓದಿ

05:56 PM (IST) Mar 21

ಡೇಟಿಂಗ್ ರಟ್ಟಾಗುತ್ತಿದ್ದಂತೆ ಓಡಿ ಬಂದು ಕಾರ್ತಿಕ್ ಆರ್ಯನ್‌ಗೆ ಪ್ರಪೋಸ್ ಮಾಡಿ, ರಿಂಗ್ ತೊಡಿಸಿದ ಯುವತಿ

ಕನ್ನಡ ನಟಿ ಶ್ರೀಲೀಲಾ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್ ಕುರಿತು ಇತ್ತೀಚೆಗೆ ನಟನ ತಾಯಿ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದ. ಇದರ ಬೆನ್ನಲ್ಲೇ ಯುವತಿಯೊಬ್ಬಳು ಓಡೋಡಿ ಬಂದು ಕಾರ್ತಿಕ್ ಆರ್ಯನ್‌ಗೆ ಎಲ್ಲರ ಮುಂದೆ ಪ್ರಪೋಸ್ ಮಾಡಿದ್ದಾಳೆ. ಇಷ್ಟೇ ಅಲ್ಲ ಎಂಗೇಜ್‌ಮೆಂಟ್ ರಿಂಗ್ ಕೂಡ ತೊಡಿಸಿದ್ದಾಳೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.

ಪೂರ್ತಿ ಓದಿ

05:41 PM (IST) Mar 21

ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಬೇಕೆಂಬುದು ವಿದ್ಯಾರ್ಥಿಗಳ ಹಂಬಲ: ಡಿ.ಕೆ.ಶಿವಕುಮಾರ್

ನಾಳೆ ವಿಶ್ವ ಜಲ ದಿನವಾಗಿದ್ದು, ಅದರ ಅಂಗವಾಗಿ ಕಾವೇರಿ ಆರತಿ ಮಾಡುತ್ತಿದ್ದೇವೆ. ತಲಕಾವೇರಿಯಿಂದ ಕಾವೇರಿ ತೀರ್ಥ ಕೊಂಡೊಯ್ದು ಆರತಿ ಮಾಡಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಪೂರ್ತಿ ಓದಿ

05:29 PM (IST) Mar 21

ಸ್ಪೀಕರ್ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡ್ತಾರೆ ಅನ್ಕೊಂಡಿದ್ದೆ, 18 ಮಾಡಿದ್ದಾರೆ: ಶಾಸಕ ಪ್ರದೀಪ್ ಈಶ್ವರ್!

ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಶಾಸಕರನ್ನು ಅಮಾನತು ಮಾಡಿರುವುದು ಸ್ಪೀಕರ್ ಸ್ಥಾನದ ಗೌರವ ಹೆಚ್ಚಿಸಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಕಲಾಪಕ್ಕೆ ಅಡ್ಡಿಪಡಿಸಿದ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಸಚಿವ ಕೆ.ಎಚ್ ಮುನಿಯಪ್ಪ ಸ್ವಾಗತಿಸಿದ್ದಾರೆ.

ಪೂರ್ತಿ ಓದಿ

05:29 PM (IST) Mar 21

ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

ಹನಿಟ್ರ್ಯಾಪ್ ಅಂದರೆ ಸುಮ್ಮನೆ ಸುಮ್ಮನೆ ಯಾರಾದರೂ ನಿಮ್ಮ ಹತ್ತಿರ ಬರುತ್ತಾರಾ.? ನೀವು ಹಲೋ ಎಂದರೆ ಅವರು ಹಲೋ ಹಲೋ ಎನ್ನುತ್ತಾರೆ, ನೀವು ಮಾತನಾಡುತ್ತಿರುವುದಕ್ಕೆ ನಾನು ಮಾತನಾಡಿದ್ದೇನೆ. 

ಪೂರ್ತಿ ಓದಿ

05:17 PM (IST) Mar 21

Karimani Serial: ಕರ್ಣನ ಶತ್ರು ʼಬ್ಲ್ಯಾಕ್‌ ರೋಸ್‌ʼ ನಳಿನಿಯೋ? ವನಜಾಳೋ? ಇದೇ ದಿನದಂದು ಉತ್ತರ ಸಿಗೋದು ಪಕ್ಕಾ!

ಖಾಸಗಿ ವಾಹಿನಿಯಲ್ಲಿ ʼಕರಿಮಣಿʼ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಬ್ಲ್ಯಾಕ್‌ರೋಸ್‌ ಯಾರು? 

ಪೂರ್ತಿ ಓದಿ

04:52 PM (IST) Mar 21

ವಿಧಾನಸಭೆ: ಸ್ಪೀಕರ್ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರು ಅಮಾನತು! ಇಲ್ಲಿದೆ ಪಟ್ಟಿ..

ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ನೀಲಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ ಶಾಸಕರು, ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದರು.

ಪೂರ್ತಿ ಓದಿ

04:31 PM (IST) Mar 21

ಸ್ನೇಹಿತರನ್ನೇ ಮದುವೆ ಆಗ್ತೀರಾ? ಆಗಬಹುದಾದ ಈ ದೊಡ್ಡ ಅನಾಹುತ ತಪ್ಪಿಸಬಹುದು! ಯಾವುದು?

ಇಂದು ಅರೇಂಜ್‌ ಮ್ಯಾರೇಜ್‌, ಲವ್‌ ಮ್ಯಾರೇಜ್‌ ಚಾಲ್ತಿಯಲ್ಲಿದೆ. ಲವ್‌ ಮ್ಯಾರೇಜ್‌ ಆದವರು ಡಿವೋರ್ಸ್‌ ತಗೊಳ್ರಾರೆ. ಅರೇಂಜ್‌ ಮ್ಯಾರೇಜ್‌ ಆದವರು ಕೂಡ ಡಿವೋರ್ಸ್‌ ತಗೊಳ್ತಾರೆ. ಆದರೆ ಬೆಸ್ಟ್‌ಫ್ರೆಂಡ್‌ನ್ನೇ ಯಾಕೆ ಮದುವೆ ಆಗಬೇಕು ಅಂತ ಕಾರಣ ಇಲ್ಲಿದೆ! 

ಪೂರ್ತಿ ಓದಿ

04:23 PM (IST) Mar 21

ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರಿಗೆ ಬೆಳವಣಿಗೆ ಇಲ್ಲವೇ: ಪರಭಾಷಾ ಚಿತ್ರಗಳಲ್ಲಿ ಸಾಲು ಸಾಲು ಕನ್ನಡತಿಯರು!

ಆಶಿಕಾ ರಂಗನಾಥ್‌, ರೆಚೆಲ್‌ ಡೇವಿಡ್‌, ಸಪ್ತಮಿ ಗೌಡ, ನಭಾ ನಟೇಶ್ ಹೀಗೆ ಕನ್ನಡದ ಸಾಲು ಸಾಲು ನಟಿಯರು ಪರಭಾಷೆಗಳಲ್ಲಿ ನಟಿಸಿ ಸೈ ಅನಿಸಿಕೊಳ್ಳುತ್ತಿದ್ದಾರೆ. ಇವುಗಳ ನಡುವೆ ಸದ್ಯ ಎದ್ದಿರುವ ಪ್ರಶ್ನೆ, ‘ಹಾಗಿದ್ದರೆ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರಿಗೆ ಬೆಳವಣಿಗೆ ಇಲ್ಲವೇ?’ ಎಂಬುದು. 
 

ಪೂರ್ತಿ ಓದಿ

04:11 PM (IST) Mar 21

ಪ್ರೀವೆಡ್ಡಿಂಗ್ ಶೂಟ್ ವೇಳೆ ವಧುವಿನ ಬೆನ್ನಿಗೆ ಹತ್ತಿಕೊಂಡ ಬೆಂಕಿ: ವೀಡಿಯೋ ವೈರಲ್

ಬೆಂಗಳೂರಿನಲ್ಲಿ ಪ್ರೀವೆಡ್ಡಿಂಗ್ ಶೂಟ್ ವೇಳೆ ಬಣ್ಣದ ಬಾಂಬ್ ಸ್ಫೋಟಗೊಂಡು ವಧು ಗಾಯಗೊಂಡಿದ್ದಾರೆ. ವೀಡಿಯೋದಲ್ಲಿ ವಧುವಿನ ಬೆನ್ನಿಗೆ ಬೆಂಕಿ ತಗುಲಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

03:45 PM (IST) Mar 21

ಚಿಕ್ಕಬಳ್ಳಾಪುರದ ಜಂಗಮಕೋಟೆಯ 1033 ಎಕರೆಯಲ್ಲಿ ನಿರ್ಮಾಣವಾಗಲಿದೆ ಡೀಪ್‌ ಟೆಕ್‌ ಪಾರ್ಕ್‌!

ಕರ್ನಾಟಕ ಸರ್ಕಾರವು ಬೆಂಗಳೂರಿನ ಸಮೀಪ ಡೀಪ್-ಟೆಕ್ ಪಾರ್ಕ್ ಸ್ಥಾಪಿಸಲು ನಿರ್ಧರಿಸಿದೆ. ಚಿಕ್ಕಬಳ್ಳಾಪುರದ ಜಂಗಮಕೋಟೆಯಲ್ಲಿ ಸ್ಥಾಪನೆಯಾಗಲಿರುವ ಈ ಪಾರ್ಕ್, ಹೈಟೆಕ್ ಉತ್ಪಾದನೆಗೆ ಉತ್ತೇಜನ ನೀಡಲಿದೆ.

ಪೂರ್ತಿ ಓದಿ

03:33 PM (IST) Mar 21

IPL 2025: ಈ ಬಾರಿ ಪ್ಲೇ ಆಫ್‌ಗೇರೋ 4 ತಂಡಗಳು ಯಾವುವು? ಅಚ್ಚರಿ ಭವಿಷ್ಯ ನುಡಿದ ಆರ್‌ಸಿಬಿ ಮಾಜಿ ಕೋಚ್!

ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡದ ಭವಿಷ್ಯದ ಬಗ್ಗೆ ಮೈಕ್ ಹೆಸನ್ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆಗಳ ಬಗ್ಗೆ ಅವರು ವಿಶ್ಲೇಷಿಸಿದ್ದಾರೆ.

ಪೂರ್ತಿ ಓದಿ

03:22 PM (IST) Mar 21

ದೇವನಹಳ್ಳಿ ಬಳಿ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆಗೆ ಸ್ಥಳ ಮಂಜೂರು: ಕೈಗಾರಿಕಾ ಸಚಿವ ಎಂ.ಬಿ ಪಾಟೀಲ!

ರಾಜ್ಯದಿಂದ ಆಭರಣ ರಫ್ತಿಗೆ ಉತ್ತೇಜನ ನೀಡಲು ದೇವನಹಳ್ಳಿಯಲ್ಲಿ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಸಿದ್ಧವಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಆರಂಭಗೊಂಡ ಆಭರಣ ಪ್ರದರ್ಶನದಲ್ಲಿ ಅವರು ಈ ವಿಷಯ ತಿಳಿಸಿದರು.

ಪೂರ್ತಿ ಓದಿ

03:21 PM (IST) Mar 21

ಭದ್ರತಾ ವಿದ್ರೋಹ: ಭಾರತದ ರಕ್ಷಣಾ ರಹಸ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಬಿಇಎಲ್ ಇಂಜಿನಿಯರ್!

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಉದ್ಯೋಗಿಯ ಬಂಧನವು ರಕ್ಷಣಾ ಮಾಹಿತಿಯ ಸೋರಿಕೆಯ ಬಗ್ಗೆ ಕಳವಳ ಮೂಡಿಸಿದೆ. ಪಾಕಿಸ್ತಾನದ ಐಎಸ್‌ಐಗೆ ರಹಸ್ಯ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ದೀಪ್ ರಾಜ್ ಚಂದ್ರ ಎಂಬ ಇಂಜಿನಿಯರ್ ಬಂಧನವಾಗಿದೆ.

ಪೂರ್ತಿ ಓದಿ

03:02 PM (IST) Mar 21

ಮನೆಯಲ್ಲೇ 15 ಕೋಟಿ ಪತ್ತೆ, ಜಸ್ಟೀಸ್‌ ಯಶವಂತ್‌ ವರ್ಮಾ ವಿರುದ್ಧ ಆಂತರಿಕ ತನಿಕೆ ಆರಂಭಿಸಿದ ಸುಪ್ರೀಂ ಕೋರ್ಟ್‌!

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ನಗದು ರಾಶಿ ಪತ್ತೆಯಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಂತರಿಕ ತನಿಖೆ ಆರಂಭಿಸಿದೆ. ಅವರ ವರ್ಗಾವಣೆಗೆ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ.

ಪೂರ್ತಿ ಓದಿ

03:01 PM (IST) Mar 21

ಪಾಕಿಸ್ತಾನದ ಆರು ವರ್ಷದ ಬಾಲಕಿಯ ಫುಲ್‌ ಶಾಟ್‌ಗೆ ಕ್ರಿಕೆಟ್ ಪ್ರೇಮಿಗಳು ಫಿದಾ: ರೋಹಿತ್ ಶರ್ಮಾಗೆ ಹೋಲಿಕೆ

ಪಾಕಿಸ್ತಾನದ ಆರು ವರ್ಷದ ಬಾಲಕಿ ಸೋನಿಯಾ ಖಾನ್ ಅವರ ಬ್ಯಾಟಿಂಗ್ ವೈರಲ್ ಆಗಿದ್ದು, ಆಕೆಯನ್ನು ಭಾರತದ ಕ್ರಿಕೆಟಿಗ ರೋಹಿತ್ ಶರ್ಮಾಗೆ ಹೋಲಿಕೆ ಮಾಡಲಾಗುತ್ತಿದೆ. ಆಕೆ ಪುಲ್ ಶಾಟ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

02:51 PM (IST) Mar 21

ರಣಬೀರ್ ಕಪೂರ್ ಮೊದಲ ಪತ್ನಿ ಆಲಿಯಾ ಭಟ್ ಅಲ್ಲ, ರಹಸ್ಯ ಬಹಿರಂಗಡಿಸಿದ ನಟ

ರಣಬೀರ್ ಕಪೂರ್ 2022ರಲ್ಲಿ ಆಲಿಯಾ ಭಟ್ ಮದುವೆಯಾಗಿದ್ದಾರೆ. ಇವರಿಗೆ ಮುದ್ದಾದ ಮಗಳಿದ್ದಾಳೆ. ಆದರೆ ಇತ್ತೀಚೆಗೆ ರಣಬೀರ್ ಕಪೂರ್ ಸ್ಫೋಟಕ ಮಾಹಿತಿ ಬಹಿಂಗಪಡಿಸಿದ್ದಾರೆ. ರಣಬೀರ್ ಕಪೂರ್ ಮೊದಲ ಪತ್ನಿ ಆಲಿಯಾ ಭಟ್ ಅಲ್ಲ, ಈ ಕುರಿತು ರಣಬೀರ್ ಕಪೂರ್ ರಹಸ್ಯ ಬಹಿರಂಗ ಪಡಿಸಿದ್ದಾರೆ. 
 

ಪೂರ್ತಿ ಓದಿ

02:27 PM (IST) Mar 21

ಎರಡು ವರ್ಷಗಳಲ್ಲಿ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ಖರ್ಚು, ಸಿದ್ಧರಾಮಯ್ಯ ಹೆಲಿಕಾಪ್ಟರ್‌ಗೆ 31 ಕೋಟಿ ವೆಚ್ಚ!

ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ರೂ. ಖರ್ಚು ಮಾಡಿದ್ದರೆ, ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಪ್ರಯಾಣಕ್ಕೆ 31 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಪೂರ್ತಿ ಓದಿ

02:25 PM (IST) Mar 21

ಗಂಡು ಮಗುವಿನ ಆಸೆಯಲ್ಲಿ 9 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ ! ವಿಚಿತ್ರವಾಗಿದೆ ಎಲ್ಲರ ಹೆಸರು

ಬಯಸಿದ ಮಕ್ಕಳು ಸಿಗೋದು ಅಪರೂಪ. ಹೆಣ್ಣು ಬಯಸಿದವರಿಗೆ ಗಂಡು, ಗಂಡು ಬಯಸಿದವರಿಗೆ ಹೆಣ್ಣು ಮಕ್ಕಳಾಗೋದಿದೆ. ಹುಟ್ಟಿದ ಮಗುವನ್ನೇ ತಾವಂದುಕೊಂಡಂತೆ ಬೆಳೆಸಿ ಪೋಷಕರು ಖುಷಿಯಾಗ್ತಾರೆ. ಆದ್ರೆ ಈ ಚೀನಾ ದಂಪತಿ ಗಂಡು ಮಗುವಿಗಾಗಿ 9 ಮಗು ಹೆತ್ತಿದ್ದಲ್ಲದೆ, ವಿಚಿತ್ರ ಹೆಸರಿಟ್ಟು ತಮಗೆ ಗಂಡು ಮಗುವಿನ ಮೇಲಿರುವ ಪ್ರೀತಿ ತೋರಿಸಿದ್ದಾರೆ. 
 

ಪೂರ್ತಿ ಓದಿ

02:06 PM (IST) Mar 21

ಜೀವದ ಗೆಳೆಯ ಅಂತಾ ಒಟ್ಟಿಗೆ ಕುಡಿದ್ರೆ ಜೀವಕ್ಕೆ ಕುತ್ತು ಎಚ್ಚರ, ಈ ಸ್ಟೋರಿ ಒಮ್ಮೆ ಓದಿ!

ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಸ್ನೇಹಿತನನ್ನೇ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಲಾಗಿದೆ. ಮದ್ಯ ಸೇವನೆಯ ವೇಳೆ ನಡೆದ ಮಾತಿನ ಚಕಮಕಿಯಿಂದ ಈ ದುರ್ಘಟನೆ ಸಂಭವಿಸಿದೆ.

ಪೂರ್ತಿ ಓದಿ

01:45 PM (IST) Mar 21

ಭೂಮಿಯತ್ತ ನುಗ್ಗಿ ಬರ್ತಿದೆ ಅತಿದೊಡ್ಡ ಕ್ಷುದ್ರಗ್ರಹ! ಮನುಕುಲ ನಾಶವಾಗಲಿದೆಯಾ? ನಾಸಾ ನೀಡಿದ ಎಚ್ಚರಿಕೆ ಏನು?

ಬೃಹತ್ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಯತ್ತ ಶರವೇಗದಲ್ಲಿ ನುಗ್ಗಿ ಬರುತ್ತಿರುವ ಬಗ್ಗೆ ನಾಸಾ ಎಚ್ಚರಿಕೆ ನೀಡಿದೆ. ಈ ಬಾಹ್ಯಾಕಾಶ ಶಿಲೆಯು ಸಂಭಾವ್ಯ ಅಪಾಯಕಾರಿಯಾಗಿದ್ದು.. ವಿಜ್ಞಾನಿಗಳು ಇದರ ಮೇಲೆ ಕಣ್ಣಿಟ್ಟಿದ್ದಾರೆ,

ಪೂರ್ತಿ ಓದಿ

01:41 PM (IST) Mar 21

ಉದ್ಯೋಗಿಗಳೇ! PIP ಹೆಸರಿನಲ್ಲಿ ಕೆಲಸದಿಂದ ವಜಾ ಮಾಡಲಾಗತ್ತೆ ಹುಷಾರ್!‌ ಆಗ ಏನ್‌ ಮಾಡಬೇಕು?

ಆಫೀಸ್‌ಗಳಲ್ಲಿ ಪಿಐಪಿ ಎನ್ನೋದು ಈಗ ಭಾರೀ ಬಳಕೆಯಾಗುತ್ತಿದೆ. ಹಾಗಾದರೆ ಪಿಐಪಿ ಎಂದರೇನು? ಫಿಐಪಿಗೆ ಹಾಕಿದಾಗ ಏನು ಮಾಡಬೇಕು? 

ಪೂರ್ತಿ ಓದಿ

01:28 PM (IST) Mar 21

ಬೆಂಕಿಯಲ್ಲಿ ಅರಳಿದ ಹೂವಲ್ಲ, ಬಾಹ್ಯಾಕಾಶದಲ್ಲಿ ಅರಳಿದ ಹೂ; ಇದರ ಬಗ್ಗೆ ನಿಮಗೆಷ್ಟು ಗೊತ್ತು?

ನಾಸಾ 2016ರಲ್ಲಿ ಬಾಹ್ಯಾಕಾಶದಲ್ಲಿ ಹೂ ಅರಳಿದ ಚಿತ್ರವನ್ನು ಪ್ರಕಟಿಸಿತ್ತು, ಇದು ಮಾನವ ಇತಿಹಾಸದಲ್ಲಿ ಮೊದಲನೆಯದು. ಈ ಸಾಧನೆಯು VEG-01 ಪ್ರಯೋಗದ ಭಾಗವಾಗಿತ್ತು, ಇದು ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿತ್ತು.

ಪೂರ್ತಿ ಓದಿ

01:20 PM (IST) Mar 21

ಬೇಸಿಗೆಯಲ್ಲಿ ಕಡಿಮೆ ಖರ್ಚು, ಹೆಚ್ಚು ಆದಾಯ ತರುವ ವ್ಯವಹಾರಗಳಿವು!

ಬೇಸಿಗೆಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಬ್ಯುಸಿನೆಸ್ ಐಡಿಯಾಗಳನ್ನು ಇಲ್ಲಿ ನೀಡಲಾಗಿದೆ. ತಂಪು ಪಾನೀಯಗಳು, ಮೊಬೈಲ್ ಫುಡ್ ಸ್ಟಾಲ್, ಬೇಸಿಗೆ ಬಟ್ಟೆ ಮಾರಾಟ, ಸೊಪ್ಪು ತರಕಾರಿ ಮಾರಾಟ ಮತ್ತು ಕೌಶಲ್ಯ ತರಗತಿಗಳು ಉತ್ತಮ ಆಯ್ಕೆಗಳು.

ಪೂರ್ತಿ ಓದಿ

12:51 PM (IST) Mar 21

ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣದಿಂದ ರಾಜ್ಯದ ಮರ್ಯಾದೆ ಹಾಳು; ಸಿಎಂ ರಾಜೀನಾಮೆ ಕೊಡಲಿ: ಬೊಮ್ಮಾಯಿ

ಹನಿಟ್ರ್ಯಾಪ್ ಪ್ರಕರಣವು ಕರ್ನಾಟಕದ ಮರ್ಯಾದೆಯನ್ನು ಹಾಳು ಮಾಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪೂರ್ತಿ ಓದಿ

12:51 PM (IST) Mar 21

IPL 2025 ಆರ್‌ಸಿಬಿ-ಕೆಕೆಆರ್ ನಡುವಿನ ಐಪಿಎಲ್‌ ಉದ್ಘಾಟನಾ ಪಂದ್ಯ ನಡೆಯೋದೇ ಡೌಟ್!

ಐಪಿಎಲ್ 2025ರ ಉದ್ಘಾಟನಾ ಪಂದ್ಯ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದ್ದು, ಮಳೆಯಿಂದಾಗಿ ಪಂದ್ಯ ನಡೆಯುವುದು ಅನುಮಾನವಾಗಿದೆ. ಹವಾಮಾನ ಇಲಾಖೆ ಕೋಲ್ಕತಾದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಪೂರ್ತಿ ಓದಿ

More Trending News