ಯತ್ನಾಳ್ ಉಚ್ಚಾಟನೆಯಿಂದ ಶಾಕ್, ನಮೋ ಆ್ಯಪ್‌ನಲ್ಲಿ ಬಿಜೆಪಿ ಸದಸ್ಯತ್ವ ರದ್ದುಗೊಳಿಸಿದ ಬೆಂಬಲಿಗರು

Published : Mar 28, 2025, 01:16 PM ISTUpdated : Mar 28, 2025, 02:27 PM IST
ಯತ್ನಾಳ್ ಉಚ್ಚಾಟನೆಯಿಂದ ಶಾಕ್, ನಮೋ ಆ್ಯಪ್‌ನಲ್ಲಿ ಬಿಜೆಪಿ ಸದಸ್ಯತ್ವ ರದ್ದುಗೊಳಿಸಿದ ಬೆಂಬಲಿಗರು

ಸಾರಾಂಶ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ಇದೀಗ ಯತ್ನಾಳ್ ಬೆಂಬಲಿಗರು ನಮೋ ಆ್ಯಪ್ ಮೂಲಕ ಮಾಡಿಕೊಂಡಿದ್ದ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿದ್ದಾರೆ.

ವಿಜಯಪುರ(ಮಾ.28) ಕರ್ನಾಟಕ ಬಿಜೆಪಿ ಕಳೆದ ಹಲವು ದಿನಗಳಿಂದ ಬಂಡಾಯ ಮಾತುಗಳಿಂದ ಕಾದು ಕೆಂಪಾಗಿದ್ದರೆ, ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿ ತಲೆನೋವು ಹೆಚ್ಚಾಗಿದೆ.100ಕ್ಕೂ ಹೆಚ್ಚು ಯತ್ನಾಳ್ ಬೆಂಬಲಿಗರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿದ್ದಾರೆ. ನಮೋ ಆ್ಯಪ್ ಮೂಲಕ ಯತ್ನಾಳ್ ಬೆಂಬಲಿಗರು, ಅಭಿಮಾನಿಗಳು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದರು. ಆದರೆ ಉಚ್ಚಾಟನೆಯಿಂದ ಇದೀಗ ಸದಸ್ಯತ್ವ ರದ್ದು ಅಭಿಯಾನ ಆರಂಭಿಸಿದ್ದು, 100ಕ್ಕೂ ಹೆಚ್ಚು ಮಂದಿ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿದ್ದಾರೆ.

ನಮೋ ಆ್ಯಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಹೊರಬರಲು ಯತ್ನಾಳ್ ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ.  ಆ್ಯಪ್‌ನಲ್ಲಿ ಪ್ರಾಥಮಿ ಸದಸ್ಯತ್ವದಿಂದ ಹೊರಬರುವುದು ಹೇಗೆ ಎಂದು ಸ್ಕ್ರೀನ್‌‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವ್ಯಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಕ್ರೀನ್‌ಶಾಟ್ ಹಂಚಿಕೊಳ್ಳಲಾಗುತ್ತಿದೆ.

ಬಿಜಪಿಯಿಂದ ಶಾಸಕ ಬಸನಗೌಡ ಪಾಟೀಲ್ 6 ವರ್ಷ ಉಚ್ಛಾಟನೆಗೆ ಅಸಲಿ ಕಾರಣ ರಿವೀಲ್! ಹೊಸ ಪಕ್ಷ ಕಟ್ತಾರಾ ಯತ್ನಾಳ್!

ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರ ಈ ನಡೆಯ ವಿಜಯಪುರ ಜಿಲ್ಲಾ ಬಿಜೆಪಿ ನಾಯಕರನ್ನು ಕಂಗಾಲಾಗಿದೆ. ಕಾರರಣ ಏಕಾಏಕಿ ವಿಜಯಪುರ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ನೂರಾರು ಮಂದಿ ಹೊರಬಂದಿದ್ದಾರೆ. ಈ ಅಭಿಯಾನ ಇನ್ನು ಕೆಲ ದಿನಗಳ ಕಾಲ ನಡೆದರೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಜಿಲ್ಲಾ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯಪುರ ನಗರದ ಬಸನಗೌಡ ಪಾಟೀಲ್ ಯತ್ನಾಳ್ ಕಚೇರಿ ಎದರು ಯತ್ನಾಳ್ ಬೆಂಬಲಿಗರು ಅಭಿಯಾನ ನಡೆಸುತ್ತಿದ್ದಾರೆ. ಯತ್ನಾಳ್ ಬೆಂಬಲಿಗರನ್ನು ಬಿಜೆಪಿ ಸದಸ್ಯತ್ವದಿಂದ ಹೊರಬರಲು ಸೂಚಿಸುತ್ತಿದ್ದಾರೆ.ಇದರಂತೆ ಹಲವರು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಹೊರಬಂದಿದ್ದಾರೆ.  

ಬಸಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ ಬಳಿಕವೂ ಬಿಜೆಪಿ ಕುಟುಂಬ ರಾಜಕಾರಣ ವಿರುದ್ದ ಸತತ ವಾಗ್ದಾಳಿ ನಡೆಸಿದ್ದಾರೆ. ಇಷ್ಟೇ ಅಲ್ಲ ಹೊಂದಾಣಿಕೆ ರಾಜಕೀಯ ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಎಚ್ಚರಿಸಿದ್ದರೆ.  ನಿಜವಾದ ಜನ ಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯ ಪಕ್ಷಕ್ಕಿಲ್ಲ. ಇದೇ ವೇಳೆ ತನ್ನ ರಾಷ್ಟ್ರ ಮೊದಲು, ಪಕ್ಷ ನಂತರ ಹಾಗೂ ವೈಯುಕ್ತಿ ವಿಚಾರಕ್ಕೆ ಮೂರನೇ ಆದ್ಯತೆ ಅನ್ನೋ ತತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. 

News Hour: ಬಸನಗೌಡ ಯತ್ನಾಳ್‌ ಉಚ್ಛಾಟನೆ, ಮುಂದಿನ ನಡೆ ಏನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!