ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಪ್ರಧಾನಿ ನರೇಂದ್ರ ಮೋದಿಯವರೇ ಹನಿಟ್ರ್ಯಾಪ್‌ನ ಪಿತಾಮಹ ಎಂದು ಆರೋಪಿಸಿದರು. ಸಂಜಯ್ ಜೋಶಿಯವರ ಹನಿಟ್ರ್ಯಾಪ್ ಅನ್ನು ಮೋದಿಯವರೇ ಮಾಡಿದ್ದು ಎಂದು ಅವರು ಹೇಳಿದರು. ಈ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು, ಸಭಾಪತಿಗಳು ಹರಿಪ್ರಸಾದ್‌ಗೆ ಎಚ್ಚರಿಕೆ ನೀಡಿದರು. (50 ಪದಗಳು)

ಬೆಂಗಳೂರು (ಮಾ.21): ಹನಿಟ್ರ್ಯಾಪ್ ಪಿತಾಮಹ ನರೇಂದ್ರ ಮೋದಿ ಆಗಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಸಂಜಯ್ ಜೋಶಿ ಅವರ ಹನಿಟ್ರ್ಯಾಪ್ ಮಾಡಿದ್ದು ನರೇಂದ್ರ ಮೋದಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪ ಮಾಡಿದ್ದಾರೆ.

ಕರ್ನಾಟಕ ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಭಾರತದ ಹನಿಟ್ರ್ಯಾಪ್ ಪಿತಾಮಹ ಆಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬಗ್ಗೆ ಪುಸ್ತಕ ಇದೆ. ಅಲ್ಲಿ ಏನೆಲ್ಲಾ ನಡೆದಿದೆ ಗೊತ್ತಾ? ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕಿಶೋರ್ ಕುಮಾರ್ ಅವು ಯಾರಪ್ಪನ ಮನೆಯಲ್ಲೂ ನಡೆದಿಲ್ಲ ಎಂದರು. ಇದಕ್ಕೆ ಸಿಡಿಮಿಡಿಗೊಂಡ ಹರಿಪ್ರಸಾದ್ ಕುಳಿತುಕೊಳ್ಳುವಂತೆ ಸೂಚಿಸಿದರು. ಜೊತೆಗೆ, RSS ಬಗ್ಗೆ ಮಾತನಾಡದಂತೆ ಹರಿಪ್ರಸಾದ್‌ ಅವರಿಗೆ ಸಭಾಪತಿ ಎಚ್ಚರಿಸಿದರು.

ಈ ವೇಳೆ ಎದ್ದು ನಿಂತ ಹರಿಪ್ರಸಾದ್, ಹನಿ ಟ್ರಾಪ್ ಪಿತಾಮಹ ನರೇಂದ್ರ ಮೋದಿ. ಸಂಜಯ್ ಜೋಶಿ ಅವರ ಹನಿಟ್ರಾಪ್ ಮಾಡಿದ್ದು ನರೇಂದ್ರ ಮೋದಿ ಎಂದು ಸದನದಲ್ಲಿ ಮೋದಿ ಹೆಸರು ಎಳೆದು ತಂದರು.

ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಹನಿ ಬಾಂಬ್‌ , 48 ನಾಯಕರಿಗೆ ಹನಿಟ್ರ್ಯಾಪ್‌ ಭೀತಿ!

ಮುಂದುವೆರೆದು, ಹಿಂದೂಕೋಡ್ ಬಿಲ್ ಜಾರಿಗೆ ತರಲು ಆಗಿಲ್ಲ ಎಂಬ ಕಾರಣಕ್ಕೆ ನೆಹರು ಸಂಪುಟಕ್ಕೆ ಅಂಬೇಡ್ಕರ್ ಅವರು ರಾಜೀನಾಮೆ ಕೊಟ್ಟಿದ್ದರು. ಅದೇ ಸಂವಿಧಾನವನ್ನ ರಾಮಲೀಲಾ‌ ಮೈದಾನಲ್ಲಿ ಸುಟ್ಟಿದ್ದು ಯಾರು ಅನ್ನೋದು ಇತಿಹಾಸ ಗೊತ್ತಿದೆ. ಭಾರತ ಇಬ್ಬಾಗವಾಗಲು ಜಿನ್ನಾ ಸಾವರ್ಕರ್ ಒಂದೇ ಮನಸ್ತಿತಿಯಲ್ಲಿದ್ದರು. ಆರ್ಟಿಕಲ್ 15-4, 16-4, ಪ್ರಕಾರ ಮೀಸಲಾತಿಗೆ ಅವಕಾಶ ಇದೆ. ಬಿಲ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಮೀಸಲಾತಿ ಕೊಡುತ್ತಿಲ್ಲ. ಇಸ್ಲಾಂ ಧರ್ಮ ಅಲ್ಲ, ಅದೊಂದು ಸಮುದಾಯ. 1977ರಿಂದ ಮುಸ್ಲಿಂ ಸಮುದಾಯ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ‌ ಎಂದು ಹಲವು ಕಮಿಷನ್ ವರದಿಗಳು ಹೇಳಿವೆ. ಈ ಬಿಲ್ ಸಂವಿಧಾನ ವಿರೋಧಿ ಆಗಿ ಕಾಣೋದಿಲ್ಲ. ಉತ್ತರ ಭಾರತದಲ್ಲಿ ಆದಿವಾಸಿಗಳಿಗೆ ಮೀಸಲಾತಿ ಇದೆ ಎಂದು ಹೇಳಿದರು.