Published : Nov 18, 2025, 07:20 AM ISTUpdated : Nov 18, 2025, 10:23 PM IST

Karnataka News Live: ಅಯ್ಯೋ ದುರ್ವಿಧಿಯೇ, ಇದೇನಾಗೋಯ್ತು Bigg Bossನಲ್ಲಿ? ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ! ಹೊರಗೆ ಹೋಗ್ತಾರಾ?

ಸಾರಾಂಶ

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಉಸ್ತುವಾರಿಯ ಕಲಬುರಗಿಯಲ್ಲೇ ಜಿಲ್ಲಾಡಳಿತ, ಜನನಾಯಕರು ಸಭೆ ನಡೆಸಿ ಟನ್ ಕಬ್ಬಿಗೆ ಸರ್ಕಾರದ ದರ ₹3300 ನೀಡಲು ಇಲ್ಲಿರುವ ಕಲಬುರಗಿ ಹಾಗೂ ಯಾದಗಿರಿಯ 6 ಸಕ್ಕರೆ ಕಾರ್ಖಾನೆಗಳವರು ಒಪ್ಪುತ್ತಿಲ್ಲ. ಕಬ್ಬಿಗೆ ದರ ನಿಗದಿಪಡಿಸೋ ವಿಚಾರದಲ್ಲಿ ರೈತರಿಗೆ ಟನ್ ಕಬ್ಬಿಗೆ ₹3160 ನೀಡುವುದಾಗಿ ಮುಂಚೆ ಹೇಳಿದ್ದ ಅಫಜಲ್ಪುರ ತಾಲೂಕಿನ ಚಿಣಮಗೇರಿ ಬಳಿಯ ಕೆಪಿಆರ್ ಕಾರ್ಖಾನೆ ಇದೀಗ ತಾನೂ ಈ ದರ ನೀಡಲಾಗದು. ಟನ್‌ಗೆ 3000 ನೀಡುವುದಾಗಿ ಹೇಳಿದೆ. ರೈತರು ಅಫಜಲ್ಪುರದಲ್ಲಿ 7 ದಿನ ನಡೆಸಿದ ಹೋರಾಟದ ಫಲವಾಗಿ ₹3160 ನಿಗದಿಪಡಿಸಿದ್ದ ಕಾರ್ಖಾನೆ ಇದೀಗ ತನ್ನ ನಿಲುವಿಗೆ ಉಲ್ಟಾ ಹೊಡೆದಿರೋದು ಇಲ್ಲಿನ ರೈತರನ್ನು ಕೆರಳಿಸಿದೆ.

Bigg Boss Ashwini Gowda and Gilli Nata

10:23 PM (IST) Nov 18

ಅಯ್ಯೋ ದುರ್ವಿಧಿಯೇ, ಇದೇನಾಗೋಯ್ತು Bigg Bossನಲ್ಲಿ? ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ! ಹೊರಗೆ ಹೋಗ್ತಾರಾ?

ಬಿಗ್​ಬಾಸ್​ ಮನೆಯಲ್ಲಿ ಟಾಸ್ಕ್​ವೊಂದರ ವೇಳೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವೆ ತೀವ್ರ ಜಗಳ ನಡೆದಿದೆ. ಗಿಲ್ಲಿ ನಟನ ಮಾತುಗಳಿಂದ ನೊಂದ ಅಶ್ವಿನಿ, ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಣ್ಣೀರು ಹಾಕಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

Read Full Story

10:23 PM (IST) Nov 18

ಸುಳ್ವಾಡಿ ವಿಷ ಪ್ರಸಾದ ದುರಂತ - ಜೈಲಿನಿಂದ ಹೊರಬಂದು ಕಾವಿ ಧರಿಸದೇ ಶ್ವೇತ ವಸ್ತ್ರಧಾರಿಯಾದ ಆರೋಪಿ!

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದ ಆತ ಮೈಸೂರು ಜೈಲಿನಿಂದ ಬಿಡುಗಡೆಯಾಗಿದ್ದು, ಸಂತ್ರಸ್ತರು ಈ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
Read Full Story

10:04 PM (IST) Nov 18

ರಾಯಚೂರು ಮದುವೆ ಸಂಭ್ರಮ ಕಸಿದ ಡಿಜೆ, ಮೆರವಣಿಗೆ ವೇಳೆ ಸದ್ದಿನ ಗದ್ದಲ, ಎರಡು ಕುಟುಂಬದ ನಡುವೆ ಮಾರಾಮಾರಿ

ರಾಯಚೂರಿನ ಮಾನ್ವಿಯಲ್ಲಿ ಮದುವೆ ಮೆರವಣಿಗೆಯ ಡಿಜೆ ಸದ್ದಿನ ವಿವಾದವು ಎರಡು ಕುಟುಂಬಗಳ ನಡುವೆ ತೀವ್ರ ಗಲಭೆಗೆ ಕಾರಣವಾಯಿತು. ಈ ಮಾರಾಮಾರಿಯಲ್ಲಿ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಎರಡೂ ಕುಟುಂಬಗಳು ಇನ್ನೂ ಪೊಲೀಸ್ ದೂರು ನೀಡಿಲ್ಲ.
Read Full Story

09:49 PM (IST) Nov 18

Karna and Annayya - ಪಾರುಗೆ ಗೊತ್ತಾಯ್ತು ನಿಧಿಯ ಸತ್ಯ! ಅಕ್ಕ ಗರ್ಭಿಣಿ ಎಂದು ತಿಳಿಯುತ್ತಲೇ ನಿಧಿ ಬರಸಿಡಿಲು

ಅಣ್ಣಯ್ಯ ಮತ್ತು ಕರ್ಣ ಧಾರಾವಾಹಿಗಳ ಮಹಾಸಂಗಮದಲ್ಲಿ, ಸೀನನ ತಮಾಷೆಯಿಂದ ನಿತ್ಯಾ ಗರ್ಭಿಣಿ ಎಂಬ ವಿಷಯ ಚರ್ಚೆಗೆ ಬಂದರೂ, ವೈದ್ಯೆಯಾದ ಪಾರುಗೆ ನಾಡಿಮಿಡಿತದಿಂದ ಸತ್ಯದ ಅರಿವಾಗುತ್ತದೆ. ನಂತರ ಕರ್ಣನನ್ನು ಪ್ರಶ್ನಿಸಿದಾಗ, ತನಗೂ ನಿತ್ಯಾಳಿಗೂ ಮದುವೆಯಾಗಿಲ್ಲ ಎಂಬ ಸತ್ಯವನ್ನು ಆತ ಬಾಯಿಬಿಡುತ್ತಾನೆ.
Read Full Story

09:29 PM (IST) Nov 18

ಕೇರಳದಿಂದ ಕೊಡಗಿಗೆ ಬರುವ ಪ್ರವಾಸಿ ಬಸ್ಸುಗಳಿಂದ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ

ಕೇರಳದಿಂದ ಕೊಡಗಿಗೆ ಬರುವ ಖಾಸಗಿ ಬಸ್ಸುಗಳು ಕರ್ನಾಟಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿವೆ. ಇದರ ಜೊತೆಗೆ, ಪ್ರವಾಸಿಗರು ಬಸ್ಸುಗಳಲ್ಲಿ ಡಿಜೆ ಹಾಕಿ, ಹೆದ್ದಾರಿಗಳಲ್ಲಿ ಪಾರ್ಟಿ ಮಾಡಿ ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ.
Read Full Story

09:29 PM (IST) Nov 18

ಬಿಗ್ ಬಾಸ್‌ನಲ್ಲಿ ಗಿಲ್ಲಿ ಮಹಿಳೆಯೆರಿಗೆ ಮಾಡಿದ್ರೂ ಕಿಚ್ಚ ಪ್ರಶ್ನೆ ಮಾಡಿಲ್ಲ, ಎಚ್ಚರಿಕೆ ಕೊಟ್ಟ ದೂರುದಾರೆ

ಬಿಗ್ ಬಾಸ್‌ನಲ್ಲಿ ಗಿಲ್ಲಿ ಮಹಿಳೆಯೆರಿಗೆ ಮಾಡಿದ್ರೂ ಕಿಚ್ಚ ಪ್ರಶ್ನೆ ಮಾಡಿಲ್ಲ, ಎಚ್ಚರಿಕೆ ಕೊಟ್ಟ ದೂರುದಾರೆ , ಗಿಲ್ಲಿ ತಮಾಷೆಗಳು ನಗು ಬರುತ್ತಿಲ್ಲ, ಅಗೌರವಗಳನ್ನು ಸಹಿಸಲು ಸಾಧ್ಯವಿಲ್ಲ. ಆಗಲ್ಲ ಅಂದರೆ ಶೋ ಬಂದ್ ಮಾಡಿ ಎಂದು ಕಲಾವಿದೆ ಕುಶಲ ಹೇಳಿದ್ದಾರೆ.

 

Read Full Story

09:16 PM (IST) Nov 18

Bigg Boss - ಗಿಲ್ಲಿ ನಟ- ಕಾವ್ಯಾ ಶೈವ ಮದ್ವೆಗೆ ತುಕಾಲಿ ಸಂತೋಷ್‌ ಗ್ರೀನ್​ ಸಿಗ್ನಲ್​! ಮಾಜಿ ಸ್ಪರ್ಧಿ ಏನ್‌ ಹೇಳಿದ್ರು ಕೇಳಿ!

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ತಮಾಷೆಯ ಲವ್‌ ಸ್ಟೋರಿ ಸದ್ದು ಮಾಡುತ್ತಿದೆ. ಈ ಪ್ರೇಮಕಥೆಯನ್ನು ಆಟದ ಭಾಗ ಎಂದಿರುವ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್, ಅವರು ನಿಜವಾಗಿಯೂ ಇಷ್ಟಪಟ್ಟರೆ ತಾವೇ ಮುಂದೆ ನಿಂತು ಮದುವೆ ಮಾಡಿಸುವುದಾಗಿ ಹೇಳಿದ್ದಾರೆ.
Read Full Story

09:03 PM (IST) Nov 18

ಲವ್​ನೂ ಮಾಡ್ತಾರೆ, ಅಣ್ಣನೂ ಅಂತಾರೆ! ನಮ್ಗೆ ಬೆಲೆನೇ ಇಲ್ವಾ? Bigg Boss ಹೆಣ್ಮಕ್ಕಳ ವಿರುದ್ಧ ದೂರು

ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ಸೂರಜ್-ರಾಶಿಕಾ ಮತ್ತು ಗಿಲ್ಲಿ ನಟ-ಕಾವ್ಯಾ ನಡುವೆ ಪ್ರೀತಿ ಮೊಳಕೆಯೊಡೆದಿದೆ. ಆದರೆ, ಹುಡುಗಿಯರು ಕೆಲವೊಮ್ಮೆ ಪ್ರೇಮಿಗಳಂತೆ ಮತ್ತು ಕೆಲವೊಮ್ಮೆ 'ಅಣ್ಣ' ಎಂದು ಕರೆಯುತ್ತಿರುವುದು ವೀಕ್ಷಕರನ್ನು ಗೊಂದಲಕ್ಕೀಡುಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ  ಚರ್ಚೆಗೆ ಕಾರಣವಾಗಿದೆ.

Read Full Story

08:47 PM (IST) Nov 18

ಕೋಣೆಯಲ್ಲಿ ಮಲಗಿದ್ದ ಮೂವರು ಉಸಿರುಗಟ್ಟಿ ದಾರುಣ ಸಾವು, ಓರ್ವನ ಸ್ಥಿತಿ ಗಂಭೀರ

ಕೋಣೆಯಲ್ಲಿ ಮಲಗಿದ್ದ ಮೂವರು ಉಸಿರುಗಟ್ಟಿ ದಾರುಣ ಸಾವು, ಓರ್ವನ ಸ್ಥಿತಿ ಗಂಭೀರ, ಚಳಿ ಕಾರಣ ಕಿಟಕಿ, ಬಾಗಿಲು ಎಲ್ಲಾ ಮುಚ್ಚಿ ಮಲಗಿದ್ದಾರೆ. ಬೆಚ್ಚಗಿರಲು ಇದ್ದಿಲು ಬೆಂಕಿ ಇಟ್ಟು ಮಲಗಿದ್ದಾರೆ. ಪರಿಣಾಮ ಘೋರ ದುರಂತವೇ ನಡೆದುಹೋಗಿದೆ.

 

Read Full Story

07:27 PM (IST) Nov 18

ಮಹಿಳೆಯರ ರಕ್ಷಣೆಗೆ 'ಅಕ್ಕ ಪಡೆ', ಗೃಹಲಕ್ಷ್ಮಿ ಹಣ ಸದ್ಯದಲ್ಲೇ ಬಿಡುಗಡೆ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ತುಮಕೂರು ಪ್ರವಾಸದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳೆಯರ ರಕ್ಷಣೆಗಾಗಿ 'ಅಕ್ಕ ಪಡೆ' ಎಂಬ ಹೊಸ ಪಡೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ಅಂಗನವಾಡಿಗಳ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಮತ್ತು ಬಾಕಿ ಇರುವ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಭರವಸೆ.

Read Full Story

07:05 PM (IST) Nov 18

'ನನ್ನ ಬೆನ್ನ ಮೇಲೆ ಕೈಯಾಡಿಸಿ, ಖಾಸಗಿ ಭಾಗ ಮುಟ್ಟಿ ಓಡಿಹೋಗಿದ್ದ..' ರೈಲಿನಲ್ಲಾದ ಕೆಟ್ಟ ಘಟನೆ ತಿಳಿಸಿದ ನಟಿ ಗಿರಿಜಾ ಓಕ್‌!

'ಜವಾನ್' ಖ್ಯಾತಿಯ ನಟಿ ಗಿರಿಜಾ ಓಕ್‌, ಪಾಡ್‌ಕಾಸ್ಟ್‌ವೊಂದರಲ್ಲಿ ಕಾಣಿಸಿಕೊಂಡ ಬಳಿಕ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿದ್ದಾರೆ. ಇದೇ ಸಂದರ್ಶನದಲ್ಲಿ, ಅವರು ತಮ್ಮ ಬಾಲ್ಯದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ಅಪರಿಚಿತನೊಬ್ಬ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿ ಪರಾರಿಯಾದ ಘಟನೆಯನ್ನು ಹಂಚಿಕೊಂಡಿದ್ದಾರೆ.

Read Full Story

05:53 PM (IST) Nov 18

ಸೌದಿ ಬಸ್‌ - ಟ್ಯಾಂಕರ್ ದುರಂತದಲ್ಲಿ ಮತ್ತೊಬ್ಬ ಕನ್ನಡತಿ ಸಾವು, ಸ್ಪಷ್ಟ ಮಾಹಿತಿ ಸಿಗದೆ ಕಣ್ಣೀರಿಡುತ್ತಿರುವ ಕುಟುಂಬ

ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬೀದರ್ ಮೂಲದ 80 ವರ್ಷದ ರಹಮತ್ ಬಿ ಮೃತಪಟ್ಟಿದ್ದಾರೆ. ಮೆಕ್ಕಾ-ಮದೀನಾ ಯಾತ್ರೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದ್ದು, ಮೃತದೇಹವನ್ನು ಗುರುತಿಸಲು ಮತ್ತು ತಾಯ್ನಾಡಿಗೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.

Read Full Story

05:43 PM (IST) Nov 18

ಪೋಕ್ಸೋ ಕೇಸ್‌, ಕೋರ್ಟ್‌ಗೆ ಹಾಜರಾಗುವಂತೆ ಮಾಜಿ ಸಿಎಂ ಬಿಎಸ್‌ವೈಗೆ ಸಮನ್ಸ್‌ ಜಾರಿ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯವು ಅವರಿಗೆ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 2 ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.

Read Full Story

05:35 PM (IST) Nov 18

ಸಾಮಾನ್ಯಕ್ಕಿಂತ ಕೆಳಗೆ ಕುಸಿದ ತಾಪಮಾನ - ಬೆಂಗಳೂರು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೋಮ್ಯಾಂಟಿಕ್ ವೆದರ್

Karnataka weather update today: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಾತ್ರಿಯ ತಾಪಮಾನ ಸಾಮಾನ್ಯಕ್ಕಿಂತ ಕುಸಿದಿದ್ದು, ಶೀತಗಾಳಿ ಬೀಸುತ್ತಿದೆ. ತಾಪಮಾನವೂ ರೋಮ್ಯಾಂಟಿಕ್ ಚಿಲ್ಲಿಂಗ್ ವಾತಾವರಣವನ್ನು ಸೃಷ್ಟಿಸಿದ್ದು, ಜನ ಮನೆಯಿಂದ ಹೊರಬರಲು ಯೋಚಿಸ್ತಿದ್ದಾರೆ..

Read Full Story

04:01 PM (IST) Nov 18

ಎಐ ಆಧಾರಿತ, ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ KEO ರಿಲೀಸ್‌ ಮಾಡಿದ ಕರ್ನಾಟಕ

ಕರ್ನಾಟಕ ಸರ್ಕಾರವು ರಾಜ್ಯದ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು, ಸಂಪೂರ್ಣವಾಗಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಕೈಗೆಟುಕುವ, AI-ಸಿದ್ಧ ವೈಯಕ್ತಿಕ ಕಂಪ್ಯೂಟರ್ 'KEO' ಅನ್ನು ಅನಾವರಣಗೊಳಿಸಿದೆ.

Read Full Story

03:45 PM (IST) Nov 18

ಬೆಳಗಾವಿ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಸಿಕ್ಕಿತು ಬಿಗ್‌ಟ್ವಿಸ್ಟ್! ದುರಂತಕ್ಕೆ ಅಧಿಕಾರಿಗಳೇ ಕಾರಣರಾದ್ರಾ?

ಬೆಳಗಾವಿ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವು ಮುಂದುವರಿದಿದ್ದು, ಮೃತರ ಸಂಖ್ಯೆ 31ಕ್ಕೆ ಏರಿದೆ. ರಾಷ್ಟ್ರೀಯ ಸಂಸ್ಥೆಯೊಂದು ಮೂರು ತಿಂಗಳ ಹಿಂದೆಯೇ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

Read Full Story

03:27 PM (IST) Nov 18

Viral Video - ಕಳೆದ ನಾಲ್ಕು ದಿನಗಳಿಂದ ನಾಲೆಯಲ್ಲಿದ್ದ ಮರಿಯಾನೆಯನ್ನು ಯಶಸ್ವಿಯಾಗಿ ರಕ್ಷಿಸಿದ ಸಿಬ್ಬಂದಿ

ಮಂಡ್ಯ ಜಿಲ್ಲೆಯ ಶಿವಸಮುದ್ರ ಬಳಿ ನಾಲ್ಕು ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಿಸಿದೆ. ಹೈಡ್ರಾಲಿಕ್‌ ಕ್ರೇನ್‌ ಮತ್ತು ಅರವಳಿಕೆ ಮದ್ದು ಬಳಸಿ, ದೊಡ್ಡ ಕಾರ್ಯಾಚರಣೆಯ ಮೂಲಕ ಆನೆಯನ್ನು ಮೇಲೆತ್ತಿ ಚಿಕಿತ್ಸೆ ನೀಡಲಾಗುತ್ತಿದೆ.
Read Full Story

02:50 PM (IST) Nov 18

ಪಾಕಿಸ್ತಾನದ ಜಿಡಿಪಿ ಬೆಂಗಳೂರು ರಸ್ತೆಯಲ್ಲಿ, 10ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ

ಪಾಕಿಸ್ತಾನದ ಜಿಡಿಪಿ ಬೆಂಗಳೂರು ರಸ್ತೆಯಲ್ಲಿ, 10ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಭಾರತದ ರಸ್ತೆಯಲ್ಲಿ ನೋಡಿದ ಅತ್ಯಂತ ರಾಯಲ್ ಸಂಚಾರ ಇದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read Full Story

02:41 PM (IST) Nov 18

ಈ ಜನ್ಮದಲ್ಲಿ ಆರೆಸ್ಸೆಸ್‌ ನಿಷೇಧಿಸಲು ಆಗೋಲ್ಲ - ಪ್ರಿಯಾಂಕ್ ಖರ್ಗೆ ವಿರುದ್ಧ ಚಲವಾದಿ ವಾಗ್ದಾಳಿ

ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿಯವರು, ಪ್ರಿಯಾಂಕ್ ಖರ್ಗೆಯವರು ಈ ಜನ್ಮದಲ್ಲಿ ಆರೆಸ್ಸೆಸ್ ನಿಷೇಧಿಸಲು ಸಾಧ್ಯವಿಲ್ಲ ಎಂದರು.  ಭಯೋತ್ಪಾದಕರನ್ನು ಹುತಾತ್ಮರು ಎನ್ನುವುದನ್ನು ಖಂಡಿಸಿದ ಅವರು, ಬೆಂಗಳೂರು ಮೆಟ್ರೋ ಬಾಂಬ್ ಬೆದರಿಕೆಗೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದರು.

Read Full Story

02:01 PM (IST) Nov 18

ನಂದಿನಿ ತುಪ್ಪಕ್ಕೆ ದೇಶದೆಲ್ಲೆಡೆ ಭಾರೀ ಡಿಮ್ಯಾಂಡ್ - ಸಚಿವ ವೆಂಕಟೇಶ್

ದೇಶದೆಲ್ಲೆಡೆ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ಟಿಟಿಡಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ತುಪ್ಪವನ್ನು ಕೇಳಿದೆ ಎಂದು ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತುಪ್ಪದ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

Read Full Story

01:41 PM (IST) Nov 18

ತಾಯಿ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಅಮ್ಮನ ಕೈ ಹಿಡಿದು ಹೊರಟೇಬಿಟ್ಟ!

ಕೆಲವು ತಿಂಗಳ ಹಿಂದೆ ತಾಯಿ ಮರಣ ಹೊಂದಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ 25 ವರ್ಷದ ಯುವಕನೊಬ್ಬ, ಹಲಗೂರು ಸಮೀಪದ ದೇವಿರಹಳ್ಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹನೂರು ತಾಲೂಕಿನ ಸಾಗ್ಯ ಗ್ರಾಮದ ನಿವಾಸಿಯಾದ ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದನು.
Read Full Story

01:41 PM (IST) Nov 18

ಡಿವೋರ್ಸ್‌ ತಗೋಬೇಕು ಎಂದಿದ್ದ ಖ್ಯಾತ ಕಿರುತೆರೆ ಜೋಡಿ Bigg Boss ಮನೇಲಿ ಒಂದಾಯ್ತು, ಈಗ ಮಕ್ಕಳಾದವು!

ಬಿಗ್‌ ಬಾಸ್‌ ಮನೆಯಲ್ಲಿ ಎಷ್ಟೋ ಜನರು ಲವ್‌ನಲ್ಲಿ ಬಿದ್ದು, ಬ್ರೇಕಪ್‌ ಮಾಡಿಕೊಂಡಿದ್ದೂ ಇದೆ. ಆ ಮನೆಯಲ್ಲಿ ಲವ್‌ ಹುಟ್ಟಿ, ಆ ಮನೆಯಲ್ಲಿ ಲವ್‌ ಮುರಿದಿದ್ದೂ ಇದೆ. ಎಷ್ಟೋ ಸ್ಪರ್ಧಿಗಳ ಮಧ್ಯೆ ಲವ್‌ ಮಾಡಿ, ಡಿವೋರ್ಸ್‌ ಮಾಡಿಕೊಂಡಿದ್ದೂ ಇದೆ. ಡಿವೋರ್ಸ್‌ ತಗೋಬೇಕಿದ್ದ ಜೋಡಿಯೊಂದು, ಈ ಮನೆಗೆ ಬಂದು ಒಂದಾಗಿದೆ.

Read Full Story

01:20 PM (IST) Nov 18

ನಾಳೆ ಬೆಂಗಳೂರಿನ 50ಕ್ಕೂ ಅಧಿಕ ಲೇಔಟ್‌ಗಳಲ್ಲಿ ಕರೆಂಟ್‌ ಇರಲ್ಲ..

ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 19 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ ಸೇರಿದಂತೆ 50ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಇರೋದಿಲ್ಲ.

Read Full Story

01:18 PM (IST) Nov 18

ಮಂಡ್ಯ - ಸಾರಿಗೆ ಬಸ್ ಬ್ರೇಕ್ ಫೇಲ್, ತಪ್ಪಿದ ಭಾರೀ ಅನಾಹುತ..!

ಮುತ್ತತ್ತಿ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ವಿಫಲವಾದರೂ, ಚಾಲಕನ ಸಮಯಪ್ರಜ್ಞೆಯಿಂದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದೆಡೆ, ಮಂಡ್ಯದ ಚಿಕ್ಕಬಾಣಸವಾಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
Read Full Story

12:58 PM (IST) Nov 18

ನಿಮ್ಮ ಮಕ್ಕಳ ಶಿಕ್ಷಣ, ಭವಿಷ್ಯ, ಆರ್ಥಿಕ ಭದ್ರತೆಗಾಗಿ 5 ಅತ್ಯುತ್ತಮ ಹೂಡಿಕೆಗಳು

ಮಕ್ಕಳ ಶಿಕ್ಷಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ಆರ್ಥಿಕ ಭದ್ರತೆ ಒದಗಿಸುವ ಐದು ಪ್ರಮುಖ ದೀರ್ಘಾವಧಿ ಹೂಡಿಕೆ ಯೋಜನೆಗಳನ್ನು ಈ ಲೇಖನ ವಿವರಿಸುತ್ತದೆ. ಇದರಲ್ಲಿ ಸರ್ಕಾರಿ ಬೆಂಬಲಿತ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹಿಡಿದು, ಮಾರುಕಟ್ಟೆ ಆಧಾರಿತ ಮ್ಯೂಚುವಲ್ ಫಂಡ್‌ಗಳವರೆಗಿನ ಆಯ್ಕೆಗಳ ಬಗ್ಗೆ ಮಾಹಿತಿ ಇಲ್ಲಿದೆ.

Read Full Story

12:31 PM (IST) Nov 18

ಮೈಸೂರು ರೇಷ್ಮೆ ಸೀರೆ ಹುಟ್ಟಿದ ಸ್ಥಳದಲ್ಲೇ ನಿರ್ಮಾಣವಾಗಲಿದೆ ದೇಶದ ಮೊಟ್ಟಮೊದಲ ರೇಷ್ಮೆ ಮ್ಯೂಸಿಯಂ

ವಿಶ್ವಪ್ರಸಿದ್ಧ ಮೈಸೂರು ರೇಷ್ಮೆಯ ತವರಾದ ಮೈಸೂರಿನಲ್ಲಿ ದೇಶದ ಮೊದಲ ರೇಷ್ಮೆ ವಸ್ತುಸಂಗ್ರಹಾಲಯ ಸ್ಥಾಪನೆಯಾಗಲಿದೆ. ಈ ಸಂಗ್ರಹಾಲಯವು ಟಿಪ್ಪು ಸುಲ್ತಾನನ ಕಾಲದಿಂದ ಇಂದಿನವರೆಗಿನ ರೇಷ್ಮೆಯ ಇತಿಹಾಸ, ರೇಷ್ಮೆ ಗೂಡಿನಿಂದ ಬಟ್ಟೆಯಾಗುವವರೆಗಿನ ಪಯಣವನ್ನು ಪ್ರದರ್ಶಿಸಲಿದೆ. 

Read Full Story

12:25 PM (IST) Nov 18

ಬೆಂಗಳೂರಿನ ಸಸ್ಯಾಹಾರಿ ಗ್ರಾಹಕಿಗೆ 1 ಲಕ್ಷ ನೀಡುವಂತೆ ಪ್ಯಾರಿಸ್ ಪಾಣಿನಿ, ಸ್ವಿಗ್ಗಿಗೆ ಕೋರ್ಟ್ ಆದೇಶ

non-veg in swiggy veg order: ಬೆಂಗಳೂರಿನ ಮಹಿಳೆಯೊಬ್ಬರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಸಸ್ಯಾಹಾರಿ ಸ್ಯಾಂಡ್‌ವಿಚ್‌ನಲ್ಲಿ ಸೀಗಡಿ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿ ಕೇಸು ಗೆದ್ದಿದ್ದಾರೆ. ಅವರಿಗೆ 1 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Read Full Story

12:22 PM (IST) Nov 18

BBK 12 - ಕಾವ್ಯ ಶೈವ ಮುಖ ನೋಡಿದ್ರೆ ವಾಂತಿ ಬರುತ್ತೆ; ಗಿಲ್ಲಿ ನಟ, ಕಾವು ಮಧ್ಯೆ ಅಂಥದ್ದೇನು ನಡೀತು?

Bigg Boss Kannada Season 12: ತೋಟಕೆ ಹೋಗೋ ತಿಮ್ಮ, ತೋಳ ಬಂದೀತಮ್ಮ, ಊಟಕೆ ಬಾರೋ ತಿಮ್ಮ, ಓಡಿ ಬಂದೆನಮ್ಮ ಎಂಬ ಶಿಶುಗೀತೆಯೇ ಇದೆ. ಇದಕ್ಕೆ ತಕ್ಕಂತೆ ಮನೆಯಲ್ಲಿ ಯಾರಿದ್ದಾರೆ ಎಂದು ಬಿಗ್‌ ಬಾಸ್‌ ಪ್ರಶ್ನೆ ಮಾಡಿದ್ದರು. ಅದಕ್ಕೆ ಎಲ್ಲರೂ ಒಮ್ಮತದಿಂದ ಗಿಲ್ಲಿ ನಟನ ಹೆಸರು ಹೇಳಿದ್ದಾರೆ.

Read Full Story

12:20 PM (IST) Nov 18

ಶಿವಣ್ಣನಿಂದಾಗಿ ಅಭಿಪ್ರಾಯ ಬದಲಿಸಿಕೊಂಡ ರಮ್ಯಾ; ಹಿರಿ ಹಿರಿ ಹಿಗ್ಗಿದ ಮೋಹಕ ತಾರೆಯ ಅಭಿಮಾನಿಗಳು

ಖ್ಯಾತ ನಟಿ ರಮ್ಯಾ ಅವರು ಶಿವರಾಜ್‌ ಕುಮಾರ್‌ ದಂಪತಿಯನ್ನು ನೋಡಿ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾರೆ. ಇದೇ ವೇಳೆ ಅವರು, ತಮ್ಮ ಕಂಬ್ಯಾಕ್ ಸಿನಿಮಾ ಕೂಡ ಶಿವಣ್ಣನ ಜೊತೆಗೇ ಇರಲಿದೆ ಎಂಬ ಸುಳಿವು ನೀಡಿದ್ದಾರೆ.

Read Full Story

12:02 PM (IST) Nov 18

ಸ್ಟಾಟರ್ಜಿ ಬದಲಿಸಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ!

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿರುವ ಬಿವೈ ವಿಜಯೇಂದ್ರ, ಹೈಕಮಾಂಡ್ ಸೂಚನೆಯಂತೆ ಹಿರಿಯ ನಾಯಕರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಆಂತರಿಕ ಅಸಮಾಧಾನ ಶಮನಗೊಳಿಸಿ, ಮುಂಬರುವ ಚುನಾವಣೆಗೆ ಪಕ್ಷವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಅವರು ಪ್ರಮುಖ ನಾಯಕರ ನಿವಾಸಗಳಿಗೆ ಭೇಟಿ ನೀಡುತ್ತಿದ್ದಾರೆ.

Read Full Story

11:10 AM (IST) Nov 18

ಕೇವಲ 41 ನಿಮಿಷಗಳಲ್ಲಿ 17 ನಿಲ್ದಾಣ ದಾಟಿ ಯಶಸ್ವಿಯಾಗಿ ಜೀವಂತ ಹೃದಯ ಸಾಗಿಸಿದ ನಮ್ಮ ಮೆಟ್ರೋ!

Bangalore Metro Saves Life Again: ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯ ನಡುವೆಯೂ, ತುರ್ತು ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಆಸ್ಟರ್ ಆರ್‌ವಿ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯವನ್ನು ಮೆಟ್ರೋ ಮೂಲಕ ಯಶಸ್ವಿಯಾಗಿ ಸಾಗಿಸಲಾಯಿತು. ಕೇವಲ 7 ನಿಮಿಷಗಳಲ್ಲಿ ತಲುಪಿತು.

Read Full Story

10:41 AM (IST) Nov 18

Bhagyalakshmi Serial - ಆದೀಶ್ವರ್‌ ಬಾಳಲ್ಲಿ ಹೊಸ ಹುಡುಗಿ; ಪಾಸ್ಟ್‌ ಲೈಫ್‌ ಗುಟ್ಟು ಭಾಗ್ಯ ಮುಂದೆ ಬಯಲು

Bhagyalakshmi Serial Episode: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿ ಮೇಘಶ್ರೀ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರೇಕ್ಷಕರಲ್ಲಿ ಹೊಸ ಕುತೂಹಲವನ್ನು ಮೂಡಿಸಿದೆ. ಹಳೆಯ ಕಥೆಗಳು ತೆರೆದುಕೊಂಡಿವೆ. ಹಾಗಾದರೆ ಏನಾಗಲಿದೆ? 

 

Read Full Story

10:28 AM (IST) Nov 18

ಬೆನ್ಜ್‌ ಕಾರು ಗ್ರಾಹಕರಲ್ಲಿ ಶೇ.15ರಷ್ಟು ಮಹಿಳೆಯರು!

ಮರ್ಸಿಡಿಸ್ ಬೆಂಜ್ ಗ್ರಾಹಕರು ತಮ್ಮ ಐಷಾರಾಮಿ ಕಾರುಗಳಿಗೆ ತಮ್ಮಿಚ್ಛೆಯಂತೆ ಬದಲಾವಣೆಗಳನ್ನು ಬಯಸುತ್ತಿದ್ದು,  ವಾಹನದ ಬೆಲೆಯ ಅರ್ಧದಷ್ಟು ಹೆಚ್ಚು ಪಾವತಿಸಲು ಸಿದ್ಧರಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಸ್ಟಮೈಸ್ ಆಯ್ಕೆ  ಒದಗಿಸುತ್ತಿರುವ ಕಂಪನಿಯ, ಬೆಂಗಳೂರಲ್ಲಿ  ಹೊಸ ಮಾದರಿ ಬಿಡುಗಡೆಗೆ ಸಜ್ಜು.

Read Full Story

10:08 AM (IST) Nov 18

ಬೆಂಗಳೂರು - ಗೃಹಿಣಿ ಅನುಮಾನಾಸ್ಪದ ಸಾವು, ಪತಿಯಿಂದಲೇ ಹತ್ಯೆ ಆರೋಪ

ರಾಜಗೋಪಾಲನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಎಡ್ವಿನ್ ಎಂಬ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಣಕಾಸಿನ ವಿಚಾರವಾಗಿ ಪತಿ ಮಣಿಯೇ ಹತ್ಯೆ ಮಾಡಿರುವುದಾಗಿ ಮೃತಳ ಕುಟುಂಬಸ್ಥರು ಆರೋಪಿಸಿದ್ದು, ಮೈಮೇಲಿನ ಗಾಯದ ಗುರುತುಗಳು ಮತ್ತು ಪುಡಿಯಾದ ಬಳೆಗಳು ಅನುಮಾನಕ್ಕೆ ಕಾರಣವಾಗಿವೆ.

Read Full Story

09:58 AM (IST) Nov 18

Kannadiga - ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಯಾದಗಿರಿಯ ಬಸವರಾಜ್ ಸಂಕೀನ್ ವಿಜ್ಞಾನಿಯಾಗಿ ನೇಮಕ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸವರಾಜ್ ಸಂಕೀನ್ ಅವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ಸ್ಪೇಸ್ ಸಿಸ್ಟಮ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ. ಏರೋನಾಟಿಕಲ್ ಎಂಜಿನಿಯರಿಂಗ್ ಪದವೀಧರ, ಬಾಹ್ಯಾಕಾಶ ನೌಕೆಗಳ ಉಡಾವಣೆ, ಉಪಗ್ರಹ ಕಾರ್ಯಾಚರಣೆಗಳ ಮಿಷನ್ ಕಂಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

Read Full Story

09:24 AM (IST) Nov 18

BBK 12 - ‌ ಫಸ್ಟ್‌ ಟೈಮ್ ರಕ್ಷಿತಾ ಶೆಟ್ಟಿ ಅಸಲಿಯತ್ತೇನು? ನಾಟಕ ಬಯಲು ಮಾಡಿದ ಧ್ರುವಂತ್

Bigg Boss Kannada Season 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಕಂಡರೆ ಧ್ರುವಂತ್‌ಗೆ ಆಗೋದಿಲ್ಲ. ಭಾಷೆ ಬರೋದಿಲ್ಲ ಎಂದು ಅವಳು ನಾಟಕ ಮಾಡ್ತಾಳೆ ಎಂದು ಧ್ರುವಂತ್‌ ಹೇಳಿದ್ದರು. ಈಗ ಮತ್ತೊಂದು ಆರೋಪ ಮಾಡಿದ್ದಾರೆ.

 

Read Full Story

09:01 AM (IST) Nov 18

'ನಾನೊಬ್ಬ ಟೆರರಿಸ್ಟ್, ಕನ್ನಡಿಗರ ವಿರೋಧಿ, ಮೆಟ್ರೋ ನಿಲ್ದಾಣ ಸ್ಫೋಟಿಸುವುದು ಇಮೇಲ್ ಬೆದರಿಕೆ!

Bangalore Metro bomb threa: ಬೆಂಗಳೂರು ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬಿಎಂಆರ್‌ಸಿಎಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾನೆ. ತನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದು ಉಲ್ಲೇಖ. ಈ ಸಂಬಂಧ ಪ್ರಕರಣ ದಾಖಲು

Read Full Story

08:50 AM (IST) Nov 18

ಕಿಚ್ಚ ಸುದೀಪ್‌ ಹೇಳಿದ್ರೂ ಉದ್ಧಟತನ ತೋರಿದ ಜಾಹ್ನವಿ, ಅಶ್ವಿನಿ ಗೌಡಗೆ ದೊಡ್ಡ ಶಿಕ್ಷೆ ಕೊಟ್ಟ Bigg Boss

Bigg Boss Kannada Season 12 Update: ಬಿಗ್‌ ಬಾಸ್‌ ಮನೆಯಲ್ಲಿ ಕಿಚ್ಚ ಸುದೀಪ್‌ ಅವರು ಜಾಹ್ನವಿ, ಅಶ್ವಿನಿ ಗೌಡಗೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಮತ್ತೆ ಅದೇ ತಪ್ಪು ಮಾಡಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ದೊಡ್ಡ ಶಿಕ್ಷೆ ಕೊಟ್ಟಿದ್ದಾರೆ. ಹಾಗಾದರೆ ಏನದು?

 

Read Full Story

08:35 AM (IST) Nov 18

BBK 12 - ಇದು ಕಿಚ್ಚು ಅಲ್ಲಾ, ಜ್ವಾಲೆ; ಕಾಮನ್‌ಸೆನ್ಸ್‌ ಅನ್ನೋದನ್ನು ಮರೆತ್ರಾ ಬಿಗ್‌ಬಾಸ್ ಸ್ಪರ್ಧಿಗಳು

ಬಿಗ್‌ಬಾಸ್ ಕನ್ನಡ ಸೀಸನ್ 12ರ ಡ್ರಮ್ ಟಾಸ್ಕ್‌ನಲ್ಲಿ ಉಸ್ತುವಾರಿಗಳಾದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ವಾಕ್ಸಮರ ನಡೆದಿದೆ. ಈ ಜಗಳವು ವೈಯಕ್ತಿಕ ನಿಂದನೆಯ ಹಂತಕ್ಕೆ ತಲುಪಿದ್ದು, ಹಿಂದಿನ ಮನಸ್ತಾಪ ಈಗ ಜ್ವಾಲೆಯಾಗಿ ಮಾರ್ಪಟ್ಟಿದೆ.

Read Full Story

08:27 AM (IST) Nov 18

ಕಲಬುರಗಿ - ಪ್ರಿಯಾಂಕ್‌ ತವರಲ್ಲೇ ಕಬ್ಬು ಬೆಳೆದ ರೈತರಿಗೆ ಸಿಗ್ತಿಲ್ಲ ಸರ್ಕಾರದ ದರ, ಉಲ್ಟಾ ಹೊಡೆದ ಸಕ್ಕರೆ ಕಾರ್ಖನೆ!

ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರವು ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿಪಡಿಸಿದ್ದರೂ, ಸಕ್ಕರೆ ಕಾರ್ಖಾನೆಗಳು ಈ ದರವನ್ನು ನೀಡಲು ನಿರಾಕರಿಸುತ್ತಿವೆ. ಅಫಜಲ್ಪುರದ ಕೆಪಿಆರ್ ಕಾರ್ಖಾನೆಯು ಈ ಹಿಂದೆ ಒಪ್ಪಿದ್ದ ದರದಿಂದ ಹಿಂದೆ ಸರಿದು, ಕಡಿಮೆ ದರ ಘೋಷಿಸಿರುವುದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

More Trending News