- Home
- Entertainment
- Sandalwood
- ಶಿವಣ್ಣನಿಂದಾಗಿ ಅಭಿಪ್ರಾಯ ಬದಲಿಸಿಕೊಂಡ ರಮ್ಯಾ; ಹಿರಿ ಹಿರಿ ಹಿಗ್ಗಿದ ಮೋಹಕ ತಾರೆಯ ಅಭಿಮಾನಿಗಳು
ಶಿವಣ್ಣನಿಂದಾಗಿ ಅಭಿಪ್ರಾಯ ಬದಲಿಸಿಕೊಂಡ ರಮ್ಯಾ; ಹಿರಿ ಹಿರಿ ಹಿಗ್ಗಿದ ಮೋಹಕ ತಾರೆಯ ಅಭಿಮಾನಿಗಳು
ಖ್ಯಾತ ನಟಿ ರಮ್ಯಾ ಅವರು ಶಿವರಾಜ್ ಕುಮಾರ್ ದಂಪತಿಯನ್ನು ನೋಡಿ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾರೆ. ಇದೇ ವೇಳೆ ಅವರು, ತಮ್ಮ ಕಂಬ್ಯಾಕ್ ಸಿನಿಮಾ ಕೂಡ ಶಿವಣ್ಣನ ಜೊತೆಗೇ ಇರಲಿದೆ ಎಂಬ ಸುಳಿವು ನೀಡಿದ್ದಾರೆ.

ರಮ್ಯಾ ಮದುವೆ ಆಸೆ
ಖ್ಯಾತ ನಟಿ, ಮಾಜಿ ಸಂಸದೆ ಮೋಹಕ ತಾರೆ ರಮ್ಯಾ ಅವರು ಮದುವೆ ಆಗುವ ಆಸೆ ವ್ಯಕ್ತ ಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಶಿವರಾಜ್ ಕುಮಾರ್ ದಂಪತಿ ಜೊತೆ ವಿದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಸ್ನೇಹಮಯಿ ವ್ಯಕ್ತಿತ್ವದ ಹುಡುಗ ಸಿಕ್ಕರೆ ಮದುವೆ ಆಗಬೇಕು ಅನಿಸುತ್ತದೆ’ ಎಂದು ಹೇಳಿದ್ದಾರೆ.
ಬದಲಾಯ್ತು ಅಭಿಪ್ರಾಯ
ಇತ್ತೀಚೆಗೆ ವಿದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು, ‘ಕೆಲ ದಂಪತಿಯನ್ನು ಭೇಟಿಯಾದಾಗ ಸಿಂಗಲ್ಲಾಗಿರೋದೇ ಬೆಟರ್ ಅನಿಸುತ್ತೆ. ಆದರೆ ಶಿವಣ್ಣ ಗೀತಕ್ಕ ಜೋಡಿ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಯಿತು. ಅವರಿಬ್ಬರೂ ಸುಖ-ದುಃಖ ಹಂಚಿಕೊಳ್ಳುವ ರೀತಿ, ಅವರ ಒಡನಾಟ, ತಮಾಷೆ, ಸ್ನೇಹಿತರಂತೆ ಇರುವ ಬಗೆ ನೋಡಿ ಮನಸ್ಸು ಬದಲಾಯಿಸಿಕೊಂಡೆ. ಸ್ನೇಹಮಯಿ ವ್ಯಕ್ತಿತ್ವದ ಹುಡುಗ ಸಿಕ್ಕರೆ ಮದುವೆ ಆಗಬೇಕು ಅನಿಸುತ್ತದೆ’ ಎಂದು ರಮ್ಯಾ ಹೇಳಿದ್ದಾರೆ.
ಶಿವಣ್ಣ ಜೊತೆಯಲ್ಲಿ ರಮ್ಯಾ ಎಂಟ್ರಿ
ಇದೇ ವೇಳೆ ಸಿನಿಮಾಗೆ ವಾಪಸ್ ಬರುವ ಕುರಿತು ಮಾತನಾಡಿದ ಅವರು, ‘ಶಿವಣ್ಣ ಜೊತೆಗೆ ನಟಿಸಿದ್ದ ಆರ್ಯನ್ ನಾನು ರಾಜಕೀಯ ಪ್ರವೇಶಕ್ಕೂ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ ನಟಿಸಿದ್ದ ನನ್ನ ಕೊನೆಯ ಸಿನಿಮಾ ಆಗಿತ್ತು. ನನ್ನ ಕಂಬ್ಯಾಕ್ ಸಿನಿಮಾವೂ ಸ್ಯಾಂಡಲ್‌ವುಡ್ ಕಿಂಗ್ ಜೊತೆಗೇ ಆಗಲಿದೆ’ ಎನ್ನುವ ಮೂಲಕ ಶಿವಣ್ಣನೊಂದಿಗೆ ಚಿತ್ರರಂಗಕ್ಕೆ ಮರುಪ್ರವೇಶ ಮಾಡುವ ಸೂಚನೆ ನೀಡಿದ್ದಾರೆ.
ರಮ್ಯಾ ಫೋಟೋಗಳು ವೈರಲ್
ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ರಮ್ಯಾ ಕೆಲವೊಂದು ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋ ನೋಡಿದ ನಟಿ ಅಭಿಮಾನಿಗಳು, ಎಲ್ಲರಿಗೂ ವಯಸ್ಸು ಹೆಚ್ಚಾದ್ರೆಮಮ ನಿಮಗೆ ಮಾತ್ರ ಕಡಿಮೆಯಾಗುತ್ತಿದೆ. ಸೌಂದರ್ಯದ ಗಣಿ ಎಂದು ಹಾಡಿ ಹೊಗಳಿದರು.
ಇದನ್ನೂ ಓದಿ: Divya Spandana: ನಟಿ ರಮ್ಯಾಗೆ ವಯಸ್ಸೇ ಆಗಲ್ವಾ! ಸ್ಯಾಂಡಲ್'ವುಡ್ ಕ್ವೀನ್ ಗೆ 42 ಅಂದ್ರೆ ನಂಬ್ತೀರಾ?
ಸಿನಿಮಾ ಒಪ್ಪಿಕೊಂಡ ರಮ್ಯಾ
ಕೆಲ ದಿನಗಳ ಹಿಂದೆ ತುಮಕೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಮ್ಯಾ, ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಶೀಘ್ರದಲ್ಲಿಯೇ ಸಿನಿಮಾ ತಂಡದಿಂದ ಅಧಿಕೃತ ಘೋಷಣೆಯಾಗಲಿದೆ ಎಂದು ಗುಡ್‌ನ್ಯೂಸ್ ನೀಡಿದ್ದರು. ಇದೀಗ ಶಿವರಾಜ್‌ಕುಮಾರ್ ಜೊತೆಯಲ್ಲಿಯೇ ಕಂಬ್ಯಾಕ್ ಮಾಡಲು ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡದಲ್ಲಿ ಮಿಂಚುತ್ತಿರೋ ರಾಶಿಕಾ ಶೆಟ್ಟಿ ಅಂತಿಂಥವರಲ್ಲಾರೀ.. ರಮ್ಯಾ-ರಕ್ಷಿತಾ ಜತೆ ನಟಿಸಿದ್ರು ಗೊತ್ತಾ?